ವಿಜಯಶ್ರೀ ಸಬರದ
ವಿಜಯಶ್ರೀ ಸಬರದ (ಜನನ: ೧ ಫೆಬ್ರುವರಿ ೧೯೫೭) ಅವರು ಕನ್ನಡದ ಬಂಡಾಯ ಸಾಹಿತ್ಯ ಸಂದರ್ಭದ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಬರೆಯುವ ಲೇಖಕಿ. ಇವರು ೧೯೫೭ರಲ್ಲಿ ಬೀದರ್ ನಲ್ಲಿ ಗುಣವಂತರಾವ್ ಪಾಟೀಲ್ ಮತ್ತು ಸಂಗಮ್ಮರ ಪುತ್ರಿಯಾಗಿ ಜನಿಸಿದರು.
ವಿಜಯಶ್ರೀ ಸಬರದ | |
---|---|
ಜನನ | ವಿಜಯಶ್ರೀ ಪಾಟೀಲ್ ೧ ಫೆಬ್ರುವರಿ ೧೯೫೭ ಬೀದರ್ |
ವೃತ್ತಿ |
|
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಪಿ. ಹೆಚ್. ಡಿ - ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ(೧೯೯೧ ರಲ್ಲಿ) |
ಪ್ರಮುಖ ಕೆಲಸ(ಗಳು) |
|
ಬಾಳ ಸಂಗಾತಿ | ಡಾಕ್ಟರ್. ಬಸವರಾಜ ಸಬರದ |
ತಂದೆ | ಗುಣವಂತ ರಾವ್ |
ತಾಯಿ | ಸಂಗಮ್ಮ |
ಶಿಕ್ಷಣ
[ಬದಲಾಯಿಸಿ]ಸಬರದ ಅವರು ೧೯೭೦ರಲ್ಲಿ ಎಸ್ಎಸ್ಎಲ್ಸಿ ಮತ್ತು ೧೯೭೨ರಲ್ಲಿ ಪಿಯುಸಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಂಡರು ನಂತರ ಅವರು ಬಿ.ಎ ೧೯೭೫ರಲ್ಲಿ ಮತ್ತು ಎಂ.ಎ ಪದವಿ ೧೯೭೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರ್ಣಗೊಳಿಸಿದರು. ಅನುಪಮ ನಿರಂಜನರ ಕಾದಂಬರಿಗಳು - ಒಂದು ಅಧ್ಯಯನ ಎಂಬ ವಿಷಯ ಮಂಡಿಸಿ ಪಿ.ಹೆಚ್.ಡಿ ಪದವಿ ೧೯೯೧ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗದಲ್ಲಿ ಪಡೆದರು.
ಕೃತಿಗಳು
[ಬದಲಾಯಿಸಿ]ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದಿಸಿದ ಪುಸ್ತಕಗಳು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.
ಕವನ ಸಂಕಲನಗಳು
[ಬದಲಾಯಿಸಿ]ವರ್ಷ | ಹೆಸರು |
---|---|
೧೯೭೯ | ಜ್ವಲಂತ |
೧೯೯೧ | ಲಕ್ಷ್ಮಣರೇಖೆ ದಾಟಿದವರು |
೨೦೧೦ | ಮುಗಿಲ ಮಲ್ಲಿಗೆ |
ನಾಟಕ
[ಬದಲಾಯಿಸಿ]ವರ್ಷ | ಹೆಸರು |
---|---|
೨೦೦೮ | ಎರಡು ನಾಟಕಗಳು |
೨೦೧೦ | ಉರಿಲಿಂಗ |
ವಿಮರ್ಶಾ ಗ್ರಂಥಗಳು
[ಬದಲಾಯಿಸಿ]ವರ್ಷ | ಹೆಸರು |
---|---|
೧೯೮೦ | ತ್ರಿವೇಣಿಯವರ ಕಾದಂಬರಿಗಳು |
೧೯೮೯ | ಸಾಹಿತ್ಯ ಮತ್ತು ಮಹಿಳೆ |
೧೯೯೦ ಮತ್ತು ೨೦೦೩ | ಅಕ್ಕ ಮಹಾದೇವಿ |
೧೯೯೪ | ಅನುಪಮಾ ನಿರಂಜನ ಅವರ ಕಾದಂಬರಿಗಳು |
೧೯೯೮ | ಶಿವಶರಣರ ದೃಷ್ಟಿಯಲ್ಲಿ ಬಸವಣ್ಣ |
೨೦೦೧ ಮತ್ತು ೨೦೧೨ | ವಚನ ವಾಹಿನಿ |
೨೦೦೧ | ಚಣ್ಣ ಬಸವಣ್ಣ |
೨೦೦೨ ಮತ್ತು ೨೦೧೪ | ಸಾಹಿತ್ಯ ಸಂವಹನ |
೨೦೦೫ | ಮೋಳಿಗೆಯ ಮಾರಯ್ಯ |
ಶಿವಶರಣೆಯರು ಪ್ರಸ್ತುತ ಸಂದರ್ಭ | |
೨೦೦೬ | ಜನಪದ ಮತ್ತು ಮಹಿಳೆ |
೨೦೧೫ | ನಡೆದದ್ದೇ ದಾರಿ |
ಪ್ರಶಸ್ತಿಗಳು
[ಬದಲಾಯಿಸಿ]- ೧೯೮೦ರಲ್ಲಿ ಜ್ವಲಂತ ಕೃತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಿಂದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ.
- ೧೯೯೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಸಾಹಿತ್ಯ ಮತ್ತು ಮಹಿಳೆ ಎಂಬ ವಿಮರ್ಶಾ ಗ್ರಂಥಕ್ಕೆ ದತ್ತಿನಿಧಿ ಪ್ರಶಸ್ತಿ.
- ೧೯೯೩ರಲ್ಲಿ ಮೈಸೂರಿನಿಂದ ಲಕ್ಷ್ಮಣ ರೇಖೆ ದಾಟಿದವರು ಕೃತಿಗೆ ಸಾಹಿತ್ಯಶ್ರೀ ಪ್ರಶಸ್ತಿ.
- ೧೯೯೪ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಕಾದಂಬರಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಪ್ರಬಂಧಕ್ಕೆ ಸಾವಿತ್ರಮ್ಮ ಪ್ರಶಸ್ತಿ.
- ೨೦೦೨ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ವಚನ ವಾಹಿನಿ ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಸಮಿತಿ ಬೆಂಗಳೂರು ವತಿಯಿಂದ ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಬೆಂಗಳೂರು ಕಡೆಯಿಂದ ಗೊರೂರು ಪ್ರಶಸ್ತಿ, ಮುದ್ದೇಬಿಹಾಳದಿಂದ ನಾಲ್ವತವಾಡ ಸಾಹಿತ್ಯಶ್ರೀ ಪ್ರಶಸ್ತಿ.
- ೨೦೦೨ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕಡೆಯಿಂದ ಸಾಹಿತ್ಯ ಸಂವಹನ ಕೃತಿಗೆ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ಪ್ರಶಸ್ತಿ.
ಉಲ್ಲೇಖ
[ಬದಲಾಯಿಸಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |