ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೫೫

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
          ಶಿವರಾಮ ಕಾರಂತ

ಕಥೆ, ಕಾದಂಬರಿ, ವಿಜ್ಞಾನ, ಸಾಹಿತ್ಯ, ನಟನೆ, ಯಕ್ಷಗಾನ, ಸಮಾಜ ಸೇವೆ ಏನೆಲ್ಲವನ್ನು ಮುಟ್ಟಿದರೋ ಅದೆಲ್ಲದರಲ್ಲಿ ಯಶ ಕಂಡವರು "ಕಡಲ ತೀರದ ಭಾರ್ಗವ" ಎಂದು ಕರೆಸಿಕೊಂಡ ಕೋಟ ಶಿವರಾಮ ಕಾರಂತರು. ಜನನ: ೧೦-೧೦-೧೯೦೨. ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬ ಗ್ರಾಮದಲ್ಲಿ. ತಂದೆ: ಶೇಷ ಕಾರಂತ. ತಾಯಿ: ಲಕ್ಷ್ಮಮ್ಮ. ಕುಂದಾಪುರ, ಮಂಗಳೂರುಗಳಲ್ಲಿ ಓದಿದರು.

೧೯೨೪ರಲ್ಲಿ "ವಸಂತ" ಪತ್ರಿಕೆ ಪ್ರಾರಂಭಿಸಿದರು. ೧೯೫೦ರಲ್ಲಿ "ವಿಚಾರ ಮಾಡಿ" ಪತ್ರಿಕೆ ನಡೆಸಿದರು. ೧೯೫೮ರಲ್ಲಿ "ಯಕ್ಷಗಾನ ಬಯಲಾಟ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಿಕ್ಕಿತು. ೧೯೬೩ ಕರ್ನಾಟಕ ಮೈಸೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದವು. ೧೯೫೮ರಲ್ಲಿ "ಯಕ್ಷಗಾನ ಬಯಲಾಟ" ಕೃತಿಗೆ ಸ್ವೀಡಿಷ್ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇವರು ೧೯೬೯ರಲ್ಲಿ ಸರಕಾರ ನೀಡಿದ್ದ "ಪದ್ಮಭೂಷಣ" ಪ್ರಶಸ್ತಿ ನಿರಾಕರಿಸಿದರು. ೧೯೭೮ರಲ್ಲಿ "ಮೂಕಜ್ಜಿಯ ಕನಸುಗಳು" ಕಾದಂಬರಿಗೆ "ಜ್ಞಾನಪೀಠ ಪ್ರಶಸ್ತಿ" ಬಂದಿತು. ೧೯೯೦ನೆಯ ಸಾಲಿನ "ಪಂಪ ಪ್ರಶಸ್ತಿ ಯ ಮೈಮನಗಳ ಸುಳಿಯಲ್ಲಿ ಕಾದಂಬರಿಗೆ ಸಂದಿತು. ೧೯೭೩ರಲ್ಲಿ ಮೈಸೂರು ವಿಶ್ವವಿದ್ಯಾಲಯ ಇಂಗ್ಲೀಷ್ ನಲ್ಲಿ ಇವರ ಜೀವನ ಚರಿತ್ರೆ ಪ್ರಕಟಿಸಿದೆ. ೧೯೬೯ರಲ್ಲಿ ಕಾರಂತ ಪ್ರಪಂಚ ಅಭಿನಂದನೆ ಗ್ರಂಥ ಸಮರ್ಪಿಸಲಾಗಿದೆ. ೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.