ವಿಜ್ಞಾನದ ಹೊಸ ಸಂಶೋದನೆಗಳು

ವಿಕಿಪೀಡಿಯ ಇಂದ
Jump to navigation Jump to search

ಅಗ್ಗದ ರಕ್ತವಿಭಜಕ ಸೆಂಟ್ರಿಫ್ಯೂಜ್[ಬದಲಾಯಿಸಿ]

A diagram of a test tube showing three layers, with plasma on top, red blood cells on bottom, and a thin layer, called the buffy coat, in between
ಕೇಂದ್ರಾಪಗಾಮಿಗಳಿಂದ ರಕ್ತದ ಟ್ಯೂಬ್ ಅನ್ನು ತೆಗೆದುಹಾಕಿದಾಗ, ಘಟಕಗಳು ಮೂರು ಪದರಗಳಾಗಿ ವಿಂಗಡಿಸಲಾಗಿದೆ: ರಕ್ತ ಪ್ಲಾಸ್ಮಾ, ಪ್ಲೇಟ್‌ಲೆಟ್ ಕೋಶಗಳನ್ನು ಹೊಂದಿರುವ ಬಫಿ ಕೋಟ್ ಮತ್ತು ಕೆಂಪು ರಕ್ತ ಕಣಗಳು.(Blood-spinning)
 • ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿಯಿಂದ ಬಂದಿದೆ: ಅಲ್ಲಿನ ಬಯೊಇಂಜಿನಿಯರ್ ಮನು ಪ್ರಕಾಶ್ ಎಂಬ ಭಾರತೀಯ ಯುವಕ ಒಂದು ಹೊಸ ಸಂಶೋಧನೆ ಮಾಡಿದ್ದಾರೆ. ಎರಡು ಕೈಗಳ ಎರಡು ಬೆರಳುಗಳ ನಡುವೆ ದಾರಕ್ಕೆ ಪೋಣಿಸಿದ ಪುಟ್ಟ ಚಕ್ರವೊಂದನ್ನು ತಿರುಗಿಸುತ್ತ ಅವರು ಅದನ್ನೊಂದು ವೈದ್ಯಕೀಯ ಸಲಕರಣೆಯಾಗಿ ಪರಿವರ್ತಿಸಿದ್ದಾರೆ.
 • ವಿವರ: ಮಲೇರಿಯಾ, ಏಡ್ಸ್, ಚಿಕುನ್‌ಗುನ್ಯದಂಥ ಹತ್ತಾರು ರೋಗಗಳ ಪತ್ತೆಗೆ ರಕ್ತಪರೀಕ್ಷೆ ಮಾಡಬೇಕಾಗುವುದು. ರೋಗಿಯ ಅರ್ಧ ಚಮಚೆಯಷ್ಟು ರಕ್ತವನ್ನು ಒಂದು ಶೀಶೆಯಲ್ಲಿಟ್ಟು ದೊಡ್ಡ ಯಂತ್ರದೊಳಕ್ಕೆ ಜೋರಾಗಿ ತಿರುಗಿಸುತ್ತಾರೆ. ನಿಮಿಷಕ್ಕೆ ಲಕ್ಷ ಸುತ್ತು ತಿರುಗುವಾಗ ರಕ್ತದಲ್ಲಿನ ನೀರಿನಂಥ ಪ್ಲಾಸ್ಮಾ ಬೇರೆಯಾಗುತ್ತದೆ. ಕೆಂಪು ಕಣಗಳ ಗಸಿ ತಳಕ್ಕಿಳಿಯುತ್ತದೆ. ಅದನ್ನೇ ಸೂಕ್ಷ್ಮದರ್ಶಕದಲ್ಲಿ ಇಟ್ಟು ರಕ್ತಗುಣವನ್ನು, ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣುವನ್ನು ಪತ್ತೆ ಹಚ್ಚುತ್ತಾರೆ. ಆದರೆ ಈ ಪರೀಕ್ಷೆಗೆ ಬೇಕಾದ ‘ಸೆಂಟ್ರಿಫ್ಯೂಜ್’ ಎಂಬ ತಿರುಗಣೆ ಯಂತ್ರಕ್ಕೆ ಲಕ್ಷಾಂತರ ರೂಪಾಯಿ ಕೊಡಬೇಕು. ಇದಕ್ಕೆ ಸದಾಕಾಲ ವಿದ್ಯುತ್ ಇರಬೇಕು. ಅದರ ಬದಲು ಪುಟ್ಟ ಕೊಳವೆಗೆ ನಾಲ್ಕು ಹನಿ ರಕ್ತ ಹಾಕಿ ಈ ಹೊಸ ಸಂಶೋಧನೆ ಆಟಿಗೆಗೆ ಜೋಡಿಸಿದರೆ ಅದು ನಿಮಿಷಕ್ಕೆ ಒಂದೂವರೆ ಲಕ್ಷ ಬಾರಿ ತಿರುಗುತ್ತದೆ. ಒಂದೆರಡು ನಿಮಿಷಗಳಲ್ಲಿ ಪರೀಕ್ಷೆಗೆ ಬೇಕಾದ ಪ್ಲಾಸ್ಮಾ ದ್ರವ ಮತ್ತು ಗಸಿ ಅಲ್ಲೇ ಬೇರ್ಪಡುತ್ತದೆ. ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದವರೂ ಇನ್ನು ಮೇಲೆ ರಕ್ತ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ.
 • ಕಾನಪುರ ಐಐಟಿಯಲ್ಲಿ ಓದಿದ ಈ ಮೀರಠ್ ಹುಡುಗ ಕಳೆದ ವರ್ಷ ರಟ್ಟಿನ ಕಾಗದದಲ್ಲೇ ಹತ್ತು ರೂಪಾಯಿ ವೆಚ್ಚದ ಮೈಕ್ರೊಸ್ಕೋಪ್ ತಯಾರಿಸಿ ವಿಜ್ಞಾನಲೋಕಕ್ಕೆ ಅಚ್ಚರಿ ಮೂಡಿಸಿದವರು.[೧]

ಪಂಚ್ ಕಾರ್ಡ್ ದ್ರವಪರೀಕ್ಷಾ ಸಾಧನ[ಬದಲಾಯಿಸಿ]

 • 12 Jan, 2017
 • ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿ. ದ ಬಯೊಇಂಜಿನಿಯರ್ ಮನು ಪ್ರಕಾಶ್ ಎಂಬ ಭಾರತೀಯ ಎರಡು ವರ್ಷಗಳ ಹಿಂದೆ ಮಕ್ಕಳಿಗಾಗಿ ಪಂಚ್ ಕಾರ್ಡ್ ದ್ರವಪರೀಕ್ಷಾ ಸಾಧನವನ್ನು ನಿರ್ಮಿಸಿ ಅರ್ಧಲಕ್ಷ ಡಾಲರ್ ಬಹುಮಾನ ಮತ್ತು ಪ್ರತಿಷ್ಠಿತ ‘ಮೆಕಾರ್ಥರ್ ಜೀನಿಯಸ್ ಗ್ರಾಂಟ್’ ಪಡೆದವರು. [೨]

ಡ್ರೋನ್‌ ಮಾದರಿಯ ಪುಟ್ಟ ಫ್ಯಾನ್‌:ಟೋನ್‌ಬೊ[ಬದಲಾಯಿಸಿ]

 • 5 Jan, 2017
 • ಪೋರ್ಟೆಬಲ್ ಕೂಲಿಂಗ್ ಫ್ಯಾನ್‌ಗಳು ಲಭ್ಯವಿದ್ದರೂ, ನಡೆದಾಡುವಾಗ ಬಳಕೆಗೆ ಸಾಧ್ಯವಿಲ್ಲ. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ಜೊತೆಗೆ ಬೇಕಾದಂತೆ ಗಾಳಿ ಬೀಸಿಕೊಳ್ಳಲು ಪುಟ್ಟ ಡ್ರೋನ್‌ ಮಾದರಿ ಫ್ಯಾನ್ ವಿನ್ಯಾಸಗೊಂಡಿದೆ. ಈಗ ಫ್ಯಾನ್ ಕೂಡ ಸೇರಿಕೊಂಡಿದೆ. ಡ್ರೋನ್‌ ಮಾದರಿಯ ಈ ಫ್ಯಾನ್ ವಿನ್ಯಾಸಗೊಳಿಸಿರುವುದು ಸಿಂಗಪುರ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಡಿಸೈನ್‌ನ ಯಿಂಗ್ ಹಾಂಗ್.
 • ಮಾನವರಹಿತ ವಾಯುವಾಹನ ತಂತ್ರಜ್ಞಾನ (ಅನ್‌ಮ್ಯಾನ್ಡ್‌ ಏರಿಯಲ್ ವೆಹಿಕಲ್‌ ಟೆಕ್ನಾಲಜಿ) ವಿಷಯದಲ್ಲಿ ಪರಿಣತಿ ಹೊಂದಿರುವ ಯಿಂಗ್ ಹಾಂಗ್ ಜೊತೆ ಚೀನಾದ ಝೆಜಿಯಾಂಗ್ ವಿಶ್ವವಿದ್ಯಾಲಯದ ಲಿಂಗಾಂಗ್, ಕ್ವಿಂಗ್, ಸಿಜೀ ಎಂಬುವರು ಈ ಪ್ರಯೋಗದಲ್ಲಿದ್ದಾರೆ. ಪುಟ್ಟದಾದ ಮತ್ತು ಕೊಂಡೊಯ್ಯಲು ಸುಲಭವಾದ ಈ ಸಾಧನದ ಹೆಸರು ಟೋನ್‌ಬೊ. ಇದರ ನಿಯಂತ್ರಣಕ್ಕೆ ಯಾವುದೇ ಕಂಟ್ರೋಲರ್ ಬೇಕಿಲ್ಲ. ನಡೆದಾಡುತ್ತಲೇ ಆ ಫ್ಯಾನ್ ಆನ್ ಮಾಡಿ, ನಾವು ನಡೆದಾಡುವ ಕಡೆ, ನಮ್ಮ ಮೇಲೆ ಅದನ್ನು ಗಾಳಿ ಬೀಸುವಂತೆ ಮಾಡಬಹುದು. ಫ್ಯಾನ್‌ ಕೆಳಗೆ ನೀಡಿರುವ ದಾರ ಎಳೆದು ಹಿಡಿದುಕೊಂಡರೆ ಸಾಕು, ಈ ಡ್ರೋನ್‌ ತಲೆ ಮೇಲೆ ಸುತ್ತಲು ಶುರುವಾಗುತ್ತದೆ.
 • ಅದನ್ನು ಹಿಡಿದು ಗಾಳಿಯೊಂದಿಗೆ ನಡೆಯಬಹುದು. ರಿಚಾರ್ಜೆಬಲ್ ಬ್ಯಾಟರಿಯೊಂದಿಗೆ ಅತಿ ಹೆಚ್ಚು ಶಕ್ತಿಯ ನಾಲ್ಕು ಬ್ರಷ್‌ಲೆಸ್‌ ಮೋಟಾರು ಅಳವಡಿಸಲಾಗಿದೆ. ಫ್ಯಾನ್ ಅಷ್ಟೇ ಅಲ್ಲ, ಕ್ಯಾಮೆರಾವನ್ನೂ ಅಳವಡಿಸಲಾಗಿದ್ದು, ಪ್ರವಾಸದ ಕ್ಷಣಗಳನ್ನು ಹಿಡಿದಿಟ್ಟುಕೊಳ್ಳಬಹುದು. ಇದು ಹಗುರವಾಗಿದ್ದು, ಸಪಾಟಾಗಿ ಮಡಚಿ ಚೀಲದಲ್ಲಿ ಹಾಕಿಕೊಳ್ಳಬಹುದು. ಇದಿನ್ನೂ ಮಾದರಿ ಹಂತದಲ್ಲಿದೆ. ಗಾಳಿ ಬೀಸುವಾಗ ಬರುವ ಶಬ್ದದ ಮಟ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ. ಪೂರ್ಣಗೊಂಡ ನಂತರ ಮಾರುಕಟ್ಟೆಗೆ ಲಭ್ಯ ಎಂದು ತಂಡ ಹೇಳಿಕೊಂಡಿದೆ.[[೧]][೩]

ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಅತಿ ಹಗುರ ಉಪಗ್ರಹ[ಬದಲಾಯಿಸಿ]

 • 22 Jun, 2017;
 • ಭಾರತೀಯ ವಿದ್ಯಾರ್ಥಿ ನಿರ್ಮಿಸಿದ ಜಗತ್ತಿನ ಅತಿ ಹಗುರ ಹಾಗೂ ಚಿಕ್ಕ, ಕೇವಲ 64 ಗ್ರಾಂ ತೂಕದ ಉಪಗ್ರಹ 'ಕಲಾಂಸ್ಯಾಟ್‌' ನಾಸಾ ಸಂಸ್ಥೆಯ ರಾಕೆಟ್‌ ಮೂಲಕ ಕಕ್ಷೆ ಸೇರಿದೆ. ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್‌ ಷರೂಕ್‌ ವಿನ್ಯಾಸಗೊಳಿಸಿರುವ ಜಗತ್ತಿನ ಅತಿ ಹಗುರ ಉಪಗ್ರಹವು 22 Jun, 2017 ಗುರುವಾರ ನಾಸಾದ ಉಡಾವಣಾ ನೆಲೆಯಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.
 • ಕಲಾಂಸ್ಯಾಟ್‌ ಮಿಷನ್‌ ಒಟ್ಟು ಅವಧಿ 240 ನಿಮಿಷಗಳಾಗಿದ್ದು, ಉಪಗ್ರಹವು ಅತಿ ಕಡಿಮೆ ಗುರುತ್ವ ವಾತಾವರಣದ ಉಪ–ಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸಲಿದೆ. ಕಾರ್ಬನ್‌ ಫೈಬರ್‌ 3ಡಿ ಪ್ರಿಂಟ್‌ ಮೂಲಕ ರೂಪಿಸಲಾಗಿರುವ ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಲ್ಲಪಟ್ಟಿಯ ರಿಫತ್‌ ವಿವರಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ಈ ಹಿಂದೆ ವರದಿ ಮಾಡಿತ್ತು. ನಾಸಾ ಮತ್ತು ಐ ಡೂಡಲ್‌ ಲರ್ನಿಂಗ್‌ ಸಂಸ್ಥೆಗಳ ‘ಕ್ಯೂಬ್ಸ್‌ ಇನ್‌ ಸ್ಪೇಸ್‌’ ಸ್ಪರ್ಧೆಯ ಮೂಲಕ ರಿಫತ್‌ ಅವರ 64 ಗ್ರಾಂ ಉಪಗ್ರಹ ಆಯ್ಕೆಯಾಗಿತ್ತು.[೪]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]