ವಿಲಿಯಂ ವೈಮಾರ್ಕ್ ಜೇಕಬ್ಸ್
ವಿಲಿಯಂ ವೈಮಾರ್ಕ್ ಜೇಕಬ್ಸ್ (1863-1943). ಇಂಗ್ಲಿಷ್ ಸಣ್ಣ ಕಥೆಗಾರ.
ಬದುಕು
[ಬದಲಾಯಿಸಿ]ಹುಟ್ಟಿದ್ದು ವ್ಯಾಪಿಂಗ್‍ನಲ್ಲಿ. ಈತನ ತಂದೆ ಅಲ್ಲಿಯ ಬಂದರುಕಟ್ಟೆಯ ಮೇಲ್ವಿಚಾರಕನಾಗಿದ್ದ. 1883ರಿಂದ 1899ರವರೆಗೆ ಈತ ಅಂಚೆ ಕಚೇರಿಯಲ್ಲಿ ಉಳಿತಾಯ ನಿಧಿ ವಿಭಾಗದಲ್ಲಿ ಕೆಲಸ ಮಾಡಿದ.
ಬರಹ
[ಬದಲಾಯಿಸಿ]ತಾನು ಕಂಡ ನಾವೆಗಳ ಮತ್ತು ನಾವಿಕರ ಕಥೆಗಳನ್ನು ಹಾಸ್ಯರಸ ಪ್ರಧಾನವಾಗಿ ಬರೆಯತೊಡಗಿದ. ಇವುಗಳಲ್ಲಿ ಹಲವು ಕಥೆಗಳು ಈತನ ಕಥೆಗಳಿಗೆ ಚಿತ್ರಗಳನ್ನು ಒದಗಿಸಿದ ವಿಲ್ ಓವನ್‍ನ ಜೊತೆಯಲ್ಲಿ ಕಾಲ್ನಡಿಗೆಯ ಪ್ರವಾಸಗಳನ್ನು ಕೈಗೊಂಡಾಗ ರಚಿತವಾದವು. ಮೆನಿ ಕಾರ್ಗೋಸ್ (1896); ದಿ ಸ್ಕಿಪರ್ಸ್ ವೂಯಿಂಗ್ (1897); ಸೀ ಅರ್ಚಿನ್ಸ್ (1898); ಎ ಮಾಸ್ಟರ್ ಆಫ್ ಕ್ರಾಫ್ಟ್ (1900); ಲೈಟ್ ಫ್ರೈಟ್ಸ್ (1901); ದಿ ಲೇಡಿ ಆಫ್ ದಿ ಬಾರ್ಜ್ (1902); ಆಡ್ ಕ್ರಾಫ್ಟ್ (1903); ಷಾರ್ಟ್ ಕ್ರೂಯಿಸಸ್ (1907) ಷಿಪ್ಸ್ ಕಂಪನಿ (1911); ನೈಟ್ ವಾಚಸ್ (1914); ಡೀಪ್ ವಾಟರ್ಸ್ (1919); ಸೀ ವಿಸ್ಪರ್ಸ್ (1926)-ಇವು ಈತನ ಕಥಾಸಂಕಲನಗಳು. ಒಂದೆರಡು ಭಯಾನಕ ಕಥೆಗಳೂ ಸೇರಿವೆ. ಇವುಗಳಲ್ಲಿ ದಿ ಮಂಕೀಸ್ ಪಾ ಪ್ರಸಿದ್ಧವಾದುದು. ಈತ ಅನೇಕ ನಾಟಕಗಳನ್ನೂ ಬರೆದಿದ್ದಾನೆ.