ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ಓಂ ಶಿವಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಓಂ ಶಿವಪ್ರಕಾಶ್


ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಓಂ ಶಿವಪ್ರಕಾಶ್. ಇವರು ೨೦೦೭ ರಿಂದ ವಿಕಿಪೀಡಿಯ ಸಂಪಾದಿಸುತ್ತಿದ್ದಾರೆ. ೨೦೦೭ರ ನಂತರ ಕನ್ನಡ ವಿಕಿಪೀಡಿಯ ಯೋಜನೆಗಳಿಗೆ ಸಕ್ರಿಯವಾಗಿ ಕಾಣಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈಗ ಸಕ್ರಿಯ ಸ್ವಯಂಸೇವಕನಾಗಿ, ಸಂಪಾದಕನಾಗಿ, ಮೇಲ್ವಿಚಾರಕನಾಗಿಯೂ ಕನ್ನಡ ವಿಕಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಟೆಂಪ್ಲೇಟುಗಳು, ಮಾಹಿತಿ ಮತ್ತು ಯೋಜನೆಗಳ ನಿರ್ವಹಣೆ ಇವರ ಮುಖ್ಯ ಆಸಕ್ತಿಗಳು. ಕನ್ನಡ ವಿಕಿಮೀಡಿಯ ಯೋಜನೆಗಳನ್ನು ಡಿಜಿಟಲ್ ಲೈಬ್ರರಿ ಜೊತೆಗೆ ಸೇರಿಸುವುದು ಎಂಬ ಯೋಜನೆಯನ್ನು ವೈಯಕ್ತಿಕವಾಗಿ ಪ್ರಾರಂಭಿಸಿದ್ದಾರೆ. ಈ ವರೆಗೆ ಅನೇಕ ಲೇಖನಗಳನ್ನು ಸಂಪಾದಿಸಿದ್ದಾರೆ. ಹಲವು ಟೆಂಪ್ಲೇಟುಗಳನ್ನೂ ರಚಿಸಿ ಸಂಪಾದಿಸಿದ್ದಾರೆ.

ಇವರು ಮೂಲತಃ ಬೆಂಗಳೂರಿನವರು. ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ತರಬೇತಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.