ವಿಷಯಕ್ಕೆ ಹೋಗು

ವಿಂಡಾಲೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಂಡಾಲೂ ಭಾರತದ ಒಂದು ಮೇಲೋಗರ ಖಾದ್ಯವಾಗಿದೆ. ಇದು ಜನಪ್ರಿಯ ಪೋರ್ಚುಗೀಸ್ ಖಾದ್ಯ ಕಾರ್ನ್ ಡೆ ವಿನ್ಯಾ ಡಾಲೋಸ್ ಮೇಲೆ ಆಧಾರಿತವಾಗಿದೆ. ಇದು ಗೋವಾ, ವಸಾಯಿ, ನೆರೆಯ ಕೊಂಕಣ, ಕೇರಳ ಮತ್ತು ಭಾರತದ ಅನೇಕ ಭಾಗಗಳಲ್ಲಿ ಜನಪ್ರಿಯವಾಗಿದೆ.[][] ಇದು ತನ್ನ ಬ್ರಿಟಿಷ್ ಭಾರತೀಯ ರೂಪದಲ್ಲಿ ಭಾರತದ ಮನೆಗಳಲ್ಲಿ ಹಾಗೂ ಹೊಟೆಲುಗಳಲ್ಲಿ ಪ್ರಧಾನ ಆಹಾರವಾಗಿ ಪರಿಚಿತವಾಗಿದೆ ಮತ್ತು ಹಲವುವೇಳೆ ಉರಿಯುವ ಖಾರದ ಖಾದ್ಯವೆಂದು ಪರಿಗಣಿತವಾಗಿದೆ. ಇದನ್ನು ಸಾಮಾನ್ಯವಾಗಿ ಹಂದಿಮಾಂಸದಿಂದ ತಯಾರಿಸಲಾಗುತ್ತದೆ. ಆದರೆ ಇದನ್ನು ಗೋಮಾಂಸ, ಆಡಿನ ಮಾಂಸ, ಕೋಳಿಮಾಂಸದಂತಹ ಯಾವುದೇ ಬಗೆಯ ಮಾಂಸದಿಂದ, ಮತ್ತು ಟೋಫ಼ೂದಿಂದಲೂ ತಯಾರಿಸಬಹುದು.[]

ವಿಂಡಾಲೂದ ಬ್ರಿಟಿಷ್ ಭಾರತೀಯ ಬಗೆಗೆ ಮಾಂಸವನ್ನು ವಿನಿಗರ್, ಸಕ್ಕರೆ, ತಾಜಾ ಶುಂಠಿ ಹಾಗೂ ಸಂಬಾರ ಪದಾರ್ಥಗಳಲ್ಲಿ ಊರುಹಾಕಬೇಕು. ನಂತರ ಮತ್ತಷ್ಟು ಸಂಬಾರ ಪದಾರ್ಥಗಳೊಂದಿಗೆ ಬೇಯಿಸಬೇಕು.[]

ಉಲ್ಲೇಖಗಳು

[ಬದಲಾಯಿಸಿ]
  1. Taylor, Anna-Louise (11 October 2013). "Curry: Where did it come from?". BBC Food. Archived from the original on 11 December 2014. Retrieved 17 December 2014.
  2. ೨.೦ ೨.೧ "Indal (Vindaloo)". The East Indian Community. Archived from the original on 5 July 2015. Retrieved 13 July 2015.
  3. Peters-Jones, Michelle. "Indian Classics – Vindalho de Galinha (Chicken Vindaloo)". The Tiffin Box. Archived from the original on 13 July 2015. Retrieved 13 July 2015.

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ವಿಂಡಾಲೂ&oldid=1231257" ಇಂದ ಪಡೆಯಲ್ಪಟ್ಟಿದೆ