ವಾಸ್ತವಾಭಾಸದ ಕೀಲಿಮಣೆ
ವಾಸ್ತವಾಭಾಸದ ಕೀಲಿಮಣೆ ಎಂಬುದೊಂದು ತಂತ್ರಾಂಶ ಅಥವಾ ಯಂತ್ರಾಂಶ ಘಟಕವಾಗಿದ್ದು, ಅಕ್ಷರಗಳನ್ನು ದಾಖಲಿಸಲು ಓರ್ವ ಬಳಕೆದಾರನಿಗೆ ಅದು ಅನುವುಮಾಡಿಕೊಡುತ್ತದೆ. ಅನೇಕ ಪ್ರದಾನ ಸಾಧನಗಳನ್ನು ಬಳಸಿಕೊಂಡು ವಾಸ್ತವಾಭಾಸದ ಕೀಲಿಮಣೆಯೊಂದರ ನಿರ್ವಹಣೆಯನ್ನು ಸಾಮಾನ್ಯವಾಗಿ ಮಾಡಬಹುದು. ಒಂದು ವಾಸ್ತವಿಕ ಕೀಲಿಮಣೆ, ಒಂದು ಕಂಪ್ಯೂಟರ್ ಮೌಸ್, ಒಂದು ಹೆಡ್‌ಮೌಸ್, ಮತ್ತು ಒಂದು ಐಮೌಸ್ ಇವು ಸದರಿ ಪ್ರದಾನ ಸಾಧನಗಳಲ್ಲಿ ಸೇರಿರಬಹುದು.
ಮೇಜಿನಮೇಲಿನ ಪಿಸಿ ಯೊಂದಕ್ಕೆ ಸಂಬಂಧಿಸಿ ಹೇಳುವುದಾದರೆ, ಒಂದು ಭೌತಿಕ ಕೀಲಿಮಣೆಯನ್ನು ಬಳಸಲಾಗದ ದೈಹಿಕ ಅಸಾಮರ್ಥ್ಯಗಳೊಂದಿಗಿನ ಬಳಕೆದಾರರಿಗೆ ಮೀಸಲಾದ ಒಂದು ಪರ್ಯಾಯ ಪ್ರದಾನ ಕಾರ್ಯವಿಧಾನವನ್ನು ಒದಗಿಸುವುದು ವಾಸ್ತವಾಭಾಸದ ಕೀಲಿಮಣೆಯ ಉದ್ದೇಶವಾಗಿದೆ. ದ್ವಿಭಾಷೆ ಅಥವಾ ಬಹು-ಭಾಷೆಯ ಬಳಕೆದಾರರು ವಿವಿಧ ಅಕ್ಷರ ಜೋಡಿಗಳು ಅಥವಾ ವರ್ಣಮಾಲೆಗಳ ನಡುವಣ ನಿರಂತರವಾಗಿ ಬದಲಿಸಬೇಕಾದ ಅಗತ್ಯಬಂದಾಗ, ಅಂಥವರಿಗೆ ಒಂದು ತೆರೆಯ-ಮೇಲಿನ ಕೀಲಿಮಣೆಯು ಮತ್ತೊಂದು ಪ್ರಮುಖ ಬಳಕೆಯಾಗಿ ಒದಗಿಬರುತ್ತದೆ. ಇಬ್ಬಗೆಯ ವಿನ್ಯಾಸಕ್ರಮಗಳನ್ನು ಒಳಗೊಂಡಿರುವ ಯಂತ್ರಾಂಶ ಕೀಲಿಮಣೆಗಳು ಲಭ್ಯವಿವೆಯಾದರೂ (ಉದಾಹರಣೆಗೆ, ಹಲವಾರು ರಾಷ್ಟ್ರೀಯ ವಿನ್ಯಾಸಕ್ರಮಗಳಲ್ಲಿರುವ ಸಿರಿಲಿಕ್/ಲ್ಯಾಟಿನ್ ಅಕ್ಷರಮಾಲೆಯ ಅಕ್ಷರಗಳು), ಇಬ್ಬಗೆಯ ವಿನ್ಯಾಸಕ್ರಮಗಳನ್ನು ಅಳವಡಿಸಿಕೊಂಡಿಲ್ಲದ ಭಿನ್ನಭಿನ್ನ ಕೇಂದ್ರಗಳಲ್ಲಿ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಕೆಲಸಮಾಡುವಾಗ ತೆರೆಯ-ಮೇಲಿನ ಕೀಲಿಮಣೆಯು ಒಂದು ಕೈಗೆಟುಕುವ ಪರ್ಯಾಯ ವ್ಯವಸ್ಥೆಯಾಗಿ ಒದಗಿಬರುತ್ತದೆ.
ಬಹುಪಾಲು ವಿಂಡೋಸ್ ಯಂತ್ರವ್ಯವಸ್ಥೆಗಳ ಮೇಲಿರುವ ತೆರೆಯ-ಮೇಲಿನ ಕೀಲಿಮಣೆಯ ಪ್ರಮಾಣಕ ಉಪಯುಕ್ತತೆಯು, ಭೌತಿಕ ಕೀಲಿಮಣೆಯಿಂದ ವಿನ್ಯಾಸಕ್ರಮಗಳ ನಡುವಣ ಕ್ಷಿಪ್ರವಾಗಿ ಕೀಲಿಯನ್ನು ಬದಲಾಯಿಸುವುದಕ್ಕೆ ಅನುವುಮಾಡಿಕೊಡುತ್ತದೆಯಲ್ಲದೇ (ವಿಶಿಷ್ಟವಾಗಿ alt-shift ಕೀಲಿಯನ್ನು ಬಳಸುವ ಮೂಲಕ ಇದು ಸಾಧ್ಯವಾಗುತ್ತದೆಯಾದರೂ, ಇದು ಬಳಕೆದಾರರಿಂದ ವಿನ್ಯಾಸ ರಚಿಸಲ್ಪಡಬೇಕಿರುವ ವ್ಯವಸ್ಥೆಯಾಗಿದೆ), ಸಮಾನಕಾಲಿಕವಾಗಿ ಯಂತ್ರಾಂಶ ಮತ್ತು ತಂತ್ರಾಂಶ ಕೀಲಿಮಣೆ ವಿನ್ಯಾಸಕ್ರಮವೆರಡನ್ನೂ ಅದು ಬದಲಿಸುತ್ತದೆ. ಇದರ ಜೊತೆಗೆ, sys-ಟ್ರೇಯಲ್ಲಿರುವ ಒಂದು ಸಂಕೇತವು ಪ್ರಸಕ್ತ ಸಕ್ರಿಯವಾಗಿರುವ ವಿನ್ಯಾಸಕ್ರಮದ ಕುರಿತು ಬಳಕೆದಾರನನ್ನು ಎಚ್ಚರಿಸುತ್ತದೆ. ಕೈಯಿಂದ ನಡೆಸುವ, ಈ ವೇಗದ ಕೀಲಿಮಣೆ-ವಿನ್ಯಾಸಕ್ರಮದ ಬದಲಾಯಿಸುವ ಕಾರ್ಯವಿಧಾನವನ್ನು ಲಿನಕ್ಸ್ ಬೆಂಬಲಿಸುತ್ತದೆಯಾದರೂ, gtಕೀಲಿಮಣೆ, ಮ್ಯಾಚ್‌ಬಾಕ್ಸ್-ಕೀಲಿಮಣೆ ಅಥವಾ Kvkbdಯಂಥ ಅತ್ಯಂತ ಜನಪ್ರಿಯ ಲಿನಕ್ಸ್ ತೆರೆಯ-ಮೇಲಿನ ಕೀಲಿಮಣೆಗಳು ಇದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವುದಿಲ್ಲ. ಉದಾಹರಣೆಗೆ Kvkbd ಕೀಲಿಮಣೆಯು ಪೂರ್ವಯೋಜಿತ ವ್ಯವಸ್ಥೆಯ ವಿನ್ಯಾಸಕ್ರಮಕ್ಕೆ ಬದಲಾಗಿ, ಕೀಲಿಮಣೆಯ ಆದ್ಯತೆಯಲ್ಲಿನ ಮೊದಲು ನಿಷ್ಕರ್ಷಿಸಲ್ಪಟ್ಟ ವಿನ್ಯಾಸಕ್ರಮದ ಅನುಸಾರ ತನ್ನ ದೃಶ್ಯಗೋಚರ ವಿನ್ಯಾಸಕ್ರಮವನ್ನು ವಿಶದೀಕರಿಸುತ್ತದೆ. ಇದರಿಂದಾಗಿ ಯಂತ್ರವ್ಯವಸ್ಥೆಯಲ್ಲಿನ ಅನ್ವಯಿಕೆಯು ತಪ್ಪಾದ ಅಕ್ಷರಗಳ ಫಲಿತಾಂಶಗಳನ್ನು ಹೊರಹೊಮ್ಮಿಸುತ್ತದೆ; ಒಂದು ವೇಳೆ ಪಟ್ಟಿಯಲ್ಲಿನ ಮೊದಲ ವಿನ್ಯಾಸಕ್ರಮವು ಪೂರ್ವಯೋಜಿತ ವ್ಯವಸ್ಥೆಯ ವಿನ್ಯಾಸಕ್ರಮ ಆಗಿಲ್ಲದಿದ್ದರೆ ಇದು ಸಂಭವಿಸುತ್ತದೆ. ಒಂದು ಕ್ಷಿಪ್ರವಾದ-ಕೀಲಿ ವಿನ್ಯಾಸಕ್ರಮದ ಸ್ವಿಚ್ಚನ್ನು ಸಕ್ರಿಯಗೊಳಿಸುವುದರಿಂದ, ಮತ್ತೊಂದು ಕೀಲಿಮಣೆ ವಿನ್ಯಾಸಕ್ರಮಕ್ಕೆ ಅನುಸಾರವಾಗಿ ಅನ್ವಯಿಕೆಯು ತನ್ನ ಫಲಿತಾಂಶವನ್ನು ಬದಲಿಸುವಂತಾಗುತ್ತದೆ. ಆದರೆ ದೃಶ್ಯಗೋಚರವಾಗಿರುವ ತೆರೆಯ-ಮೇಲಿನ ವಿನ್ಯಾಸಕ್ರಮವು ಬದಲಾಗುವುದಿಲ್ಲ. ಹೀಗಾಗಿ ತಾನು ಯಾವ ಕೀಲಿಮಣೆ ವಿನ್ಯಾಸಕ್ರಮವನ್ನು ಬಳಸುತ್ತಿರುವುದು ಎಂದು ಗೊತ್ತಾಗದೆ ಬಳಕೆದಾರನು ದಿಕ್ಕುತಪ್ಪಿ ಕುಳಿತುಕೊಳ್ಳಬೇಕಾಗುತ್ತದೆ. ಈ ಕೊರತೆಗಳು ಸರಿಪಡಿಸಲ್ಪಡುವವರೆಗೂ, ಬಹು-ಭಾಷೆಯ/ಬಹು-ವರ್ಣಮಾಲೆಯ ಬಳಕೆದಾರರಿಗೆ ಸಂಬಂಧಿಸಿದಂತೆ ತೆರೆಯ-ಮೇಲಿನ ಲಿನಕ್ಸ್ ಕೀಲಿಮಣೆಗಳು ಸೀಮಿತ ಉಪಯುಕ್ತತೆಯೊಂದಿಗೇ ಉಳಿಯಬೇಕಾಗುತ್ತದೆ.
ಭೌತಿಕ ಕೀಲಿಮಣೆಯೊಂದನ್ನು ಹೊಂದಿಲ್ಲದ ಸಾಧನಗಳ ಮೇಲೆ ಬಳಸುವಾಗ (ಅಂದರೆ ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್‌ಗಳು ಅಥವಾ ಸ್ಪರ್ಶತೆರೆ ವ್ಯವಸ್ಥೆಯುಳ್ಳ ಸೆಲ್‌ಪೋನುಗಳಂಥ ಸಾಧನಗಳ ಮೇಲೆ), ಸದರಿ ಸಾಧನದ ಕಾರ್ಯಾಚರಣಾ ವ್ಯವಸ್ಥೆಯೊಳಗೆ ವಾಸ್ತವಾಭಾಸದ ಕೀಲಿಮಣೆಯೊಂದರ ರಚಿತ ವಿನ್ಯಾಸವೊಂದನ್ನು ಅಳವಡಿಸುವ ಮೂಲಕ ಪಠ್ಯವನ್ನು ಪ್ರದಾನ ಮಾಡುವುದು ಬಳಕೆದಾರರಿಗೆ ಸಾಮಾನ್ಯವಾದ ವಿಷಯವಾಗಿದೆ. ಒಂದು ಕಂಪ್ಯೂಟರ್ ಕೀಲಿಮಣೆಯು ಹೊಂದಿರಬೇಕಾದುದಕ್ಕಿಂತ ಕಡಿಮೆ ಸಂಖ್ಯೆಯ ಒತ್ತುಗುಂಡಿಗಳನ್ನು ಹೊಂದಿರುವ ಯಂತ್ರವ್ಯವಸ್ಥೆಗಳಿಗಾಗಿರುವ ಅನುಕರಣ ತಂತ್ರಾಂಶದ ಲಕ್ಷಣಗಳಾಗಿಯೂ ವಾಸ್ತವಾಭಾಸದ ಕೀಲಿಮಣೆಗಳನ್ನು ಬಳಸಲಾಗುತ್ತದೆ.
ಈ ಕೆಳಗೆ ನೀಡಲಾಗಿರುವ ಲಕ್ಷಣಗಳನ್ನು ಆಧರಿಸಿ ವಾಸ್ತವಾಭಾಸದ ಕೀಲಿಮಣೆಗಳನ್ನು ವರ್ಗೀಕರಿಸಬಹುದು:
- ಕೀಲಿಫಲಕಗಳಲ್ಲಿ ಸಂಯೋಜಿಸಲ್ಪಟ್ಟಿರುವ, ವಿದ್ಯುನ್ಮಾನಶಾಸ್ತ್ರದ ರೀತಿಯಲ್ಲಿ ಬದಲಾಯಿಸಬಹುದಾದ ಪ್ರದರ್ಶನಗಳನ್ನು ಒಳಗೊಂಡಿರುವ, ವಿಶಿಷ್ಟ ಕೀಲಿಗಳೊಂದಿಗಿನ ಭೌತಿಕ ಕೀಲಿಮಣೆಗಳು
- ಸ್ಪರ್ಶತೆರೆ ಕೀಲಿಮಣೆ ವಿನ್ಯಾಸಕ್ರಮಗಳು ಅಥವಾ ಸಂವೇದನಾಶೀಲ ಪ್ರದೇಶಗಳೊಂದಿಗಿನ[೧] ವಾಸ್ತವಾಭಾಸದ ಕೀಲಿಮಣೆಗಳು
- ದೃಗ್ವೈಜ್ಞಾನಿಕವಾಗಿ ಪ್ರಕ್ಷೇಪಿಸಲ್ಪಟ್ಟ ಕೀಲಿಮಣೆ ವಿನ್ಯಾಸಕ್ರಮಗಳು ಅಥವಾ ಅದನ್ನೇ ಹೋಲುವ "ಕೀಲಿಗಳ" ಅಥವಾ ಸಂವೇದನಾಶೀಲ ಪ್ರದೇಶಗಳ ವ್ಯವಸ್ಥೆಗಳು[೨][೩]
- ದೃಗ್ವೈಜ್ಞಾನಿಕವಾಗಿ ಪತ್ತೆಹಚ್ಚಲಾದ ಮಾನವ ಕೈ ಮತ್ತು ಬೆರಳಿನ ಚಲನೆಗಳು[೪]
- ಕಂಪ್ಯೂಟರ್ ಮೌಸ್, ಸ್ವಿಚ್ಚು ಅಥವಾ ನೆರವಾಗುವ ತಂತ್ರಜ್ಞಾನದ ಇತರ ಸಾಧನದಂಥ ಒಂದು ವೈವಿಧ್ಯಮಯ ಪ್ರದಾನ ಸಾಧನಗಳಿಂದ ಪ್ರದಾನವನ್ನು ಮಾಡಲು ಅನುವುಮಾಡಿಕೊಡುವ ವಾಸ್ತವಾಭಾಸದ ಕೀಲಿಮಣೆಗಳು.
ದೃಗ್ವೈಜ್ಞಾನಿಕ ವಾಸ್ತವಾಭಾಸದ ಕೀಲಿಮಣೆಯೊಂದನ್ನು ಐಬಿಎಂ ಎಂಜಿನಿಯರುಗಳು 2008ರಲ್ಲಿ ಆವಿಷ್ಕರಿಸಿ, ಅದರ ಸ್ವಾಮ್ಯದ ಹಕ್ಕುಪತ್ರವನ್ನು ಪಡೆದಿದ್ದಾರೆ.[೪] ಮಾನವ ಕೈ ಮತ್ತು ಬೆರಳಿನ ಚಲನೆಗಳನ್ನು ಇದು ದೃಗ್ವೈಜ್ಞಾನಿಕವಾಗಿ ಪತ್ತೆಹಚ್ಚುತ್ತದೆ ಮತ್ತು ವಿಶ್ಲೇಷಿಸುತ್ತದೆಯಲ್ಲದೇ, ನಂತರ ಅವನ್ನು ಕಾರ್ಯಾಚರಣೆಗಳಾಗಿ ಅರ್ಥವಿವರಿಸುತ್ತದೆ. ಇದಕ್ಕಾಗಿ, ಚಿತ್ರಿಸಲ್ಪಟ್ಟ ಕೀಲಿಗಳನ್ನು ಹೊಂದಿರುವ ಒಂದು ಮೇಲ್ಮೈನಂಥ ಭೌತಿಕವಾಗಿ ಅಸ್ತಿತ್ವದಲ್ಲಿಲ್ಲದ ಪ್ರದಾನ ಸಾಧನವೊಂದನ್ನು ಅದು ಬಳಸಿಕೊಳ್ಳುತ್ತದೆ. ಆ ರೀತಿಯಲ್ಲಿ ಇದು, ಒಂದು ಮೌಸ್ ಅಥವಾ ಕೀಲಿಮಣೆಯಂಥ ಕೈನಿಂದ ನಿರ್ವಹಿಸಲ್ಪಟ್ಟ ಪ್ರದಾನ ಸಾಧನಗಳ ಅನಿಯಮಿತ ಅಚ್ಚಿಸುವಿಕೆಗಳನ್ನು ಅನುಕರಿಸುವಲ್ಲಿ ಅವಕಾಶಮಾಡಿಕೊಡುತ್ತದೆ. ಇಂಥ ವಾಸ್ತವಾಭಾಸದ ಸಾಧನಗಳಿಂದ ಎಲ್ಲಾ ಯಾಂತ್ರಿಕ ಪ್ರದಾನ ಘಟಕಗಳನ್ನು ಬದಲಾಯಿಸಬಹುದು. ಪ್ರಸ್ತುತ ಬಳಕೆಯಲ್ಲಿರುವ ಅನ್ವಯಿಕೆಗೆ ಸಂಬಂಧಿಸಿದಂತೆ ಮತ್ತು ಕೈಯಿಂದ ನಡೆಸುವ ದತ್ತಾಂಶ ಪ್ರದಾನದ ವೇಗ, ಸರಳತೆ ಹಾಗೂ ಅಸಂದಿಗ್ಧತೆಯನ್ನು ನಿರ್ವಹಿಸುವಲ್ಲಿನ ಬಳಕೆದಾರನ ಶರೀರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇಂಥ ವಾಸ್ತವಾಭಾಸದ ಸಾಧನಗಳನ್ನು ಅತ್ಯಂತ ಪ್ರಶಸ್ತವಾಗಿಸಲಾಗಿರುತ್ತದೆ.
ಅಂತರಜಾಲ ಮಾಧ್ಯಮದಲ್ಲಿ ಜಾವಾಸ್ಕ್ರಿಪ್ಟ್‌ನ ವೈವಿಧ್ಯಮಯ ವಾಸ್ತವಾಭಾಸದ ಕೀಲಿಮಣೆಗಳು ಸೃಷ್ಟಿಸಲ್ಪಟ್ಟಿದ್ದು, ವಿದೇಶೀ ಕೀಲಿಮಣೆಗಳ ಮೇಲೆ ಅದರಲ್ಲೂ ನಿರ್ದಿಷ್ಟವಾಗಿ ಅಂತರಜಾಲ ಕೆಫೆಗಳಲ್ಲಿ ಬಳಕೆದಾರರು ತಮ್ಮದೇ ಸ್ವಂತದ ಭಾಷೆಗಳನ್ನು ಅಚ್ಚಿಸುವಲ್ಲಿ ಇವು ಅನುವುಮಾಡಿಕೊಡುತ್ತವೆ.
ಸುರಕ್ಷತಾ ಪರಿಗಣನೆಗಳು
[ಬದಲಾಯಿಸಿ]ಕೀಲಿಕೈ ಬಡಿತದ ದಾಖಲಿಸುವಿಕೆಯ ಅಪಾಯವನ್ನು ತಗ್ಗಿಸುವ ದೃಷ್ಟಿಯಿಂದ, ವಾಸ್ತವಾಭಾಸದ ಕೀಲಿಮಣೆಗಳನ್ನು ಕೆಲವೊಂದು ನಿದರ್ಶನಗಳಲ್ಲಿ ಬಳಸಬಹುದು. ಉದಾಹರಣೆಗೆ, Westpac ನ ಆನ್‌ಲೈನ್ ಬ್ಯಾಂಕಿಂಗ್ ಸೇವೆಯ Archived 2009-10-28 ವೇಬ್ಯಾಕ್ ಮೆಷಿನ್ ನಲ್ಲಿ. ವೆಬ್‌ತಾಣವು, TreasuryDirect ಮಾಡುವ ರೀತಿಯಲ್ಲೇ (ಚಿತ್ರವನ್ನು ನೋಡಿ) ಸಂಕೇತಪದದ ದಾಖಲಿಸುವಿಕೆಗಾಗಿ ಒಂದು ವಾಸ್ತವಾಭಾಸದ ಕೀಲಿಮಣೆಯನ್ನು ಬಳಸುತ್ತದೆ. ವಾಸ್ತವಿಕವಾದ ಕೀಲಿಕೈ ಬಡಿತಗಳನ್ನು ನಿಯಂತ್ರಿಸುವುದಕ್ಕೆ ಹೋಲಿಸಿದಾಗ, ಒಂದು ವಾಸ್ತವಾಭಾಸದ ಕೀಲಿಮಣೆಯ ಮೂಲಕ ದಾಖಲಿಸಲಾದ ದತ್ತಾಂಶವನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ಪ್ರದರ್ಶನ ಹಾಗೂ ಮೌಸ್‌ನ್ನು ನಿಯಂತ್ರಿಸುವುದು ದುರುದ್ದೇಶ ಪೂರಿತ ತಂತ್ರಾಂಶಕ್ಕೆ ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ. ಆದಾಗ್ಯೂ, ಉದಾಹರಣೆಗೆ ನಿಯತವಾದ ಕಾಲಾವಧಿಗಳಲ್ಲಿ ಸ್ಕ್ರೀನ್ಷಾಟ್ಗಳನ್ನು ದಾಖಲಿಸಿಕೊಳ್ಳುವ ಮೂಲಕ ಅಥವಾ ಪ್ರತಿಯೊಂದು ಮೌಸ್ ಗುಂಡಿಯೊತ್ತುವಿಕೆಯ ಮೇಲೆ ದಾಖಲಿಸಿಕೊಳ್ಳುವ ಮೂಲಕ ಇದನ್ನು ಕಾರ್ಯಸಾಧ್ಯಗೊಳಿಸಬಹುದಾಗಿದೆ.
ಯಾವುದೇ ಬಳಕೆಗಾಗಿಯೇ ಆಗಲಿ, ಈ ವಾಸ್ತವಾಭಾಸದ ಕೀಲಿಮಣೆಗಳು ಒಂದು ಅನ್ವಯಿಕೆ ಅಥವಾ ವೆಬ್ ಪುಟದ ಒಂದು ಅವಿಭಾಜ್ಯ ಅಂಗವಾಗಬೇಕಿರುವುದು ಅತ್ಯಗತ್ಯವಾಗಿದೆ.
ನಿರ್ದಿಷ್ಟ ಕಾರ್ಯಕ್ಕಾಗಿಯೇ ಸ್ಪಷ್ಟವಾಗಿ ಬರೆಯಲ್ಪಟ್ಟಿರದ ಅಥವಾ ರೂಪಿಸಲ್ಪಟ್ಟಿರದ ಕಾರ್ಯಸೂಚಿಗಳೂ ಸೇರಿದಂತೆ, ಯಾವುದೇ ಕಾರ್ಯಸೂಚಿಯೊಂದಿಗೆ ಕೆಲಸಮಾಡುವ ಒಂದು ಸಾರ್ವತ್ರಿಕವಾದ ವಾಸ್ತವಾಭಾಸದ ಕೀಲಿಮಣೆಯು ಕೀಲಿ ದಾಖಲಿಸುವಿಕೆಯ ಕಾರ್ಯಸೂಚಿಯನ್ನು ನಿರರ್ಥಕಗೊಳಿಸುವುದಿಲ್ಲ. ಏಕೆಂದರೆ, ಒಂದು ವಾಸ್ತವಿಕ ಕೀಲಿಮಣೆಯಂತೆಯೇ ಕೀಲಿಮಣೆಯ ಅದೇ ಸಂಗತಿಗಳನ್ನು ವಾಸ್ತವಾಭಾಸದ ಕೀಲಿಮಣೆಯು ಸೃಷ್ಟಿಸುತ್ತದೆ, ಮತ್ತು ಕೇವಲ ವಾಸ್ತವಿಕ ಕೀಲಿಮಣೆ ಪ್ರದಾನಗಳು ಮಾಡಬಲ್ಲ ರೀತಿಯಲ್ಲೇ ಆ ಸಂಗತಿಗಳನ್ನು ಹಿಡಿದಿಡಬಹುದಾಗಿದೆ ಮತ್ತು ದಾಖಲಿಸಬಹುದಾಗಿದೆ.[೫][೬]
ಬಳಕೆದಾರನು ಮೌಸ್ ಗುಂಡಿಯೊತ್ತುವಿಕೆಗಳೊಂದಿಗೆ "ಅಚ್ಚಿಸುವ" ಒಂದು ತೆರೆಯ-ಮೇಲಿನ ಕೀಲಿಮಣೆಯ ಬಳಕೆಯು, ಷೌಲ್ಡರ್ ಸರ್ಫಿಂಗ್ ನೆರವಿನಿಂದಾಗಿ ಸಂಕೇತಪದದ ಬಹಿರಂಗವಾಗುವಿಕೆಯ ಅಪಾಯವನ್ನು ಹೆಚ್ಚಿಸಬಹುದು. ಏಕೆಂದರೆ:
- ಓರ್ವ ವೀಕ್ಷಕನು ಕೀಲಿಮಣೆಗಿಂತ ಹೆಚ್ಚಾಗಿ ತೆರೆಯನ್ನು ಹೆಚ್ಚು ಸುಲಭವಾಗಿ (ಮತ್ತು ಕಡಿಮೆ ಅನುಮಾನಾಸ್ಪದವಾಗಿ) ವಿಶಿಷ್ಟ ರೀತಿಯಲ್ಲಿ ವೀಕ್ಷಿಸಬಹುದು, ಹಾಗೂ ಯಾವ ಅಕ್ಷರಗಳೆಡೆಗೆ ಮೌಸ್ ಸಾಗುತ್ತದೆ ಎಂಬುದನ್ನು ನೋಡಬಹುದು.
- ತೆರೆಯ-ಮೇಲಿನ ಕೀಲಿಮಣೆಯ ಕೆಲವೊಂದು ಕಾರ್ಯಗತಗೊಳಿಸುವಿಕೆಗಳು ಒತ್ತಲ್ಪಟ್ಟಿರುವ "ಕೀಲಿ"ಯ ದೃಶ್ಯರೂಪದ ಪರಿಣಾಮ-ಪ್ರತಿಕ್ರಿಯೆಯನ್ನು, ಉದಾಹರಣೆಗೆ ಅದರ ಬಣ್ಣವನ್ನು ಸಂಕ್ಷಿಪ್ತವಾಗಿ ಬದಲಿಸುವ ಮೂಲಕ ನೀಡಬಹುದು. ವೀಕ್ಷಕನು ತೆರೆಯಿಂದ ದತ್ತಾಂಶವನ್ನು ಅತ್ಯಂತ ಸುಲಭವಾಗಿ ಓದಲು ಇದು ಅನುವುಮಾಡಿಕೊಡುತ್ತದೆ. ತೀರಾ ಕೆಟ್ಟ ನಿದರ್ಶನದಲ್ಲಿ ಹೇಳುವುದಾದರೆ, ನಂತರದ ವಾಸ್ತವಾಭಾಸದ ಕೀಲಿಯು ಒತ್ತಲ್ಪಡುವವರೆಗೂ ತೀರಾ ಇತ್ತೀಚೆಗೆ ಒತ್ತಲ್ಪಟ್ಟ "ಕೀಲಿಯ" ಮೇಲೆ ಗಮನವು ಉಳಿಯುವಂತೆ ಕಾರ್ಯಗತಗೊಳಿಸುವಿಕೆಯು ಮಾಡಬಹುದು. ಈ ರೀತಿಯಾಗಿ ಮುಂದಿನ ಅಕ್ಷರದೆಡೆಗೆ ಮೌಸ್ ಚಲಿಸಲು ಪ್ರಾರಂಭಿಸಿದ ನಂತರವೂ ವೀಕ್ಷಕನು ಪ್ರತಿಯೊಂದು ಅಕ್ಷರವನ್ನೂ ಓದಲು ಸಮಯಾವಕಾಶವನ್ನು ಪಡೆಯುತ್ತಾನೆ.
- ಓರ್ವ ಬಳಕೆದಾರನು ತಾನು ಕೀಲಿಮಣೆಯೊಂದರ ಮೇಲೆ ಅಚ್ಚಿಸುವಷ್ಟೇ ವೇಗವಾಗಿ "ನಿರ್ದೇಶಿಸಲು ಮತ್ತು ಗುಂಡಿಯೊತ್ತಲು" ಸಾಧ್ಯವಾಗದಿರಬಹುದು. ಇದರಿಂದಾಗಿ ವೀಕ್ಷಕನಿಗೆ ಅವನ ಕೆಲಸವು ಮತ್ತಷ್ಟು ಸುಲಭವಾಗುತ್ತದೆ.
ಟಿಪ್ಪಣಿಗಳು
[ಬದಲಾಯಿಸಿ]- ↑ EP application 546704 Thomas H. Speeter/AT&T: "Intelligent work surfaces" priority date 13.12.1991
- ↑ DE application 19734511 B. Kämmerer, C, Maggioni, H. Röttger/SIEMENS AG: "Kommunikationseinrichtung" filing date 08.08.1997
- ↑ WO 0003348 C. Maggioni, B. Kämmerer/SIEMENS AG: "Projection Device / Vorrichtung zur Projektion" priority date 10.07.1998
- ↑ ೪.೦ ೪.೧ EP 0554492 Hans E. Korth: "Method and device for optical input of commands or data" filing date 07.02.1992
- ↑ http://cnt.lakefolks.com/keylogger-no.htm Archived 2011-08-13 ವೇಬ್ಯಾಕ್ ಮೆಷಿನ್ ನಲ್ಲಿ. from the Click-N-Type Virtual Keyboard
- ↑ Smith, David A. (2006-06-21), Outsmarting Keyloggers, PC Magazine, retrieved 2009-11-16
ಬಾಹ್ಯ ಕೊಂಡಿಗಳು
[ಬದಲಾಯಿಸಿ]- GNOME ಆನ್-ಸ್ಕ್ರೀನ್ ಕೀಬೋರ್ಡ್ (ಜಿಒಕೆ) Archived 2010-06-23 ವೇಬ್ಯಾಕ್ ಮೆಷಿನ್ ನಲ್ಲಿ..
- Microsoft: ಯೂಸಿಂಗ್ ಆನ್-ಸ್ಕ್ರೀನ್ ಕೀಬೋರ್ಡ್ (ಆಕ್ಸೆಸಬಿಲಿಟಿ ಟ್ಯುಟೋರಿಯಲ್ಸ್ - Windows XP).
- ಗ್ಲೋಬಲ್ ಅಸಿಸ್ಟಿವ್ ಟೆಕ್ನಾಲಜಿ ವಿಕಿ: ಆನ್ ಸ್ಕ್ರೀನ್ ಕೀಬೋರ್ಡ್ಸ್ Archived 2010-06-24 ವೇಬ್ಯಾಕ್ ಮೆಷಿನ್ ನಲ್ಲಿ.
- ಅಡಾಪ್ಟಿವ್ ಟೆಕ್ನಾಲಜಿ ರಿಸೋರ್ಸ್ ಸೆಂಟರ್ (ಟೊರೊಂಟೊ ವಿಶ್ವವಿದ್ಯಾಲಯ): ಆನ್-ಸ್ಕ್ರೀನ್ ಕೀಬೋರ್ಡ್ಸ್ Archived 2010-02-17 ವೇಬ್ಯಾಕ್ ಮೆಷಿನ್ ನಲ್ಲಿ..