ವಾಲ್ಟರ್ ನಂದಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಲ್ಟರ್ ನಂದಳಿಕೆ
ವಾಲ್ಟರ್ ನಂದಳಿಕೆ
Born
ನಂದಳಿಕೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
Nationalityಭಾರತೀಯ
Years active೨೦೦೧ -
Titleಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ

ವಾಲ್ಟರ್ ಡಿಸೋಜಾ ನಂದಳಿಕೆ ಅವರು ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.[೧] ಡೈಜಿವರ್ಲ್ಡ್ ಕರಾವಳಿ ಕರ್ನಾಟಕದ ಮಂಗಳೂರು ಮೂಲದ ಒಂದು ಮಾಧ್ಯಮ ಕಂಪನಿಯಾಗಿದೆ.

ಆರಂಭಿಕ ಜೀವನ[ಬದಲಾಯಿಸಿ]

ವಾಲ್ಟರ್ ನಂದಳಿಕೆ (ಮೂಲ ಹೆಸರು: ವಾಲ್ಟರ್ ಡಿಸೋಜಾ) ಜನವರಿ 23, 1973 ರಂದು ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಜನಿಸಿದರು. ಅವರ ತಾಯಿ ಲಿಲ್ಲಿ ಮತ್ತು ತಂದೆ ಸೆಬಾಸ್ಟಿಯನ್. ವಾಲ್ಟರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಕಾಂ ಮುಗಿಸಿದ್ದಾರೆ. ನಂತರ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮುಗಿಸಿದರು.

ವೃತ್ತಿ[ಬದಲಾಯಿಸಿ]

ಅವರು Daijiworld.com (ಹಿಂದೆ daijidubai.com) ಅನ್ನು ಜನವರಿ 14, 2001 ರಂದು ಪ್ರಾರಂಭಿಸಿದರು ಮತ್ತು ಏಪ್ರಿಲ್ 2007 ರಲ್ಲಿ ಅದನ್ನು Daijiworld Media Pvt Ltd ಕಂಪನಿಯಾಗಿ ಪರಿವರ್ತಿಸಿದರು. ಅವರ ಸುದ್ದಿ ಜಾಲತಾಣವು ಕರಾವಳಿ ಕರ್ನಾಟಕ ಮಾತ್ರವಲ್ಲದೆ ಭಾರತ, ಮಧ್ಯಪ್ರಾಚ್ಯ ಮತ್ತು ಗಲ್ಫ್ ದೇಶಗಳಲ್ಲಿ ಜನಪ್ರಿಯತೆ ಗಳಿಸಿದೆ. ತಿಂಗಳಿಗೆ ಸುಮಾರು 1.2 ಮಿಲಿಯನ್ ಜನರು ಇವರ ಜಾಲತಾಣಕ್ಕೆ ಭೇಟಿ ನೀಡುತ್ತಾರೆ.

ವಾಲ್ಟರ್ ಅವರು ಕೊಂಕಣಿ ಮತ್ತು ಕನ್ನಡ ಪತ್ರಿಕೆ, ನಿಯತಕಾಲಿಕೆಗಳಿಗೆ ಕಥೆಗಳು ಮತ್ತು ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುವ ಮೂಲಕ ತಮ್ಮ ಪತ್ರಿಕೋದ್ಯಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಶಿರ್ವಾದ ಸೇಂಟ್ ಮೇರಿಸ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿ ಮುಗಿಸಿದ ನಂತರ ಉದ್ಯೋಗ ಅರಸಿ ದುಬೈಗೆ ತೆರಳಿದ್ದರು. ಪತ್ರಿಕೋದ್ಯಮವೇ ಇವರ ಬಾಲ್ಯದ ಕನಸು ಮತ್ತು ಒಂದು ಮಾಧ್ಯಮವನ್ನು ಸ್ಥಾಪಿಸುವ ಕನಸನ್ನು ಬಾಲ್ಯದಲ್ಲಿಯೇ ಕಂಡಿದ್ದರು. ಆದರೆ ಬಿಕಾಂ ಪದವಿ ಪಡೆದ ಅವರಿಗೆ ಆಗ ಕಂಪ್ಯೂಟರ್‌ಗಳ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ.

2000ನೇ ಇಸವಿಯ ಏಪ್ರಿಲ್ 1ರಂದು ‘ಡೈಜಿದುಬೈ ಡಾಟ್ ಕಾಮ್’ ವೆಬ್ ಸೈಟ್ ಆರಂಭಿಸಿರುವುದಾಗಿ ತಮ್ಮ ಗೆಳೆಯರಿಗೆ ಸಂದೇಶ ಕಳುಹಿಸಿದ್ದರು. ಇದು ಏಪ್ರಿಲ್ ಫೂಲ್ ತಮಾಷೆಯಾಗಿತ್ತು. ಆದರೆ ಅವನ ಸ್ನೇಹಿತರು ಅವನನ್ನು ಗಂಭೀರವಾಗಿ ಪರಿಗಣಿಸಿದ್ದರು. ಮರುದಿನ ತಮಗೆ ವೆಬ್ಸೈಟ್ ತೆರೆಳು ಸಾಧ್ಯವಾಗಲಿಲ್ಲ ಎಂದು ತಮ್ಮ ಸ್ನೇಹಿತರಿಗೆ ತಿಳಿಸಿದರು. ಆದರೆ, ನಂತರದ ದಿನಗಳಲ್ಲಿ ವಾಲ್ಟರ್ ನಿಜವಾಗಿಯೂ ಒಂದು ವೆಬ್‌ಸೈಟ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು.

ನಂತರ ಅವರು ಸ್ವಂತವಾಗಿ ಕಂಪ್ಯೂಟರ್ ಕಲಿಯಲು ಮುಂದಾದರು. ನಂತರ ಸುಮಾರು ಒಂದು ತಿಂಗಳ ಕಾಲ ಪತ್ರಿಕೋದ್ಯಮದ ಬಗ್ಗೆ ಹಾಗೂ ಇನ್ನಿತರ ಅಗತ್ಯ ಕೌಶಲ್ಯಗಳನ್ನು ಕಲಿತುಕೊಂಡರು. ಜನವರಿ 14, 2001 ರಂದು daijiworld.com (Daijiworld Media) (ಅಂದು daijidubai.com) ಅನ್ನು ಅಧಿಕೃತವಾಗಿ ಪ್ರಾರಂಭಿಸಿದಾಗ ಅವರ ಕಠಿಣ ಪರಿಶ್ರಮವು ಫಲ ನೀಡಿತು. ಇದು ಆರಂಭದಲ್ಲಿ ಕೇವಲ ಕೊಂಕಣಿ ಮಾತನಾಡುವ ಸಮುದಾಯದವರನ್ನು ತಲುಪುವ ಗುರಿ ಹೊಂದಿತ್ತು. ಆದರೆ ಕೆಲವೇ ವರ್ಷಗಳಲ್ಲಿ, ಡೈಜಿವರ್ಲ್ಡ್ ವೆಬ್‌ಸೈಟ್ ಯಾವುದೇ ಧರ್ಮ, ಜಾತಿ ಮತ್ತು ಲಿಂಗವನ್ನು ಲೆಕ್ಕಿಸದೆ ಪ್ರಪಂಚದಾದ್ಯಂತ ಹರಡಿರುವ ಒಂದು ಸುದ್ದಿ ಮಾಧ್ಯಮವಾಗಿ ಬೆಳೆದಿದೆ.

ಡೈಜಿವರ್ಲ್ಡ್ ವೆಬ್‌ಸೈಟ್ ಇಂದು 140 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತಿ ತಿಂಗಳು ಸುಮಾರು 1.2 ಮಿಲಿಯನ್ ಜನರನ್ನು ತಲುಪುತ್ತಿದೆ. ಕರ್ನಾಟಕದ ಕರಾವಳಿ ನಗರ-ಪಟ್ಟಣಗಳ ಸುದ್ದಿಗಳು ಮಾತ್ರವಲ್ಲದೆ ಮುಂಬೈ, ಗೋವಾ, ಬೆಂಗಳೂರು ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿಗಳನ್ನೂ ಇದರಲ್ಲಿ ಬಿತ್ತರಿಸಲಾಗುತ್ತದೆ.

ಸಮಾಜ ಸೇವೆ[ಬದಲಾಯಿಸಿ]

Daijiworld.com ಪ್ರಪಂಚದ ವಿವಿಧ ಭಾಗಗಳಲ್ಲಿ ಹರಡಿರುವ ಕರಾವಳಿ ಕರ್ನಾಟಕದ ಜನರ ನಡುವೀನ ಸೇತುವೆಯಾಗಿ ಬೆಳೆದಿದೆ. ಪರ ಊರಿನಲ್ಲಿ ನೆಲೆಸಿರುವ, ತಮ್ಮ ಮನೆಯವರೊಂದಿಗೆ ಸಂಪರ್ಕವನ್ನು ಕಳೆದುಕೊಂಡ ನೂರಾರು ಜನರನ್ನು daijiworld ಮೂಲಕ ಮತ್ತೆ ಒಂದುಗೂಡಿಸಲಾಗಿದೆ ಮತ್ತು ಸೇರಿಸಲಾಗಿದೆ. 1000 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ವೈದ್ಯಕೀಯ, ಶಿಕ್ಷಣ ಅಥವಾ ಇತರ ಅಗತ್ಯಗಳಿಗಾಗಿ ಹಣಕಾಸಿನ ನೆರವು ಪಡೆದಿವೆ. ಬಹುತೇಕ ಸಹಾಯಧನವನ್ನು ಓದುಗರಿಂದ ಒಗ್ಗೂಡಿಸಿ ಕೊಟ್ಟಿರುವುದು ವಿಶೇಷ. ಅಂದಾಜು ೨೨ ಕೋಟಿ ರೂಪಾಯಿವರೆಗಿನ ಸಹಾಯಧನವನ್ನು daijiworld ಸಂಸ್ಥೆ ಮಧ್ಯಸ್ಥಿಕೆಯಲ್ಲಿ ಅಗತ್ಯ ಇರುವವರಿಗೆ ನೀಡಲಾಗಿದೆ.

ಡೈಜಿವರ್ಲ್ಡ್ ಗ್ರೂಪ್ ಆಫ್ ಮೀಡಿಯಾ[ಬದಲಾಯಿಸಿ]

Daijiworld.com ನ ಯಶಸ್ಸಿನ ನಂತರ, ವಾಲ್ಟರ್ ಏಕಮಾಲೀಕತ್ವದ ಸಂಸ್ಥೆಯನ್ನು ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಪರಿವರ್ತಿಸಿದ್ದಾರೆ[೨] ಮತ್ತು ಸಮಾನ ಮನಸ್ಕ ಸ್ನೇಹಿತರು ಹೊಸ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

  • 2007 ರಲ್ಲಿ ವಾಲ್ಟರ್ ನಂದಳಿಕೆ ಅವರು ಮಂಗಳೂರಿನಲ್ಲಿ ಇಂಟರ್ನೆಟ್ ಟಿವಿ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಮಂಗಳೂರಿನ ಮೊಟ್ಟಮೊದಲ ಇಂಟರ್ನೆಟ್ ಟೆಲಿವಿಷನ್ 'ಟಿವಿ ಡೈಜಿವರ್ಲ್ಡ್'[೩] ಅನ್ನು ಪ್ರಾರಂಭಿಸಿದರು. ಮಂಗಳೂರು, ದುಬೈ, ದೋಹಾ, ಮುಂಬೈ, ಬೆಂಗಳೂರು ಮತ್ತು ಪ್ರಪಂಚದ ಇತರ ಭಾಗಗಳಿಂದ ಹಲವಾರು ಪ್ರಮುಖ ಸಮುದಾಯ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಇದರಲ್ಲಿ ವೆಬ್‌ಕಾಸ್ಟ್ ಮಾಡಲಾಗಿದೆ.
  • Daijiworld 24X7 ಟಿವಿ ಚಾನೆಲ್[೪] 2014ರ ಮೇ 9 ರಂದು ಆರಂಭಿಸಲಾಯಿತು. TV ಚಾನಲ್ ಅನ್ನು ಕರಾವಳಿ ಕರ್ನಾಟಕದ ಪ್ರಮುಖ ಸ್ಥಳೀಯ ಚಾನಲ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಕನ್ನಡ, ತುಳು, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಸೇವೆ ಸಲ್ಲಿಸುವ ಕರ್ನಾಟಕದ ಮೊದಲ ಬಹುಭಾಷಾ ಚಾನೆಲ್ ಎಂದು ಪರಿಗಣಿಸಲಾಗಿದೆ.
  • Daijiworld Audio Visual Pvt Ltd[೫], ಸಂಗೀತ ಮತ್ತು ಚಲನಚಿತ್ರ ಡಬ್ಬಿಂಗ್‌ಗಳಿಗಾಗಿ ಸುಧಾರಿತ ರೆಕಾರ್ಡಿಂಗ್ ಸೌಲಭ್ಯಗಳನ್ನು ಹೊಂದಿರುವ ಈ ಪ್ರದೇಶದ ಮೊದಲ ಅತ್ಯಾಧುನಿಕ ಆಡಿಯೊ ರೆಕಾರ್ಡಿಂಗ್ ಸ್ಟುಡಿಯೋ.
  • Radio Daijiworld, ಅಪ್ಲಿಕೇಶನ್ ಆಧಾರಿತ ಕೊಂಕಣಿ - ತುಳು ಸಂಗೀತ ರೇಡಿಯೋ ಸ್ಟೇಷನ್ ಮೇ 19, 2017 ರಂದು ಪ್ರಾರಂಭವಾಯಿತು

ಪ್ರಸ್ತುತ Daijiworld ಮಂಗಳೂರು, ಉಡುಪಿ, ಮುಂಬೈ, ಬೆಂಗಳೂರು ಮತ್ತು ದುಬೈನಲ್ಲಿ ತನ್ನದೇ ಆದ ಕಚೇರಿಗಳನ್ನು ಅಥವಾ ಪ್ರತಿನಿಧಿ / ಫ್ರಾಂಚೈಸ್ ಕಚೇರಿಗಳನ್ನು ಹೊಂದಿದೆ.

ಸಾಂಕ್ರಾಮಿಕ ಸಮಯದಲ್ಲಿ[ಬದಲಾಯಿಸಿ]

ಕರೋನವೈರಸ್ ಸಾಂಕ್ರಾಮಿಕದ ಭೀತಿಯಿಂದ ದೇಶಾದ್ಯಂತ ಕಟ್ಟುನಿಟ್ಟಾದ ಲಾಕ್‌ಡೌನ್ ಅನ್ನು ಜಾರಿಗೊಳಿಸಲಾಯಿತು. ಈ ಅವಧಿಯಲ್ಲಿ, ವಾಲ್ಟರ್ ನಂದಳಿಕೆ ಅವರ ನೇತೃತ್ವದಲ್ಲಿ, ಡೈಜಿವರ್ಲ್ಡ್ ಟಿವಿ ಅವಿಭಜಿತ ಕರಾವಳಿ ಜಿಲ್ಲೆಗಳಾದ್ಯಂತ 6,000 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ, ಅಗತ್ಯವಿರುವ ಜನರನ್ನು ತಲುಪುವ 'ನಾವು ನಿಮ್ಮೊಂದಿಗೆ[೬]' (ನಿಮ್ಮೊಂದಿಗೆ ನಾವಿದ್ದೇವೆ) ಅಭಿಯಾನವನ್ನು ಪ್ರಾರಂಭಿಸಿತು. ಇದಲ್ಲದೆ, ಭಾರತ ಮತ್ತು ವಿದೇಶಗಳಿಂದ ವೈದ್ಯಕೀಯ ಮತ್ತು ಆರ್ಥಿಕ ಸಹಾಯವನ್ನು ಸಹ ನೀಡಲಾಯಿತು.

ಈ ನಡುವೆ, ಕೊರೋನಾ ಭೀತಿ, ಮಾನಸಿಕ ಖಿನ್ನತೆ, ಉದ್ವೇಗದಿಂದ ಪ್ರೇಕ್ಷಕರನ್ನು ಮುಕ್ತವಾಗಿಡಲು ವಾಲ್ಟರ್, ತಮ್ಮ ಟಿವಿಯಲ್ಲಿ ಧನಾತ್ಮಕ ಸಂದೇಶಗಳೊಂದಿಗೆ ಕೆಲವು ಪ್ರಮುಖ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. 'ಕರೋನಾ ಗೆಲ್ಲೋಣ[೭]' (ಕರೋನಾವನ್ನು ಗೆಲ್ಲೋಣ) ಕಾರ್ಯಕ್ರಮ ಭಾರೀ ಹಿಟ್ ಆಯಿತು.

ಅಲ್ಲದೆ, ತುಳು ಸಿನಿ ನಟ ಅರವಿಂದ ಬೋಳಾರ್ ಅವರೊಂದಿಗೆ ವಾಲ್ಟರ್ ಅವರು ನಡೆಸಿಕೊಟ್ಟ 'ಪ್ರೈವೇಟ್ ಚಾಲೆಂಜ್[೮]' ಕಾಮಿಡಿ ಟಾಕ್ ಶೋ ಹೆಚ್ಚಿನ ಜನಪ್ರಿಯತೆ ಗಳಿಸಿತು. ಕೆಲವೇ ಸಂಚಿಕೆಗಳಲ್ಲಿ ಇದು ಮನೆಮಾತಾಯಿತು.

ಪ್ರಶಸ್ತಿಗಳು ಮತ್ತು ಮನ್ನಣೆಗಳು[ಬದಲಾಯಿಸಿ]

ವಾಲ್ಟರ್ ನಂದಳಿಕೆ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ 85 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೆಲವು ಪ್ರಮುಖ ಪ್ರಶಸ್ತಿಗಳೆಂದರೆ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2007[೯], IPP ಸ್ಟಾರ್ ಆಫ್ ಇಯರ್ - 2009 ಟೋಸ್ಟ್‌ಮಾಸ್ಟರ್ಸ್ ಕ್ಲಬ್, ಹೂಸ್ಟನ್, USA, ರಚನಾ ಉದ್ಯಮಿ-2010[೧೦], ಸಂದೇಶ ಮಾಧ್ಯಮ ಶಿಕ್ಷಣ ಪ್ರಶಸ್ತಿ-2010[೧೧], ಸಂಪಾದಕರ ಪ್ರಶಸ್ತಿ 2011[೧೨], CCC ಮುಂಬೈನಿಂದ ಯುವ ಉದ್ಯಮಿ ಪ್ರಶಸ್ತಿ, FKCA ಬೆಂಗಳೂರಿನಿಂದ ವರ್ಷದ ವಾಣಿಜ್ಯೋದ್ಯಮಿ ಪ್ರಶಸ್ತಿ, ಮಯೂರ ಪ್ರಶಸ್ತಿ 2012 ಇತ್ಯಾದಿ.[೧೩][೧೪]

ಅವರು ನೂರಾರು ಸಣ್ಣ ಕಥೆಗಳನ್ನು, ಪ್ರಚಲಿತ ವಿದ್ಯಮಾನಗಳ ಕುರಿತಾದ ಲೇಖನಗಳನ್ನು ಬರೆದಿದ್ದಾರೆ ಮತ್ತು "ಸೈತಾನಾಚ್ಯಾ ಸಾವ್ಲೆಂತ್" ಮತ್ತು "ಎವ್ಚರಾಚಿ ದೇಸ್ವತ್" ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಥೆಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅದಲ್ಲದೆ ಅವರು ಭಾರತ ಮತ್ತು ಗಲ್ಫ್ ದೇಶಗಳಲ್ಲಿ 100 ಕ್ಕೂ ಹೆಚ್ಚು ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2023-03-13. Retrieved 2022-01-28.
  2. https://en.wikipedia.org/wiki/Daijiworld_Media
  3. "ಆರ್ಕೈವ್ ನಕಲು". Archived from the original on 2023-03-13. Retrieved 2022-01-28.
  4. https://web.archive.org/web/20110612151922/http://www.hindu.com/mp/2006/01/14/stories/2006011402840100.htm
  5. https://www.daijiworld.com/kannada/default
  6. http://studio.daijiworld.com/studio.aspx
  7. https://www.daijiworld.com/news/newsDisplay?newsID=695994
  8. https://www.daijiworld.com/news/newsDisplay.aspx?newsID=772318
  9. https://www.youtube.com/watch?v=x6nen8LkT5E
  10. https://www.daijiworld.com/news/newsDisplay.aspx?newsID=39949
  11. https://www.daijiworld.com/news/newsDisplay?newsID=91568
  12. https://www.daijiworld.com/news/newsDisplay.aspx?newsID=71365
  13. https://www.daijiworld.com/news/newsDisplay.aspx?newsID=71365
  14. https://www.daijiworld.com/news/newsDisplay.aspx?newsID=117420