ವಿಜಯಕುಮಾರ್ ಜಿತೂರಿ

ವಿಕಿಪೀಡಿಯ ಇಂದ
Jump to navigation Jump to search

ಅಭಿನಯ ಕಲೆಯಲ್ಲಿ ಪಳಗಿದ್ದ ವಿಜಯ ಕುಮಾರ್ ಜಿತೂರಿ ಯವರಿಗೆ ಪಿ.ಎಚ್.ವಿಶ್ವನಾಥ್ ನಿರ್ದೇಶನದ 'ಪಂಚಮವೇದ' ಚಿತ್ರದ ನಾಗೇಂದ್ರ ಶಾ ಟೆಲಿವಿಶನ್ ಮಾಧ್ಯಮದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟರು. ಇದರ ನಂತರ ಒಂದರ ಮೇಲೊಂದು ಧಾರಾವಾಹಿಗಳು ಜಿತೂರಿಯವರ ಬೆನ್ನಟ್ಟಿ ಬಂದವು. 'ಚಂದನದ ಸಬೀನಾ ಧಾರಾವಾಹಿ'ಯ(೧೯೯೦) ಪೋಲೀಸ್ ಕಲೇಶಿಯ ಪಾತ್ರ ಬಹಳ ಜನಪ್ರಿಯತೆಯನ್ನು ಪಡೆಯಿತು. ಮತ್ತೊಂದು ಸೀರಿಯಲ್, 'ಕಾವ್ಯ ಕಸ್ತೂರಿ’ ಹಾಡುಗಾರನ ಚಲೋಪಾತ್ರವನ್ನು ಹೊಲಿ ಶೇಖರ್ ಮಾಡಿಕೊಟ್ಟರು. ಆದರೆ ಅದು ಮಧ್ಯದಲ್ಲೇ ನಿಂತಿತು. 'ಹಾಸ್ಯ ಧಾರಾವಾಹಿ' ಗಳಿಗೆ ಕರೆಗಳು ಬರುತ್ತಿವೆ.

ಜನನ[ಬದಲಾಯಿಸಿ]

ವಿಜಯ ಕುಮಾರ್ ಜಿತೂರಿ ಯವರಿಗೆ, ಗದಗ ಜಿಲ್ಲೆಯ ಬೆಟಗೇರಿ ಹುಟ್ಟೂರು. ಅಪ್ಪ ವಾಸುದೇವ ಸಾ, ಅವ್ವ ಯಲ್ಲೂಬಾಯಿ. ಅವರ ಮನೆಯಲ್ಲಿ ನೇಯ್ಗೆಮಾಡುವ ಮಗ್ಗಗಳನ್ನು ಹಾಕಿಕೊಂಡಿದ್ದರು. ಆ ಊರಿನಲ್ಲಿ ಹೀರಾಸಿಂಗ್ ಬುವಾ ಎಂಬ ಹೆಸರಿನ ಮಾಸ್ತರು, 'ಸಂಗೀತ ಶಾಲೆ' ನಡೆಸುತ್ತಿದ್ದರು. ಶಾಲೆಗೆ ಹೋಗಲು ವಿಜಯ ಕುಮಾರ್ ಜಿತೂರಿಯವರಿಗೆ ವ್ಯಾಳೆ ಸಿಗುವುದು ಕಷ್ಟವಾಗಿತ್ತು. ಆದರೂ ದಾಸರಪದ, ಹಿಂದೂಸ್ತಾನಿ ಸಂಗೀತ ಸ್ವಲ್ಪಮಟ್ಟಿಗೆ ಹೇಳಿಸಿಕೊಂಡು ಕಲಿತರು. 'ಡ್ರಾಯಿಂಗ್ ಮಾಸ್ತರ್ ಕೋರ್ಸ್', 'ಕ್ರಾಫ್ಟ್ ಟೀಚರ್ ಕೋರ್ಸ್', ಗಳನ್ನು ಮಾಡಿಕೊಂಡರು. ಇದಾದ ನಂತರ, ನೌಕರಿಗಾಗಿ ಬೆಂಗಳೂರಿಗೆ ಬಂದರು. 'ರೇಷ್ಮೆ ಸೀರೆಗಳ ಮೇಲೆ ಪ್ರಿಂಟ್ ಮಾಡುವ ಸ್ವಂತ ಉದ್ಯೋಗ'ವನ್ನು ಶುರುಮಾಡಿದರು. ಈ ತರಹದ ಸೀರೆಗಳಮೇಲೆ ಸೃಷ್ಟಿಸುವ ವಿನ್ಯಾಸದ ಬದುಕನ್ನು ಸುಮಾರು ೧೮ ವರ್ಷ ನಡೆಸಿಕೊಂಡುಹೋದರು. ಜತಿಗೆ ನಾಟಕ ಸಿನಿಮಾ, ಟಿವಿಯೊಳಗೆ ನೌಕರಿ ನಡೆಯುತ್ತಿತ್ತು. ಮಾರುಕಟ್ಟೆಯಲ್ಲಿ ಕಂಪ್ಯೂಟಿಕರಣದ ಬಳಕೆಯ ನಂತರ, ಕೈನಿಂದ ಮಾಡುವ ವಿನ್ಯಾಸಕ್ಕೆ ಬೆಲೆಕಡಿಮೆಯಾಯಿತು. ವಿಜಯಕುಮಾರ್ ಜಿತೂರಿಯವರು ನಟನೆ ಹಾಡುಗಾರಿಕೆಯನ್ನೇ ಅವಲಂಭಿಸಿದರು.

ಬೆಂಗಳೂರಿನಲ್ಲಿ[ಬದಲಾಯಿಸಿ]

ಮೊದಲು ಬೆಂಗಳೂರಿಗೆ ಪಾದಾರ್ಪಣೆ ಮಾಡಿದಾಗ, ಸಿ.ಜಿ.ಕೆ.ಯವರ ಪರಿಚಯವಾಯಿತು. ಅವರಿಂದ ಬಂದದ್ದು 'ಮೈನ'ಜೊತೆಗೆ, ನಾಟಕಮಾಡಲು ಆದೇಶ. ಮುಂದೆ, ಪ್ರಯೋಗರಂಗಾ ದೊಳಗ 'ನಾಗರಾಜಮೂರ್ತಿ'ಯವರ ಜತಿಗೆ ಹೆಚ್ಚಿನ ಅವಕಾಶಗಳು ಸಿಕ್ಕಲಾರಂಭಿಸಿದವು. ಸಾವಿತ್ರಿ ಧಾರಾವಾಹಿ ಯಲ್ಲಿ ಮಂತ್ರವಾದಿಯ ಪಾತ್ರ ಸದ್ಯಕ್ಕೆ ನಿಂತದ. ನಾಗರಾಜಮೂರ್ತಿ ಮತ್ತು ಗೆಳೆಯರು, ಅಭಿನಯರಂಗದಲ್ಲಿ ಹಾಡು, ಅಭಿನಯದ ಅವಕಾಶಗಳಿದ್ದರೆ, ತಿಳಿಸುತ್ತಾರೆ. ವಿಜಯಕುಮಾರ್ ಹಹೇಳುವಂತೆ, ಹಾಸ್ಯ ಧಾರವಾಹಿಗಳಲ್ಲಿ 'ಅವತ್ತಿನ ಕತಿ ಅವತ್ತಿಗೆ ಅನ್ನುವಂತಿರುತ್ತದೆ'. 'ಕೆಲವು ಕತಿ ಕೇವಲ ಒಂದುಪಾತ್ರದಮೇಲೆ ನಿಂತಿರತಾವು'. 'ಅಂತಾವನ್ನು ಭಾಳ ಮಾಡಿದಾರ; ಅದು ಲಗೂ ಮುಗಿಯೋದರಿಂದ ಅದನ್ನು 'ಒಂದು ನಮೂನಿ ಒನ್ ಡೇ ಮ್ಯಾಚ್ ಇದ್ದಾಂಗ', ಎನ್ನುವುದು ಅವರ ಅಭಿಪ್ರಾಯ.