ವಿಷಯಕ್ಕೆ ಹೋಗು

ವಿಮಾ ಪಾಲಿಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮೆ: ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಕಾನೂನು ಮತ್ತು ಅರ್ಥಶಾಸ್ತ್ರ ಪರಿಗಣಿಸುತ್ತವೆ.ಗಡಾಂತರದಿಂದ ಸಂಭವಿಸುವ ನಷ್ಟವನ್ನು ಭರ್ತಿ ಮಾಡುವುದಕ್ಕಾಗಿ, ಪಾವತಿ ಮಾಡಿರುವ 'ಕಂತಿ'ನ ಮೊತ್ತದ ನ್ಯಾಯೋಚಿತ ವಿನಿಮಯವೇ ವಿಮೆ ಎಂದು ವಿಮೆಯನ್ನು ವಿವರಿಸಲಾಗಿದೆ.ಭಾರೀ ಪ್ರಮಾಣದ ಸಂಭವನೀಯ ವಿನಾಶಕಾರಿ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ಅನುಭವಿಸುವ ನಿಶ್ಚಿತವೂ, ಗೊತ್ತಿರುವಂಥದ್ದೂ ಆದ ಅಲ್ಪ ಪ್ರಮಾಣದ ನಷ್ಟವೆಂದೂ ಇದನ್ನು ಭಾವಿಸಬಹುದು. ವಿಮೆಗಾರ ಎಂದರೆ ವಿಮೆ ಸೇವೆಯನ್ನು ಒದಗಿಸುವ ಸಂಸ್ಥೆ. ವಿಮೆದಾರ ಅಥವಾ ಪಾಲಿಸಿದಾರ ಎಂದರೆ ವಿಮೆಯ ಸೌಲಭ್ಯವನ್ನು ಪಡೆದಿರುವ ವ್ಯಕ್ತಿ ಅಥವಾ ಘಟಕ. ಇಂತಿಷ್ಟು ಮೊತ್ತದ ವಿಮೆ ರಕ್ಷಣೆ ಪಡೆಯ ಬಯಸಿದಾಗ ಇಂತಿಷ್ಟು ಶುಲ್ಕ ತೆರಬೇಕು ಎಂದು ನಿರ್ಣಯಿಸುವ ಅಂಶವೇ ವಿಮಾ ದರ .ಇದೇ ವಿಮಾ ಪ್ರೀಮಿಯಂ (=ವಿಮಾ ಕಂತು) ಅಪಾಯ ನಿರ್ವಹಣೆಯು ಮೌಲ್ಯ ನಿರ್ಣಯ ಮತ್ತು ಅಪಾಯ ನಿಯಂತ್ರಣದ ನಡುವಿನ ಕಸರತ್ತು, ಇದು ವಿಭಿನ್ನವಾದ ಅಧ್ಯಯನ ಮತ್ತು ಪ್ರಯೋಗದ ಕ್ಷೇತ್ರವಾಗಿ ಹೊರಹೊಮ್ಮಿದೆ. ವಿಮೆಯ ತತ್ವಗಳು[ಬದಲಾಯಿಸಿ] ವಾಣಿಜ್ಯ ರೂಪದಲ್ಲಿ ವಿಮೆಯ ರಕ್ಷಣೆಗೆ ಒಳಗಾಗಬಲ್ಲ ಅಪಾಯಗಳು ವಿಶಿಷ್ಟವಾಗಿ ಏಳು ಸಾಮಾನ್ಯ ಗುಣಗಳನ್ನು ಹೊಂದಿವೆ ಏಕರೂಪದ ಅಪಾಯಕ್ಕೆ ತುತ್ತಾಗುವಂಥ ಘಟಕಗಳು. ಅಧಿಕ ಸದಸ್ಯರಿರುವ ಸಂಸ್ಥೆಯಲ್ಲಿನ ವ್ಯಕ್ತಿಗಳಿಗೆ ನೀಡಲಾಗಿರುವ ವಿಮಾ ಪಾಲಿಸಿಗಳ ಸಂಖ್ಯೆಯದ್ದೇ ಸಿಂಹ ಪಾಲು. ಉದಾಹರಣೆಗೆ, 2004ರಲ್ಲಿ ಸುಮಾರು 175 ದಶಲಕ್ಷ ವಾಹನಗಳಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಾಹನ ವಿಮೆ ರಕ್ಷಣೆಯನ್ನು ಒದಗಿಸಲಾಗಿತ್ತು.[೨] ಏಕರೂಪದ ಅಪಾಯಕ್ಕೆ ತೆರೆದುಕೊಂಡಿರುವ ಘಟಕಗಳು ಹೆಚ್ಚಿದ್ದಷ್ಟೂ 'ಸಂಖ್ಯಾ ಬಲ ನಿಯಮ'ದ ಆಧಾರದ ಮೇಲೆ ದೊಡ್ಡ ಪ್ರಮಾಣದ ಕಾನೂನುವಿಮಾಗಾರರಿಗೆ ಹೆಚ್ಚು ಪ್ರಯೋಜನ. ಏಕೆಂದರೆ, ಇಂಥ ಘಟಕಗಳು ಹೆಚ್ಚಿದಾಗೆಲ್ಲ ನೈಜ ಫಲಿತಾಂಶಗಳು ಸಹ ನಿರೀಕ್ಷಿತ ಮಟ್ಟಕ್ಕೆ ಸನಿಹವಾಗುವ ಸಾಧ್ಯತೆಗಳೂ ಹೆಚ್ಚು. ಈ ಮಾನದಂಡಕ್ಕೆ ಅಪವಾದಗಳುಂಟು. ಲಾಯ್ಡ್ಸ್‌ ಆಫ್‌ ಲಂಡನ್‌ ನಟ-ನಟಿಯರ ಮತ್ತು ಕ್ರೀಡಾಪಟುಗಳ ಜೀವನ ಅಥವಾ ಆರೋಗ್ಯ ವಿಮೆ ಮಾಡುವುದರಲ್ಲಿ ಸುವಿಖ್ಯಾತ. ಉಪಗ್ರಹ ಉಡಾವಣೆ ಸಂದರ್ಭದಲ್ಲಿ ಅಪರೂಪಕ್ಕೆ ಎದುರಾಗಬಹುದಾದ ಘಟನೆಗಳ ಮೇಲೂ ವಿಮಾ ರಕ್ಷಣೆ ಒದಗಿಸುವುದುಂಟು. 'ಏಕರೂಪದ' ಅಪಾಯಕ್ಕೆ ಒಡ್ಡಿಕೊಳ್ಳದ ಘಟಕಗಳಿಲ್ಲದ ಬೃಹತ್ ವಾಣಿಜ್ಯ ಆಸ್ತಿಪಾಸ್ತಿಗಳ ಮೇಲೂ ವಿಶೇಷ ಪಾಲಿಸಿಗಳ ವಿಮೆ ಇಳಿಸಬಹುದಾಗಿದೆ. ಇಂಥ ಸನ್ನಿವೇಶ ಇರದೇ ಇದ್ದಾಗಲೂ ಈ ರೀತಿಯ ಅನೇಕ ಅಪಾಯಗಳನ್ನೂ ವಿಮಾ-ಯೋಗ್ಯವೆಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ನಿರ್ದಿಷ್ಟ ನಷ್ಟ . ಗೊತ್ತಾದ ಸಮಯ ಮತ್ತು ಗೊತ್ತಾದ ಸ್ಥಳದಲ್ಲಿ, ಗೊತ್ತಾದ ಮೂಲದಿಂದ, ವಿಮಾದಾರರಿಗೆ ತತ್ತ್ವತಃ, ಉಂಟಾಗುವ ಕನಿಷ್ಠ ನಷ್ಟಕ್ಕೆ ಕಾರಣವಾಗುವ ಘಟನೆಯು ಸಂಭವಿಸುವುದುಂಟು. ಜೀವ ಮಿಮೆ ಪಾಲಿಸಿದಾರನೊಬ್ಬನ ನಿಧನ ಇದಕ್ಕೊಂದು ಉತ್ತಮ ಉದಾಹರಣೆ. ಅಗ್ನಿ ಆಕಸ್ಮಿಕ,ವಾಹನ ಅಪಘಾತ, ಮತ್ತು ಕಾರ್ಮಿಕರಿಗೆ ಸಂಭವಿಸುವ ಗಾಯ - ಇವೆಲ್ಲವೂ ಈ ಮಾನದಂಡದ ಅಡಿಯೇ ಬರುತ್ತದೆ. ಇತರೆ ನಷ್ಟಗಳು ಕೇವಲ ತಾತ್ವಿಕವಾಗಿ ನಿರ್ಧಾರವಾಗುವಂಥದ್ದು. ಉದಾಹರಣೆಗೆ, ಔದ್ಯೋಗಿಕ ರೋಗಗಳು ಯಾವುದೇ ವಿಶಿಷ್ಟ ಸಮಯ, ಸ್ಥಳ ಅಥವಾ ಕಾರಣಗಳಿಂದಾಗಿ ಹೀಗಾಗಿದೆ ಎಂದು ಗುರುತಿಸಲಾಗದಂತಹ ಹಾನಿಕಾರಕ ಸ್ಥಿತಿಗಿಳಿಯಲು ದೀರ್ಘಾವಧೀ ಅಪಾಯಕ್ಕೆ ತೆರೆದುಕೊಂಡಿರುವುದೇ ಕಾರಣವಾಗಿರಬಹುದು. ಸಾಕಷ್ಟು ಮಾಹಿತಿಯನ್ನು ಹೊಂದಿರುವ ವ್ಯಕ್ತಿಯು ನಷ್ಟ ಸಂಭವಿಸಿದ ಸಮಯ, ಸ್ಥಳ ಮತ್ತು ನಷ್ಟದ ಕಾರಣವನ್ನು ಪರಿಶೀಲಿಸಬಹುದು. ಆದ್ದರಿಂದ ಈ ಮೂರೂ ಮಾಹಿತಿ ಸಾಕಷ್ಟು ಸ್ಪಷ್ಟವಾಗಿರುವುದು ಅಪೇಕ್ಷಣೀಯ. ಆಕಸ್ಮಿಕ ನಷ್ಟ . ವಿಮೆಯ ಪರಿಹಾರ ಹಣಕ್ಕೆ ಬೇಡಿಕೆ ಸಲ್ಲಿಸಿದಾಗ, ಸಂಭವಿಸಿದ ಆಕಸ್ಮಿಕ ಅನುದ್ದೇಶಿತವಾಗಿರಬೇಕು, ಅಥವಾ ಕನಿಷ್ಠ ಪಕ್ಷ ಫಲಾನುಭವಿಯ ಕೈಮೀರಿದ ಆಕಸ್ಮಿಕ ಅದಾಗಿರಬೇಕು. ನಷ್ಟವು 'ಸುಸ್ಪಷ್ಟ'ವಾಗಿರಬೇಕು, ಅರ್ಥಾತ್‌, ವೆಚ್ಚಕ್ಕೆ ಅವಕಾಶ ಇರುವಂಥ ಘಟನೆಯಿಂದ ಮಾತ್ರ ಅದು ಸಂಭವಿಸಿರಬೇಕು. ಊಹಾತ್ಮಕ ಅಂಶಗಳನ್ನು ಹೊಂದಿರುವ ಘಟನೆಗಳನ್ನು ಸಾಮಾನ್ಯವಾಗಿ ವಿಮಾ-ಯೋಗ್ಯವೆಂದು ಪರಿಗಣಿಸಲಾಗದು.ವ್ಯವಹಾರದಲ್ಲಿನ ಭಯ ಇದಕ್ಕೊಂದು ಉದಾಹರಣೆ. ಭಾರೀ ನಷ್ಟ . ನಷ್ಟದ ಗಾತ್ರ ವಿಮಾದಾರನ ದೃಷ್ಟಿಯಲ್ಲಿ ಅರ್ಥಪೂರ್ಣವಾಗಿರಬೇಕು. ನಷ್ಟದ ನಿರೀಕ್ಷಿತ ವೆಚ್ಚಗಳು ಹಾಗೂ ವಿಮೆ ಪಾಲಿಸಿ ನೀಡುವಿಕೆ ಮತ್ತು ಆಡಳಿತಾತ್ಮಕಆಡಳಿತಾತ್ಮಕ ವೆಚ್ಚ, ನಷ್ಟಗಳ ಹೊಂದಾಣಿಕೆ,ಮತ್ತು ಪರಿಹಾರ ಬೇಡಿಕೆಯನ್ನು ಈಡೇರಿಸಲು ಬೇಕಾದ ಬಂಡವಾಳ ಪೂರೈಕೆ ಹಾಗೂ ಬೇಡಿಕೆ ಬಂದಾಗ ಪರಿಹಾರವನ್ನು ಈಡೇರಿಸಲು ಸಂಸ್ಥೆಗೆ ಇರುವ ತಾಕತ್ತಿನ ಭರವಸೆ ನೀಡಿಕೆ-ಈ ಎಲ್ಲವನ್ನೂ ವಿಮೆ ಕಂತು ಒಳಗೊಂಡಿದೆ. ನಿರೀಕ್ಷಿತ ನಷ್ಟ ವೆಚ್ಚದ ಗಾತ್ರ ಮೇಲೆ ಹೇಳಲಾದ ಸಣ್ಣ ಪುಟ್ಟ ನಷ್ಟಕ್ಕಿಂತ ಬಹುಪಟ್ಟು ದೊಡ್ಡದು. ಇಂಥ ವೆಚ್ಚಗಳಿಗೆ ಹೋಲಿಸಿದಾಗ, ಒದಗಿಸಲಾದ ರಕ್ಷಣೆಯ ಮೌಲ್ಯ ಅಧಿಕವಾಗಿ ಇರದಿದ್ದಲ್ಲಿ ಈ ವೆಚ್ಚಗಳನ್ನು ಕೊಳ್ಳುಗನ ಮೇಲೆ ಹೇರುವುದರಲ್ಲಿ ಏನೂ ಅರ್ಥವಿಲ್ಲ. ವಿಮಾ ಕಂತು . ವಿಮೆ ಇಳಿಸುವ ಘಟನಾವಳಿ ಭಾರೀ ವೆಚ್ಚದ್ದಾಗಿದ್ದರೆ,ಒದಗಿಸಲಾಗುವ ರಕ್ಷಣೆ ವಿಮಾ ಕಂತಿಗಿಂತಲೂ ಅಧಿಕವಾಗಿದ್ದ ಪಕ್ಷದಲ್ಲಿ, ನೀಡಿದರೂ ಕೂಡಾ ಯಾರೂ ವಿಮಾ ಸೇವೆಯನ್ನು ಕೊಳ್ಳಲು ಮುಂದಾಗದಿರುವ ಸಂಭವವುಂಟು. ವಿಮೆಕಂತು ವಿಮೆದಾರನಿಗೆ ಗಮನಾರ್ಹವಾಗಿ ಭಾರವಾಗದಂತಿರಬೇಕು ಮತ್ತು ಯಾವ ರೀತಿಯಿಂದಲೂ ಅದು ವಿಮೆದಾರನಿಗೆ ನಷ್ಟವನ್ನುಂಟು ಮಾಡದಂತಿರಬೇಕು ಎಂಬುದನ್ನು ಹಣಕಾಸು ಲೆಕ್ಕಪತ್ರ ವೃತ್ತಿ ನಿರತರು ಮಾನ್ಯಮಾಡುತ್ತಾರೆ. ನಷ್ಟಕ್ಕೆ ಆಸ್ಪದವೇ ಇಲ್ಲದಿದ್ದಲ್ಲಿ ಇಲ್ಲಿನ ಕೊಡುಕೊಳ್ಳುವಿಕೆ ವ್ಯವಹಾರಕ್ಕೆ ವಿಮೆಯ ರೂಪ ಇರುತ್ತದೆಯೇ ಹೊರತು ಸತ್ವ ಇರುವುದಿಲ್ಲ. (U.S. ಫೈನ್ಯಾನ್ಷಿಯಲ್‌ ಅಕೌಂಟಿಂಗ್‌ ಸ್ಟ್ಯಾಂಡರ್ರ್ಡ್ಸ್‌ ಬೋರ್ಡ್‌ ಸ್ತ್ಯಾಂಡರ್ಡ್‌ ನಂಬರ್‌ 113(=ಹಣಕಾಸು ಲೆಕ್ಕಶಾಸ್ತ್ರ ಗುಣಮಟ್ಟಗಳ ಮಂಡಳಿ ಗುಣಮಟ್ಟ ಸಂಖ್ಯೆ 113 ನೋಡಿ) ಲೆಕ್ಕ ಹಾಕಬಹುದಾದ ನಷ್ಟ . ಔಪಚಾರಿಕವಾಗಿ ಲೆಕ್ಕ ಹಾಕಲು ಆಗದಿದ್ದರೂ, ಕನಿಷ್ಠ ಪಕ್ಷ ಅಂದಾಜು ಮಾಡಬೇಕಾದ ಎರಡು ಅಂಶಗಳಿವೆ:ಒಂದು ನಷ್ಟದ ಸಂಭಾವ್ಯತೆ ಮತ್ತೊಂದು ದೇಖರೇಖೆಯ ವೆಚ್ಚ. ನಷ್ಟದ ಸಂಭಾವ್ಯತೆ ಲೆಕ್ಕಾಚಾರ ಸಾಮಾನ್ಯವಾಗಿ ಒಂದು ಅನುಭವಾತ್ಮಕ ಕಸರತ್ತು. ನಷ್ಟದ ಪುನರ್ವಶ್ಯದ ಖಚಿತ ವಸ್ತುನಿಷ್ಠ ಮೌಲ್ಯಮಾಪನವನ್ನು ಮಾಡಲು ವಿಮೆ ಪಾಲಿಸಿಯ ಜೊತೆಗೆ ನಷ್ಟದ ಸಾಕ್ಷ್ಯದೊಂದಿಗೆ ಆ ವಿಮೆ ಪಾಲಿಸಿಯಡಿ ವಿಮೆ ಹಣದ ಬೇಡಿಕೆಯನ್ನು ಸಲ್ಲಿಸುವ ವ್ಯಕ್ತಿಯ ಶಕ್ಯತೆಯನ್ನು ಅವಲಂಬಿಸಿದೆ. ಅನಾಹುತಗಳಿಂದಾದ ಭಾರೀ ನಷ್ಟ ಮತ್ತು ಸೀಮಿತ ರಕ್ಷಣೆ ಗಂಡಾಂತರ ಎನ್ನುವುದು ಸಮೂಹಕ್ಕೇ ಮುತ್ತಿಗೆ ಹಾಕುವ ಅಪಾಯವಿದೆ. ಇಂಥ ಘಟನೆಯು ಒಂದೇ ವಿಮಾ ಸಂಸ್ಥೆ ನೀಡಿರುವ ವಿಮೆ ಪಾಲಿಸಿಯನ್ನು ಕೊಂಡ ಹಲವಾರು ವಿಮಾದಾರರಿಗೆ ನಷ್ಟ ಸಂಭವಿಸಿದರೆ, ಪಾಲಿಸಿಗಳನ್ನು ವಿತರಿಸಿರುವ ಆ ಸಂಸ್ಥೆಯ ಸಾಮರ್ಥ್ಯವನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ.ವಿಮೆ ಪಡೆಯಲಾದ ವ್ಯಕ್ತಿಗೆ ಒದಗಿದ ಪರಿಸ್ಥಿತಿಗಿಂತಲೂ ಹೆಚ್ಚಾಗಿ ಇಂಥ ತೊಂದರೆಯ ಕಂದಕಕ್ಕೆ ಬಿದ್ದ ಹಲವಾರು ವ್ಯಕ್ತಿಗಳ ಒಟ್ಟು ಮೊತ್ತದ ಹೊಣೆ ಸಂಸ್ಥೆಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ವಿಶಿಷ್ಟವಾಗಿ, ವಿಮೆಗಾರನು ಒಂದೇ ಘಟನೆಯಿಂದ ಪರಿಣಮಿಸುವ ನಷ್ಟಕ್ಕೆ ಮಾತ್ರ ತಮ್ಮ ಜವಾಬ್ದಾರಿಯನ್ನು ವಹಿಸುತ್ತಾನೆ ಮತ್ತು ಬಂಡವಾಳದ ಸುಮಾರು 5 ಪರ್ಸೆಂಟ್‌ನಷ್ಟು ಸಣ್ಣ ಅಂಶ‌ಕ್ಕೆ ಹೊಣೆಯನ್ನು ಸೀಮಿತಗೊಳಿಸಲು ಇಚ್ಛಿಸುತ್ತಾರೆ. ನಷ್ಟವು ಉಲ್ಬಣಗೊಂಡಾಗ ಅಥವಾ ವ್ಯಕ್ತಿಯ ಪಾಲಿಸಿ ವಿಶೇಷವಾಗಿ ಭಾರಿ ವಿಮೆ ಹಣದ ಬೇಡಿಕೆಯ ಹಕ್ಕುಳ್ಳ ಪಕ್ಷದಲ್ಲಿ, ಹೆಚ್ಚುವರಿ ಪಾಲಿಸಿದಾರರನ್ನು ಹೊಂದಲು ವಿಮೆಗಾರನು ಬಂಡವಾಳದ ನಿರ್ಬಂಧಕ್ಕೆ ಈಡಾಗುತ್ತಾನೆ. ಭೂಕಂಪ ವಿಮೆಯು ಇದಕ್ಕೊಂದು ಉತ್ತಮ ಉದಾಹರಣೆ: ವಿಮೆಗಾರನು ಆಗಲೇ ವಿಮೆ ಇಳಿಸಿರುವ ಪಾಲಿಸಿಗಳ ಸಂಖ್ಯೆ ಮತ್ತು ಗಾತ್ರದ ಆಧಾರದ ಮೇಲೆ ಹೊಸ ವಿಮೆ ಪಾಲಿಸಿ ಬರೆದುಕೊಡುವ ಸಾಮರ್ಥ್ಯವು ನಿಂತಿದೆ. ಚಂಡ ಮಾರುತ ಅಪ್ಪಳಿಸುವ ಪ್ರದೇಶಗಳಲ್ಲಿ ನೀಡಲಾಗುವ 'ವಾಯು ವಿಮೆ' ಇಂಥ ಸನ್ನಿವೇಶ ನಿರ್ಮಿಸುವ ಮತ್ತೊಂದು ನಿದರ್ಶನ. ಕರಾವಳಿ ಪ್ರದೇಶಕ್ಕೆ ಇದು ವಿಶೇಷವಾಗಿ ಅನ್ವಯಿಸುತ್ತದೆ. ಹೀಗೆ ಒಟ್ಟೊಟ್ಟಾಗಿ ಒಡ್ಡುಕೊಂಡು ಬರುವ ಸಾಮೂಹಿಕ ಪ್ರಕರಣಗಳು ಉದ್ಯಮದ ಮೇಲೆ ದುಷ್ಪರಿಣಾಮ ಬೀರಬಹುದು.ಏಕೆಂದರೆ, ಇಡೀ ಸಮುದಾಯವೇ ಅಪಾಯಕ್ಕೆ ಈಡಾಗಬಹುದಾದ ವಲಯಗಳಲ್ಲಿನ ಸಂಭಾವ್ಯ ಪಾಲಿಸಿದಾರರ ಅಗತ್ಯಗಳಿಗೆ ಹೋಲಿಸಿದರೆ, ವಿಮೆಗಾರ ಮತ್ತು ನವೀಕರಿಸುವ ಸಂಸ್ಥೆಯ ಸಂಯುಕ್ತ ಬಂಡವಾಳವು ಕಡಿಮೆ ಮೊತ್ತದ್ದಾಗಿರುತ್ತದೆ. ಅಗ್ನಿ ಅನಾಹುತದಿಂದ ರಕ್ಷಣೆ ಪಡೆಯಲು ವಾಣಿಜ್ಯ ಸಂಸ್ಥೆಯೊಂದು ಇಳಿಸಿದ ಆಸ್ತಿ ಮೌಲ್ಯವು ವಿಮೆಗಾರನೊಬ್ಬನ ಒಟ್ಟಾರೆ ಬಂಡವಾಳವನ್ನು ಮೀರುವಂಥ ವಿಮೆಯಾಗಿರುವ ಸಾಧ್ಯತೆಯುಂಟು. ಅಂತಹ ಆಸ್ತಿಪಾಸ್ತಿಗಳನ್ನು ಸಾಮಾನ್ಯವಾಗಿ ಬೇರೆಬೇರೆ ವಿಮಾ ಸಂಸ್ಥೆಗಳ ಜೊತೆ ಆಂಶಿಕವಾಗಿ ವಿಮೆ ಇಳಿಸಲಾಗಿರುತ್ತೆ. ಅಥವಾ ಸಂಘಟಿತ ಮರುವಿಮೆ ಮಾರುಕಟ್ಟೆಯಲ್ಲಿ ಅಪಾಯವನ್ನು ಒಬ್ಬ ವಿಮೆಗಾರರಿಂದ ವಿಮೆ ಇಳಿಸಲಾಗುತ್ತದೆ. ನಷ್ಟ ಪರಿಹಾರ[ಬದಲಾಯಿಸಿ] Main article: Indemnity ಆಗಿರುವ ನಷ್ಟವನ್ನು ತುಂಬಿಕೊಡುವುದು 'ನಷ್ಟ ಪರಿಹಾರ'ಎಂಬುದುರ ತಾಂತ್ರಿಕ ವಿವರಣೆ. ವಿಮೆ ಇಳಿಸುವ ಒಪ್ಪಂದದಲ್ಲಿ ಎರಡು ವಿಧಗಳಿವೆ:


"ನಷ್ಟ ಪರಿಹಾರ" ಭರಿಸುವ ಪಾಲಿಸಿ ಮತ್ತು "ಪರವಾಗಿ ಪಾವತಿ ಮಾಡುವಂಥ" ಅಥವಾ "ಪರವಾಗಿ"[೩] ಪಾಲಿಸಿ. ಲಿಖಿತ ರೂಪದಲ್ಲಿ ವ್ಯತ್ಯಾಸವು ಗಮನಾರ್ಹವಾಗಿದೆ, ಆದರೆ ಅದು ಪ್ರಯೋಗದಲ್ಲಿ ಅತಿ ವಿರಳ.


ವಿಮೆದಾರರು ತಮ್ಮ ಜೇಬಿನಿಂದ ಮೂರನೆಯ ಪಕ್ಷದವರಿಗೆ ಹಣವನ್ನು ಪಾವತಿಸುವವರೆಗೂ, 'ನಷ್ಟ ಪರಿಹಾರ' ಪಾಲಿಸಿಯು ಪರಿಹಾರವನ್ನು ಪಾವತಿ ಮಾಡುವುದಿಲ್ಲ. ಉದಾಹರಣೆಗೆ, ನಿಮ್ಮ ಮನೆಗೆ ಭೇಟಿ ನೀಡುವವರು ನಿಮ್ಮ ಮನೆಯ ಒದ್ದೆ ನೆಲದ ಮೇಲೆ ಜಾರಿಬಿದ್ದು, ನಿಮ್ಮ ವಿರುದ್ಧ $10,000 ಮೊಕದ್ದಮೆ ಹೂಡಿ, ತೀರ್ಪನ್ನು ತಮ್ಮ ಪರವಾಗಿ ಮಾಡಿಕೊಳ್ಳುತ್ತಾರೆ. ಭೇಟಿ ನೀಡಿದವರು ಜಾರಿ ಬಿದ್ದದ್ದಕ್ಕೆ 'ನಷ್ಟ ಪರಿಹಾರ' ಪಾಲಿಸಿಯಡಿ ಮನೆಯ ಮಾಲೀಕರು ಈ $10,000 ಪಾವತಿಸಿ, ತಮ್ಮ ಜೇಬಿನಿಂದ ಭರಿಸಿದ ವೆಚ್ಚಗಳಿಗಾಗಿ ($10,000) ವಿಮೆ ವಾಹಕರ ಮೂಲಕ 'ನಿರ್ಬಾಧಿತ'ರಾಗುವರು.[೪].


ಇದೇ ಪರಿಸ್ಥಿತಿಯಲ್ಲಿ, 'ಪರವಾಗಿನ ಪಾವತಿ' ಪಾಲಿಸಿಯಂತೆ, ವಿಮೆ ವಾಹಕರು ಬೇಡಿಕೆಯ ವಿಮೆ ಹಣವನ್ನು ಪಾವತಿಸಿ ವಿಮೆದಾರ (ಮನೆಯ ಮಾಲೀಕ) ಯಾವುದೇ ಕಾರಣಕ್ಕೂ ಜೇಬಿನಿಂದ ಹಣ ತೆತ್ತಬೇಕಿಲ್ಲ. ಅಧುನಿಕ ಬಾಧ್ಯತೆ ವಿಮೆಯಲ್ಲಿ ಹೆಚ್ಚಿನವು 'ಪರವಾಗಿ ಪಾವತಿ' ಆಧಾರದ ಮೇಲೆ ಬರೆಯಲಾಗಿದೆ.[೫]


'ವಿಮೆಗಾರರು' (ವಿಮೆ ನೀಡುವ ಪಂಗಡ), ವಿಮೆ 'ಪಾಲಿಸಿ' ಎಂಬ ಕರಾರಿನ ಮೂಲಕ ವಿಮ ಅಪಾಯವನ್ನು ವಹಿಸಿದೊಡನೆಯೇ, ಅಪಾಯವನ್ನು ವರ್ಗಾಯಿಸಲು ಬಯಸುತ್ತಿರುವ ಘಟಕವು (ವ್ಯಕ್ತಿ, ನಿಗಮ ಅಥವಾ ಯಾವುದೇ ತರಹದ ಒಕ್ಕೂಟ ಇತ್ಯಾದಿ) 'ವಿಮೆದಾರ'ರಾಗುತ್ತಾರೆ/ವಾಗುತ್ತದೆ. ಸಾಮಾನ್ಯವಾಗಿ, ಒಂದು ವಿಮೆ ಕರಾರು ಕನಿಷ್ಥ ಪಕ್ಷದಲ್ಲಿ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ: ಪಕ್ಷಗಳು (ವಿಮೆಗಾರ, ವಿಮೆದಾರ, ಫಲಾನುಭವಿಗಳು), ವಿಮೆ ಕಂತು, ವಿಮೆ ರಕ್ಷಣೆಯ ಅವಧಿ, ವ್ಯಾಪ್ತಿಗೆ ಸೇರಿಸಿಕೊಂಡ ವಿಶಿಷ್ಟ ನಷ್ಟ ಘಟನೆ, ರಕ್ಷಣೆಯ ಮೊತ್ತ (ನಷ್ಟ ಸಂಭವಿಸಿದಾಗ ವಿಮೆದಾರರಿಗೆ ಅಥವಾ ಫಲಾನುಭವಿಗೆ ನೀಡಬೇಕಾದ ಹಣದ ಮೊತ್ತ), ಮತ್ತು ಹೊರತುಗಳು (ವ್ಯಾಪ್ತಿಗೊಳಪಡದ ಘಟನೆಗಳು). ಹಾಗಾಗಿ, ವಿಮೆದಾರರು ಪಾಲಿಸಿಯಲ್ಲಿ ಸೇರಿಸಿಕೊಳ್ಳಲಾದ ನಷ್ಟಗಳಿಂದ ನಿರ್ಬಾಧಿತರಾಗುತ್ತಾರೆ.


ವಿಮೆದಾರ ಪಕ್ಷವು ವಿಶಿಷ್ಟ ಅಪಾಯದಲ್ಲಿ ನಷ್ಟವನ್ನು ಅನುಭವಿಸಿದಾಗ, ವಿಮೆ ಪಾಲಿಸಿಯಲ್ಲಿ ಸೂಚಿಸಿದಂತೆ ಪಾಲಿಸಿದಾರರು ವಿಮೆಗಾರರ ವಿರುದ್ಧ 'ವಿಮೆ ಪರಿಹಾರದ ಬೇಡಿಕೆ'ಯನ್ನು ಸಲ್ಲಿಸಬಹುದು. ವಿಮೆದಾರರು ಅಪಾಯವನ್ನು ವಹಿಸಿಕೊಳ್ಳುವ ವಿಮೆಗಾರರಿಗೆ ಪಾವತಿ ಮಾಡಲಾದ ಹಣದ ಮೊತ್ತಕ್ಕೆ 'ವಿಮೆ ಕಂತು' ಎನ್ನಲಾಗುತ್ತದೆ. ಹಲವಾರು ವಿಮೆದಾರರಿಂದ ಸಂದ ವಿಮೆ ಕಂತುಗಳನ್ನು ಆನಂತರದ ವಿಮೆ ಹಣ ಬೇಡಿಕೆ ಸಲ್ಲಿಸುವವವರಿಗಾಗಿ ಪಾವತಿ ಮಾಡಲೆಂದು (ಸೈದ್ಧಾಂತಿಕವಾಗಿ ತುಲನಾತ್ಮಕವಾಗಿ ಕಡಿಮೆ ವಿಮೆ ಹಣ ಬೇಡಿಕೆಯ ಸಲ್ಲಿಕೆ) ಮೀಸಲಿಟ್ಟ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಹಾಗೂ ಹೆಚ್ಚುವರಿಸಾಮಾನ್ಯ ಆಡಳಿತದ ಖರ್ಚಿಗೆ ಬಳಸಲಾಗುತ್ತದೆ. ವಿಮೆಗಾರರು ಮುಂದಾಲೋಚಿಸುವ ನಷ್ಟಗಳಿಗಾಗಿ ಸಾಕಷ್ಟು ಹಣವನ್ನು ಮೀಸಲಿಡುವವರೆಗೂ,(ಆಪದ್ಧನ) ಉಳಿದ ಮೊತ್ತವು ವಿಮೆಗಾರರ ಲಾಭವಾಗುತ್ತದೆ.