ವಿಷಯಕ್ಕೆ ಹೋಗು

ವಿಶ್ವದ ವಿಶೇಷ ದಾಖಲೆಯಾದ ಜಾಯೆದ್ ಮಸೀದಿಯ ಶ್ಯಾಂಡ್ಲಿಯರ್ (ತೂಗು ದೀಪ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಚಿತ್ರ:Chandelier 1.jpg
'ವಿಶ್ವದ ವಿಶೇಷ ದಾಖಲೆಯಾದ ಜಾಯೆದ್ ಮಸೀದಿಯ ಶ್ಯಾಂಡ್ಲಿಯರ್ ತೂಗುದೀಪ'

ಸನ್, ೨೦೦೯ ರವರೆವಿಗೂ ’ಒಮಾನ್ ದೇಶದ ಸುಲ್ತಾನ್ ಕಬೂಸ್ ಮಸೀದಿ’ಯ ತೂಗುದೀಪ, ವಿದ್ವದಾಖಲೆಯನ್ನು ಪಡೆದಿತ್ತು. ಈಗ ’ಶೇಖ್ ಜಾಯೆದ್ ಮಸೀದಿಯ ತೂಗುದೀಪ’ ಆ ಅರ್ಹತೆಯನ್ನು ಪಡೆದುಕೊಂಡಿದೆ. ಮಸೀದಿಯ ಒಳಾಂಗಣದಲ್ಲಿ ಒಟ್ಟು ೭ ದೀಪಗಳಿದ್ದು, ಪ್ರತಿಯೊಂದೂ ತನ್ನದೇ ಆದ ವಿಶೇಷ ಶೃಂಗಾರದಿಂದ ಅಪ್ರತಿಮವಾಗಿದೆ. ’ಆಸ್ಟ್ರಿಯಾದೇಶ’ದಿಂದ ತರಿಸಿ ಅಳವಡಿಸಿದ ಸುಮಾರು ೧೦ ಲಕ್ಷ ’ಸ್ವರೋವ್ಸ್ಕಿ ಕ್ರಿಸ್ಟಲ್ ಹರಳುಗಳು’ ನ್ನು ಅಳವಡಿಸಿ ನಿರ್ಮಿಸಿದ ’ಶ್ಯಾಂಡ್ಲಿಯರ್ ಗಳು’ ಸ್ವಪ್ನ ಲೋಕದಲ್ಲಿ ವಿಹರಿಸುತ್ತಿದ್ದೇವೋ ಎನ್ನುವ ಭಾವನೆಯನ್ನು ಮನಸ್ಸಿಗೆ ತರುತ್ತಿವೆ. ಈ ಹರಳುಗಳು ಬೆಳಕನ್ನು ವಕ್ರೀಭವಿಸುವುದರಿಂದ ನಿಜವಾದ ವಜ್ರಗಳನ್ನು ಹೋಲುತ್ತ, ’ಝಗಮಗಾಯಿಸುತ್ತವೆ’. ದೀಪದ ಚೌಕಟ್ಟು, ಚಿನ್ನ ಮತ್ತುತಾಮ್ರದ ಲೇಪನ ಹೊಂದಿವೆ. ಹರಳುಗಳನ್ನು ಕಟ್ಟಿರುವ ಇಟಲಿಯ ಗಾಜಿನ ಫಲಕ, ಹಾಗೂ ಕೊಳವೆಗಳು ದೀಪದ ಮೆರುಗಿನ ವೈಭವವನ್ನು ಮತ್ತು ಅದ್ಭುತ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇವುಗಳಲ್ಲೆಲ್ಲಾ ಅತ್ಯಂತ ದೊಡ್ಡದಾದ ಮಧ್ಯದಲ್ಲಿ ತೂಗುಬಿಟ್ಟಿರುವ ದೀಪ, ಸುಮಾರು ೧೦ ಮೀ. ವ್ಯಾಸ, ೧೫ ಮೀ. ಎತ್ತರ, ಹಾಗೂ ೯ ಮೀ. ಟನ್ ತೂಕವಿದೆ. ಇನ್ನುಳಿದ ’ಶ್ಯಾಂಡ್ಲಿಯರ್ ಗಳು’, ಸುಮಾರು ೬ ಮೀ. ವ್ಯಾಸ ಮತ್ತು ೧೦ ಮೀ. ಎತ್ತರವಾಗಿವೆ. ಇವನ್ನು ಜರ್ಮನಿಯಲ್ಲಿ ನಿರ್ಮಿಸಿ ’ಅಭುಧಾಬಿಯ ಮಸೀದಿ’ಗೆ ರವಾನಿಸಲಾಗಿದೆ. ತೂಗುದೀಪದೊಳಗೆ ಇಳಿದು ದುರಸ್ತಿ ಮಾಡಬಹುದಾದ ವ್ಯವಸ್ಥೆಗಾಗಿ ಏಣಿಯೊಂದರ ವಿನ್ಯಾಸವನ್ನೂ ಮಾಡಲಾಗಿದೆ.

ದಾಖಲೆಗೆ ಅಣಿಯಾಗಿದೆ

[ಬದಲಾಯಿಸಿ]

ಸನ್, ೨೦೧೦ ರ ಸೆಪ್ಟೆಂಬರ್ ತಿಂಗಳಲ್ಲಿ ಈಜಿಪ್ಟ್ ದೇಶದ ಕೈರೋದಲ್ಲಿರುವ ’ಹಸನ್ ಆಲ್ ಶರ್ಬತ್ಲೀ ಮಸೀದಿ’ ಯೊಳಗೆ ೧೭.೭ ಮೀ. ಎತ್ತರ, ೧೭.೬ ಮೀ.ವ್ಯಾಸದ ಶ್ಯಾಂಡ್ಲಿಯರ್ ನ್ನು ತೂಗುಬಿಟ್ಟಿದ್ದು ಸನ್, ’೨೦೧೧ ರ ಗಿನ್ನೆಸ್ ದಾಖಲೆಗಾಗಿ ಅರ್ಜಿ’ ಸಲ್ಲಿಸಲಾಗಿದೆ. ಒಂದು ವೇಳೆ ಈ ತೂಗುದೀಪ ’ಗಿನ್ನೆಸ್ ದಾಖಲೆಗೆ ಚುನಾಯಿತವಾದರೆ’, ’ಶೇಖ್ ಜಾಯೆದ್ ಮಸೀದಿಯ ಶ್ಯಾಂಡ್ಲಿಯರ್’ ತನ್ನ ದಾಖಲೆಯನ್ನು ಕಳೆದುಕೊಳ್ಳುತ್ತದೆ.