ವಿವೇಕಾನಂದರ್ ಇಲ್ಲಮ್
ವಿವೇಕಾನಂದರ್ ಇಲ್ಲಮ್ ಭಾರತದ ತಮಿಳುನಾಡು ರಾಜ್ಯದ ಚೆನ್ನೈನಲ್ಲಿರುವ ಒಂದು ಐತಿಹಾಸಿಕ ಕಟ್ಟಡವಾಗಿದೆ. ಇದನ್ನು 1842 ರಲ್ಲಿ ಫ್ರೆಡೆರಿಕ್ ಟ್ಯೂಡರ್ ನಿರ್ಮಿಸಿದರು. ಭಾರತೀಯ ಸಂತ ಸ್ವಾಮಿ ವಿವೇಕಾನಂದರು 1897 ರಲ್ಲಿ ಚೆನ್ನೈಗೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು ಮತ್ತು ನಂತರ ಅದನ್ನು ಅವರ ಗೌರವಾರ್ಥವಾಗಿ ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಇದನ್ನು ರಾಮಕೃಷ್ಣ ಮಠವು ನಿರ್ವಹಿಸುತ್ತದೆ ಮತ್ತು ವಿವೇಕಾನಂದರ ಜೀವನದ ಮೇಲಿನ ಪ್ರದರ್ಶನವನ್ನು ಹೊಂದಿದೆ.
ಇತಿಹಾಸ
[ಬದಲಾಯಿಸಿ]1842 ರಲ್ಲಿ, ಫ್ರೆಡ್ರಿಕ್ ಟ್ಯೂಡರ್ ಅವರು ಐಸನ್ನು ಸಂಗ್ರಹಿಸುವ ಸೌಲಭ್ಯವಾಗಿ ಬಂಗಾಳ ಕೊಲ್ಲಿಗೆ ಎದುರಾಗಿ ಈ ಕಟ್ಟಡವನ್ನು ನಿರ್ಮಿಸಿದರು. 1880 ರಲ್ಲಿ ಈ ವ್ಯವಹಾರ ಕುಸಿಯಿತು ಮತ್ತು ಕಟ್ಟಡವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಬಿಳಿಗಿರಿ ಅಯ್ಯಂಗಾರ್‌ಗೆ ಮಾರಾಟ ಮಾಡಲಾಯಿತು. ಅಯ್ಯಂಗಾರ್ ಅವರು ಮನೆಗೆ ಹೊಸರೂಪ ನೀಡಿದರು ಮತ್ತು ಮದ್ರಾಸ್ ಹೈಕೋರ್ಟಿನಲ್ಲಿ ತಮ್ಮ ಸ್ನೇಹಿತ ಮತ್ತು ನ್ಯಾಯಾಧೀಶರ ಹೆಸರಿನಲ್ಲಿ ಕ್ಯಾಸಲ್ ಕರ್ನನ್ ಎಂದು ಹೆಸರಿಸಿದರು.[೧] ಸ್ವಾಮಿ ವಿವೇಕಾನಂದರು 1897 ರಲ್ಲಿ ಮದ್ರಾಸಿಗೆ ಭೇಟಿ ನೀಡಿದಾಗ, ಅವರು 6 ಮತ್ತು 14 ಫೆಬ್ರವರಿ 1897 ರ ನಡುವೆ ಕಟ್ಟಡದಲ್ಲಿ ತಂಗಿದ್ದರು. ನಂತರ, ರಾಮಕೃಷ್ಣ ಮಠವು 1897 ರಿಂದ 1906 ರವರೆಗೆ ಕಟ್ಟಡದಿಂದ ಕಾರ್ಯನಿರ್ವಹಿಸಿತು.
1963 ರಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದಂದು, ತಮಿಳುನಾಡು ಸರ್ಕಾರವು ಈ ಕಟ್ಟಡವನ್ನು 'ವಿವೇಕಾನಂದರ ಇಲ್ಲಂ' ಅಂದರೆ ತಮಿಳಿನಲ್ಲಿ 'ವಿವೇಕಾನಂದ ಮನೆ' ಎಂದು ಮರುನಾಮಕರಣ ಮಾಡಿತು. 1997 ರಲ್ಲಿ, ತಮಿಳುನಾಡು ಸರ್ಕಾರವು ಕಟ್ಟಡವನ್ನು ರಾಮಕೃಷ್ಣ ಮಠಕ್ಕೆ ಬಾಡಿಗೆಗೆ ನೀಡಿತು ಮತ್ತು ಪ್ರಸ್ತುತ ಇದು ಸ್ವಾಮಿ ವಿವೇಕಾನಂದರ ಜೀವನದ ಮೇಲಿನ ಪ್ರದರ್ಶನವನ್ನು ಹೊಂದಿದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ Nair, Sashi (2003). "Ice House through the years". The Hindu. Archived from the original on 28 July 2004. Retrieved 25 May 2014.
- ↑ Swaminathan, Atul (25 March 2012). "India's first 3D stereoscopic movie on Vivekananda". The Hindu. Chennai, India.