ವಿಲಿಯಮ್ ಲಾರೆನ್ಸ್ ಬಾಲ್ಸ್
ಗೋಚರ
ವಿಲಿಯಮ್ ಲಾರೆನ್ಸ್ ಬಾಲ್ಸ್,ಇಂಗ್ಲೆಂಡ್ ಮೂಲದವರು. ಅವರನ್ನು ವಿಶ್ವದ ಹತ್ತಿ ಸಂಶೋಧಕರು,ಗುರುವೆಂದೇ ಸಂಬೋಧಿಸುತ್ತಾರೆ. [೧] ರವರು, 'ಹತ್ತಿ ಸಂಶೋಧನೆ ಹಾಗೂ ತಂತ್ರಜ್ಞಾನಗಳ ಪಿತ'ನೆಂದು ಗೌರವಿಸಲ್ಪಟ್ಟಿದ್ದಾರೆ. 'ಡಾ.ಬಾಲ್ಸ್' ತಮ್ಮ ಜೀವನದ ಬಹು ಪಾಲನ್ನು 'ಇಜಿಪ್ಟ್' ನ 'ಅಲೆಕ್ಝಾಂಡ್ರಿಯದ ಹತ್ತಿ ಹೊಲ'ಗಳಲ್ಲಿ ಸಂಶೋದನೆಮಾಡುವುದರಲ್ಲೇ ವಿನಿಯೋಗಿಸಿದರು. ಅವರು ನುಡಿದ ನುಡಿ, "ಹತ್ತಿ ಬೆಳೆಯುವುದು ದಾರ ಮಾಡಲು ತಾನೇ," ವಿಶ್ವದಲ್ಲೆಲ್ಲಾ ಜನಪ್ರಿಯವಾಯಿತು. ಯೂರೋಪಿಯನ್ನರಿಗೆ ಹತ್ತಿಯನ್ನು ಬಳಸಿ, ಸುಂದರವಾದ ವಸ್ತ್ರಗಳನ್ನು ಮಾಡಬಹುದೆಂಬ ಕಲ್ಪನೆಯಿರಲಿಲ್ಲ. 'ಮಾರ್ಲೊಪೋಲೋ' ನ ಪೌರಾತ್ಯ ಪ್ರವಾಸ ಚರಿತ್ರೆಯಿಂದ ಅವರಿಗೆ ಭಾರತದ ಗೃಹ ಕೈಗಾರಿಕೆಯ ಬಗ್ಗೆ ಅಲ್ಪ-ಸ್ವಲ್ಪ ಮಾಹಿತಿ ದೊರೆತಿತ್ತು. ಅವರೇ ಭಾರತಕ್ಕೆ ಬಂದಾಗ,ಗ್ರಾಮೀಣ ಕುಶಲ ಕಾರರಿಗೆ ಬಟ್ಟೆ ತಯಾರಿಸುವ ಕೈಚಳಕದಿಂದ ಪ್ರಭಾವಿತರಾದರು.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Janus, Papers of William Lawrence Balls Archived 2016-04-27 ವೇಬ್ಯಾಕ್ ಮೆಷಿನ್ ನಲ್ಲಿ.
- The Royal society publishing, 1 November 1961, iographical Memoirs of Fellows of the Royal Society, S.C.Harland, William Lawrence Balls. (1882-1960) Archived 2 June 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |