ವಿವೇಕಾನಂದ ಆಸ್ಪತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಾಪನೆ

  • ಹುಬ್ಬಳ್ಳಿ ನಗರದ ಮಧ್ಯ ಭಾಗದಲ್ಲಿರುವ ಒಂದು ಪ್ರಮುಖ ಆಸ್ಪತ್ರೆಯಾಗಿದೆ. ಸುಮಾರು ೮೦ ವರ್ಷಗಳ ಕೆಳಗೆ ಈ ಆಸ್ಪತ್ರೆಯನ್ನು ವುಮನ್ಸ್ ಆಸ್ಪತ್ರೆಯೆಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು. ನಂತರದ ದಿನಗಳಲ್ಲಿ
  • ಇದನ್ನು ವಿವೇಕಾನಂದ ಆಸ್ಪತ್ರೆಯೆಂದು ಕರೆಯಲಾಯಿತು. ಈ ಆಸ್ಪತ್ರೆಯ ಮೊದಲ ವೈದ್ಯಾಧಿಕಾರಿ ಶ್ರೀಮತಿ ಡಾ|| ಮಹಾಜನ್ ಅವರು. ಇವರ ಕಾಲದಲ್ಲಿ ಈ ಆಸ್ಪತ್ರೆ ಬಹಳ ಹೆಸರು ಮಾಡಿತು. ವಿವೇಕಾನಂದ ಟ್ರಸ್ಟ್ ಈ ಆಸ್ಪತ್ರ್ರೆಯ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಈ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ನಟವರಲಾಲ್ ಶಾಂಘ್ವಿಯವರು ಇದರ ದೈನೆಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
  • ವೈದ್ಯಕೀಯ ಸೌಲಭ್ಯಗಳು
  • ಈ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದೆ ಆಯುರ್ವೇದ ಚಿಕಿತ್ಸಾ ಪದ್ಧತಿಯೂ ಲಭ್ಯವಿದೆ. ಔಷಧೀಕಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಮಕ್ಕಳ ಮತ್ತು ಸ್ತ್ರೀಯರ ಚಿಕಿತ್ಸೆ ಎಲ್ಲವೂ ಲಭ್ಯವಿವೆ.
  • ವೈದ್ಯಕೀಯ ಸಿಬ್ಬಂದಿ
  • ಆಸ್ಪತ್ರೆಯ ಚಿಕಿತ್ಸಾ ಸಂಬಂಧಿ ಮೇಲ್ವಿಚಾರಣೆಗಾಗಿ, ಒಬ್ಬ ಮುಖ್ಯ ವೈದ್ಯಾಧಿಕಾರಿ, ಇಬ್ಬರು ಸ್ಥಾನಿಕ ವೈದ್ಯಾಧಿಕಾರಿ ಮತ್ತು ಹಲವಾರು ಉಪ ವೈದ್ಯಾಧಿಕಾರಿಗಳು ನಿಯಮಿಸಲ್ಪಟ್ಟಿದ್ದಾರೆ. ಶುಶ್ರೂಷಕಿಯರ ಮತ್ತು
  • ದಾದಿಯರ ಮೇಲ್ವಿಚಾರಣೆಗಾಗಿನ್ ಒಬ್ಬ ಮೇಟ್ರನ್ ನೇಮಿತರಾಗಿದ್ದಾರೆ.[೧] [೨]

ಉಲ್ಲೇಖ[ಬದಲಾಯಿಸಿ]

  1. "AYUSH / NATUROPATHY / SPIRITUALITY AND HEALTH". Archived from the original on 2020-03-31. Retrieved 2020-01-14.
  2. Best Maternity Hospitals - More Results