ವಿಸಂಧಿ
ಗೋಚರ
ವಿಸಂಧಿ (ಪ್ರಕೃತಿ ಭಾವ) / ವಿರುದ್ಧೋವಾವಿಗತ: ಸಂಧಿ. ಸಂದಿ ಮಾಡಬೇಕಾದಲ್ಲಿ ಸಂಧಿಯಾಗದಿರುವುದು ವಿಸಂಧಿ. ಸ್ವರಕ್ಕೆ ಸ್ವರ ಪರವಾದಾಗ ಕೆಲವು ವೇಳೆ ಸಂಧಿಯಾಗುವುದಿಲ್ಲ. ಇದಕ್ಕೆ ಪ್ಪಕೃತಿಭಾವ(ವಿಸಂಧಿ) ಎಂದು ಹೆಸರು. [೧]
ವಿಸಂಧಿಯಾಗುವ ಸಂದರ್ಭ
[ಬದಲಾಯಿಸಿ]ಅರಮೆ
[ಬದಲಾಯಿಸಿ]ಎಲೆ (?), ಹೋ, ಅರೆ ಮೊದಲಾದ ನಿಪಾತಗಳಿಗೆ ಸ್ವರ ಪರವಾದಾಗ ವಿಸಂಧಿ ಆಗುತ್ತದೆ. ಉದಾ : ಅರಮೆ ಅರಲ್ದ ಬಯಲ್ದಾವರೆ, ಓಹೋ ಇರಲಿಂ ಪರವರ ಮಹಾತ್ಮ್ಯಂ
ಅವಧಾರಣೆ
[ಬದಲಾಯಿಸಿ]ವಿಶಂಕೆ, ಮೆಚ್ಚಿಕೆ, ಆಕ್ಷೇಪ ಇವುಗಳನ್ನು ಸೂಚಿಸುವ ಎ [ಏ], ಒ[ಓ] ಹಳಿಗೆ ಸ್ವರ ಪರವಾದಾಗ, ಉದಾ: ಅವಧಾರಣೆ : ‘ಧನವುಳ್ಳನಾವನಾತನೆ ಇಂದ್ರಂ’
- ವಿಶಂಕೆ : ‘ಆನೆಯೋ ಅದ್ರಿಯೋ’
- ಮೆಚ್ಚಿಕೆ : ‘ಏನೇನೋ ಓದಿನ ಪರಿ ಲೇಸು ಲೇಸು’
- ಆಕ್ಷೇಪ : ‘ಮುತ್ತಿದನೋ ಇಂದೆ ಕೋಂಟೆ ಧೂಳೀಪಟಂ’
ಪ್ಲುತ
[ಬದಲಾಯಿಸಿ]ಪ್ಲುತಕ್ಕೆ ಸ್ವರ ಪರವಾದಾಗ ವಿಸಂಧಿ. ಉದಾ : ‘ಹಾ ರಾಮಾ ! ಎಂದು ಸೀತೆ ಬಾಯಳಿದಳ್’
- ‘ಎಮ’ ಶಬ್ದಕ್ಕೆ ಸ್ವರ ಪರವಾದಾಗ, ಉದಾ : ‘ಸಿಂಗವಕ್ಕೆಮ ಅಂಜೆಂ’
- ‘ಗಡ’ ಎಂಬ ಅರ್ಥದ ‘ಆ’ಕಾರಕ್ಕೆ ಸ್ವರ ಪರವಾದಾಗ, ಉದಾ : ‘ಪಾಲ ಅಮರ್ದಾ ಇನಿದು ಗಡಾ’
- ನಿರ್ದೇಶಾರ್ಥಕವಾದ ಆಕಾರಕ್ಕೆ ಅ ಮತ್ತು ಆ ಪರವಾದಾಗ, ಉದಾ : ‘ಆ ಅರಸಂ’, ‘ಆ ಆಳ್’
- ಸಮಾಸದಲ್ಲಿ ಪೊಸ, ಪೊರ, ಒಳ, ಎಳ, ಪಳ ಎಂಬ ಶಬ್ದ ರೂಪಗಳಿಗೆ ಸ್ವರಾದಿಯಾದ ಶಬ್ದವು ಪರವಾದಾಗ, ಉದಾ: ಪೊಸ ಒಕ್ಕೆಲ್, ಪೊಸ ಊರ್, ಒಳ ಅಟ್ಟಂ, ಎಳ ಅಂಚೆ, ಪಳ ಅಲಗು.