ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
ಗೋಚರ
ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ | |
---|---|
ಸಾರ್ವಜನಿಕ ಆಸ್ಪತ್ರೆ | |
Geography | |
ಸ್ಥಳ | ಕೆ, ಆರ್ ರೋಡ್, ಬೆಂಗಳೂರು, India |
Services | |
ತುರ್ತು ವಿಭಾಗ | Yes |
History | |
ಸ್ಥಾಪನೆ | 1935 |
Links | |
ಜಾಲತಾಣ | www.bmcri.org/vanivilas_hosp.html |
ಪಟ್ಟಿಗಳು | Hospitals in India |
ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ವಾಣಿ ವಿಲಾಸ ಆಸ್ಪತ್ರೆ) ಕರ್ನಾಟಕದ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯಾಗಿದೆ. ಇದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಜೋಡಿಸಲಾಗಿದೆ.[೧]
ಹಿನ್ನಲೆ
[ಬದಲಾಯಿಸಿ]ಮಾರ್ಚ್ 8, 1935ರಂದು ಈ ಆಸ್ಪತ್ರೆ ಪ್ರಾರಂಭವಾಯಿತು. ಇದನ್ನು ಶ್ರೀ ಕೃಷ್ಣರಾಜ ಒಡೆಯರ್ ಉದ್ಘಾಟಿಸಿದರು. ಅವರ ತಾಯಿಯ ಹೆಸರನ್ನು ಈ ಆಸ್ಪತ್ರೆಗೆ ಇಡಲಾಗಿದೆ. ಪ್ರಾರಂಭದಲ್ಲಿ ಸ್ತ್ರೀಯರಿಗೆ 150 ಮತ್ತು ಮಕ್ಕಳಿಗೆ 100 ಹಾಸಿಗೆಗಳ ಸೌಲಭ್ಯವಿತ್ತು. 2017ರಲ್ಲಿ ಸ್ತ್ರೀಯರಿಗೆ 400, ಕುಟುಂಬ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ 20 ಮತ್ತು ಮಕ್ಕಳಿಗೆ 80 ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ರೋಗಗಳಿಗೆ 36 ಹಾಸಿಗೆಗಳು ಲಭ್ಯವಿದೆ.
ಘಟನೆಗಳು
[ಬದಲಾಯಿಸಿ]- 1968ರಲ್ಲಿ ಇದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಬೋಧಕ ಆಸ್ಪತ್ರೆಯಾಯಿತು.
- 2000ರಲ್ಲಿ ತಾಯಿಯಿಂದ ಮಗುವಿಗೆ ಹರಡುವ ಎಚ್‌ಐವಿ ಸೋಂಕಿನ ಪ್ರತಿಬಂಧಕ್ಕೆ ಚಿಕಿತ್ಸೆ ನೀಡುವ ಕಾರ್ಯ ಹಾಗೂ ಅದರ ಪ್ರಭಾವವನ್ನು ಅಭ್ಯಸಿಸುವ ಸಂಶೋಧನೆ ಕೇಂದ್ರ
- ವೈದ್ಯರಿಗೆ ಮತ್ತು ವೈದ್ಯೇತರ ಸಿಬ್ಬಂದಿಗೆ ತರಬೇತಿ ಕೇಂದ್ರ.
ಉಲ್ಲೇಖಗಳು
[ಬದಲಾಯಿಸಿ]- ↑ "ವಾಣಿ ವಿಲಾಸ ಆಸ್ಪತ್ರೆ". m.vijaykarnataka.com. Retrieved 3 October 2017.