ವಿಶ್ವ ಸಂಸ್ಥೆಯ ಮಕ್ಕಳ ನಿಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿವಿಡಿ:[ಬದಲಾಯಿಸಿ]

ಯುನಿಸೆಫ್ ದೇಶದ ಅತಿ ದೊಡ್ಡ ಯು.ಎನ್.ಸಂಸ್ಥೆ.ಅಭಿವ್ರುದ್ದಿಶೀಲ ದೇಶಗಳಲ್ಲಿ ಮಕ್ಕಳ ಮತ್ತು ತಾಯಂದಿರ ಧೀರ್ಘಕಾಲದ ಲೋಕೋಪಕಾರಿ ಮತ್ತು ಅಭಿವ್ರುದ್ದಿಯ ನೆರವು ಒದಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ೧೯೪೬ರಂದು ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆಯಾಯಿತು.೧೯೪೯ರಂದು ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು.ಎರಡನೆ ಮಹಾಯುದ್ದದ ನಂತರ ತೊಂದರೆಗೀಡಾದ ಮಕ್ಕಳಿಗೆ ಸಹಾಯಮಾಡುವುದು ಇದರ ಮೂಲ ಉದ್ದೇಶವಾಗಿತ್ತು.ನಂತರ ೧೯೫೩ರಲ್ಲಿ ಯುನಿಸೆಫ್ ವಿಶ್ವಸಂಸ್ಥೆಯ ಶಾಶ್ವತ ಭಾಗವಾಯಿತು.ಈ ಸಂಸ್ಥೆಯು ೩೦ ಸದಸ್ಯರನ್ನು ಒಳಗೊಂಡಿದೆ.೧೯೬೫ರಲ್ಲಿ,ಉತ್ತಮ ಸೇವೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿತು.ಈ ಸಂಸ್ಥೆಯು ಮಕ್ಕಳ ಸಮಸ್ಯೆಗಳನ್ನು ಹಾಗು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಗುಣಮಟ್ಟದ ಸಂಶೋಧನೆಯನ್ನು ನಡೆಸುತ್ತಿದೆ.೨೦೦೮ರ ಪ್ರಕಾರ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಒಟ್ಟು ಆದಾಯ $೩.೩೭೨.೫೪೦.೨೩೯,೯೧.೮ರಷ್ಟು ಆದಾಯವನ್ನು ಇತರೆ ಸೇವೆಗಳಿಗೆ ಮೀಸಲಿಟ್ಟಿದೆ.

ಯುನಿಸೆಫಿನ ರಾಷ್ಟ್ರೀಯ ಸಮಿತಿಗಳು[ಬದಲಾಯಿಸಿ]

ರಾಷ್ಟೀಯ ಸಮಿತಿಗಳು ಸ್ವತಂತ್ರ ಸರ್ಕಾರೇತರ ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟಿವೆ. ಯುನಿಸೆಫ್ ೩೬ ದೇಶಗಳಲ್ಲಿ ರಾಷ್ತ್ರೀಯ ಸಮಿತಿಗಳನ್ನು ಒಳಗೊಂಡಿದೆ.ರಾಷ್ಟೀಯ ಸಮಿತಿಗಳು,ಯುನಿಸೆಫಿನ ವಾರ್ಷಿಕ ಆದಾಯದ ಮೂರನೆ ಒಂದು ಭಾಗದಷ್ಟು ಹಣವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.ಸಮಾರು ೬ ಮಿಲಿಯನಿಗಿಂತಲು ಹೆಚ್ಚು ಹಣ ವಯಕ್ತಿಕ ದಾನಿಗಳಿಂದ ಯುನಿಸೆಫಿಗೆ ಬರುತ್ತದೆ.ಉದಾಹರಣೆಗೆ ಮದ್ಯಮ,ರಾಷ್ಟೀಯ,ಸ್ಥಳಿಯ ಸರ್ಕಾರಿ ಅಧಿಕಾರಿಗಳು,ಸಂಘಟನೆಗಳು,ವೈದ್ಯರು,ವಕೀಲರು,ಶಾಲೆಗಳು,ಯುವಜನರು ಮತ್ತು ಮಾಹಿತಿ ಪರಿಣಿತರು ಸೇರಿದ್ದಾರೆ.

ಪ್ರಚಾರ ಮತ್ತು ಬಂಡವಾಳ[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್,ಕೆನಡ ಹಾಗು ಇನ್ನಿತರ ದೇಶಗಳಲ್ಲಿ ಯುನಿಸೆಫ್ "ಟ್ರಿಕ್ ಆರ್ ಟ್ರಿಟ್"ಎಂಬ ಕಾರ್ಯಕ್ರಮವನ್ನು ಕೈಗೊಂಡಿದೆ.ಈ ಕಾರ್ಯಕ್ರಮದಡಿ ಹಲವಾರು ಮಕ್ಕಳು ಇತರೆ ಮಕ್ಕಳ ಸಹಾಯಕ್ಕಾಗಿ ಹಣವನ್ನು ಸಂಗ್ರಹಿಸುತ್ತಾರೆ.ಯುನಿಸೆಫ್, ೯ ದೇಶಗಳನ್ನು ಬಿಟ್ಟು ೧೯೧ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಯುನಿಸೆಫ್,೧೯೭೯ನೆ ವರ್ಷವನ್ನು"ಇಯರ್ ಆಫ್ ದ ಚೈಲ್ಡ್"ಎಂದು ಗುರುತಿಸಿ ಪ್ರತಿ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳ ಕನ್ಸರ್ಟ್ ವರ್ಷವೆಂದು ಆಚರಿಸಲು ನಿರ್ಧರಿಸಿತು.ಅಭಿವ್ರುದ್ದಿ ಹೊಂದಿದ ದೇಶಗಳಲ್ಲಿನ ಅನೇಕ ಜನರು ಯುನಿಸೆಫ್ ಕಾರ್ಯಗಳನ್ನು ರಾಷ್ತ್ರೀಯ ಸಮಿತಿಗಳ ಮುಖಾಂತರ ತಿಳಿದುಕೊಡರು.ಈ ಸರ್ಕಾರೇತರ ಸಂಸ್ಥೆಗಳು,ಬಂಡವಾಳ ಹೂಡುವಿಕೆಯಲ್ಲಿ ಜವಾಬ್ದಾರಿ ತೆಗೆದುಕೊಡಿದೆ.೨೦೦೫ರಲ್ಲಿ,ಯುನಿಸೆಫ್,ನ್ಯೂಜಿಲೆಂಡ್ ದೇಶದ ೧೮ ವರ್ಷದ ಹಾಡುಗರ್ತಿಯನ್ನು ತನ್ನ ರಾಯಭಾರಿಯನ್ನಾಗಿ ನೇಮಿಸಿಕೊಂಡಿತು.ಏಪ್ರಿಲ್ ೧೯,೨೦೦೭ರಂದು ಲಕ್ಸೆಂಬರ್ಗ್ ನ ಮರಿಯಾ ತೆರೆಸಾರನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಎಮಿನೆಂಟ್ ಅಡ್ವೊಕೇಟ್ ಆಗಿ ನೇಮಿಸಿತು.

ಭಾರತದಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಕಾರ್ಯಕ್ರಮಗಳು[ಬದಲಾಯಿಸಿ]

  • ಆರೋಗ್ಯ:

ಯುನಿಸೆಫ್ ಕಳೆದ ೩೦ ವರ್ಷಗಳಿಂದಲೂ ಮಕ್ಕಳ ಆರೋಗ್ಯ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ.ತಾಯಿ,ಶಿಶು ಹಾಗು ಚಿಕ್ಕ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಶ್ರಮಪಡುತ್ತಿದೆ.ಜಾಗತಿಕವಾಗಿ ೫೦೦೦೦೦ಮಹಿಳೆಯರು ಪ್ರತಿ ವರ್ಷಗರ್ಭದಾರಣೆಗೆ ಸಂಬಧಿಸಿದ ಖಾಯಿಲೆಗಳಿಂದ ಮರಣಹೊಂದಿದ್ದಾರೆ.

  • ನ್ಯೂಟ್ರಿಷಿಯಸ್ ಆಹಾರ:

ಯುನಿಸೆಫಿನ ಮುಖ್ಯ ಉದ್ದೇಶ,ಅಪೌಷ್ಟಿಕತೆಯನ್ನು ಕಡಿಮೆಮಾಡುವುದು.ಈ ನಿಟ್ಟಿನಲ್ಲಿ ಯುನಿಸೆಫ್ ಸರ್ಕಾರಕ್ಕೆ ಸಹಾಯಹಸ್ತವನ್ನು ಚಾಚುತ್ತಿದೆ.ಅದರಲ್ಲು ವಿಶೇಷವಾಗಿ,೩ ವರ್ಷದ ಮಕ್ಕಳಿಗೆ ಗುಣಮಟ್ಟದ ಹಾಗು ಪೌಷ್ಟಿಕ ಆಹಾರವನ್ನು ನೀಡುತ್ತಿದೆ.ತಾಯಂದಿರಿಗೆ ಸಿಗಬೇಕಾದ ಪೌಷ್ಟಿಕ ಆಹಾರ ಸಿಗದೆ ಶೇಕಡ೨೫ರಷ್ಟು ನವಜಾತ ಶಿಶುಗಳು ಹುಟ್ಟಿದ ಒಂದು ಗಂಟೆಯೊಳಗೆ ಸಾಯುತ್ತಿವೆ.

  • ಪರಿಸರ ಮತ್ತು ನೈರ್ಮಲ್ಯ:

ಸ್ವಚ್ಚತೆಯನ್ನು ಕಾಪಾಡಲು,ಪರಿಸರವನ್ನು ಸಂರಕ್ಷಿಸಲು ರಾಷ್ತ್ರೀಯ ಹಾಗು ರಾಜ್ಯ ಸರ್ಕಾರಗಳನ್ನು ಬೆಂಬಲಿಸುತ್ತಿದೆ.ಭಾರತದಲ್ಲಿ ೩೧ರಷ್ಟು ಜನ ಮಾತ್ರ ನೈರ್ಮಲಿಕರಣವನ್ನು ಅನುಸರಿಸುತ್ತಾರೆ.ಶೇಕಡ ೬೭ರಷ್ಟು ಜನ ರಾಸಾಯನಿಕ ಮಿಶ್ರಿತ ,ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ.

  • ಎಚ್.ಐ.ವಿ:

ಜಗತ್ತಿನಾದ್ಯಂತ ೩೩.೪ ದಶಲಷ ಜನರು ಎಚ್.ಐ.ವಿ ಜೊತೆ ಬದುಕುತ್ತಿದ್ದಾರೆ. ಯುನಿಸೆಫ್ ಯು.ಎನ್ ನ ಜಂಟಿ ಹಾಗು ಎನ್.ಎ.ಸಿ.ಪಿ-೩ರ ಭಾಗವಾಗಿದ್ದು,೪ ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದೊಂದಿಗೆ ಕೆಲಸಮಾಡುತ್ತಿದೆ.

  • ಶಿಕ್ಷಣ:

ಭಾರತದಲ್ಲಿ ಶಾಲೆಗೆ ಹೋಗದೆಯೇ ಮನೆಯಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇದಕ್ಕೆ ಮೂಲ ಕಾರಣ ಲಿಂಗತಾರತಮ್ಯ.ಈ ಎಲ್ಲ ದೋಷಗಳನ್ನು ನಿರ್ಮೂಲನ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ,ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ೧೯೯೦ರಿಂದ ಶ್ರಮಿಸುತ್ತಿದೆ.ಕೆಲವು ಶಾಲೆಗಳಲ್ಲಿ ಸೌಲಭ್ಯಗಳು ಸರಿಯಿಲ್ಲದೆ,ಶಿಕ್ಷಕರೂ ಸಹ ಇರುವುದ್ದಿಲ್ಲ.ಸರ್ಕಾರ ಇದರ ಕಡೆ ಗಮನ ಕೊಟ್ಟರೆ ಯುನಿಸೆಫಿಗೆ ಸಹಾಯವಾಗುತ್ತದೆ.

  • ಮಕ್ಕಳ ರಕ್ಷಣೆ: ಮಕ್ಕಳಿಗಾಗಿ ರಕ್ಷಣಾ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಯುನಿಸೆಫ್,ಮಕ್ಕಳ ಮೂಲಭೂತ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದೆ.ಬಾಲಕಾರ್ಮಿಕ ವ್ಯವಸ್ಥೆಯಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.ಇದರಿಂದ ಮಕ್ಕಳ ಸಂಪೂರ್ಣ ಬೆಳವಣಿಗೆಯಾಗುತ್ತದೆ.ಭಾರತ ದೇಶದ ಹಲವಾರು ರಾಜ್ಯಗಳು ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಿವೆ.ಉದಾಹರಣೆಗೆ ಉತ್ತರ ಪ್ರದೇಶವು ಈ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲಿಸಿದೆ.ಇದರಿಂದ ೪೭ರಷ್ಟು ಹಾಜರಾತಿಯ ದಾಖಲೆ ಹೆಚ್ಚಿದೆ.

[೧]

ಇತ್ತೀಚಿನ ವರದಿಗಳು[ಬದಲಾಯಿಸಿ]

  • ನೆರವಿಗೆ ದಾವಿಸಿದ ಅಮೇರಿಕ,ಯುನಿಸೆಫ್ ,ವಾಷಿಂಗ್ಟನ್ನಲ್ಲಿ "ಹೈಯಾನ್"ಚಂಡಮಾರುತದ ಅಬ್ಬರ ಭೀಕರವಾಗಿತ್ತು.ಈ ಚಂಡಮಾರುತದಿಂದ ಸುಮಾರು ೪೦ಲಷ ಮಕ್ಕಳು ತೊಂದರೆಗೆ ಒಳಗಾಗಿದ್ದು,ವಿಶ್ವಸಂಸ್ಥೆಯ ಮಕ್ಕಳ ನಿಧಿ ತುರ್ತುನೆರವು ನೀಡಲು ಕ್ರಮಗಳನ್ನು ಕೈಗೊಂಡಿದೆ.ಪೌಷ್ಟಿಕಾಂಶಯುಕ್ತ ಮಕ್ಕಳ ಆಹಾರ,ನೀರು ಮತ್ತಿತ್ತರ ಸಾಮಾಗ್ರಿಗಳನ್ನು ೩೦೦೦ಕುಟುಂಬಗಳಿಗೆ ತುಲುಪಿಸಿದೆ.
  • ಹೊಸ ಕಾರ್ಯಕ್ರಮ:ಪ್ರತಿ ೧೦೦೦ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಸಂಖ್ಯಯಲ್ಲಿರುವ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳನ್ನು ಯುನಿಸೆಫ್ ಗುರುತಿಸಿದ್ದು,ಆ ಜಿಲ್ಲೆಗಳಲ್ಲಿ "ಶಿಶು ಸಂರಕ್ಷಣಿ ಹಾಗು ಅಭಿವ್ರುದ್ದಿ ಕಾರ್ಯಕ್ಕೆ ಕರೆ'ಎನ್ನುವ ಕಾರ್ಯಕ್ರಮವನ್ನು ಜಾರಿಗೊಳಿಸಲು ಯೋಜಿಸಿದೆ,ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬೀದರ್ ಹೊರತುಪಡಿಸಿ ಇನ್ನುಳಿದ ೫ ಜಿಲ್ಲೆಗಳು ಈ ಯೊಜನೆಯಲ್ಲಿ ಸೇರ್ಪಡೆಯಾಗಿವೆ.
  • ಅಂತರಾಷ್ಟಿಯ ಕ್ರಿಕೆಟಿನಿಂದ ನಿವ್ರುತ್ತಿಯಾಗಿರುವ ಸಚಿನ್ ತೆಂಡುಲ್ಕರ್ ಅವರು ದಕ್ಶಿಣ ಏಷ್ಯಕ್ಕೆ ಯುನಿಸೆಫ್ನ ಮೊದಲ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.ಅವರು ಈ ವಲಯದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಹೆಚ್ಚಿಸುವ ನಿಟ್ತಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.ತೆಂಡುಲ್ಕರ್ ಯುನಿಸೆಫಿನ ರಾಯಭಾರಿಯಾಗುವುದನ್ನು ಎದುರುನೋಡುತ್ತಿದ್ದಾರೆ ಮತ್ತು ತನ್ನ ಸಾಮರ್ಥ್ಯಕ್ಕೂ ಮೀರಿ ಸೇವೆ ಸಲ್ಲಿಸುತ್ತೇನೆಂದು ವರದಿ ನೀಡಿದ್ದಾರೆ.
  • ೯ ಬಾಲಕಿಯರಿಗೆ ಯುನಿಸೆಫ್ ಪ್ರಶಸ್ತಿ- ಬಾಲ್ಯ ವಿವಾಹಕ್ಕೆ ಪ್ರಬಲ ಪ್ರತಿ ವಿರೋಧ ಮಾಡಿದೆ ಮತ್ತು ಇದರ ವಿರುದ್ದ ಹೋರಾಡಲು ಇತರ ಬಾಲಕಿಯರಿಗೆ ದೈರ್ಯ ತುಂಬಿದಕ್ಕಾಗಿ ಮಹಾರಾಷ್ತ್ರದ ಕುಗ್ಗ್ರಾಮಗಳಲ್ಲಿ ವಾಸ್ತವ್ಯವಿರುವ ೯ ಬಾಲಕೀಯರಿಗೆ ನವಜ್ಯೋತಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು.ನವಜ್ಯೋತಿ ರಾಜ್ಯಮಟ್ಟದ ವೇದಿಕೆ.ಜನ ಸಮುದಾಯದ ಪರಿವರ್ತನೆಗೆ ರೋಲ್ಮಾಡೆಲ್ಗಳಾಗಿ ರೂಪಾಂತರಗೊಂಡ ಯುವ ಮಹಿಳೆಯರ ಸಾಧನೆಗಳ ಮೇಲೆ ನವಜ್ಯೋತಿ ಬೆಳಕು ಭೀರುತ್ತಿದೆ.
  • ನಕ್ಸಲ್ ಪೀಡಿತ ಗಡಚಿರೋಳಿ ಜಿಲ್ಲೆಯ ೧೫ ವರ್ಷ ವಯಸ್ಸಿನ ಬಾಲಕಿ ಸುನೀತಾ ವಾಚಮಿ ತಾನು ಐ.ಪಿ.ಎಸ್ ಅಧಿಕಾರಿಯಾಗಬೇಕು ಎನ್ನುವ ಮಹಾದಾಸೆ.ಪೂರೈಸಲು ತನ್ನ ಬಾಲ್ಯವಿವಾಹವನ್ನು ಪ್ರಬಲವಾಗಿ ವಿರೋಧಿಸಿದ್ದಳು.

ನಿವಡುಂಗ ಹಳ್ಳಿಯ ೧೭ ವರ್ಷ ಪ್ರ್ರಾಯದ ಮಾಧುರಿ ಫವಾರ್ ತನ್ನ ಹಳ್ಳಿಯಲ್ಲಿ ರಸ್ತೆ ಮತ್ತು ಬಸ್ ಸಚಾಂರ ಸೇವೆ ಪ್ರಾರಂಭಿಸಲು ಹೋರಟ ನಡೆಸಿದ್ದಳು.ಅಂತೆಯೇ ಬಾಲ್ಯವಿವಾಹಗಳನ್ನು ತಡೆಯಲು ಪ್ರಮುಖ ಪಾತ್ರವಹಿಸಿದ್ದಳು.ಈ ಬಾಲಕಿಯರು ತಮ್ಮ ಶಿಕ್ಶಣದ ಹಕ್ಕಿಗಾಗಿ ನಡೆಸಿರುವುದು ಮಾತ್ರವಲ್ಲದೆ,ಈ ಪ್ರತಿಭಟನೆಯನ್ನು ಸಾಮೂಹಿಕವಾಗಿ ನಡೆಸಲು ಇತರ ಬಾಲಕಿಯರಿಗೂ ಪ್ರೇರಣೆಯಾಗಿದ್ದಾರೆ. [೨]

ಪ್ರಾಯೋಜಕತ್ವ[ಬದಲಾಯಿಸಿ]

೨೦೦೬ರಲ್ಲಿ ಸ್ಪಾನಿಷ್ ಕ್ಯಾಟಲಾನ್ ಅಸೋಸಿಯೇಷನ್ ಫುಟ್ಬಾಲ್ ಕ್ಲಬ್ ೧.೫ ಮಿಲಿಯನ್ ಯುರೋಗಳನ್ನು ಮಕ್ಕಳ ರಕ್ಶಣೆಗಾಗಿ ನೀಡಿತು.ಯುನಿಸೆಫಿನ ಲೋಗೋವನ್ನು ಫುಟ್ಬಾಲ್ ಆಟಗಾರರ ಅಂಗಿಯ ಮೇಲೆ ಅಚ್ಚಾಕಿಸಲಾಗಿದೆ.ಮೊಟ್ಟಮೊದಲ ಭಾರಿಗೆ ಒಂದು ಫುಟ್ಬಾಲ್ ತಂಡ ,ಸೇವೆಗಾಗಿ ತಮ್ಮನ್ನು ತೊಡಗಿಸಿಕೊಡಿರುವ ಯುನಿಸೆಫಿನಂತಹ ಸಂಸ್ಥೆಗೆ ಪ್ರಾಯೋಜಕತ್ವವನ್ನು ನೀಡಿದೆ.ಜನವರಿ ೨೦೦೭ರಲ್ಲಿ ಯುನಿಸೆಫ್ ಕೆನಡದ ರಾಷ್ಟೀಯ ಟೆಂಟ್ ಪೆಗ್ಗಿಂಗ್ ತಂಡದೊಂದಿಗೆ ಜೊತೆಗೂಡಿತು.ಇದರಿಂದ ಆ ತಂಡ ತನ್ನ ಹೆಸರನ್ನು "ಯುನಿಸೆಫ್ ಟೀಮ್ ಕೆನಡ"ಎಂದು ಮರುನಾಮಕರಣವಾಯಿತು.ಈ ತಂಡದ ಸದಸ್ಯರು ಬಾಲ್ಯದ ಎಚ್.ಐ.ವಿ-ಏಡ್ಸನ್ನು ಕಿತ್ತೊಗೆಯಲು ಹಣವನ್ನು ಸಂಗ್ರಹಿಸಿತು.೨೦೦೮ರಾಳ್ಳೀ ಈ ತಂಡ ವಿಶ್ವ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಾಗ ಯುನಿಸೆಫಿನ ಧ್ವಜವನ್ನು,ಕೆನಡಾದ ಧ್ವಜದೊಂದಿಗೆ ಆರಿಸಿದರು.ಜೆಕ್ಯಾವ್ಸ್ ಎಂಬ ಬೈಕ್ ಸವಾರ ಯುನಿಸೆಫಿನ ಲೋಗೋವನ್ನು ತನ್ನ ವಾಹನದ ಮೇಲೆ ಹಾಕಿಸಿದನು,ಹೀಗೆ ಇತರೆ ಸಂಸ್ಥೆಗಳು ಯುನಿಸೆಫಿಗೆ ಪ್ರಾಯೋಜಕತ್ವವನ್ನು ನೀಡಿದವು.

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ[ಬದಲಾಯಿಸಿ]

'ಯುನಿಸೆಫ್,ಇತರೆ ಕಂಪನಿಗಳ ಅಭಿವ್ರುದ್ದಿ,ವ್ಯಾವಹಾರದಲ್ಲೂ ಜವಾಬ್ದಾರಿಯನ್ನು ಹೊಂದಿದೆ.೨೦೧೨ರಲ್ಲಿ ಯುನಿಸೆಫ್,'ಸೇವ್ ದಿ ಚಿಲ್ಡ್ರನ್ ಅಂಡ್ ದಿ ಯು.ಎನ್.ಗ್ಲೋಬಲ್ ' ಜೊತೆ ಸೇರಿ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಗಮನ ನೀಡಿತು.ಕಂಪನಿಗಳು ಸುಲಲಿತವಾಗಿ ಕಾರ್ಯ ನಿರ್ವಹಿಸಿಕೊಂಡು ,ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು, ಯುನಿಸೆಫ್ ಪ್ರೋತ್ಸಾಹಿಸುತ್ತಿದೆ.ಇದರ ಸಲುವಾಗಿ ಸರ್ಕಾರವು ಶಿಶುಕಲ್ಯಾಣವನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಕಾರ್ಪೊರೇಟ್ ಪಾಲುದಾರಿಕೆ[ಬದಲಾಯಿಸಿ]

ಶಿಕ್ಷಣ ಮತ್ತು ಸಾಕ್ಷರತೆಗೆ ಪ್ರಾಮುಖ್ಯತೆ ಕೊಡುವುದಕ್ಕಾಗಿ ,ಯುನಿಸೆಫ್ ಅಂತರಾಷೀಯ ಕಂಪನಿಗಳೊಂದಿಗೆ ಸ್ನೇಹ ಬೆಳೆಸಿದೆ.ಯುನಿಸೆಫ್ ಪಾಲುದಾರಿಕೆಯನ್ನು ಹೊಂದಲು ಅನೇಕ ಕಾರಣಗಳಿವೆ.ಉದಾಹರಣೆಗೆ ದಕ್ಷಿಣ ಆಫ್ರಿಕಾದಲ್ಲಿ ತಾಯಂದಿರ ಮರಣ ,ಎಚ್.ಐ.ವಿ ಹಾಗೂ ಕ್ಷಯವನ್ನು ಕಡಿಮೆಗೊಳಿಸಲು ಪಾಲುದಾರಿಕೆಗೆ ಒಪ್ಪಿಕೊಂಡಿದೆ.ಗರ್ಭಿಣಿಯರ ಮತ್ತು ಅವರ ಮಕ್ಕಳ ಆರೋಗ್ಯವನ್ನು ಸುಧಾರಿಸುವುದಕ್ಕಾಗಿ ಸುಮಾರು $೫೦೦ ದಶಲಕ್ಷವನ್ನು ಮೀಸಲಿಡಲಾಗಿದೆ.ಯುನಿಸೆಫ್ ಪಾಲುದಾರಿಕಿಯನ್ನು ಬಲವಾಗಿ ನಂಬಿದ್ದು,ಸಹಯೋಗದ ಪ್ರಯತ್ನದಿಂದ,ಶ್ರೀಮಂತ ಇತಿಹಾಸವನ್ನು ಸೃಷ್ಟಿಸಿದೆ.ಬಹುರಾಷ್ಟೀಯ,ಅಂತರಾಷ್ಟೀಯ ಹಾಗು ಮದ್ಯಮ - ಸಣ್ಣ ಕಂಪನಿಗಳೊಂದಿಗೆ ಸೇರಿ ವಿಶ್ವದ ಮಕ್ಕಳ ಪರವಾಗಿ ಕೆಲಸ ಮಾಡುತ್ತಿದೆ,ಇತರೆ ಕಂಪನಿಗಳಿಗೆ ಅಂದರೆ ಕಂಪನಿಗಳು ತಮ್ಮ ಸಮುದಾಯವನ್ನು ಧನಾತ್ಮಕ ಕೊಡುಗೆಯ ಕಡೆ ಕೊಂಡೊಯ್ಯಲು ಸಹಕಾರ ನೀಡುತ್ತಿದೆ.ಇದಲ್ಲದೆ ಇತರೆ ಸಮುದಾಯಗಳಿಗೆ ಹಾಗು ಪರಿಸರಕ್ಕೆ ತಮ್ಮ ಸಿ.ಇಸ್.ಆರ್ ಹಾಗು ವ್ಯಾಪಾರ ಉದ್ದೇಶಗಳನ್ನು ಸಾಧಿಸುವಲ್ಲಿ ಸಹಕಾರವನ್ನು ನೀಡುತ್ತಿದೆ.ಪಾಲುಗಾರರು,ತಮ್ಮ ಹೂಡಿಕೆಯನ್ನು ಆರೋಗ್ಯ,ಪೌಷ್ಟಿಕತೆ,ಸಾಮಾಜಿಕ ರಕ್ಷಣೆ,ಶುದ್ದ ನೀರು ಹಾಗು ಮಕ್ಕಳ ಶಿಕ್ಷಣದ ಆದ್ಯತೆಗಳನ್ನು ಬಲಪಡಿಸಲು ಕಾಯ್ದಿರಿಸುತ್ತೆವೆ ಎಂದು ಹೆಮ್ಮೆ ಪಡುತ್ತೆವೆ.

ಯುನಿಸೆಫಿನ ಪಾಲುದಾರರು[ಬದಲಾಯಿಸಿ]

  • ಐಕೆಇಎ

೨೦೦೦ರಿಂದ ಯುನಿಸೆಫ್ ,ಐಕೆಇಎ ಜೊತೆ ಭಾಗವಹಿಸುತ್ತಿದ್ದು,ಮಹಿಳೆಯರ ಆರೋಗ್ಯ,ಮಕ್ಕಳ ಶಿಕ್ಷಣ ಮತ್ತು ಅವರ ರಕ್ಷಣೆಗೆ ನೆರವು ನೀಡಿದೆ.

  • ಎಕ್ಸೈಡ್

ಎಕ್ಸೈಡ್ ಲಿಮಿಟೆಡ್ ಯುನಿಸೆಫ್ನೊಂದಿಗೆ ಕೈ ಜೋಡಿಸಿ ಪಕ್ಷಿಮ ಬಂಗಾಳದ ಮಕ್ಕಳಿಗೆ ಉತ್ತಮ ಪರಿಸರವನ್ನು ನಿರ್ಮಿಸಲು,ಚೈಲ್ಡ್ ಎನ್ವಿರೊನ್ಮೆಂಟ್ ಕಾರ್ಯಕ್ರಮನ್ನು ಕೈಗೊಂಡಿದೆ.

  • ಬಾರ್ಕ್ಲೇಸ್

ನವಯುವಕರು ಭವಿಷ್ಯದಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡಲು ಯುನಿಸೆಫ್ ಮತ್ತು ಬಾರ್ಕ್ಲೇಸ್ ೨೦೦೮ರಲ್ಲಿ ಕೈಜೋಡಿಸಿವೆ.೧೩ ದೇಶಗಳಲ್ಲಿನ ಜನರ ಪರಿಸ್ಥಿತಿಯನ್ನು ಉತ್ತಮಪಡಿಸಲು ,ಅವರು ನೀರಿಕ್ಷಿಸುವ ಉತ್ತಮ ಆರ್ಥಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಮೂರು ವರ್ಷಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸೌಲಭ್ಯಗಳು[ಬದಲಾಯಿಸಿ]

  • ಯುನಿಸೆಫಿನ ವಿಶ್ವ ಉಗ್ರಾಣ:

ಯುನಿಸೆಫಿನ ಹಳೆಯ ವಿಶ್ವ ಉಗ್ರಾಣ,ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ಹೈ ಕಮಿಷನರ್ ರೆಡ್ ಕ್ರಾಸ್ ಎಂಬ ಅಂತರಾಷ್ಟ್ರೀಯ ಸಮುದಾಯವನ್ನು ಪ್ರಾರಂಭಿಸಿ,ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡುತ್ತದೆ.ಈ ಉಗ್ರಾಣದ ಸೌಲಭ್ಯಗಳು ಹೊರಗಿನ ದೇಶಗಳಿಗೂ ಸ್ಥಳಾಂತರಗೊಂಡವು.ಸರಕುಗಳ ಸಾಗಾಣಿಕೆಯ ಜೊತೆಯಲ್ಲಿ ಇತರೆ ಸೌಲಭ್ಯಗಳನ್ನು,ದುಬೈ,ಪನಾಮ ಮತ್ತು ಶಾಂಘೈನಲ್ಲಿ ವಿಸ್ತರಿಸಿದೆ.

  • ಯುನಿಸೆಫಿನ ಸಂಶೋದನಾ ಕೇಂದ್ರ:

ಯುನಿಸೆಫಿನ ಸಂಶೋದನಾ ಕೇಂದ್ರ,ಸಂಶೋದನಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ೧೯೯೮ರಲ್ಲಿ ಇಟಲಿಯಲ್ಲಿ ಸ್ಥಾಪನೆಯಾಯಿತು.ಈ ಕೇಂದ್ರ ಅಂತರಾಷ್ಟ್ರೀಯ ಮಕ್ಕಳ ಅಭಿವ್ರುದ್ದಿ ಕೇಂದ್ರ ಎನಿಸಿಕೊಂಡಿದೆ.ಇದರ ಉದ್ದೇಶವೇನೆಂದರೆ ಮಕ್ಕಳಾ ಆರ್ಥಿಕ ಸ್ಥಿತಿಯನ್ನು ಉತ್ತೇಜಿಸುವುದು.ಈ ಕೇಂದ್ರ ಮಕ್ಕಳ ಸಮಸ್ಯೆಗಳು,ಆ ಸಮಸ್ಯೆಗಳಿಗೆ ಪರಿಹಾರ ನೀಡಲು ಬೇರೆ ಬೇರೆ ಹೊಸ ವಿಧಾನಗಳನ್ನು ಹುಡುಕುವುದರಲ್ಲಿ ಹಾಗು ಮಕ್ಕಳ ಹಕ್ಕುಗಳ ಅಭಿವ್ರುದ್ದಿಗಾಗಿ ಶ್ರಮಿಸುತ್ತಿದೆ.

ಯೋಜನೆಗಳು[ಬದಲಾಯಿಸಿ]

  • ೧೯೫೦ರಲ್ಲಿ ಫಿಲೆಡೆಲ್ಫಿಯಾದ ಮಕ್ಕಳ ಗುಂಪು $೧೭ಗಳನ್ನು,ಮೂರನೆ ಮಹಾಯುದ್ದದಲ್ಲಿ ತೊಂದರೆಗೀಡಾಗಿದ್ದ ಸಂತ್ರಸ್ಥರಿಗೆ ದಾನಮಾಡಿತು.ಈ ಯೋಜನೆಯ ಅಡಿಯಲ್ಲಿ ಮಕ್ಕಳು ಪ್ರತಿಯೊಬ್ಬರ ಮನೆಬಾಗಿಲಿಗೆ ಹೋಗಿ ಹಣವನ್ನು ಸಂಗ್ರಹಿಸಿ,ಶಾಲೆಯಲ್ಲಿನ ಮಕ್ಕಳಿಗೆ ಹಾಗು ಇತರೆ ಪ್ರದೇಶದಲ್ಲಿರುವ ಮಕ್ಕಳಿಗೆ ತಾವು ಸಂಗ್ರಹಿಸಿದ ಹಣವನ್ನು ದಾನಮಾಡುವರು.
  • ಗರ್ಲ್ ಸ್ಟಾರ್:ಈ ಯೋಜನೆಯು ಮಕ್ಕಳ ಕಥೆಯನ್ನು ದಾಖಲಿಸುವ ಚಿತ್ರವಾಗಿದೆ.ಈ ಚಿತ್ರವು,ಹೆಣ್ಣುಮಕ್ಕಳು ಜೀವನದಲ್ಲಿ ಕಷ್ಟ ಪಡುತ್ತಿರುವವರ ಮತ್ತು ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದು ಇತರರಿಗೆ ಮಾರ್ಗದರ್ಶಕರಾಗಿರುವವರ ಜೀವನವನ್ನು ಚಿತ್ರದ ಮೂಲಕ ಜನರಿಗೆ ತಿಳಿಸುತ್ತದೆ.ಈ ಚಿತ್ರವನ್ನು ನೋಡಿದರೆ ಮಕ್ಕಳಿಗೆ ಶಾಲೆಗೆ ಹೋಗುವ ಆಸಕ್ತಿ ಮೂಡುತ್ತದೆ,ಇದರಿಂದ ಅವರು ಒಳ್ಳೆಯ ವಿದ್ಯಾವಂತರಾಗುತ್ತಾರೆ.ಇದೊಂದು ದೇಶ ಹೆಮ್ಮೆಪಡುವ ಸಂತಸದ ವಿಷಯವಾಗಿದೆ.
  • ಯುನಿಸೆಫ್ ಟ್ಯಾಪ್ ಯೋಜನೆ ಶುದ್ದ ನೀರಿನ ಪ್ರವೇಶವನ್ನು ಮತ್ತು ಬಡ ದೇಶಗಳ ಮಕ್ಕಳಿಗೆ ಒದಗಿಸುವ ರಾಷ್ಟ್ರವ್ಯಾಪಿ ಆಂದೋಲನವಾಗಿದೆ.ಯುನೈಟೆಡ್ ನೇಷನ್ಸ್ ವಲ್ಡ್ ವಾಟರ್ ಡೆ ಎಂದು ಮಾರ್ಚ್ ೨೨ ರಂದು ಆಚರಿಸಲಾಗುತ್ತದೆ.ಈ ಪ್ರಕಾರ ಕಾರ್ಪೊರೇಟ್ ಸಮುದಾಯ,ಪ್ರಸಿದ್ದ ಸರ್ಕಾರಿ ಬೆಂಬಲಿಗರ ಜೊತೆಗೆ ರೆಷ್ಟೋರೆಂಟಿನ ಪೋಷಕರು,ವಿದ್ಯಾರ್ಥಿಗಳು ಹಾಗು ಸ್ವಯಂಸೇವಕರನ್ನು ಒಂದಿರುತ್ತದೆ.ಈ ಯೋಜನೆಯಿಂದಾಗಿ ಇಂದು ಸುಮಾರು ೯೦೦ಮಿಲಿಯನ್ ಜನರು ಶುದ್ದ ನೀರನ್ನು ಕುಡಿಯುತ್ತಿದ್ದಾರೆ.ಪ್ರತಿ ದಿನ ಪ್ರಪಂಚದಾದ್ಯಂತ ೪೧೦೦ ಮಕ್ಕಳು ಕಲುಷಿತ ನೀರು ಕುಡಿದು ಪ್ರಾಣ ಬಿಡುತ್ತಿದ್ದಾರೆ.ಈ ಯೋಜನೆಯನ್ನು ೨೦೦೭ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜಾರಿಗೆ ತರಲಾಯಿತು.ಈ ಯೋಜನೆಯ ಮುಖ್ಯ ಉದ್ದೇಶವನೆಂದರೆ ಕುಡಿಯುವ ನೀರನ್ನು ಎಲ್ಲ ಪ್ರದೇಶಗಳಿಗೆ ಉಚಿತವಾಗಿ ದಾನಮಾಡುವುದು.ಮೊದಲ ಯುನಿಸೆಫಿನ ಟ್ಯಾಪ್ ಯೋಜನೆಯನ್ನು ನ್ಯೂಯರ್ಕ್ ನಗರದಲ್ಲಿ ಪ್ರಾರಂಭಿಸಿದರು.೨೦೦೭ ರ ಅವಧಿಯಲ್ಲಿ ಯುನಿಸೆಫಿನ ಟ್ಯಾಪ್ ಯೋಜನೆ ೨.೫ ಮಿಲಿಯನ್ ಹಣವನ್ನು ನೀರು ಸರಬರಾಜಿಗಾಗಿ ಉಪಯೋಗಿಸಿದೆ.ಈ ಯೋಜನೆಯ ಉದ್ದಕೂ ಸಂಗ್ರಹಿಸಿದ ಹಣವನ್ನು ಸಾಕಷ್ಟು ಕಾರ್ಯಗಳಿಗೆ ಬಳಸಿದೆ ಉದಾಹರಣೆಗೆ ನೀರು ಸರಬರಾಜು,ನೈರ್ಮಲ್ಯ ಮತ್ತು ನೈರ್ಮಲ್ಯದ ಕಾರ್ಯಗಳು.ಈಯೋಜನೆಯು ಅನೇಕ ದೇಶಗಳಿಗೆ ಸಹಾಯ ಹಸ್ತವನ್ನು ಚಾಚಿದೆ , ಆ ದೇಶಗಳೆಂದರೆ ಬೆಲಝಿ,ಗ್ವಾಟೆಮಾಲ,ಮಧ್ಯ ಆಫ್ರಿಕ,ಐವೇರಿ ಕೋಷ್ಟ್,ಐಟಿ,ಇರಾಕ್,ಟೋಗೋ ಮತ್ತು ವಿಯೆಟ್ನಾಂ ರಾಷ್ಟ್ರಗಳು.

ಒಟ್ಟಾರೆಯಾಗಿ ನಾವು ಯುನಿಸೆಫಿಗೆ ಕೈ ಜೋಡಿಸೋಣ.

ಉಲ್ಲೇಖ[ಬದಲಾಯಿಸಿ]

  1. "UNICEF -India". Archived from the original on 2016-10-30. Retrieved 2016-10-25.
  2. UNICEF