"ನಿಡ್ಪಳ್ಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
 
'''ಶಾಂತಾದುರ್ಗಾ ದೇವಸ್ಥಾನ ಮತ್ತು ಕಿನ್ನಿಮಾಣಿ-ಪೂಮಾಣಿ ದೈವಸ್ಥಾನ'''
 
ಶಾಂತಾದುರ್ಗಾ ದೇವಸ್ಥಾನವು ನಿಡ್ಪಳ್ಳಿಯ ಗ್ರಾಮದೇವಸ್ಥಾನ. ಕಿನ್ನಿಮಾಣಿ-ಪೂಮಾಣಿ ಇಲ್ಲಿನ ಗ್ರಾಮ ದೈವಗಳು. ಪುರಾತನ ಕಾಲದಿಂದಲೂ ಆರಿಗ ಮನೆತನದ ಜೈನ ಅರಸರ ಮುಂದಾಳುತ್ವದಲ್ಲಿ ಕ್ರಮಬದ್ಧವಾಗಿ ನಡೆಯುತ್ತಿದ್ದ ದೈವಾರಾಧನೆ, ಜಾತ್ರೊತ್ಸವಗಳು ಕ್ರಿ. ಶ ೧೯೭೨ ರ ಆಸುಪಾಸಿನ ಅನಿರೀಕ್ಷಿತ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ ಸಂಪೂರ್ಣವಾಗಿ ನಿಂತೇ ಹೊದವು. ದೈವಸ್ಥಾನಗಳೂ ಕಾಲನ ಹೊಡೆತಕ್ಕೆ ಸಿಕ್ಕು ಜೀರ್ಣವಾದವು. ೧೯೯೦ ರ ದಶಕದ ಆದಿಯಿಂದಲೂ ಗ್ರಾಮದ ಪ್ರಮುಖರು ದೈವಸ್ಥಾನಗಳ ಪುನರುಜ್ಜೀವನಕ್ಕಾಗಿ ಪ್ರಯತ್ನ ಪಟ್ಟರೂ, ೨೦೧೮ ರಲ್ಲಷ್ಟೇ ದೇವಸ್ಥಾನ ಮತ್ತು ದೈವಸ್ಥಾನಗಳು ಸಂಪೂರ್ಣವಾಗಿ ರೂಪುಗೊಂಡವು. ಈ ದೆವಸ್ಥಾನ ಸಂಕೀರ್ಣಗಳು ಶಾಂತಾದುರ್ಗಾ ದೇವಸ್ಥಾನ, ಕಿನ್ನಿಮಾಣಿ-ಪೂಮಾಣಿ-ಹುಲಿಭೂತ-ಮಲರಾಯ ಮತ್ತು ಧೂಮಾವತೀ ದೈವಗಳ ದೈವಸ್ಥಾನವನ್ನು ಒಳಗೊಂಡಿದೆ. ೨೦೧೯ನೇ ಇಸವಿಯ ಮಾರ್ಚ್ ತಿಂಗಳಿನಲ್ಲಿ ಬ್ರಹ್ಮಕಲಶೊತ್ಸವ ಮತ್ತು ನೇಮೊತ್ಸವಗಳೊಂದಿಗೆ ನಿಡ್ಪಳ್ಳಿಯ ಗ್ರಾಮ ದೇವಸ್ಥಾನ ಮತ್ತು ದೈವಸ್ಥಾನಗಳು ಪುನರೂರ್ಜಿತಕ್ಕೆ ಬಂದವು.
"https://kn.wikipedia.org/wiki/ವಿಶೇಷ:MobileDiff/909625" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ