ವಿಕಿಪೀಡಿಯ:ಕೃತಿಸ್ವಾಮ್ಯತೆಗಳು
ಗೋಚರ
ಕನ್ನಡ ವಿಶ್ವಕೋಶ ಒಂದು ಮುಕ್ತ ವಿಶ್ವಕೋಶ. ಇದರಲ್ಲಿರುವ ಮಾಹಿತಿಯನ್ನು ಪ್ರತಿಯೊಬ್ಬರೂ ಉಪಯೋಗಿಸಬಹುದು, ಸಾಧ್ಯವಾದಲ್ಲಿ ಮತ್ತಷ್ಟು ಮಾಹಿತಿಯನ್ನು ಸೇರಿಸಬಹುದು, ಬದಲಿಸಬಹುದು ಹಾಗೂ ತಿದ್ದುಪಡಿಗಳನ್ನು ಸ್ವತಃ ಮಾಡಬಹುದು. ಕೃತಿಸ್ವಾಮ್ಯತೆಗಳು ಆಯಾ ಲೇಖಕರದು. ಕನ್ನಡ ವಿಕಿಪೀಡಿಯಾದಲ್ಲಿರುವ ಮಾಹಿತಿ ಎಂದೆಂದಿಗೂ ಮುಕ್ತವಾಗಿಯೇ ಇರಿಸಲೆಂದು ಕನ್ನಡ ವಿಕಿಪೀಡಿಯಾದಲ್ಲಿ ಬರೆಯಲ್ಪಡುವ, ಸೇರಿಸಲ್ಪಡುವ ಎಲ್ಲಾ ಮಾಹಿತಿಯನ್ನು ಗ್ನು ಮುಕ್ತ ಡಾಕ್ಯುಮೆಂಟೇಶನ್ ಲೈಸೆನ್ಸ್ ನ ಅಡಿ ಸೇರಿಸಿರಲಾಗಿರುತ್ತದೆ. ವಿಕಿಪೀಡಿಯಾದಲ್ಲಿ ಬರೆಯುವ ಮೂಲಕ ಇದಕ್ಕೆ ಮಾಹಿತಿ ಸೇರಿಸುವ ಎಲ್ಲ ಲೇಖಕರೂ ಈ ಲೈಸೆನ್ಸ್ ಗೆ ಬದ್ಧರಾಗಿರುತ್ತಾರೆ.
ಕನ್ನಡ ವಿಶ್ವಕೋಶವನ್ನು ನಡೆಸುವವರು ಇದರ ಸದಸ್ಯರು, ಇದನ್ನೋದುವವರು ಹಾಗೂ ಇದರ ನಿರ್ವಾಹಕರು. ವಿಕಿಮೀಡಿಯ ಫೌಂಡೇಶನ್ನ ಹಲವು ಯೋಜನೆಗಳಲ್ಲಿ ಕನ್ನಡ ವಿಕಿಪೀಡಿಯ ಕೂಡ ಒಂದು ಸದಸ್ಯ ಯೋಜನೆ.