ವಿಷಯಾಧಾರಿತ ಬರವಣಿಗೆ ಸೇವೆ

ವಿಕಿಪೀಡಿಯ ಇಂದ
Jump to navigation Jump to search

ಗೋಡಾಟ್ ಮೀಡಿಯಾ ಒಂದು ವಿಷಯಾಧಾರಿತ ಬರವಣಿಗೆ ಸೇವೆಯನ್ನು ಒದಗಿಸುವ ಕಂಪನಿಯಾಗಿದ್ದು ಇವರು ೨೦ ದೇಶಗಳ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಬರವಣಿಗೆ ಸೇವೆಯನ್ನು ಒದಗಿಸುತ್ತಿದ್ದಾರೆ. ಭಾರತದ ಬೆಂಗಳೂರಿನಲ್ಲಿರುವ ತನ್ನ ಪ್ರಧಾನ ಕಛೇರಿಯನ್ನು ಐಐಟಿ-ಐಐಎಂನ ಹಳೆಯ ವಿದ್ಯಾರ್ಥಿಗಳು ೨೦೧೦ರಲ್ಲಿ ಸ್ಥಾಪಿಸಿದರು.

ಗೋಡಾಟ್ ಒದಗಿಸುತ್ತಿರುವ ಸೇವೆಗಳೆಂದರೆ ಜಾಹಿರಾತು ಪ್ರತಿ ಸಿದ್ಧಪಡಿಸುವಿಕೆ (ಅಂತರಜಾಲ ಮತ್ತು ಅದರ ಹೊರಗೆ), ಲೇಖನ ಬರವಣಿಗೆ, ಸಾರಾಂಶ ಬರವಣಿಗೆ, ಲೇಖನ ಮತ್ತು ಬ್ಲಾಗ್ ಬರಬಣಿಗೆ, ವ್ಯಾಪಾರ ಬರವಣಿಗೆ ಮತ್ತು ಇಬುಕ್ ಬರವಣಿಗೆಗಳನ್ನು ಒಳಗೊಂಡಿರುತ್ತದೆ. ಕಂಪನಿಯು ಜಾಲತಾಣಗಳಿಗೆ ಕೀಲಿಪದವನ್ನು ಆಪ್ಟಿಮೈಸ್ ಮಡಲಾದ ಲೇಖನಗಳು ಮತ್ತು ಬ್ಲಾಗ್ಗಳನ್ನು SEO ಪ್ಯಾಕೇಜುಗಳ ಮುಖಾಂತರ ಒದಗಿಸುತ್ತದೆ. ಸಾಮಾಜಿಕ ಮಾಧ್ಯಮ ಸೇವೆಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ವಿವರ ನಿರ್ವಹಣೆ, ಸಾಮಾಜಿಕ ಓದು - ಗುರುತು, ಯುಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮ ವಾಹಿನಿಗಳಲ್ಲಿ ಬಝ್ ಸೃಷ್ಟಿ,, ಫ಼ೋರಂನಲ್ಲಿ ಬರೆಯುವುದು ಇತ್ಯಾದಿ ಸೇವೆಗಳನ್ನು ನೀಡಲಾಗುತ್ತದೆ. ಗೋಡಾಟ್ ಮೀಡಿಯಾದ ಸೇವೆಗಳು ಪುರಾವೆಗಳನ್ನು ಓದುವುದು ಮತ್ತು ವೃತ್ತಿಪರ, ಮಾರಾಟ, ವೈಯಕ್ತಿಕ ದಾಖಲೆಗಳನ್ನು ಸಂಪಾದಿಸುವುದು ಮತ್ತು ಆಂಗ್ಲ ಭಾಷೆಯನ್ನು ಜರ್ಮನ್, ಸ್ಪ್ಯಾನಿಷ್, ಫ್ರೆಂಚ್, ಇಟಾಲಿಯನ್ ಮತ್ತು ಜಪಾನೀಸ್ ಭಾಷೆಗಳಿಗೆ ಭಾಷಾಂತರಿಸುವ ಸೇವೆಗಳಿಗೆ ವಿಸ್ತರಿಸಿದೆ.

ಉಲ್ಲೇಖಗಳು[ಬದಲಾಯಿಸಿ]