ವಿವೇಕ್ ತೇಜ
ಗೋಚರ
ವಿವೇಕ್ ತೇಜ ಓರ್ವ ಭಾರತೀಯ ಕರಾಟೆ ಪಟು. ಇವರು ಎರಡು ಬಾರಿ ಯು.ಎಸ್. ಒಪನ್ ಸ್ಪರ್ಧೆ ಹಾಗೂ ೨೦೧೬ ವಿಶ್ವ ಸಮರ ಕಲೆಗಳ ಚಾಂಪಿಯನ್‌ಶಿಪನ್ನು ಗೆದ್ದಿದ್ದಾರೆ.[೧] ೨೦೧೮ ಕಾಮನ್ವೆಲ್ತ್ ಆಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಇವರು, ೭ ಬಗೆಯ ಸಮರ ಕಲೆಗಳಲ್ಲಿ ತಜ್ಞರಾಗಿದ್ದಾರೆ (ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಮುಯೆ ಥಾಯ್, ಕಲರಿಪಯಟ್ಟು, ಸಿಲಾಂಬಮ್ ಮತ್ತು ಟೇಕ್ವಾಂಡೋ).[೨]
ವಿವೇಕ್ ತೇಜ ಮೂಲತಹ ತೆಲಂಗಾಣ ರಾಜ್ಯದ ನಲ್ಗೊಂಡ ಊರಿನವರು. ಇವರು ೮ ವಯಸ್ಸಿನಲ್ಲಿ ಕರಾಟೆ ಅಭ್ಯಾಸ ಪ್ರಾರಂಭಿಸಿದರು ಮತ್ತು ಖ್ಯಾತ ತರಬೇತುದಾರ ಜುಡ್ ರೀಡ್ ನವರಿಂದ ತರಬೇತಿ ಪಡೆದರು. ಇವರು ವೆಂಕಟೇಶ್, ರಾಣಾ ದಗ್ಗುಬತಿ ಮುಂತಾದಂತಹ ತೆಲುಗು ನಟರಿಗೆ ಸಮರ ಕಲೆಗಳ ತರಬೇತಿ ನೀಡಿ, ತಮ್ಮ ಅಭ್ಯಾಸದ ಖರ್ಚನ್ನು ತೀರಿಸಿದರು.[೩]
ಉಲ್ಲೇಖಗಳು
[ಬದಲಾಯಿಸಿ]- ↑ "On a mission to make karate a mainstream sport". The New Indian Express. Retrieved 5 September 2020.
- ↑ Adivi, Sashidhar (26 April 2018). "Aiming for the stars". Deccan Chronicle (in ಇಂಗ್ಲಿಷ್). Retrieved 5 September 2020.
- ↑ Gundra, Shiva Krishna. "After conquering karate, Vivek Teja Cherupalli eyes boxing". Telangana Today. Archived from the original on 11 ಆಗಸ್ಟ್ 2020. Retrieved 5 September 2020.