ವಾಯೇಜ ನೌಕೆಗಳು
ಭೂಕಕ್ಷೆಯ 'ಹೊರವಲಯದಲ್ಲಿರುವ ' ಗ್ರಹಗಳಾದ ಗುರು, ಶನಿ, ಯುರೇನಸ್ ಮತ್ತು ನಪ್ಚೂನ್ ಗಳನ್ನು ಹಾಗು ಅವುಗಳ ದೊಡ್ಡ ಪರಿವಾರವನ್ನು ಸ್ವಚಾಲಿತ ಅಂತರಿಕ್ಷ ನೌಕೆಗಳ ನೆರವಿನಿಂದ ಅನ್ವೇಷಿಸಲಾಯಿತು. ಅಮೇರಿಕಾದ ಈ ಕಾರ್ಯಕ್ರಮಕ್ಕೆ ಸೇರಿದ ವಾಯೇಜರ್ ೧ ಮತ್ತು ೨ ರೋಬಾಟ್ ನೌಕೆಗಳು . ಅದರಲ್ಲೂ ವಾಯೇಜರ್ ೨ ನಡೆಸಿದ ಹೊರವಲಯದ ಗ್ರಹಗಳ ಅನ್ವೇಷಣೆ ಅದ್ಭುತವಾದದ್ದು . ಕೇವಲ ೮೨೫ ಕಿ.ಗ್ರಾ. ತೂಕದ ಈಎರಡು ನೌಕೆಗಳು ವಿವಿಧ ದಿಕ್ಕುಗಳಲ್ಲಿ ಕೈ ಕಾಲುಗಳನ್ನು ಚಾಚಿಕೊಂಡ ದೊಡ್ಡ ತಟ್ಟೆಯಂತೆ ಮೊದಲ ನೋಟಕ್ಕೆ ಕಾಣುತ್ತವೆ . ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ದೀರ್ಘ ಪಯಣ ಕೈಗೊಂಡ ಈ ನೌಕೆಗಳ ಕಾರ್ಯನಿರ್ವಾಹಣೆಗೆ ಅಗತ್ಯವಾದ ವಿದ್ಯುತ್ತನ್ನು ಒದಗಿಸಲು ಅವುಗಳಲ್ಲಿ ನ್ಯುಕ್ಲಿಯರ್ ವಿದ್ಯುತ್ತ್ ಕೋಶಗಳನ್ನು ಅಳವಡಿಸಲಾಗಿತ್ತು . ಈ ನೌಕೆಗಳ ಕ್ಯಾಮರಗಳು ತೆಗೆದ ಚಿತ್ರಗಳು ಹಾಗು ಅವುಗಳ ವೈಜ್ಞಾನಿಕ ಉಪಕರಣಗಳು ಸಂಗ್ರಹಿಸಿದ ಮಾಹಿತಿಗಳನ್ನು , ಕಟ್ಟೆ ಆಕಾರದ ಆಂಟನಗಳನ್ನು ದೂರದ ಭೂಮಿಗೆ ವರಧಿಮಾಡುತ್ತಿದ್ದವು . ಕ್ಷುದ್ರಗ್ರಹಗಳ ಪಟ್ಟಿಯ ಒಳ ವಲಯದಲ್ಲಿರುವ ಶುಕ್ರ, ಬುಧ ಇಲ್ಲವೆ ಮಂಗಳ ಗ್ರಹಗಳ ದೂರಕ್ಕೆ ಹೋಲಿಸಿದಲ್ಲಿ ಹೊರವಲಯದಲ್ಲಿ ಇರುವ ಗುರು ,ಶನಿ , ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳು ನಮ್ಮಿಂದ ಬಹು ದೂರದಲ್ಲಿದೆ . ಅವುಗಳ ಪೈಕಿ ಗುರು ಮತ್ತು ಶನಿ ಬರಿವಗಣ್ಣಿಗೆ ಬೆಳಕಿನ ಚುಕ್ಕಿಗಳಾಗಿ ಕಾಣುತ್ತವೆ . ಯುರೇನಸ್ ಬರಿಗಣ್ಣಿಗೆ ಕಾಣುವುದಿಲ್ಲ . ಇನ್ನು ಅದರ ಬದಿಗಿರುವ ನೆಪ್ಚೂನ್ ಬರಿಗಣ್ಣಿಗೆ ಕಾಣುವ ಪ್ರಶ್ನೆಯೇ ಇಲ್ಲ . ಈ ದೂರದ ದೈತ್ಯ ಗ್ರಹಗಳ ಹಾಗು ಅವುಗಳ ದೊಡ್ಡ ಉಪಗ್ರಹಗಳ ಪರಿವಾರವನ್ನು ವಿವರವಾಗಿ ಪರಿಚಯ ಮಾಡಿಕೊಳ್ಳಲು ವಾಯೇಜರ್ ೨ ನೌಕೆಗಳನ್ನು ೧೯೭೭ ರ ಆಗಸ್ಟ್ , ಸೆಪ್ಟಂಬರ್ಗಳಲ್ಲಿ ಅಮೇರಿಕಾದಿಂದ ಉಡಾಯಿಸಲಾಯಿತು . ಮುಂದಿನ ಎರಡು ವರ್ಷಗಳಲ್ಲಿ ಈಎರಡು ನೌಕೆಗಳೂ ಮಂಗಳ ಹಾಗೂ ಗುರು ಗ್ರಹಗಳ ನಡುವಿನ ಕ್ಷುದ್ರ ಗ್ರಹಗಳ ಪಟ್ಟಿಯನ್ನು ದಾಟಿದವು . ಆ ಪೈಕಿ ವಾಯೇಜರ್ ೧ ೧೯೭೯ರ ಮಾರ್ಚ್ ನಲ್ಲಿ ಗುರು ಗ್ರಹವನ್ನು ಸಮೀಪಿಸಿತು . ಅನಂತರ ಅದು ಗುರು ಗ್ರಹದ ಸ್ವರೂಪವನ್ನು ಕುರಿತ ಸ್ಪಷ್ಡ ವರ್ಣ ಚಿತ್ರಗಳನ್ನು ಭೂಮಿಗೆ ರವಾನಿಸುವುದರೊಂದಿಗೇ ಆ ದೈತ್ಯ ಗ್ರಹಕ್ಕೆ ತೆಳುವಾದ ಉಂಗುರವೊಂದು ಇರುವುದನ್ನು ಗುರುತಿಸಿತು .