ವಿಲಿಯಂ ರೀವ್ (ಮಿಷನರಿ)
ವಿಲಿಯಮ್ ರೀವ್ (1794-1850) ಭಾರತಕ್ಕೆ ಬಂದ ಲಂಡನ್ ಮಿಷನರಿಯಾಗಿದ್ದರು .19ನೆಯ ಶತಮಾನದ ಉತ್ತರಾರ್ಧದಲ್ಲಿ ಕನ್ನಡವನ್ನು ಇಂಗ್ಲಿಷ್ ಸಾಹಿತ್ಯ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟ ಪಾಶ್ಚಾತ್ಯ ವಿದ್ವಾಂಸರಲ್ಲೊಬ್ಬ.[೧]
ಕ್ರೈಸ್ತಧರ್ಮ ಪ್ರಸಾರಕ್ಕೆಂದು ಭಾರತಕ್ಕೆ ಬಂದ. ಸು. 1827ರಲ್ಲಿ ಈತ ಮದರಾಸಿನ ಫೋರ್ಟ್ ಸೇಂಟ್ ಜಾರ್ಜ್ ಕಚೇರಿಯಲ್ಲಿ ಪ್ರಮುಖ ಭಾಷಾಪಂಡಿತನಾಗಿ ಕೆಲಸಮಾಡಿದ. ಕನ್ನಡ, ತಮಿಳು, ಒರಿಯ, ಬಂಗಾಲಿ, ಸಂಸ್ಕøತ ಮುಂತಾದ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯ ಗಳಿಸಿಕೊಂಡಿದ್ದ ಈತ ಶಿಕ್ಷಣತಜ್ಞನೂ ಆಗಿದ್ದ. ಈತ ಮಾಡಿದ ಒಂದು ಮಹತ್ತ್ವಪೂರ್ಣವಾದ ಕೆಲಸವಂದರೆ ಮೊದಲ ಬಾರಿಗೆ ಕನ್ನಡ-ಇಂಗ್ಲಿಷ್ ನಿಘಂಟನ್ನು ರಚಿಸಿ ಪ್ರಕಟಿಸಿದ್ದು. 1817ರಲ್ಲಿ ಈ ನಿಘಂಟಿನ ರಚನೆಯನ್ನು ಆರಂಭಿಸಿದ ಈತ 1832ರಲ್ಲಿ ಇದನ್ನು ಮುಗಿಸಿ ಪ್ರಕಟಿಸಿದ. ಹಳೆಯ ಒಡಂಬಡಿಕೆಯ ಕನ್ನಡ ಅನುವಾದವನ್ನು ಮೋಸೆಯ ಮೊದಲನೆಯ ಕಾಂಡವೆಂಬ ಹೆಸರಿನಲ್ಲಿ ಪ್ರಕಟಿಸಿದ್ದಾನೆ. 1830ರಿಂದ 1839ರ ವರೆಗೆ ಬೈಬಲ್ ಭಾಷಾಂತರದಲ್ಲಿ ನಿರತನಾಗಿದ್ದ ಈತ 1839ರಲ್ಲಿ 1,200 ಪುಟಗಳಿಗೂ ಮೀರಿದ ಕನ್ನಡ ಬೈಬಲನ್ನು ಪ್ರಕಟಿಸಿದ. ಕನ್ನಡ ಭಾಷೆಯ ಆರಂಭಿಕ ನಿಘಂಟಿನ ಲೇಖಕ, ಮತ್ತು ಅನುವಾದಕ (ಜಾನ್ ಹ್ಯಾಂಡ್ಸ್ ಆಫ್ ದಿ ಬೈಬಲ್). . ರೀವ್ 1836 ರಿಂದ 1843 ರವರೆಗೆ ಓಸ್ವೆಸ್ಟ್ರಿಯ ಕಾಂಗ್ರೆಗೇಷನಲ್ ಚರ್ಚ್ನ ಮಂತ್ರಿಯಾದರು. ನಂತರ ಅವರ ದೃಷ್ಟಿ ಸಮಸ್ಯೆಯಿಂದ ಬ್ರಿಸ್ಟಲ್ಗೆ ಸ್ಥಳಾಂತರಗೊಂಡರು.ಅವರು 1850 ರಲ್ಲಿ ನಿಧನರಾದರು.[೨][೩][೪]
ಉಲ್ಲೇಖಗಳು
[ಬದಲಾಯಿಸಿ]- ↑ Richard Lovett, The History of the London Missionary Society, 1795-1895 vol. 2 (1899), p. 106; archive.org.
- ↑ Indian missionary directory and memorial volume Brenton Hamline Badley - 1881 "William Reeve. B. 1794. 0. Feb. 7, 1816. A. at Madras Aug. 26, 1816, and at Bellary, Sept. 27. R. to Eng. Sept. 18, 1824.1tt. ... revision of Canarese Bible. Compiled two Canarese English Dictionaries H. to Eng. Feb. 17, 1834 Connection with Society ceased, Nov. 23, 1335 Date of death unknown. "
- ↑ Reeve, William (1858). Sanderson, Daniel (ed.). A Dictionary, Canarese and english. Bangalore: Wesleyan Mission Press. Retrieved 18 January 2017.
- ↑ George Eyre Evans, William George Dimock Fletcher, William Kinsella, Shropshire Parish Registers: Nonconformist and Roman Catholic registers (1903), section Oswestry Old Chapel registers, p. v; archive.org.
.