ವಿಷಯಕ್ಕೆ ಹೋಗು

ವಿದ್ಯುತ್ ಮೀನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿದ್ಯುತ್ ಮೀನುಗಳ ಪೈಕಿ ಎಲೆಕ್ಟ್ರಿಕ್ ಈಲ್‍ಗಳು, ನೈಫ಼್‍ಫ಼ಿಶ್ ಇವೆ. ಇವು ವಿದ್ಯುತ್ ಕ್ಷೇತ್ರವನ್ನು, ಸ್ಥಾನನಿರ್ಧಾರಣಕ್ಕಾಗಿ ಕಡಿಮೆ ವೋಲ್ಟೇಜ್‍ನಲ್ಲಿ ಮತ್ತು ತಮ್ಮ ಬೇಟೆಯನ್ನು ಸ್ತಬ್ಧಗೊಳಿಸಲು ಹೆಚ್ಚಿನ ವೋಲ್ಟೇಜನ್ನು ಉತ್ಪಾದಿಸುವಲ್ಲಿ ಸಮರ್ಥವಾಗಿವೆ.

ವಿದ್ಯುತ್ ಮೀನು ಎಂದರೆ ವಿದ್ಯುತ್ ಕ್ಷೇತ್ರಗಳನ್ನು ಉತ್ಪಾದಿಸಬಲ್ಲ ಯಾವುದೇ ಮೀನು. ವಿದ್ಯುತ್ ಉತ್ಪಾದಿಸುವ ಅಂಗವನ್ನುಳ್ಳ ನೂರಾರು ಜಾತಿಯ ಮೀನುಗಳಿವೆ.[೧] ಹೆಚ್ಚು ಪ್ರಖರವಾದ ವಿದ್ಯುತ್ ಸಂಚಲನವನ್ನು ಉತ್ಪಾದಿಸುವ ಕೆಲವೇ ಜಾತಿಯ ಮೀನುಗಳು ಇವೆ. ಇವುಗಳಲ್ಲಿ ಪ್ರಮುಖವಾದವು ಸಮುದ್ರವಾಸಿ ಟಾರ್ಪಡಿನಿಡೆ ಕುಟುಂಬಕ್ಕೆ ಸೇರಿದ ಎಲೆಕ್ಟ್ರಿಕ್ ರೇ (ಟರ‍್ಪೆಡೊ) ಮೀನುಗಳು, ಸಿಹಿ ನೀರಿನಲ್ಲಿ ವಾಸಿಸುವ ದಕ್ಷಿಣ ಅಮೆರಿಕದ ಎಲೆಕ್ಟ್ರಿಕ್ ಈಲ್ (ಎಲೆಕ್ಟ್ರೋಫೋರಸ್) ಮತ್ತು ಆಫ್ರಿಕಾದ ಎಲೆಕ್ಟ್ರಿಕ್ ಕ್ಯಾಟ್ ಫಿಶ್ (ಮಾಲಾಪ್ಟೆರುರಸ್) ಜಾತಿಯ ಮೀನುಗಳು.

ವಿದ್ಯುತ್ತಿನ ಉಪಯೋಗಗಳು

[ಬದಲಾಯಿಸಿ]

ಇವುಗಳ ವಿದ್ಯುತ್ ಅಂಗಗಳು ಕಾರ್ಯಪ್ರವೃತ್ತಿಯಾದಾಗ ಮೀನಿನ ಸುತ್ತ ವಿದ್ಯುತ್ ಕಾಂತೀಯ ಕ್ಷೇತ್ರ ನಿರ್ಮಾಣವಾಗಿ ಅವುಗಳ ಬಳಿ ಸುಳಿಯುವ ಇತರೆ ಮನುಗಳನ್ನು ನಿಶ್ಚೇತಗೊಳಿಸಿ ಅವುಗಳನ್ನು ಹಿಡಿದು ತಿನ್ನುತ್ತವೆ. ಅಲ್ಲದೆ ಈ ಮೀನುಗಳು ಸಾಮಾನ್ಯವಾಗಿ ಬೆಳಕಿಲ್ಲದ ಆಳ ಪ್ರದೇಶದಲ್ಲಿ ಮಡ್ಡಿ ನೀರಿನಲ್ಲಿರುವುದರಿಂದ, ಕಣ್ಣುಗಳು ದುರ್ಬಲವಾಗಿರುವುದರಿಂದ ಈ ವಿದ್ಯುತ್ ಕ್ಷೇತ್ರವನ್ನು ತಮ್ಮ ಚಲನವಲನಗಳಿಗೆ, ತನ್ನದೇ ಜಾತಿಯ ಮೀನುಗಳೊಂದಿಗೆ ಸಂಪರ್ಕಕ್ಕಾಗಿ ಬಳಸಿಕೊಳ್ಳುತ್ತವೆ.[೨][೩][೪][೫]

ಎಲೆಕ್ಟ್ರಿಕ್ ರೇ ಮೀನು

[ಬದಲಾಯಿಸಿ]

ಎಲೆಕ್ಟ್ರಿಕ್ ರೇ ಮೀನುಗಳಿಗೆ ಮೇಲಿನಿಂದ ಕೆಳಕ್ಕೆ ಚಪ್ಪಟೆಯಾದ ದುಂಡಾದ ಡಿಸ್ಕ್ ಆಕಾರದಲ್ಲಿರುವ ದೇಹ ಮತ್ತು ಚೆನ್ನಾಗಿ ಬೆಳೆದಿರುವ ಬಾಲ ಮತ್ತು ಬಾಲದ ರೆಕ್ಕೆ ಇರುತ್ತದೆ. ಸಣ್ಣ ಕಣ್ಣುಗಳಿರುತ್ತವೆ. ಕೆಲವು ಜಾತಿಯವು ಸಂಪೂರ್ಣ ಕುರುಡಾಗಿರುತ್ತವೆ. ಇತರೆ ರೇ ಗಳಿಗಿರುವಂತೆ ಇವಕ್ಕೆ ವಿಷಪೂರಿತ ಮುಳ್ಳಿರುವುದಿಲ್ಲ. ಎರಡು ಸಣ್ಣ ಬೆನ್ನಿನ ಈಜು ರೆಕ್ಕೆಗಳಿವೆ. ಮೇಲ್ಭಾಗದ ಇಕ್ಕೆಲಗಳಲ್ಲಿ ವಿದ್ಯತ್ ಉತ್ಪಾದಿಸುವ ಅಂಗಗಳಿವೆ. ಇತರೆ ರೇ ಮೀನುಗಳಂತೆ ಇವೂ ಜರಾಯುಜಗಳು. ಮೊಟ್ಟೆಗಳು ಹೆಣ್ಣು ಮೀನಿನಲ್ಲಿದ್ದು ಮರಿಗಳಾಗಿ ಹೊರಬರುತ್ತವೆ. ಟಾರ್ಪೆಡೋ ನೊಬಿಲಿಯಾನಾ ಅತ್ಯಂತ ದೊಡ್ಡ ಎಲಕ್ಟ್ರಿಕ್ ರೇ ಮೀನು. ಇದು ಸುಮಾರು 6 ಅಡಿಗಳವರೆಗೆ ಬೆಳೆಯುತ್ತದೆ. ಈ ಮೀನುಗಳಿಗೆ ವಾಣಿಜ್ಯ ಪ್ರಾಮುಖ್ಯವಿಲ್ಲ. ಆದರೆ ಇವುಗಳಲ್ಲಿ ವಿದ್ಯತ್ ಅಂಗಗಳಿರುವ ಕಾರಣದಿಂದ ವೈಜ್ಞಾನಿಕವಾಗಿ ಹೆಚ್ಚು ಪ್ರಮುಖವಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Rubega, Margaret (December 1999). "Vertebrate Life. F. Harvey Pough , Christine M. Janis , John B. Heiser". The Quarterly Review of Biology. 74 (4): 478–479. doi:10.1086/394168.
  2. Macesic, Laura J.; Kajiura, Stephen M. (November 2009). "Electric organ morphology and function in the lesser electric ray, Narcine brasiliensis". Zoology. 112 (6): 442–450. doi:10.1016/j.zool.2009.02.002. PMID 19651501.
  3. Traeger, Lindsay L.; Sabat, Grzegorz; Barrett-Wilt, Gregory A.; Wells, Gregg B.; Sussman, Michael R. (July 2017). "A tail of two voltages: Proteomic comparison of the three electric organs of the electric eel". Science Advances. 3 (7): e1700523. Bibcode:2017SciA....3E0523T. doi:10.1126/sciadv.1700523. PMC 5498108. PMID 28695212.
  4. Lissmann, H. W. (1958-03-01). "On the Function and Evolution of Electric Organs in Fish". Journal of Experimental Biology. 35 (1): 156–191. doi:10.1242/jeb.35.1.156.
  5. Nelson, Mark. "What IS an electric fish?". Retrieved 10 August 2014.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: