ವಿಜಯಲಕ್ಷ್ಮೀ ರವೀಂದ್ರನಾಥ್

ವಿಕಿಪೀಡಿಯ ಇಂದ
Jump to navigation Jump to search
ವಿಜಯಲಕ್ಷ್ಮೀ ರವೀಂದ್ರನಾಥ್
ನಿರ್ದೇಶಕಿ , ಎನ್.ಬಿ.ಆರ್.ಸಿ (ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್) , ಪ್ರೊ.ವಿಜಯಲಕ್ಷ್ಮೀ ರವೀಂದ್ರನಾಥ್ ಇನ್ಸೆರ್ಮ್(INSERM)ನ ಉಪನಿರ್ದೇಶಕ ಜನರಲ್
ಜನನ೧೮ ಅಕ್ಟೋಬರ್ ೧೯೫೩
ಚೆನ್ನೈ, ಭಾರತ
ವಾಸಸ್ಥಳ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರನ್ಯೂರೊಸೈನ್ಸ್
ಸಂಸ್ಥೆಗಳುಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್, ನ್ಯಾಷನಲ್‌ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊಸೈನ್ಸಸ್
ಅಭ್ಯಸಿಸಿದ ವಿದ್ಯಾಪೀಠಆಂಧ್ರ ವಿಶ್ವವಿದ್ಯಾನಿಲಯ , ಮೈಸೂರು ವಿಶ್ವವಿದ್ಯಾನಿಲಯ
ಡಾಕ್ಟರೇಟ್ ಸಲಹೆಗಾರರುಚಂದ್ರಶೇಖರ ಎನ್
ಪ್ರಸಿದ್ಧಿಗೆ ಕಾರಣನರವಿಜ್ಞಾನ ಸಂಶೋಧನೆ ಮತ್ತು ಭಾರತದಲ್ಲಿ ಪ್ರಮುಖ ನರವಿಜ್ಞಾನ ಸಂಶೋಧನಾ ಕೇಂದ್ರಗಳನ್ನು ಸ್ಥಾಲಿಸುವುದಕ್ಕೆ ಪ್ರೋತ್ಸಾಹ
ಗಮನಾರ್ಹ ಪ್ರಶಸ್ತಿಗಳುಶಾಂತಿ ಸ್ವರೂಪ್ ಭಟ್ನನಗರ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ

ವಿಜಯಲಕ್ಷ್ಮೀ ರವೀಂದ್ರನಾಥ್(೧೮ ಅಕ್ಟೋಬರ್ ೧೯೫೩) ರವರೊಬ್ಬ ಭಾರತೀಯ ನರವಿಜ್ಞಾನಿ. ಅವರು ಪ್ರಸ್ತುತವಾಗಿ ಸೆಂಟರ್ ಫಾರ್ ನ್ಯೂರೊಸೈನ್ಸ್ [೧] [೨], ಭಾರತೀಯ ವಿಜ್ಞಾನ ಸಂಸ್ಥೆ , ಬೆಂಗಳೂರಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಗುರ್ಗಾಂವ್ ಮತ್ತು ೨೦೦೦ ರಿಂದ ೨೦೦೯ ರವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿನ ಸೆಂಟರ್ ಫಾರ್ ನ್ಯೂರೊ ಸೈನ್ಸ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಗುರುತಿಸಿ ಭಾರತದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಯಿತು. ಅವರು ಮೆದುಳಿನ ಅಸ್ವಸ್ಥತೆಗಳು ಮತ್ತು ಮೆದುಳಿನಲ್ಲಿನ ಡ್ರಗ್ ಮೆಟಬೋಲಿಸಮ್ ನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ.

ಜನನ[ಬದಲಾಯಿಸಿ]

ವಿಜಯಲಕ್ಷ್ಮೀ ರವೀಂದ್ರನಾಥ್ ರವರು ೧೮ ಅಕ್ಟೋಬರ್ ೧೯೫೩ ರಂದು ಚೆನ್ನೈ ನಲ್ಲಿ ಜನಿಸಿದರು.[೩]

ಜೀವನ[ಬದಲಾಯಿಸಿ]

ವಿಜಯಲಕ್ಷ್ಮೀ ರ ವರ ತಂದೆ - ಕೃಷ್ಣನ್ ರಮನ್ , ತಾಯಿ - ಶಶಿಕಲಾ ರಮನ್. ಅವರು ಡಾ.ಬಿ.ರವೀಂದ್ರನಾಥ್ ರವರನ್ನು ವಿವಾಹವಾದರು.[೪]

ಶಿಕ್ಷಣ[ಬದಲಾಯಿಸಿ]

  • ಆಂಧ್ರ ಯುನಿವರ್ಸಿಟಿಯಿಂದ ಬಿ.ಎಸ್ಸಿ. ಮತ್ತು ಎಮ್.ಎಸ್ಸಿ. ಪದವಿ.[೫]
  • ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ(ಬಯೋಕೆಮಿಸ್ಟ್ರಿ) - ೧೯೮೧.

ವೃತ್ತಿಜೀವನ[ಬದಲಾಯಿಸಿ]

ವಿಜಯಲಕ್ಷ್ಮೀ ಯವರು ಪದವಿ ಪಡೆದ ನಂತರ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ , ಯುಎಸ್ಎ ನಲ್ಲಿ ಪೋಸ್ಟ್ ಡಾಕ್ಟೋರಲ್ ಫೇಲೋ ಆಗಿ ಕೆಲಸ ಮಾಡಿದರು . ನಂತರ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊಸೈನ್ಸಸ್ , ಬೆಂಗಳೂರಿಗೆ ಸೇರಿಕೊಂಡರು. ೧೯೯೯ ರಲ್ಲಿ ಅವರು ಭಾರತದ ಸರಕಾರದ ಜೈವಿಕ ತಂತ್ರಜ್ಞಾನ ವಿಭಾಗದ (ಡಿಬಿಟಿ), ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು.

ಮನ್ನಣೆಗಳು[ಬದಲಾಯಿಸಿ]

ವಿಜಯಲಕ್ಷ್ಮೀ ಯವರು ಈ ಕೆಳಗಿನ ಭಾರತೀಯ ಅಕಾಡೆಮಿಯಲ್ಲಿ ಚುನಾಯಿತರಾಗಿದ್ದರು.

ಪ್ರಶಸ್ತಿಗಳು[ಬದಲಾಯಿಸಿ]

ಸಂಶೋಧನಾ ಕ್ಷೇತ್ರಗಳು[ಬದಲಾಯಿಸಿ]

  • ಮೆದುಳಿನ ಅಸ್ವಸ್ಥತೆಗಳು .[೧೩]
  • ಬ್ರೈನ್ ನಲ್ಲಿ ಡ್ರಗ್ ಮೆಟಬೋಲಿಸಮ್( ಚಯಾಪಚಯ ಕ್ರಿಯೆ ).[೧೪]

ಉಲ್ಲೇಖಗಳು[ಬದಲಾಯಿಸಿ]