ವಿ. ಸಿ. ಲೋಕಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ನಾಟ್ಯಾಚಾರ್ಯ ವಿ.ಸಿ, ಲೋಕಯ್ಯ,,' ಹಳೆಯ ಮೈಸೂರಿನಿಂದ ನೃತ್ಯಪ್ರಸಾರಕ್ಕಾಗಿಯೇ ತಮ್ಮ ನಾಡನ್ನು ಬಿಟ್ಟು ವಿದೇಶಕ್ಕೆ ಹೋದವರಲ್ಲಿ ಮೊಟ್ಟಮೊದಲನೆಯವರು. ಈ ಹಿರಿಯ ಚೇತನ, ಭರತನಾಟ್ಯ, ಹಾಗೂ ಕುಚಿಪುಡಿ ನೃತ್ಯ ಶೈಲಿಗಳಲ್ಲಿ ಶ್ರಮಿಸಿ ಅಪಾರ ಪಾಂಡಿತ್ಯವನ್ನು ಗಳಿಸಿದ್ದರು. ತಮ್ಮ ಇಳಿವಯಸ್ಸಿನಲ್ಲೂ ಅವರು ಹಳೆಯ ಆಚಾರವ್ಯಹಹಾರಗಳನ್ನು ತಪ್ಪದೆ ಪರಿಪಾಲಿಸುತ್ತಿದ್ದರು. 'ಪಂದನಲ್ಲೂರು ಮೀನಾಕ್ಷಿ ಸುಂದರಂಪಿಳ್ಳೆ'ಯವರ ಶಿಷ್ಯರಲ್ಲಿ ಇವರು ಬಹಳ ಹಿರಿಯರು. ತಮಗೆ ಪರಿಪೂರ್ಣತೆಯ ಆತ್ಮ ಸ್ಥೈರ್ಯ ಬರುವವರೆಗೆ ಸುದೀರ್ಘಕಾಲ ಭರತನಾಟ್ಯಕಲೆಯ ವ್ಯವಸಾಯದಲ್ಲಿ ಮಗ್ನರಾಗಿದ್ದರು. ತಾವು ಜೀವಿಸಿದ ಕಾಲದಲ್ಲಿ ತೆಲುಗು ಮತ್ತು ತಮಿಳು ಚಲನಚಿತ್ರರಂಗದಲ್ಲೂ ಪಾದಾರ್ಪಣೆ ಮಾಡಿದ್ದರು. ನಾಟ್ಯದ ಹಲವು ಮಜಲುಗಳಾದ ನಟುವಾಂಗದ ಕಲೆಯಲ್ಲೂ ಪರಿಣಿತಿಯನ್ನು ಗಳಿಸಿದರು. ಅವರ ಕಾಲದ ಮೇರುವ್ಯಕ್ತಿಗಳಾಗಿದ್ದ, ರಾಮಗೋಪಾಲ್, ಮೃಣಾಲಿನಿ ಸಾರಾಭಾಯ್, ತಾರಾ ಚೌಧುರಿ, ಶಾಂತಾರಾವ್, ಇಂದ್ರಾಣಿ ರೆಹ್ಮಾನ್, ಕೊರಡಾ ನರಸಿಂಹರಾವ್, ವೈಜಯಂತಿಮಾಲಾ, ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ, ಮೊದಲಾದವರ ನಟುವಾಂಗದ ಸಹಕಾರಗಳಿಸಿ ಜನಪ್ರಿಯರಾದರು. ನಾಟ್ಯಾಚಾರ್ಯ ಲೋಕಯ್ಯನವರ ಶಿಷ್ಯರಲ್ಲಿ ಅನೇಕರು ಬಹಳ ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  • ೧೯೮೮-೮೯ರ ಸಾಲಿನ ' ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಪ್ರಶಸ್ತಿ ಗೌರವ'.
  • 'ಕರ್ನಾಟಕ ಕಲಾತಿಲಕ 'ಬಿರುದು ಗಳಿಸಿದ್ದಾರೆ.