ವಿಜ್ಞಾನ ಎಂದರೇನು ? (ಪುಸ್ತಕ)
ಗೋಚರ
ಲೇಖಕರು | ಪ್ರೊ ಜೆ.ಆರ್. ಲಕ್ಷ್ಮಣರಾವ್ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ವಿಜ್ಞಾನ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೨, ೩ನೇ ಮುದ್ರಣ |
ಪುಟಗಳು | ೮೮ |
ಐಎಸ್‍ಬಿಎನ್ | 978-81-8467-185-8 |
ವಿಜ್ಞಾನ ಎಂದರೇನು ? ಪ್ರೊ|| ಜೆ.ಆರ್. ಲಕ್ಷ್ಮಣರಾವ್ ಅವರು ಬರೆದ ಪುಸ್ತಕ.
ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಇಂದು ವಿಜ್ಞಾನದ ಗಾಢ ಪ್ರಭಾವವನ್ನು ಕಾಣುತ್ತೇವೆ. ಆದರೆ ಇದನ್ನು ಎಷ್ಟು ಜನ ತಿಳಿದು ಯೋಚಿಸುತ್ತಾರೋ ಹೇಳಲು ಕಷ್ಟ. ವಿಜ್ಞಾನದ ಪ್ರಭಾವವನ್ನು ವ್ಯಕ್ತಿಯೊಬ್ಬ ತಿಳಿದು ನಡೆಯುವುದು ಹೇಗೆ ? ವಿಜ್ಞಾನವು ಬೀರುವ ಸಾಮಾಜಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳಾವುವು ? ವಿಜ್ಞಾನ ಎಂದರೇನು ? ಎಂಬ ಈ ಕೃತಿಯಲ್ಲಿ ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಪ್ರಕ್ರಿಯೆಯಲ್ಲಿ ವಿಜ್ಞಾನದ ವಿಧಾನ, ವೈಜ್ಞಾನಿಕ ಮನೋಭಾವದಂಥ ಸಂಬಂಧಿತ ವಿಚಾರಗಳೂ ಬರುತ್ತವೆ. ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಹೆಚ್ಚುವಂತೆ ಮಾಡಲು ಆಯಾ ವಿಷಯಕ್ಕೆ ಸಂಬಂಧಿಸಿದ ರೇಖಾಚಿತ್ರಗಳೇ ಅಲ್ಲದೆ, ವಿಶೇಷವಾಗಿ ವರ್ಣಚಿತ್ರಗಳನ್ನು ನಾಲ್ಕು ಪುಟಗಳಲ್ಲಿ ನೀಡಿರುವುದು ಈ ಪುಸ್ತಕದ ಮೆರುಗನ್ನು ಹೆಚ್ಚಿಸಿದೆ.