ವಿಷಯಕ್ಕೆ ಹೋಗು

ವಿಲಿಯಂ ಜೆಫರ್‌ಸನ್‌‌ (ಕ್ರಿಕೆಟಿಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Will Jefferson
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
William Ingleby Jefferson
ಎತ್ತರ6 ft 9 in (2.06 m)
ಬ್ಯಾಟಿಂಗ್Right-handed batsman
ಬೌಲಿಂಗ್Right-arm slow
ವೃತ್ತಿ ಅಂಕಿಅಂಶಗಳು
ಮೂಲ: [೧], March 21 2011

ವಿಲಿಯಂ ಇಂಗ್ಲ್‌ಬಿ ಜೆಫರ್‌ಸನ್‌‌ (ಜನನ: 1979ರ ಅಕ್ಟೋಬರ್‌‌ 25) ಎಂಬಾತ ಓರ್ವ ವೃತ್ತಿಪರ ಕ್ರಿಕೆಟಿಗನಾಗಿದ್ದು, ಈತ ಪ್ರಸಕ್ತವಾಗಿ ಲೀಸೆಸ್ಟರ್‌ಷೈರ್‌‌ ತಂಡಕ್ಕಾಗಿ ಆಡುತ್ತಿದ್ದಾನೆ. ಈತ 2006ರವರೆಗೆ ಎಸೆಕ್ಸ್‌‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌ ಪರವಾಗಿಯೂ ಮತ್ತು 2009ರವರೆಗೆ ನಾಟಿಂಗ್‌ಹ್ಯಾಮ್‌ಷೈರ್‌ ಪರವಾಗಿಯೂ ಆಡಿದ್ದ ಎಂಬುದು ಗಮನಾರ್ಹ ಸಂಗತಿ. ಸುಮಾರು 6 ಅಡಿ 10 ಇಂಚುಗಳಷ್ಟು (2.08 ಮೀ) ಎತ್ತರದ[] ನಿಲುವನ್ನು ಹೊಂದಿರುವ ಈತ ಕೌಂಟಿ ಕ್ರಿಕೆಟ್‌‌‌‌ನಲ್ಲಿನ ಅತಿ ಎತ್ತರದ ಆಟಗಾರನಾಗಿದ್ದಾನೆ, ಮತ್ತು ಸರ್ವದಾ ಅತಿ ಎತ್ತರದ ವೃತ್ತಿಪರ ಕ್ರಿಕೆಟಿಗರ ಪೈಕಿ ಒಬ್ಬನೆನಿಸಿಕೊಂಡಿದ್ದಾನೆ.[]

ಜೆಫರ್‌ಸನ್‌‌ ಬಲಗೈ-ಆಟದ ಓರ್ವ ಆರಂಭಿಕ ಬ್ಯಾಟುಗಾರ ಮತ್ತು ಓರ್ವ ವಿಶ್ವಾಸಾರ್ಹ ಸ್ಲಿಪ್‌ ಕ್ಷೇತ್ರರಕ್ಷಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಡರ್ಬಿ ಎಂಬಲ್ಲಿ ಕ್ರಿಕೆಟ್‌‌ ಆಡುವ ಕುಟುಂಬವೊಂದರಲ್ಲಿ ಅವನು ಜನಿಸಿದ; ಅವನ ತಂದೆ ರಿಚರ್ಡ್‌ ಜೆಫರ್‌ಸನ್‌‌ ಸರ್ರೆ ತಂಡಕ್ಕಾಗಿ ಪ್ರಥಮ-ದರ್ಜೆ ಕ್ರಿಕೆಟ್‌‌ ಆಟವಾಡಿದವನು ಎಂಬುದು ಗಮನಾರ್ಹ ಸಂಗತಿ. ಔಂಡಲ್‌ ಶಾಲೆ ಮತ್ತು ಡರ್ಹ್ಯಾಂ ವಿಶ್ವವಿದ್ಯಾಲಯದಲ್ಲಿರುವಾಗಲೇ ಆತ ತನ್ನ ಸಾಮರ್ಥ್ಯದ ಕುರಿತಾದ ಭರವಸೆಯನ್ನು ತೋರಿಸಿದ; 2000ರ ಅವಧಿಯಲ್ಲಿ ಕ್ರಿಕೆಟ್‌-ಪ್ರವಾಸದಲ್ಲಿ ತೊಡಗಿದ್ದ ಜಿಂಬಾಬ್ವೆಯನ್ನರ ವಿರುದ್ಧ ಆತ ಬ್ರಿಟಿಷ್‌ ವಿಶ್ವವಿದ್ಯಾಲಯಗಳ ಪರವಾಗಿ ಪ್ರಥಮ-ದರ್ಜೆ ಕ್ರಿಕೆಟ್‌ಗೆ ತನ್ನ ಪಾದಾರ್ಪಣೆಯನ್ನು ಮಾಡಿದ.

2002ರ ಅವಧಿಯಲ್ಲಿ ಆತ ಎಸೆಕ್ಸ್‌ನಲ್ಲಿ ತನ್ನ ಮೊದಲ ಸಂಪೂರ್ಣ ಕ್ರಿಕೆಟ್‌ ಋತುವನ್ನು ದಾಖಲಿಸಿದ ಹಾಗೂ ಈ ಅವಧಿಯಲ್ಲಿ ಆತ ಪ್ರಥಮ-ದರ್ಜೆ ಕ್ರಿಕೆಟ್‌ನಲ್ಲಿ 815 ಓಟಗಳನ್ನು ಪೇರಿಸಿದ; ಅಷ್ಟೇ ಅಲ್ಲ, ಸದರಿ ಋತುವಿನ[] ಅಂತಿಮ ಪಂದ್ಯದಲ್ಲಿ ಆತ ಔಟಾಗದೆ 165 ಓಟಗಳನ್ನು ದಾಖಲಿಸಿದ್ದು ಕೌಂಟಿ ಚಾಂಪಿಯನ್‌ಷಿಪ್‌ನ ಎರಡನೇ ವಿಭಾಗದಲ್ಲಿ ಎಸೆಕ್ಸ್‌ ತಂಡವು ಗೆಲ್ಲುವಲ್ಲಿನ ಒಂದು ಪ್ರಮುಖ ಕೊಡುಗೆಯಾಗಿ ಪರಿಣಮಿಸಿತು.

2004ರ ಅವಧಿಯಲ್ಲಿ ಅವನು ಮೆರೆದ ಸಾಧನೆಯು ಅವನ ಈವರೆಗಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ. ಈ ಋತುವಿನಲ್ಲಿ ಅವನು 55.53ನಷ್ಟಿದ್ದ ಒಂದು ಸರಾಸರಿಯೊಂದಿಗೆ ಪ್ರಥಮ-ದರ್ಜೆ ಕ್ರಿಕೆಟ್‌ನಲ್ಲಿನ 1555 ಓಟಗಳನ್ನು ದಾಖಲಿಸಿದ ಮತ್ತು 222 ಓಟಗಳ ಒಂದು ಉನ್ನತ ಗಳಿಕೆಯೂ ಸೇರಿದಂತೆ 6 ಶತಕಗಳನ್ನು ದಾಖಲಿಸಿದ.[] 2005ರಲ್ಲಿ ತನ್ನ ಆಟದ ಸ್ಥಿತಿಯಲ್ಲಿ ಕುಸಿತವನ್ನು ಕಂಡಿದ್ದರಿಂದಾಗಿ ಎಸೆಕ್ಸ್‌‌ ಸೆಕೆಂಡ್‌ XI ತಂಡಕ್ಕೆ ಅವನು ತಳ್ಳಲ್ಪಟ್ಟನಾದರೂ, MCC ಯಂಗ್‌‌ ಕ್ರಿಕೆಟರ್ಸ್‌‌[] ತಂಡದ ವಿರುದ್ಧ ಔಟಾಗದೆ 303 ಓಟಗಳನ್ನು ಗಳಿಸುವ ಮೂಲಕ ಪ್ರತಿಕ್ರಿಯಿಸಿದ ಆತ ಮೊದಲ ತಂಡದಲ್ಲಿನ ತನ್ನ ಸ್ಥಾನವನ್ನು ಮರುಗಳಿಸಿದ.

2006ರ ಋತುವಿನ ಆರಂಭಕ್ಕೆ ಮುಂಚಿತವಾಗಿ ಆತ ಒಂದು ಅಸಹಜವಾದ ಅಪಘಾತಕ್ಕೆ ಈಡಾಗಬೇಕಾಯಿತು; ಕಿಟಕಿಯೊಂದನ್ನು ತೆರೆಯಲು ಪ್ರಯತ್ನಿಸುವ ಸಂದರ್ಭದಲ್ಲಿ ಅವನ ಎಡಗೈ ಮಣಿಕಟ್ಟು ಕತ್ತರಿಸಿತು ಹಾಗೂ ಸ್ನಾಯುರಜ್ಜುಗಳು ತುಂಡರಿಸಲ್ಪಟ್ಟವು.[] ಈ ಗಾಯದಿಂದ ಚೇತರಿಸಿಕೊಂಡ ನಂತರ, ಎಸೆಕ್ಸ್‌ ತಂಡದಲ್ಲಿ ಒಂದು ನಿಯತವಾದ ಸ್ಥಾನವನ್ನು ಮರುಗಳಿಸುವಲ್ಲಿ ಅವನು ವಿಫಲಗೊಂಡ, ಮತ್ತು ಪರಸ್ಪರ ಸಮ್ಮತಿಯ ಅನುಸಾರವಾಗಿ 2006ರ ಆಗಸ್ಟ್‌ನಲ್ಲಿ ಅವನು ಕೌಂಟಿಯನ್ನು ಬಿಟ್ಟ.[] ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ, ನಾಟಿಂಗ್‌ಹ್ಯಾಮ್‌ಷೈರ್ ಜೊತೆಗಿನ ಮೂರು-ವರ್ಷದ ಒಪ್ಪಂದವೊಂದಕ್ಕೆ ಅವನು ಸಹಿಹಾಕಿದ.[]

ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಕೈಗೊಳ್ಳಬೇಕಿದ್ದ ಬಾಂಗ್ಲಾದೇಶದ ಪ್ರವಾಸಕ್ಕೆ ಮೀಸಲಾದ ಇಂಗ್ಲೆಂಡ್‌ A ತಂಡಕ್ಕಾಗಿ 2007ರ ಜನವರಿಯಲ್ಲಿ ಅವನು ಆಯ್ಕೆಯಾದ.[][೧೦]

ಜೆಫರ್‌ಸನ್‌ನ ಕಳಪೆ ಆಟದ ಸ್ಥಿತಿಯು ಮತ್ತೆ ಎರಡು ವರ್ಷಗಳಷ್ಟು ಹಿಗ್ಗಲಿಸಲ್ಪಟ್ಟ ಕಾರಣದಿಂದ, 2009ರ ಸೆಪ್ಟೆಂಬರ್‌ನಲ್ಲಿ ಅವನೊಂದಿಗಿನ ಒಪ್ಪಂದವನ್ನು ನಾಟಿಂಗ್‌ಹ್ಯಾಮ್‌ಷೈರ್‌ ಕೊನೆಗಾಣಿಸಿತು.

ಟಿಪ್ಪಣಿಗಳು

[ಬದಲಾಯಿಸಿ]
  1. ಅವನ ಎತ್ತರಕ್ಕೆ ಸಂಬಂಧಿಸಿದಂತೆ ಮಾಹಿತಿಯ ಮೂಲಗಳು ಭಿನ್ನವಾಗುತ್ತಾ ಹೋಗುತ್ತವೆ. ಕ್ರಿಕ್‌ಇನ್ಫೋ ಅನುಸಾರ ಅವನ ಎತ್ತರವು 6 ಅಡಿ 9½ ಇಂಚುಗಳಷ್ಟಿದ್ದರೆ, ECB Archived 2007-10-07 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಇತರ ಅನೇಕ ಮೂಲಗಳ ಅನುಸಾರ ಅದು 6 ಅಡಿ 10 ಇಂಚುಗಳಷ್ಟಿದೆ, ಮತ್ತು ಎಸೆಕ್ಸ್‌‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌ Archived 2006-04-11 ವೇಬ್ಯಾಕ್ ಮೆಷಿನ್ ನಲ್ಲಿ. ಅನುಸಾರ ಅದು 6 ಅಡಿ 10½ ಇಂಚುಗಳಷ್ಟಿದೆ. (2006ರ ಏಪ್ರಿಲ್‌ 16ರಂದು ಅಂತಿಮ ಉಲ್ಲೇಖವನ್ನು ಮರುಸಂಪಾದಿಸಲಾಯಿತು; 2006ರ ಆಗಸ್ಟ್‌ 29ರ ವೇಳೆಗೆ ಇದ್ದಂತೆ ಇದ್ದಂತೆ ದಾಖಲೆಯು ಲಭ್ಯವಿಲ್ಲ).
  2. ಸಸೆಕ್ಸ್‌ ಮತ್ತು ವಾರ್ವಿಕ್‌ಷೈರ್‌ ತಂಡಗಳನ್ನು ಪ್ರತಿನಿಧಿಸಿದ್ದ ಪಾಲ್‌ ಡಂಕೆಲ್ಸ್‌ ಕೂಡಾ 6 ಅಡಿ 10 ಇಂಚುಗಳಷ್ಟು ಎತ್ತರವಿದ್ದ ಎಂದು ಭಾವಿಸಲಾಗುತ್ತದೆ (ಕ್ರಿಕ್‌ಇನ್ಫೋ ಪ್ರೊಫೈಲ್‌). ಸರ್ರೆ ತಂಡದ ಆಂಥೊನಿ ಅಲಾಮ್‌ ಎಂಬಾತನ ಎತ್ತರವು 6 ಅಡಿ 9 ಇಂಚುಗಳು ಮತ್ತು 6 ಅಡಿ 10 ಇಂಚುಗಳ ನಡುವೆ ಇದೆ ಎಂಬಂತೆ ದಾಖಲಿಸಲ್ಪಟ್ಟಿದೆ (ಕ್ರಿಕ್‌ಇನ್ಫೋ ಪ್ರೊಫೈಲ್‌)
  3. ಕ್ರಿಕೆಟ್‌‌ ಆರ್ಕೀವ್‌‌ನಿಂದ ಪಡೆಯಲಾದ ಎಸೆಕ್ಸ್‌‌ vs ನಾಟಿಂಗ್‌ಹ್ಯಾಮ್‌ಷೈರ್‌, 18–21 ಸೆಪ್ಟೆಂಬರ್‌ 2002
  4. ಕ್ರಿಕೆಟ್‌‌ ಆರ್ಕೀವ್‌‌‌ನಿಂದ ಪಡೆಯಲಾದ ಜೆಫರ್‌ಸನ್‌‌'ಸ್‌ ಫಸ್ಟ್‌-ಕ್ಲಾಸ್‌ ಬ್ಯಾಟಿಂಗ್‌ ಆವರೇಜಸ್‌ ಬೈ ಸೀಸನ್‌
  5. ಕ್ರಿಕೆಟ್‌‌ ಆರ್ಕೀವ್‌‌‌‌ನಿಂದ ಪಡೆಯಲಾದ ಎಸೆಕ್ಸ್‌‌ ಸೆಕೆಂಡ್‌ XI v ಮೇರಿಲ್‌ಬೋನ್‌ ಕ್ರಿಕೆಟ್‌‌ ಕ್ಲಬ್‌‌ ಯಂಗ್‌‌ ಕ್ರಿಕೆಟರ್ಸ್‌‌, 10–12 ಆಗಸ್ಟ್‌‌ 2005
  6. ಕ್ರಿಕ್‌ಇನ್ಫೋದಿಂದ ಪಡೆಯಲಾದ ಜೆಫರ್‌ಸನ್‌‌ ಸಫರ್ಸ್‌ ಫ್ರೀಕ್‌ ಇಂಜುರಿ
  7. ಎಸೆಕ್ಸ್‌‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌ನಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ Archived 2006-09-25 ವೇಬ್ಯಾಕ್ ಮೆಷಿನ್ ನಲ್ಲಿ.
  8. ನಾಟಿಂಗ್‌ಹ್ಯಾಮ್‌ಷೈರ್‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌‌‌‌ನಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ[ಶಾಶ್ವತವಾಗಿ ಮಡಿದ ಕೊಂಡಿ]
  9. ECBಯಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ[ಶಾಶ್ವತವಾಗಿ ಮಡಿದ ಕೊಂಡಿ]
  10. ನಾಟಿಂಗ್‌ಹ್ಯಾಮ್‌ಷೈರ್‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌‌‌ನಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ Archived 2007-02-12 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು‌

[ಬದಲಾಯಿಸಿ]