ವಿ. ಎಸ್. ಕೌಜಲಗಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹಿರಿಯ ಕಾಂಗ್ರೆಸ್ ನಾಯಕ, ವಿಧಾನಸಭೆಯ ಮಾಜಿ ಅಧ್ಯಕ್ಷ ವೀರಣ್ಣ ಶಿವಲಿಂಗಪ್ಪ ಕೌಜಲಗಿ (ವಿ.ಎಸ್.ಕೌಜಲಗಿ).
ಜನನ
[ಬದಲಾಯಿಸಿ]ವಿ.ಎಸ್.ಕೌಜಲಗಿಯವರು ಗೌರಮ್ಮ ಮತ್ತು ಶಿವಲಿಂಗಪ್ಪ ಕೌಜಲಗಿ ಅವರ ಮಗನಾಗಿ ತಾಯಿಯ ತವರೂರಾದ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ 1938ನೇ ಸೆಪ್ಟೆಂಬರ್ 21ರಂದು ಜನಿಸಿದ ವೀರಣ್ಣ ಅವರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ್ದರು ಮತ್ತು ಭಾರತೀಯ ವಾಯುಸೇನೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಪುಣೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ 1965ರ ಯುದ್ಧದಲ್ಲಿ ವೀರಣ್ಣ ಕೌಜಲಗಿ ಅವರು ಹೋರಾಡಿದ್ದರು.
ರಾಜಕೀಯ
[ಬದಲಾಯಿಸಿ]1972ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಅವರು, ಗೋಕಾಕ್ ತಾಲೂಕಿನ ಅರಭಾವಿ ಕ್ಷೇತ್ರದಿಂದ ಆರು ಬಾರಿ ವಿಧಾನಸಭೆಗೆ ಆರಿಸಿಬಂದಿದ್ದರು. ದೇವರಾಜ್ ಅರಸು ಮತ್ತು ಎಸ್ ಎಂ ಕೃಷ್ಣ ಅವರ ಆಡಳಿತದಲ್ಲಿ ಸಚಿವರಾಗಿದ್ದರು. 1993ರ ಫೆಬ್ರವರಿಯಿಂದ 1994ರ ಡಿಸೆಂಬರ್ ಅವಧಿಯಲ್ಲಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ವೀರಣ್ಣ ಕಾರ್ಯ ನಿರ್ವಹಿಸಿದ್ದರು. 2000 ಮತ್ತು 2001ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ತಮ್ಮ ಛಾಪು ಮೂಡಿಸಿದ್ದರು.
ನಿಧನ
[ಬದಲಾಯಿಸಿ]ಅಕ್ಟೋಬರ್ 29, 2014 ಬುಧವಾರ ಬೆಳಗಿನ ಜಾವ ಬೆಳಗಾವಿಯ ಕೆಎಲ್ಇಯ ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ವೀರಣ್ಣ ಶಿವಲಿಂಗಪ್ಪ ಕೌಜಲಗಿ (76) ಅಸುನೀಗಿದರು.