ವಿದಾರಿ ಕಂದ

ವಿಕಿಪೀಡಿಯ ಇಂದ
Jump to navigation Jump to search
Pueraria tuberosa
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Rosids
ಗಣ: Fabales
ಕುಟುಂಬ: Fabaceae
ಕುಲ: Pueraria
ಪ್ರಭೇದ: P. tuberosa
ದ್ವಿಪದ ಹೆಸರು
Pueraria tuberosa
(Willd.) DC.
ಸಮಾನಾರ್ಥಕಗಳು[೧]
 • Hedysarum tuberosum Willd.


ವಿದಾರಿ ಕಂದ(ನೆಲಗುಂಬಳ) ವು ಒಂದು ಗಿಡಮೂಲಿಕೆಯಾಗಿದೆ. ಗೆಣಸು(ಸ್ವೀಟ್ ಪೊಟಾಟೊ)ನ ಹಾಗೆ ಭೂಮಿಯಡಿಯಲ್ಲಿ ಆಗುವ ಗಡ್ಡೆ ಅಥವಾ ಬೇರು ಆಗಿದೆ. ಅದನ್ನು ಕನ್ನಡದಲ್ಲಿ `ನೆಲಗುಂಬಳ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕೃತದಲ್ಲಿ `ವಿದಾರಿ ಕಂದ' ಎಂದು ಹೆಸರಿಸಲಾಗಿದೆ. ಅದರ ಬೊಟೆನಿಕಲ್ ಹೆಸರು `ಪ್ಯುರಾರಿಯಾ ಟ್ಯುಬರೋಸಾ' ಎಂದಾಗಿದೆ. ಅದಕ್ಕೆ ಇನ್ನಿತರ ಹೆಸರುಗಳು ಇಂತಿವೆ: ಬಿಲೈಕಂದ, ಪಲ್ಲುಡ್ಕನ್, ಕಿಳಂಬು, ಭೂಮಿ ಕುಸುಮಾಂಡ, ಕಳ್ಳುಕಿಳಂಬು, ಕಟ್ಟುಕಚ್ಚಿಲ್ ಇತ್ಯಾದಿ. ಇದರ ಬಳ್ಳಿ ಗೆಣಸಿನ ಬಳ್ಳಿಯಂತೆ ಇದೆ. ಅದೇ ಬಣ್ಣದ ಹೂಗಳನ್ನು ಅರಳಿಸುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ನೆಲದಲ್ಲಿ ತನ್ನಿಂದ ತಾನೆ ಹುಟ್ಟಿಕೊಳ್ಳುತ್ತದೆ.

ವಿದಾರಿ ಕಂದದ ಉಪಯೋಗಗಳು:

 1. ವಾತ ಪಿತ್ಥವನ್ನು ಶಮನಗೊಳಿಸುತ್ತದೆ.
 2. ವೀರ್ಯ ವೃದ್ಧಿ ಹಾಗೂ ಶಿಶ್ನ ನಿಮಿರ ದೌರ್ಬಲ್ಯಕ್ಕೆ ನಿವಾರಣೆಯಾಗಿ ಉಪಯೋಗಿಸಬಹುದು.
 3. ದೇಹಕ್ಕೆ ಮತ್ತು ಮನಸ್ಸಿಗೆ ಚೇತೋಹಾರಿ
 4. ಆರೋಗ್ಯವಂತ ವೀರ್ಯ ಸೃಷ್ಟಿಗೆ ಸಹಾಯಕ.
 5. ವೃದ್ಧಾಪ್ಯ ಪ್ರಕ್ರಿಯಯನ್ನು ನಿಧಾನಗೊಳಿಸುತ್ತದೆ.
 6. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
 7. ಕಫವನ್ನು ಕರಗಿಸಿ ಉಸಿರಾಟವನ್ನು ಸರಿಪಡಿಸಲು ಸಹಾಯಕಾರಿಯಾಗಿದೆ.
 8. ಇದರ ಪೌಡರ್ ಸೇವನೆಯಿಂದ ಒಣ ಚರ್ಮದಿಂದ ಬಿಡುಗಡೆಗೊಂಡು ಚರ್ಮ ಕಾಂತಿಯುಕ್ತವಾಗುತ್ತದೆ.
 9. ಬಾತುಕೊಂಡಲ್ಲಿ ಇದರ ಪೇಸ್ಟ್ ಉಪಯೋಗಿಸಿದರೆ ಬಾತು ಇಳಿಯುತ್ತದೆ.
 10. ಚಿಕ್ಕ ಮಕ್ಕಳಿಗೆ ಜೀರ್ಣ ಸಮಸ್ಯೆ ಇದ್ದಲ್ಲಿ ಇದರ ಸೇವನೆಯಿಂದ ನಿವಾರಣೆಯಾಗುತ್ತದೆ.
 11. ಹೆಂಗಸರಿಗೆ ಮುಟ್ಟಿನ ಸಮಸ್ಯೆ ಇದ್ದರೆ ಆರೋಗ್ಯವಂತ ರಜಸ್ವಲಕ್ಕೆ ಉಪಯೋಗಕಾರಿಯಾಗಿದೆ.
 12. ಬಾಳಂತಿಗೆ ಮೊಲೆಯಲ್ಲಿ ಹಾಲು ಕಡಿಮೆ ಇದ್ದಲ್ಲಿ ಇದರ ಸೇವನೆಯಿಂದ ಹಾಲು ಹೆಚ್ಚಾಗುತ್ತದೆ.
 13. ಸಾಮಾನ್ಯ ಟಾನಿಕ್ ಆಗಿಯೂ ಸೇವಿಸಬಹುದು.
 14. ರಕ್ತ ಸಮಸ್ಯೆ ಇದ್ದರೆ ಇದು ನಿವಾರಕವಾಗಿ ಉಪಯೋಗಕ್ಕೆ ಬರುತ್ತದೆ.

ಇದರ ಉತ್ಪಾದನೆಗಳು ಮಾರುಕಟ್ಟೆಯಲ್ಲಿ ಲಭ್ಯ.

ಉಲ್ಲೇಖಗಳು[ಬದಲಾಯಿಸಿ]