ವಿರೇಚಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿರೇಚಕಗಳು, ಜುಲಾಬುಕಾರಿಗಳು, ಅಥವಾ ಭೇದಿಔಷಧಗಳು ಎಂದರೆ ಮಲವನ್ನು ಸಡಿಲುಮಾಡುವ ಮತ್ತು ಮಲವಿಸರ್ಜನೆಯನ್ನು ಹೆಚ್ಚಿಸುವ ವಸ್ತುಗಳು[೧]. ಮಲಬದ್ಧತೆಗೆ ಚಿಕಿತ್ಸೆ ನೀಡಲು ಮತ್ತು ಅದನ್ನು ತಡೆಯಲು ಇವನ್ನು ಬಳಸಲಾಗುತ್ತದೆ.

ಅವು ಹೇಗೆ ಕೆಲಸಮಾಡುತ್ತವೆ ಮತ್ತು ಅವುಗಳು ಹೊಂದಿರಬಹುದಾದ ಅಡ್ಡ ಪರಿಣಾಮಗಳನ್ನು ಅವಲಂಬಿಸಿ ವಿರೇಚಕಗಳು ಬದಲಾಗುತ್ತವೆ. ಗುದನಾಳದ ಮತ್ತು ಕರುಳಿನ ಪರೀಕ್ಷೆಗಳಿಗಾಗಿ ದೊಡ್ಡ ಕರುಳನ್ನು ಖಾಲಿಯಾಗಿಸಲು ಕೆಲವು ಉತ್ತೇಜಕ, ನಯವಾಗಿ ಚಲಿಸುವಂತೆ ಮಾಡುವ ಮತ್ತು ಲವಣಯುಕ್ತ ವಿರೇಚಕಗಳನ್ನು ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಎನಿಮಾವನ್ನು ಪೂರಕವಾಗಿ ಬಳಸಬಹುದು. ಸಾಕಷ್ಟು ಹೆಚ್ಚಿನ ಪ್ರಮಾಣದ ವಿರೇಚಕಗಳು ಅತಿಸಾರವನ್ನು ಉಂಟುಮಾಡಬಹುದು.

ಕೆಲವು ವಿರೇಚಕಗಳು ಒಂದಕ್ಕಿಂತ ಹೆಚ್ಚು ಸಕ್ರಿಯ ಘಟಕಾಂಶವನ್ನು ಸಂಯೋಜಿಸುತ್ತವೆ.

ವಿರೇಚಕಗಳನ್ನು ಬಾಯಿಯಿಂದ ಅಥವಾ ಗುದನಾಳದಿಂದ ಕೊಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Constipation" (PDF). www.digestive.niddk.nih.gov. National Digestive Diseases Information Clearinghouse. Archived from the original (PDF) on 15 ಮೇ 2012. Retrieved 3 November 2014.
"https://kn.wikipedia.org/w/index.php?title=ವಿರೇಚಕ&oldid=1058281" ಇಂದ ಪಡೆಯಲ್ಪಟ್ಟಿದೆ