ವಿನೋದ್ ಜಿ. ಖಂಡಾರೆ
ಲೆಫ್ಟಿನೆಂಟ್ ಜನರಲ್ ವಿನೋದ್ ಜಿ. ಖಂಡಾರೆ ,, | |
---|---|
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | Indian Army |
ಸೇವಾವಧಿ | ಸೆಪ್ಟಂಬರ್ ೧೯೭೯– ಜನವರಿ ೨೦೧೮ |
ಶ್ರೇಣಿ(ದರ್ಜೆ) | ಲೆಫ್ಟಿನೆಂಟ್ ಜನರಲ್ |
ಸೇವಾ ಸಂಖ್ಯೆ | IC-37555Y |
ಘಟಕ | ಗರ್ವಾಲ್ ರೈಫಲ್ಸ್ |
ಅಧೀನ ಕಮಾಂಡ್ | ೧೪ ನೇ ಬ್ಯಟಾಲಿಯನ್ ಗರ್ವಾಲ್ ರೈಫಲ್ಸ್ ೧೦೦ ಮೌಂಟೇನ್ ಬ್ರಿಗೇಡ್ ೧೯ ನೇ ಪದಾತಿ ದಳ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ |
ಪ್ರಶಸ್ತಿ(ಗಳು) | ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ಸೇನಾ ಪದಕ (ಶೌರ್ಯ) ಯುಎನ್ ಪದಕ |
ಕಲಿತ ವಿದ್ಯಾಲಯ | ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ |
ಇತರೆ ಸಾಧನೆಗಳು | ರಾಷ್ಟ್ರೀಯ ಭದ್ರತಾ ಮಂಡಳಿ ಭಾರತದ ಸಚಿವಾಲಯದ ಮಿಲಿಟರಿ ಸಲಹೆಗಾರ |
ಲೆಫ್ಟಿನೆಂಟ್ ಜನರಲ್ ವಿನೋದ್ ಜಿ. ಖಂಡಾರೆ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ಮಾಜಿ ಅಧಿಕಾರಿಯಾಗಿದ್ದು, ಪ್ರಸ್ತುತ ರಕ್ಷಣಾ ಸಚಿವಾಲಯದಲ್ಲಿ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೧] ಅವರು ೩೧ ಜನವರಿ ೨೦೧೮ ರಂದು ಸಕ್ರಿಯ ಮಿಲಿಟರಿ ಸೇವೆಯಿಂದ ನಿವೃತ್ತರಾದರು. ೨೦೧೮ ರಿಂದ ೨೦೨೧ ರವರೆಗೆ ಕಾರ್ಯದರ್ಶಿ ಮಟ್ಟದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಮಿಲಿಟರಿ ಸಲಹೆಗಾರರಾಗಿದ್ದರು.[೨][೩][೪][೫][೬] ತಮ್ಮ ಅಂತಿಮ ಸಕ್ರಿಯ ಮಿಲಿಟರಿ ನೇಮಕಾತಿಯಲ್ಲಿ, ಅವರು ರಕ್ಷಣಾ ಗುಪ್ತಚರ ಸಂಸ್ಥೆ ಮಹಾ ನಿರ್ದೇಶಕರಾಗಿ ಮತ್ತು ಗುಪ್ತಚರ ಇಲಾಖೆಯ ಸಮಗ್ರ ರಕ್ಷಣಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ನವೆಂಬರ್ ೨೦೧೫ ರಿಂದ ಜನವರಿ ೨೦೧೮ ರವರೆಗೆ ಸೇವೆ ಸಲ್ಲಿಸಿದರು.[೭][೩][೪]
ಸೈನಿಕ ಜೀವನ
[ಬದಲಾಯಿಸಿ]೧೯೭೯ರ ಸೆಪ್ಟೆಂಬರ್‌ನಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯ,ಎಸ್‌ಎಸ್-೨೮ ತರಬೇತಿಯಲ್ಲಿ ಭಾರತೀಯ ಸೇನೆಯ ೧೪ನೇ ಗರ್ವಾಲ್ ರೈಫಲ್ಸ್‌ಗೆ ಇವರನ್ನ ನೇಮಕಮಾಡಲಾಯಿತು. [೧][೮]ಪದಾತಿದಳದ ಅಧಿಕಾರಿಯಾಗಿ, ಅವರು ಸಿಯಾಚಿನ್, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಮತ್ತು ಈಶಾನ್ಯ ಪ್ರದೇಶದ ವಿವಿಧ ವಲಯಗಳಲ್ಲಿ ಕಾರ್ಯಾಚರಣೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.[೨]ಖಂಡಾರೆಯವರು ಭಾರತದ ಈಶಾನ್ಯ ಗಡಿಯಲ್ಲಿ ಕಾರ್ಯಾಚರಣೆಯ ಮಾಡುವ ಬ್ರಿಗೇಡ್‌ನ ನೇತೃತ್ವ ವಹಿಸಿದ್ದರು. ಇವರು ಕಾಶ್ಮೀರ ಕಣಿವೆಯಲ್ಲಿ ೨೦೧೦-೧೧ ರಲ್ಲಿ ಉತ್ತರ ಕಾಶ್ಮೀರದಲ್ಲಿ ಪ್ರತಿ ಬಂಡಾಯ ಪಡೆಯ ಉಪ ಜಿ.ಓ.ಸಿ. ಯಾಗಿ ಸೇವೆ ಸಲ್ಲಿಸಿದರು. ಇವರು ಮಹೂ ಪದಾತಿದಳ ಶಾಲೆ ಶಸ್ತ್ರಾಸ್ತ್ರಗಳ ಬೋಧಕರಾಗಿ ಮತ್ತು ವೆಲ್ಲಿಂಗ್ಟನ್ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೫ ರಿಂದ ೨೦೧೮ ರವರೆಗೆ ಭಾರತದ ರಕ್ಷಣಾ ಗುಪ್ತಚರ ಸಂಸ್ಥೆಯ (ಡಿಐಎ) ಮಹಾ ನಿರ್ದೇಶಕರಾಗಿದ್ದರು.[೯]
ಸೇನಾ ನಂತರದ ವೃತ್ತಿಜೀವನ
[ಬದಲಾಯಿಸಿ]ಅಕ್ಟೋಬರ್ ೨೦೧೮ ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್‌ನ ಮಿಲಿಟರಿ ಸಲಹೆಗಾರರಾಗಿ ಖಂಡಾರೆ ಅವರನ್ನು ನೇಮಿಸಲಾಯಿತು.[೩][೨] ಅವರು ೨೦೧೧ ರಿಂದ ೨೦೧೪ ರವರೆಗೆ ಸೈನ್ಯ ಸಲಹೆಗಾರರಾಗಿದ್ದ ಲೆಫ್ಟಿನೆಂಟ್ ಜನರಲ್ ಪ್ರಕಾಶ್ ಮೆನನ್ ಅವರ ಉತ್ತರಾಧಿಕಾರಿಯಾಗಿದ್ದರು.[೩] ಈ ಸ್ಥಾನವು ೨೦೧೮ ರಲ್ಲಿ ಖಂಡಾರೆ ಅವರು ನೇಮಕಗೊಳ್ಳುವವರೆಗೂ ಖಾಲಿಯಾಗಿತ್ತು, ಈ ನೆಮಕಾತಿಯೊಂದಿಗೆ ಅವರು ಎನ್‌ಎಸ್‌ಸಿಎಸ್ ಇತಿಹಾಸದಲ್ಲೇ ಎರಡನೇ ಮಿಲಿಟರಿ ಸಲಹೆಗಾರರು ಎಂದು ಹೆಸರಾದರು.[೨][೧೦] ಅವರ ನೇಮಕಾತಿಯ ಭಾಗವಾಗಿ ಎನ್‌ಎಸ್‌ಸಿಎಸ್ ಮಿಲಿಟರಿ ವಿಭಾಗವನ್ನು ಪುನರುಜ್ಜೀವನಗೊಳಿಸಲಾಯಿತು.[೪][೫] ಸೆಪ್ಟೆಂಬರ್ ೨೦೨೧ ರಲ್ಲಿ, ಖಂಡಾರೆ ಅವರು ನೈಜೀರಿಯಾದ ರಕ್ಷಣಾ ಸಂಸ್ಥೆಗಳೊಂದಿಗೆ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ನೈಜೀರಿಯಾಗೆ ಭಾರತೀಯ ರಕ್ಷಣಾ ನಿಯೋಗದ ಮುಂದಾಳತ್ವ ವಹಿಸಿದ್ದರು.[೧೧][೧೨] ಈ ನಿಯೋಗದಲ್ಲಿ NSCS ಸದಸ್ಯರು, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮೂರು ಸಶಸ್ತ್ರ ಪಡೆಗಳು ಮತ್ತು ರಕ್ಷಣಾ ಉದ್ಯಮದ ಪ್ರತಿನಿಧಿಗಳು ಸೇರಿದ್ದರು. [೧೩]
ಗೌರವಗಳು
[ಬದಲಾಯಿಸಿ]- ಯುಎನ್ ಪದಕ-ಒ.ಎನ್.ಯು.ಎಸ್.ಎ.ಎಲ್- ೧೯೯೩ [೧೪]
- ಸೇನಾ ಪದಕ (ಗ್ಯಾಲಂಟ್ರಿ-ಗಣರಾಜ್ಯೋತ್ಸವ- ೨೦೦೨ [೧೫]
- ಸೇನಾ ಸಿಬ್ಬಂದಿ ಮುಖ್ಯಸ್ಥರ ಶ್ಲಾಘನಾ ಪತ್ರ-ಸೇನಾ ದಿನ- ೨೦೧೨ [೧೬]
- ಅತಿ ವಿಶಿಷ್ಟ ಸೇವಾ ಪದಕ-ಗಣರಾಜ್ಯೋತ್ಸವ- ೨೦೧೫ [೧೭][೧೮]
- ಪರಮ ವಿಶಿಷ್ಟ ಸೇವಾ ಪದಕ-ಗಣರಾಜ್ಯೋತ್ಸವ- ೨೦೧೭ [೧೯][೨೦]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Lt. Gen. Vinod G. Khandare appointed Adviser in Defence Ministry". The Hindu (in Indian English). 2022-03-23. ISSN 0971-751X. Retrieved 2022-03-26.
- ↑ ೨.೦ ೨.೧ ೨.೨ ೨.೩ "Lt Gen Khandare appointed as the military advisor to NSCS". The Bridge Chronicle. www.sakaltimes.com. 12 October 2018. Archived from the original on 4 ಫೆಬ್ರವರಿ 2020. Retrieved 6 September 2021.
- ↑ ೩.೦ ೩.೧ ೩.೨ ೩.೩ "Security council to get military advisor soon". Hindustan Times (in ಇಂಗ್ಲಿಷ್). 2018-10-11. Retrieved 2021-09-16.
- ↑ ೪.೦ ೪.೧ ೪.೨ "The Rejig of India's National Security Architecture Has Been a Long Time Coming". The Wire. Retrieved 2021-09-16.
- ↑ ೫.೦ ೫.೧ "How Revamped NSCS is Helping Shape Coherent National Security Policy". Bharat Shakti (in ಇಂಗ್ಲಿಷ್). Retrieved 2021-09-16.
- ↑ "VDIA Sets Course For Vidarbha Region's Lead Role In Defence And Aerospace Sectors". Bharat Shakti (in ಇಂಗ್ಲಿಷ್). Retrieved 2021-12-14.
- ↑ "Ambassador hosts DIA delegation". Embassy of India, Hanoi, Vietnam. Retrieved 2020-02-08.
- ↑ "Nominal Roll for course SS-28 of OTA, Chennai". Officers Training Academy Alumni Association (in ಅಮೆರಿಕನ್ ಇಂಗ್ಲಿಷ್). Retrieved 2021-09-16.
- ↑ "VARINDIA Wars of today is a combination of kinetic and non-kinetic warfare". Varindia.com. 2018-03-08. Retrieved 2020-02-08.
- ↑ Kakar, Harsha (2018-10-17). "Making NSC powerful". Daily Excelsior (in ಅಮೆರಿಕನ್ ಇಂಗ್ಲಿಷ್). Retrieved 2021-09-16.
- ↑ "Indian military seeks to strengthen ties with Nigerian Army". Vanguard News (in ಅಮೆರಿಕನ್ ಇಂಗ್ಲಿಷ್). 2021-09-17. Retrieved 2021-09-18.
- ↑ Kilete, Molly (2021-09-16). "Army seeks collaboration with Indian military on training, health, technology, others". The Sun Nigeria (in ಅಮೆರಿಕನ್ ಇಂಗ್ಲಿಷ್). Retrieved 2021-09-18.
- ↑ "Indian defence delegation visit Nigeria for enhanced cooperation". sg.news.yahoo.com (in ಇಂಗ್ಲಿಷ್). 17 September 2021. Archived from the original on 2021-09-18. Retrieved 2021-09-18.
- ↑ The Indian Army: United Nations Peacekeeping Operations (in ಇಂಗ್ಲಿಷ್). Lancer Publishers. 1997. ISBN 978-1-897829-01-1.
- ↑ "List of Awardees for Republic Day 2002". Indian Army Official Website. Retrieved 2021-09-14.
- ↑ "List of Awardees for Army Day 2012". Indian Army Official Website. Retrieved 2021-09-14.
- ↑ "List of Awardees for Republic Day 2015". Indian Army Official Website. Retrieved 2021-09-14.
- ↑ Citation of Gallantry and Distinguished Awards 2015 by President Pranab Mukherjee http://pranabmukherjee.nic.in/pdf/Pr210315.pdf
- ↑ "List of Awardees for Republic Day 2017". Indian Army Official Website. Retrieved 2021-09-14.
- ↑ "Defence Investiture Ceremony". Sainik Samachar. 64 (8): 22–27. 30 April 2017.