ವಿಷಯಕ್ಕೆ ಹೋಗು

ವಾತಾಯನ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾತಾಯನ ವ್ಯವಸ್ಥೆ ಎಂದರೆ ಒಂದು ಸ್ಥಳದೊಳಗೆ ಹೊರಗಿನ ಗಾಳಿಯನ್ನು ಉದ್ದೇಶಪೂರ್ವಕವಾಗಿ ಪ್ರವೇಶ ಮಾಡಿಸುವ ವ್ಯವಸ್ಥೆ. ಇದನ್ನು ಮುಖ್ಯವಾಗಿ ಒಳಾಂಗಣ ಮಾಲಿನ್ಯಕಾರಕಗಳನ್ನು ತನೂಕರಿಸಿ ಸ್ಥಳಾಂತರ ಮಾಡುವ ಮೂಲಕ ಒಳಗಿನ ಹವಾ ಗುಣಮಟ್ಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ; ಇದನ್ನು ಉಷ್ಣ ಸೌಖ್ಯ ಅಥವಾ ನಿರಾರ್ದ್ರೀಕರಣದ ಉದ್ದೇಶಗಳಿಗಾಗಿಯೂ ಬಳಸಬಹುದು.

ಹೊರಗಿನ ಗಾಳಿಯ ಉದ್ದೇಶಪೂರ್ವಕ ಪ್ರವೇಶ ಮಾಡಿಸುವಿಕೆಯನ್ನು ಯಾಂತ್ರಿಕ ವಾತಾಯನ ವ್ಯವಸ್ಥೆ ಅಥವಾ ನೈಸರ್ಗಿಕ ವಾತಾಯನ ವ್ಯವಸ್ಥೆ ಎಂದು ವರ್ಗೀಕರಿಸಬಹುದು. ಯಾಂತ್ರಿಕ ವಾತಾಯನ ವ್ಯವಸ್ಥೆಯು ಕಟ್ಟಡದೊಳಗೆ ಹೊರಗಿನ ಗಾಳಿಯ ಹರಿವನ್ನು ತಳ್ಳಲು ಫ಼್ಯಾನುಗಳನ್ನು ಬಳಸುತ್ತದೆ. ನೈಸರ್ಗಿಕ ವಾತಾಯನ ವ್ಯವಸ್ಥೆ ಎಂದರೆ ಕಟ್ಟಡದೊಳಗೆ ಯೋಜಿತ ಮಾರ್ಗಗಳ (ಉದಾಹರಣೆಗೆ ಪಟ್ಟಿವರಿಸೆಗಳು, ಬಾಗಿಲುಗಳು ಮತ್ತು ಕಿಟಕಿಗಳು) ಮೂಲಕ ಹೊರಗಿನ ಗಾಳಿಯ ಉದ್ದೇಶಪೂರ್ವಕ ನಿಷ್ಕ್ರಿಯ ಹರಿವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]