ವಿಶ್ಲೇಷಣಾತ್ಮಕ ಪತ್ರಿಕೋದ್ಯಮ
ವಿಶ್ಲೇಷಣಾತ್ಮಕ ಪತ್ರಿಕೋದ್ಯಮ ಅಥವಾ ವಿಶ್ಲೇಷಣಾತ್ಮಕ ವರದಿಗಾರಿಕೆಗೆ ಪತ್ರಕರ್ತ ಸುದ್ದಿಗೆ ಸಂಬಂಧಿಸಿದ ಮೂಲ ಸಂಗತಿಗಳನ್ನು ಮೀರಿ ಹೆಚ್ಚು ಆಳವಾದ ಸುದ್ದಿ ಪ್ರಸಾರವನ್ನು ಒದಗಿಸುವ ಅಗತ್ಯವಿದೆ. ಆಧುನಿಕ ಜಗತ್ತಿನಲ್ಲಿ, ವಿಶ್ಲೇಷಣಾತ್ಮಕ ಪತ್ರಿಕೋದ್ಯಮವು ಪತ್ರಿಕೋದ್ಯಮದ ಇತರ ಪ್ರಕಾರಗಳಿಗೆ ಹೋಲುವುದರಿಂದ ನಿಜವಾದ ವಿವರಣಾತ್ಮಕ ಪತ್ರಿಕೋದ್ಯಮದ ಕಾರ್ಯಾಚರಣೆಯು ಹೆಚ್ಚಾಗಿ ಮಸುಕಾಗುತ್ತದೆ.[೧] ವಿಶ್ಲೇಷಣಾತ್ಮಕ ಪತ್ರಕರ್ತರು ಅವರು ಏನನ್ನು ವರದಿ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸುವ ವ್ಯವಸ್ಥೆಗಳು, ತಾರ್ಕಿಕತೆ ಮತ್ತು ಅದರ ಪ್ರಭಾವವನ್ನು ಅರಿತಿರಬೇಕು. ಅವರು ತಮ್ಮ ವರದಿಯ ವಿಷಯದ ಬಗ್ಗೆ ಸೂಕ್ಷ್ಮವಾದ ಅರಿವು ಮತ್ತು ಗ್ರಹಿಕೆಯನ್ನು ಹೊಂದಿರಬೇಕು. [೨]
ಉತ್ತಮ ವರದಿಗಾರಿಕೆ ಅಗತ್ಯವಿರುವ ಲೇಖನಗಳು, ಪ್ರಬಲ ಚಿಂತನೆಯ ತುಣುಕುಗಳು ಮತ್ತು ಉತ್ತಮ ತನಿಖಾ ವರದಿಗಾರಿಕೆಯ ಕ್ಷೇತ್ರಕ್ಕೆ ವಿಶ್ಲೇಷಣಾತ್ಮಕ ಪತ್ರಿಕೋದ್ಯಮದ ಅತ್ಯಗತ್ಯ ಕಂಡುಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಮತ್ತು ವೀಕ್ಷಕರನ್ನು ವೇಗವಾಗಿ ಪಡೆಯುವ ಮಾರ್ಗಗಳನ್ನು ತಿಳಿದುಕೊಂಡಿರುವುದರಿಂದ, ಪತ್ರಕರ್ತರು ಮತ್ತು ಓದುಗರು ಸಾಂಪ್ರದಾಯಿಕ ದೀರ್ಘ-ರೂಪದ ವಿವರಣಾತ್ಮಕ ವರದಿಗಾಗಿ ಸಮಯವನ್ನು ಕೊಡುವುದಿಲ್ಲ.[೩]
ವ್ಯಾಖ್ಯಾನಗಳು
[ಬದಲಾಯಿಸಿ]- "ವಿಶ್ಲೇಷಣಾತ್ಮಕ ವರದಿಗಾರಿಕೆಯು, ಸುದ್ದಿಯನ್ನು ಆಳವಾಗಿ ವರದಿ ಮಾಡುವುದು ಮತ್ತು ಸುದ್ದಿಗಳನ್ನು ಸಮಗ್ರ ಮತ್ತು ಅರ್ಥಪೂರ್ಣವಾಗಿ ರವಾನಿಸಲು ಬರೀ ಮುಖ್ಯಾಂಶವಲ್ಲದೆ ಸುದ್ದಿಯ ಹಿನ್ನೆಲೆಯನ್ನೂ ಸೇರಿಸಿ ಸಂಪೂರ್ಣ ಸುದ್ದಿಯನ್ನು ನೀಡುವುದನ್ನು ಒಳಗೊಂಡಿರುತ್ತದೆ. ಇದು ಒಂದು ಸನ್ನಿವೇಶದ ಹಿನ್ನೆಲೆಯ ಕುರಿತಾದ ಜ್ಞಾನ ಅಥವಾ ಘಟನೆಯ ಮೌಲ್ಯಮಾಪನವನ್ನು ಆಧರಿಸಿದ ವಸ್ತುನಿಷ್ಠ ನಿರ್ಣಯವಾಗಿದ್ದು ಅದು ಸುದ್ದಿಯ ಅಗತ್ಯ ಭಾಗವಾಗಿದೆ"-ಲೆಸ್ಟರ್ ಮಾರ್ಕೆಲ್, ಸಂಪಾದಕ, ದಿ ಸಂಡೇ ನ್ಯೂಯಾರ್ಕ್ ಟೈಮ್ಸ್.
- "ಇದು ಓದುವ ಸಾರ್ವಜನಿಕರಿಗೆ ಸಂಪೂರ್ಣ ಹಾಗೂ ನಿಖರವಾದ ಮಾಹಿತಿಯನ್ನು ನೀಡುತ್ತದೆ"-ವಿಲಿಯಂ ಟರ್ನರ್ ಕ್ಯಾಟ್ಲೆಡ್ಜ್, ಸಂಪಾದಕ, ದಿ ನ್ಯೂಯಾರ್ಕ್ ಟೈಮ್ಸ್ ".[೪]
- " ವಿಶ್ಲೇಷಣಾತ್ಮಕ ವರದಿಗಾರಿಕೆಯು, ಸಂದರ್ಭ ವಿಶ್ಲೇಷಣೆ ಮತ್ತು ಸಂಭವನೀಯ ಪರಿಣಾಮಗಳ ಕುರಿತು ಮಾಹಿತಿ ಒದಗಿಸುತ್ತದೆ. ಇದು ಘಟನೆ ಅಥವಾ ವಿಷಯದ ಮೂಲಭೂತ ಸಂಗತಿಗಳನ್ನೂ ಮೀರಿದ ವಿಷಯಗಳನ್ನು ಪ್ರಸ್ತುತಪಡಿಸುತ್ತದೆ"- ಬ್ರಾಂಟ್ ಹೂಸ್ಟನ್, ಕಾರ್ಯನಿರ್ವಾಹಕ ನಿರ್ದೇಶಕ, ತನಿಖಾ ವರದಿಗಾರರು ಮತ್ತು ಸಂಪಾದಕರು.
ಇತಿಹಾಸ
[ಬದಲಾಯಿಸಿ]ಕರ್ಟಿಸ್ ಡಿ. ಮ್ಯಾಕ್‌ಡೊಂಗಲ್ ಅವರು ತಮ್ಮಇಂಟಪ್ರಿಟೀಟೆವ್ ರಿಪೋರ್ಟಿಂಗ್ ಎನ್ನುವ ಪುಸ್ತಕದಲ್ಲಿ(೧೯೩೮), ಮೊದಲನೆಯ ಮಹಾಯುದ್ಧದ ಆರಂಭದಲ್ಲಿ ಹೆಚ್ಚಿನ ಅಮೆರಿಕನ್ನರು ಯುದ್ಧದ ಕುರಿತು ಆಶ್ಚರ್ಯಚಕಿತರಾದರು ಮತ್ತು ಅದು ಏಕೆ ಪ್ರಾರಂಭವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಇದು ವರದಿ ಮಾಡುವ ಶೈಲಿಯಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಬರೆದಿದ್ದಾರೆ..
೧೯೨೦ರ ದಶಕದಲ್ಲಿ ಮಹಾ ಆರ್ಥಿಕ ಕುಸಿತ ಮತ್ತು ಜಾಗತಿಕ ಸ್ಥಿರತೆಗೆ ನಾಜಿ ಪಕ್ಷದಿಂದ ಇದ್ದ ಬೆದರಿಕೆಯಂತಹ ಘಟನೆಗಳು, ಪ್ರೇಕ್ಷಕರು ಇನ್ನು ಮುಂದೆ ಪತ್ರಿಕೋದ್ಯಮದ ಐದು ಡಬ್ಲ್ಯು ಗಳೊಂದಿಗೆ ತೃಪ್ತರಾಗದಿರಲು ಕಾರಣವಾಯಿತು. ೧೯೨೩ರಲ್ಲಿ, ಸುದ್ದಿಗಳ ಬಗ್ಗೆ ಹೆಚ್ಚು ವಿಶ್ಲೇಷಣಾತ್ಮಕ ವ್ಯಾಖ್ಯಾನವನ್ನು ಓದುಗರಿಗೆ ಒದಗಿಸುವ ಮೊದಲ ಪ್ರಮುಖ ಪ್ರಕಟಣೆಯಾಗಿ ಟೈಮ್ ನಿಯತಕಾಲಿಕವು ಪ್ರಾರಂಭವಾಯಿತು. ಅನೇಕ ಪತ್ರಿಕೆಗಳು ಹೊಸ ರೀತಿಯ ವರದಿಗಾರಿಕೆಯೊಂದಿಗೆ ಪ್ರತಿಕ್ರಿಯಿಸಿದವು ಅದು ವಿವರಣಾತ್ಮಕ ಪತ್ರಿಕೋದ್ಯಮ ಎಂದು ಹೆಸರಾಯಿತು.[೫]
ವಿಶ್ಲೇಷಣಾತ್ಮಕ ವರದಿಗಾರಿಕೆಯ, ಹೊಸ ಪತ್ರಿಕೋದ್ಯಮ, ಕ್ರಿಯಾವಾದ ಮತ್ತು ವಕಾಲತ್ತು ಪತ್ರಿಕೋದ್ಯಮ ಮತ್ತು ಪ್ರತಿಕೂಲ ಪತ್ರಿಕೋದ್ಯಮ ಹಾಗೂ ತನಿಖಾ ಪತ್ರಿಕೋದ್ಯಮ ಎಂಬ ಇತರ ವಿಭಾಗಗಳು ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳನ್ನು ತಂದಿತು.
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Salgado, Susana; Strömbäck, Jesper (2011). "Interpretive journalism: A review of concepts, operationalizations and key findings". Journalism. 13 (2): 144–161. doi:10.1177/1464884911427797.
- ↑ Houston, Brant (2007). "Interpretive Journalism". In Donsbach, Wolfgang (ed.). The Blackwell International Encyclopedia of Communication (1. publ. ed.). Oxford: Blackwell. doi:10.1002/9781405186407.wbieci081. ISBN 9781405131995.
- ↑ "Ian Leach: The perils of breaking-news culture". The Michigan Daily (in ಇಂಗ್ಲಿಷ್). Retrieved 2018-01-28.
- ↑ Advanced Campus Journalism (in ಇಂಗ್ಲಿಷ್). Rex Bookstore, Inc. ISBN 9789712321030.
- ↑ "Different Styles and Models of Journalism". University of Minnesota Libraries.
ಮುಂದೆ ಓದಿ
[ಬದಲಾಯಿಸಿ]- ಸುಸಾನಾ ಸಲ್ಗಾಡೊ (29 ಮೇ 2019). ವಿವರಣಾತ್ಮಕ ಪತ್ರಿಕೋದ್ಯಮ. ಆಕ್ಸ್ಫರ್ಡ್ ಗ್ರಂಥಸೂಚಿಗಳು ಆನ್ಲೈನ್.
- Ward, Stephen J. A. (2020). Objectively Engaged Journalism: An Ethic. McGill-Queen's Press. ISBN 9780228002147.