ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ಧನಲಕ್ಷ್ಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧನಲಕ್ಷ್ಮಿ

ನಾವು ಈ ಬಾರಿ ಪರಿಚಯಿಸುತ್ತಿರುವ ಸಾಧಕಿ ಧನಲಕ್ಷ್ಮಿ ಕೆ.ಟಿ.
ಧನಲಕ್ಷ್ಮಿ ಅವರು ೨೦೧೫ರಿಂದ ಕನ್ನಡ, ತುಳು ವಿಕಿಪೀಡಿಯ ಮತ್ತು ಕನ್ನಡ ವಿಕಿಸೋರ್ಸ್ ಗಳಿಗೆ ಕೊಡುಗೆಯನ್ನು ನೀಡುತ್ತಿದ್ದಾರೆ. ಮಂಗಳೂರಿನ ಸಂತ ಆಗ್ನೆಸ್ ಮಹಿಳಾ ಕಾಲೇಜಿನಲ್ಲಿ ನಡೆದ ಕನ್ನಡ ವಿಕಿಪೀಡಿಯ ಸಂಪಾದನೋತ್ಸವಗಳ ಮುಂದಾಳುತ್ವ ವಹಿಸಿದ್ದರು. ಆಗಸ್ಟ್ ೨೦೧೬ರಲ್ಲಿ ಚಂಡೀಗಢದಲ್ಲಿ ನಡೆದ ವಿಕಿ ಕಾನ್ಫೆರೆನ್ಸ್'ನಲ್ಲಿ ೨೦೧೬ರ ಭಾರತದ ಮಂಗಳೂರಿನಲ್ಲಿ ಏರ್ಪಡಿಸಿದ್ದ ಸಂಪಾದನೋತ್ಸವಗಳ ಬಗ್ಗೆ ಕಿರು ಪ್ರಾತ್ಯಕ್ಷಿಕೆ ನೀಡಿದ್ದಾರೆ. ವಿಕಿಮೀಡಿಯ ಯೋಜನೆಗಳಲ್ಲಿ ಮಹಿಳೆಯರ ಪಾಲುಗಾರಿಕೆ ಕಡಿಮೆ ಇರುವುದನ್ನು ಬಗೆಹರಿಸುವ ಉದ್ದೇಶದಿಂದ ವಿಕಿವಿಮೆನ್ ಮಂಗಳೂರು ಎಂಬ ತಂಡದ ಸ್ಥಾಪಿಸಿ ಕೆಲಸಗಳನ್ನು ಮಾಡುತ್ತಿದ್ದಾರೆ. ಜನವರಿ ೨೦೧೭ರಲ್ಲಿ ಚೆನ್ನೈನಲ್ಲಿ ಜರುಗಿದ 4CCon ನಲ್ಲಿ, ವಿಕಿಪೀಡಿಯಾದಲ್ಲಿರುವ ಲಿಂಗ ಅಸಮಾತೋಲನವನ್ನು ಕಡಿಮೆಮಾಡಲು ಮಾಡುತ್ತಿರುವ ಕೆಲಸಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ನೀಡಿದ್ದಾರೆ.