ವಾಸಯೋಗ್ಯ ಭೂಮಿಗಳು

ವಿಕಿಪೀಡಿಯ ಇಂದ
Jump to navigation Jump to search

ವಾಸಯೋಗ್ಯ ಭೂಮಿಗಳು

ವಾಷಿಂಗ್ ಟನ್, ಜ. 8: ಇನ್ನು ಮುಂದೆ ಭೂಮಿ ಮೇಲಿನ ಜನಸಂಖ್ಯೆ ಹೆಚ್ಚಾಯಿತು. ಮಾಲಿನ್ಯ ನಿಯಂತ್ರಣವಾಗುತ್ತಿಲ್ಲ ಎಂದು ಕೊರಗುವಂತಿಲ್ಲ. ಬೇಸರ ಬಂದರೆ ಬೇರೆ ಗ್ರಹಕ್ಕೆ ಹೋಗಿ ವಾಸಿಸಬಹುದು! ಹೌದು.. ವಾಸಯೋಗ್ಯವಾಗ್ಯಿರುವ ಜತೆಗೆ ಭೂಮಿಯನ್ನೇ ಹೋಲುವ 8 ಗ್ರಹಗಳನ್ನ ಪತ್ತೆ ಮಾಡಿರುವುದಾಗಿ ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ಖಗೋಳ ಶಾಸ್ತ್ರಜ್ಞರು, ಈ ಗ್ರಹಗಳ ಪೈಕಿ ಎರಡರಲ್ಲಿ ನೀರಿದೆ, ಇವು ಭೂಮಿಯನ್ನೇ ಹೋಲುತ್ತಿದ್ದು ಮನುಷ್ಯರು ವಾಸಿಸಲು ಅಲ್ಲಿ ಪೂರಕ ವಾತಾವರಣವಿದೆ ಎಂದು ತಿಳಿಸಿದ್ದಾರೆ.[ಕಪ್ಪುರಂಧ್ರದ ಬಳಿ ಬೃಹತ್ ಜ್ವಾಲೆ ಪತ್ತೆ ಹಚ್ಚಿದ ನಾಸಾ]

ನಾಸಾದ ದುರದರ್ಶಕ ಕೆಪ್ಲರ್ ಇದನ್ನು ಖಚಿತಪಡಿಸಿದ್ದು ಭೂಮಿಯನ್ನು ಹೋಲುವ ಎರಡು ಗ್ರಹಗಳಿಗೆ ಕೆಪ್ಲರ್-438ಬಿ ಮತ್ತು ಕೆಪ್ಲರ್-442ಬಿ ಎಂದು ಹೆಸರಿಟ್ಟಿದೆ. ನಾವು ಇಷ್ಟು ದಿನ ಇಂಥಹದ್ದೇ ಗ್ರಹಗಳ ಹುಡುಕಾಟ ನಡೆಸುತ್ತಿದ್ದವು. 2009 ರಿಂದಲೂ ಈ ಬಗ್ಗೆ ನಿರಂತರ ಯತ್ನ ನಡೆದಿತ್ತು. ಈಗ ನಮ್ಮ ಸಂಶೋಧನೆಗೆ ನೆರವಾಗುವ ಅಂಶಗಳು ದೊರೆತಿವೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ. ಗ್ರಹದ ವಾತಾವರಣ, ಗಾಳಿ, ಬೆಳಕು ನೀರಿನ ಬಗ್ಗೆ ಸಂಶೊಧನೆ ನಡೆಯುತ್ತಿದೆ. ಕೆಪ್ಲರ್-438ಬಿ ಭೂಮಿಗಿಂತ ಶೇ. 40 ರಷ್ಟು ಹೆಚ್ಚು ಬೆಳಕನ್ನು ಪಡೆದುಕೊಳ್ಳುತ್ತಿದೆ ಎಂಬ ಅಂಶವನ್ನು ಪತ್ತೆಮಾಡಲಾಗಿದೆ ಎಂದು ಹಾವರ್ಡ್ ಸ್ಮಿತ್ ಸಾನಿಯನ್ ಖಗೋಳ ವಿಜ್ಞಾನಿ ಗಿಲೆರ್ವೊ ಟಾರ್ಸ್ ತಿಳಿಸಿದ್ದಾರೆ.

ನ್ಯೂಯಾರ್ಕ್, ಜ. 7: ನಮ್ಮ ಗ್ಯಾಲಕ್ಸಿ ಕ್ಷೀರ ಪಥದ ಮಧ್ಯದಲ್ಲಿ ಬೃಹತ್ ಗಾತ್ರದ ಕಪ್ಪು ರಂಧ್ರವೊಂದರ ಬಳಿ ಬೃಹತ್ ಬೆಂಕಿ ಜ್ವಾಲೆ ಇರುವುದನ್ನು ನಾಸಾದ 'ಚಂದ್ರ ಎಕ್ಸ್ ರೆ ಅಬ್ಸರ್ವೇಟರಿ' ಪತ್ತೆಹಚ್ಚಿದೆ. ನಾಸಾ ಈ ಕಪ್ಪು ರಂಧ್ರದ ಜ್ವಾಲೆಯನ್ನು ಎಸ್ ಜಿಆರ್-ಎ* ಎಂದು ಕರೆದಿದೆ. ಇದೊಂದು ಅನಿರೀಕ್ಷಿತ ಸಂಶೋಧನೆಯಾಗಿದೆ. ಜಿ-2 ಎಂದು ಕರೆಯಲ್ಪಡುವ ಅನಿಲ ಮೋಡ ಮತ್ತು ಬೃಹತ್ ಗಾತ್ರದ ಕಪ್ಪು ರಂಧ್ರದ ನಡುವೆ ಜ್ವಾಲೆ ಪತ್ತೆಯಾಗಿದ್ದು ಕುತೂಹಲ ಕೆರಳಿಸಿದೆ. ಒಂದು ವೇಳೆ ಜಿ-2 ದೂರ ಸರಿದಿದ್ದೇ ಆದರೆ ಕಪ್ಪು ರಂಧ್ರ ಮತ್ತು ಜ್ವಾಲೆಯ ನಿಖರ ಗಾತ್ರ ಗುರುತಿಸಬಹುದಾಗಿತ್ತು. ನಿಸರ್ಗದ ವೈಚಿತ್ರ್ಯಗಳೇ ಹೀಗಿರುತ್ತವೆ ಎಂದು ಮ್ಯಾಸಚೂಸೆಟ್ಸ್ ವಿವಿಯ ಸಂಶೋಧಕ ಡರೆಲ್ ಹಗಾರ್ಡ್ ತಿಳಿಸಿದ್ದಾರೆ. 2014 ರಲ್ಲಿ ಜಿ-2 ಅನಿಲ ಮೋಡಕ್ಕೆ ಕಪ್ಪು ರಂಧ್ರ ತುಂಬಾ ಹತ್ತಿರದಲ್ಲಿತ್ತು. ಆದರೆ ಇದರ ಸ್ಥಾನಪಲ್ಲಟದ ಬಗ್ಗೆ ನಿಖರವಾದ ಮಾಹಿತಿಗಳು ದೊರೆತಿಲ್ಲ, ಅನಿಲ ಮೋಡ ಮತ್ತು ಅದರ ಚಲನೆಯನ್ನು ವಿಶ್ಲೇಷಿಸಿ ಕಪ್ಪು ರಂಧ್ರದ ಬಳಿಯ ಜ್ವಾಲೆಯ ಗಾತ್ರ ಅಂದಾಜಿಸಲಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಗುರುತ್ವಾಕರ್ಷಣ ಶಕ್ತಿಯ ಪರಿಣಾಮ ಕಪ್ಪು ರಂಧ್ರದ ಬಳಿಯ ಜ್ವಾಲೆ ಮತ್ತು ಮೋಡ ಒಂದಕ್ಕೊಂದು ಹತ್ತಿರ ಬಂದಿದ್ದವು ಎಂದು ಒಂದು ಸಿದ್ಧಾಂತ ಹೇಳಿದರೆ, ಆಯಸ್ಕಾಂತೀಯ ಶಕ್ತಿಯೂ ಇವೆರಡು ಪರಸ್ಪರ ಸಂಧಿಸಲು ಕಾರಣವಾಗಿದೆ ಎಂದು ಮತ್ತೊಂದು ವಿಶ್ಲೇಷಣೆ ಹೇಳುತ್ತದೆ. ಆದರೆ ಈ ಬಗೆಯ ಆಯಸ್ಕಾಂತೀಯ ಅಲೆಗಳು ಸೂರ್ಯನಲ್ಲಿ ಮಾತ್ರ ಕಂಡುಬರುತ್ತವೆ. ಸೂರ್ಯನಿಗೆ ಕಪ್ಪುರಂಧ್ರವನ್ನು ಹೋಲಿಕೆ ಮಾಡಿ ಹೇಳಲು ಸಾಧ್ಯವಿಲ್ಲವಾದರೂ ಗಾತ್ರದಲ್ಲಿ ಸೂರ್ಯನನ್ನು ಮೀರಿಸುತ್ತದೆ. ನಮ್ಮ ಗ್ಯಾಲಕ್ಸಿಯಲ್ಲೇ ಇಷ್ಟು ದೊಡ್ಡ ಜ್ವಾಲೆ ಕಂಡುಬಂದಿರುವುದು ಇದೇ ಮೊದಲು, ಈ ಬಗ್ಗೆ ಇನ್ನು ಹೆಚ್ಚಿನ ವಿವರಗಳನ್ನು ಕಲೆಹಾಕಬೇಕಿದೆ ಎಂದು ಜರ್ಮನಿಯ ವಿಜ್ಞಾನಿ ಗೆರಿಬೆಲ್ ಪೊಂಟಿ ಹೇಳುತ್ತಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಿದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಕುರಿತು ದೇಶದ ಜನರು ಹೆಮ್ಮೆಪಡುತ್ತಿರುವ ಸಂದರ್ಭದಲ್ಲಿಯೇ ನಾಸಾ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಸುಮಾರು 1.7 ಲಕ್ಷ ಭಾರತೀಯರ ಹೆಸರಿನೊಂದಿಗೆ ಮಾನವ ರಹಿತ ಸಿಬ್ಬಂದಿ ಘಟಕವನ್ನು ಹೊತ್ತೊಯ್ದಿದ್ದ ಅಂತರಿಕ್ಷ ವಾಹನ 'ಓರಿಯನ್' ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಅಂತರಿಕ್ಷ ಕೇಂದ್ರಕ್ಕೆ ವಾಪಸ್ ಬಂದಿದೆ.