ವಿನಿಫ್ರೆಡ್ ಆಷ್ಟನ್
ವಿನಿಫ್ರೆಡ್ ಆಷ್ಟನ್ | |
---|---|
ಜನನ | 21 ಫೆಬ್ರವರಿ 1888 Blackheath, England |
ಮರಣ | 28 March 1965 ಲಂಡನ್,ಇಂಗ್ಲಂಡ್ | (aged 77)
ಕಾವ್ಯನಾಮ | ಕ್ಲೆಮೆನ್ಸ್ ಡೇನ್ |
ವೃತ್ತಿ | ಕಾದಂಬರಿಕಾರ್ತಿ,ನಾಟಕಕಾರ್ತಿ |
ಪ್ರಮುಖ ಕೆಲಸ(ಗಳು) | ರೆಜಿಮೆಂಟ್ ಆಫ್ ವಿಮೆನ್ (1917) |
ವಿನಿಫ್ರೆಡ್ ಆಷ್ಟನ್ (21 ಫೆಬ್ರವರಿ 1888 – 28 ಮಾರ್ಚಿ 1965), ಇಂಗ್ಲಿಷ್ ಕಾದಂಬರಿಕಾರ್ತಿ. ಕಾವ್ಯನಾಮ ಕ್ಲೆಮನ್ಸ್ ಡೇನ್. ಹುಟ್ಟು ಲಂಡನ್ನಿನಲ್ಲಿ. 16ನೆಯ ವರ್ಷದಲ್ಲಿ ಜಿನೀವದಲ್ಲಿ ಒಂದು ವರ್ಷ ಫ್ರೆಂಚ್ ಪಾಠ ಹೇಳುತ್ತಿದ್ದು ಆಮೇಲೆ ಮೂರು ವರ್ಷ ಕಲಾಭ್ಯಾಸ ಮಾಡಿದಳು. ಮತ್ತೆ ಸ್ವಲ್ಪಕಾಲ ಐರ್ಲೆಂಡಿನಲ್ಲಿ ಉಪಾಧ್ಯಾಯಿನಿಯಾಗಿದ್ದು 1913ರಲ್ಲಿ ಡಯಾನ ಕರ್ಟಿಸ್ ಎಂಬ ಹೆಸರಿನಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದಳು.
ಸಾಹಿತ್ಯ
[ಬದಲಾಯಿಸಿ]ಇವಳು ಬರೆದ ಮೊದಲ ಕಾದಂಬರಿ ರೆಜಿಮೆಂಟ್ ಆಫ್ ವಿಮೆನ್ (1917). ಉಪಾಧ್ಯಾಯಿನಿಯ ಜೀವನಚಿತ್ರಣ ಇದರ ವಸ್ತು. ಲೆಜೆಂಡ್ (1919) ಎಂಬುದು ಇನ್ನೊಂದು ಕಾದಂಬರಿ. ಇದು ಆಮೇಲೆ ನಾಟಕವಾಗಿ ರೂಪಾಂತರ ಹೊಂದಿತು.
ವಾಂಡರಿಂಗ್ ಸ್ಟಾರ್ಸ್ (1928), ಬ್ರೂಂ ಸ್ಟೇಜಸ್ (1931), ದಿ ಮೂನ್ ಈಸ್ ಫೆಮಿನೈನ್ (1938), ಹಿ ಬ್ರಿಂಗ್ಸ್ ಗ್ರೇಟ್ ನ್ಯೂಸ್ (1944), ದಿ ಫ್ಲವರ್ ಗರ್ಲ್ (1954) ಎಂಬುವು ಈಕೆಯ ಇತರ ಕಾದಂಬರಿಗಳು. ವಿಲ್ ಷೇಕ್ಸ್ಪಿಯರ್ (1921) ಎಂಬುದು ಈಕೆ ಬರೆದ ನಾಟಕಗಳಲ್ಲೊಂದು. ಬ್ರಾಂಟಿಗಳ ವಿಚಾರ ಕುರಿತ ವೈಲ್ಡ್ ಡಿಸೆಂಬರ್ಸ್ (1933) ಎಂಬುದೂ ಚಾಟರ್ಟನ್ನನನ್ನು ಕುರಿತ ಕಮ್ ಆಫ್ ಏಜ್ (1934) ಎಂಬುದೂ ಇನ್ನೆರಡು ನಾಟಕಗಳು. 1953ರಲ್ಲಿ ಈಕೆಗೆ ಸಿ.ಬಿ.ಇ. ಪ್ರಶಸ್ತಿ ಲಭಿಸಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The papers of Clemence Dane are held by the Victoria and Albert Museum Theatre and Performance Department
- Golden Age of Detection Wiki