ವಿನಾಯಕ ತೊರವಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿನಾಯಕ ತೊರವಿ
ವಿನಾಯಕ ತೊರವಿ

ವಿನಾಯಕ ತೊರವಿ(ಜನನ: ಸೆಪ್ಟೆಂಬರ್ ೪ ೧೯೪೮)ಇವರು ಗ್ವಾಲಿಯರ್ ಘರಾನಾ ಪದ್ಧತಿಯ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು.

ಜನನ[ಬದಲಾಯಿಸಿ]

೧೯೪೮ರ ೪ ನೆಯ ಸೆಪ್ಟಂಬರ ಪವಿತ್ರ ಗಣೇಶ ಚತುರ್ಥಿಯಂದು ಕೀರ್ತನಕಾರರ ಮನೆತನದಲ್ಲಿ ವಿನಾಯಕ ತೊರವಿಯವರ ಜನ್ಮವಾಯಿತು, ಹೀಗಾಗಿ ಹುಟ್ಟಿನಿಂದಲೇ ಸಂಗೀತದ ಸಂಸ್ಕಾರ ಪ್ರಾರಂಭವಾಯಿತು.

ವ್ರುತ್ತಿಯಿಂದ ಕೆನರಾ ಬ್ಯಾಂಕ್ ನಿರ್ವಾಹಕರಾಗಿದ್ದರೂ ಪ್ರವ್ರುತ್ತಿಯಿಂದ ಖ್ಯಾತ ಹಿಂದೂಸಸ್ಥಾನಿ ಗಾಯಕರೆನಿಸಿರುವ ಶ್ರೀ ವಿನಾಯಕ ತೊರವಿಯವರು ಕರ್ನಾಟಕದ ಹೆಸರಾಂತ ಗಾಯಕರಲ್ಲಿ ಪ್ರಮುಖರು. ಕರ್ನಾಟಕೀ ಮತ್ತು ಹಿಂದೂಸ್ತಾನಿ ಸಂಗೀತದ ಕಂಪನ್ನು ವ್ಯಾಪಕವಾಗಿ ಹರಡುವಂತೆ ಯವರಿಗೆ ಸಲ್ಲುತ್ತದೆ.

ಪಂಡಿತ್ ವಿನಾಯಕ ತೊರವಿಯವರು ಜನಿಸಿದ್ದು ೧೯೪೮ರ ಸೆಪ್ಟೆಂಬರ್ ೪ ರಂದು ವಿಜಾಪುರ ಜಿಲ್ಲೆಯ ತೊರವಿಯವರು ಮುಂಬೈ ಕರ್ನಾಟಕದ ಹೆಸರಾಂತ ಕೀರ್ತನಕಾರರು. ಕೀರ್ತನಸಂಗೀತದ ವಾತಾವರಣದಲ್ಲಿ ಬೆಳೆದ ವಿನಾಯಕರಿಗೆ ಬಾಲ್ಯದಲ್ಲಿಯೇ ಸಂಗೀತ ಸೆಳೆಯಿತು. ತಮ್ಮ ಹತ್ತನೇ ವಯಸ್ಸಿನಲಿಯೇ ತಂದೆಯ ಕೀರ್ತನಕ್ಕೆ ಹಾರ್ಮೋನಿಯಂ ನುಡಿಸಿ ಸಂಗೀತ ಲೋಕಕ್ಕೆ ತಮ್ಮ ಪಾದಗಳನ್ನಿಟ್ಟರು.

ಸಂಗೀತ ಶಿಕ್ಶಣೆ[ಬದಲಾಯಿಸಿ]

thumb|ವಿನಾಯಕ ತೊರವಿಯವರು ಹಾಡುತ್ತಿರುವುದು ಆ ಕಾಲದ ಸಂಗೀತ ವಿದ್ವಾಂ ಸರಾದ ತಮ್ಮಣ್ಣ ಗುರುವ, ನಾರಾಯಣರಾವ ಮುಜುಂದಾರ ಹಾಗು ನಾರಾಯಣಾಚಾರ ದಂಡಾಪುರ ಅವರಲ್ಲಿ ಸಂಗೀತ ಕಲಿತು ಮುಂದೆ ಗ್ವಾಲಿಯರ್ ಘರಾಣೆಯ ಹೆಸರಾಂತ ಗಾಯಕ ಪಂಡಿತ್ ಗುರುರಾವ್ ದೇಶಪಾಂಡೆಯವರ ಶಿಷ್ಯರಾದರು. ಅನಂತರ ಗುರುಕುಲ ಪಧ್ಧತಿಯಲ್ಲಿ ಹನ್ನೆರಡು ವರ್ಷ ಹಿಂದೂಸ್ಥಾನಿ ಸಂಗೀತದ ತಾಲೀಮು ಪಡೆದು, ಸತತ ಅಭ್ಯಾಸ, ನಿರಂತರ ಪ್ರಯತ್ನಶೀಲತ, ಪ್ರಯೋಗ ಮನೋಭಾವದಿಂದ ಪ್ರಬುಧ ಗಾಯಕರಾಗಿ ಹೊರಹೊಮ್ಮಿರುವ ಶ್ರೀ ವಿನಾಯಕ ತೊರವಿಯವರು ಬಿ. ಕಾಂ. ಹಾಗು ಸಂಗೀತ ಎಂ. ಎ. ಪದವಿಗಳನ್ನು ಪಡೆದಿದ್ದಾರೆ.[೧]

೧೯೭೯ರಲ್ಲಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದ ತೊರವಿ, ಬ್ಯಾಂಕಿನ ನಿರ್ವಹಣಾಕಾರರಾಗಿ ಕೆಲಸ ಮಾಡುತ್ತಿದ್ದರೂ ಸದಾ ಸಂಗೀತ ವನ್ನೇ ಧ್ಯಾನಿಸುತ್ತಿದ್ದರೆಂದು ತಾವೆ ಹೆಳಿಕೊಂಡಿದ್ದಾರೆ. ಬೆಂಗಳೂರಿನ ಸಾರ್ಕ್ ಶ್ರುಂಗಮೇಳ, ಪುಣೆಯ ಸವಾಯ್ ಗಂಧರ್ವ ಸಂಗೀತೋತ್ಸವ, ಕುಂದೆಗೋಳು ಸಂಗಿತೋತ್ಸ್ವವಗಳಲ್ಲಿ ತಮ್ಮ ಗಾಯನ ಕಛೇರಿ ನೀಡಿ ಸಂಗೀತ ಲೋಕದಲ್ಲಿ ಹೆಸರು ಗಳಿಸಿದ್ಡಾರೆ. ಖ್ಯಾಲು ಮೊದಲ್ಗೊಂಡು, ತರಾನಾ, ಅಭಂಗ, ದಾಸ-ವಚನ ಸಂಗೀತದಲ್ಲಿ ಅವರು ತುಂಬ ನಿಷ್ಣಾತರಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೦), ಮಾನವ ಸಂಪನ್ಮೂಲ ಅಭಿವ್ರುದ್ಧಿ ಇಲಾಖೆಯ ರಿಸರ್ಚ್ ಫೆಲೋಶಿಪ್, ಮುಂಬೈನ ಸೂರಸಿಂಗಾರ್ ಸಂಸದ್ ನೀಡಿದ 'ಸುರುಮಣೆ' ಪ್ರಶಸ್ತಿ. ಕರ್ನಾಟಕ ಸಂಗೀತ ರತ್ನ ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ ಹಾಗು ಕರ್ನಾಟಕ ಸಂಗೀತ ನ್ರುತ್ಯ ಅಕಾಡೆಮಿಯ 'ಕರ್ನಾಟಕ ಕಲಾ ತಿಲಕ' (೧೯೯೪-೯೫) ಪ್ರಶಸ್ತಿ ಮುಂತಾದವುಗಳು ಉಲ್ಲೇಖನೀಯವಾಗಿವೆ.[೨]

ವೃತ್ತಿಜೀವನ[ಬದಲಾಯಿಸಿ]

೧೯೮೪ ರಿಂದ ಬೆಂಗಳೂರಿನಲ್ಲಿ ತಮ್ಮ ಗುರು ಪಂಡಿತ್ ಗುರುರಾವ್ ದೇಶಪಾಂಡೆ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಅಹೋರಾತ್ರಿ ಸಂಗೀತ ಸಮಾರಾಧನೆ ನಡೆಸುತ್ತ ಬಂದಿದ್ದಾರೆ. ದೇಶದ ಮಹಾನ್ ಸಂಗೀತಗಾರರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಸಂಗೀತ ನ್ರುತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ತೊರವಿಯವರು ಹೊಸ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಬ್ಯಾಂಕ್ ಉದ್ಯೋಗಿಗಳ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅನೇಕ ಖ್ಯಾತ ಶಿಷ್ಯರನ್ನೂ ತೊರವಿ ಪಡೆದಿದ್ದಾರೆ, ಅವರಲ್ಲಿ ದತ್ತಾತ್ರೇಯ ವೇಳಂಖರು.

ಉಲ್ಲೆಖ[ಬದಲಾಯಿಸಿ]