ವಾಣಿಜ್ಯೋದ್ಯಮಿ ರಮೇಶ್ ಬಾಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಮೇಶ್ ಬಾಬು

ರಮೇಶ್ ಬಾಬು ಬೆಂಗಳೂರು ಮೂಲದ ಕ್ಷೌರಿಕ ಮತ್ತು ಉದ್ಯಮಿ. ಇವರು ಕಾರು ಬಾಡಿಗೆ, ಹೇರ್ ಕಟಿಂಗ್ ಮತ್ತು ಸ್ಟೈಲಿಂಗ್ ವ್ಯವಹಾರವನ್ನು ಹೊಂದಿದ್ದಾರೆ. ಅವರು ರೋಲ್ಸ್ ರಾಯ್ಸ್, ಬಿಎಮ್‌ಡಬ್ಲ್ಯೂ, ಮರ್ಸಿಡಿಸ್ ಬೆಂಜ್ ಮತ್ತು ಟೊಯಟೊ ಒಳಗೊಂಡಿರುವ ೬೭ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ೧೯೭೯ರಲ್ಲಿ ಅವರು ಏಳನೇ ವಯಸ್ಸಿನಲ್ಲಿ ಇರುವಾಗ ಅವರ ತಂದೆಯನ್ನು ಕಳೆದುಕೊಂಡರು.[೧] ಅವರ ತಂದೆ ಪಿ. ಗೋಪಾಲ್ ಬೆಂಗಳೂರಿನಲ್ಲಿ ಚೌರ ಮಾಡುತ್ತಿದ್ದರು.[೨] ಅವರ ತಂದೆ, ಹೆಂಡತಿ ಹಾಗೂ ಮೂರು ಜನ ಮಕ್ಕಳನ್ನು ಆಗಲಿದರು ಹಾಗೂ ಯಾವುದೇ ಹಣ ಕಾಸಿನ ವ್ಯವಸ್ಥೆಯೂ ಇವರಿಗೆ ಇರಲಿಲ್ಲ . ಅವರು ಬಿಟ್ಟು ಹೋದ ಆಸ್ತಿ ಎಂದರೆ ಬ್ರಿಗೇಡ್ ರೋಡಿನಲ್ಲಿ ಇರುವಂತಹ ಒಂದು ಪುಟ್ಟ ಚೌರದ ಅಂಗಡಿ.

ಇಳಿ ವಯಸ್ಸಿನ ಜೀವನ[ಬದಲಾಯಿಸಿ]

ಕ್ಷೌರದ ಅಂಗಡಿಯನ್ನು ಅವರ ತಾಯಿ ನಡೆಸಲು ಆಗದೆ ಅದನ್ನು ದಿನಕ್ಕೆ ಐದು ರೂಪಾಯಿಗಳಂತೆ ಬಾಡಿಗೆಗೆ ಕೊಟ್ಟರು. ರಮೇಶ್‌ರವರಿಗೆ ಒಂದು ತಮ್ಮ ಹಾಗೂ ತಂಗಿ ಇದ್ದರು. ಅವರು ಒಪ್ಪತ್ತು ಊಟದಲ್ಲಿ ಬೆಳೆದರು.[೩]ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಹೆಚ್ಚಿನ ಹಣ್ಣಕ್ಕಾಗಿ ಅವರ ಜೀವನ ಉಪಯೋಗಕ್ಕಾಗಿ ಬೆಳಗ್ಗೆ ಪೇಪರ್, ಹಾಲು ವಿತರಣೆ ಮಾಡುತ್ತಿದ್ದರು.[೪] ಹೀಗೆ ಅವರ ಕುಟುಂಬವನ್ನು ಬೆಂಬಲಿಸಿಕೊಂಡು ವಿಧ್ಯಾಭ್ಯಾಸವನ್ನು ಮುಂದುವರೆಸಿ ಅವರ ಪ್ರೌಢ ಶಿಕ್ಷಣವನ್ನು ಮುಗಿಸಿದರು.

ಜೀವನದ ತಿರುವು[ಬದಲಾಯಿಸಿ]

ಪ್ರೌಢ ಶಾಲೆಯನ್ನು ಮುಗಿಸಿದ ನಂತರ ಅವರು ಮುಂದಿನ ವಿದ್ಯಾಭ್ಯಾಸವನ್ನು ನಡೆಸಬೇಕೋ ಅಥವಾ ದುಡಿಯಲು ಹೋಗಬೇಕೋ ಎನ್ನುವ ಗೊಂದಲ ನಿರ್ಧಾರದಲ್ಲಿದ್ದರು. ಆ ವೇಳೆಯಲ್ಲಿ ಅವರ ತಂದೆಯ ಕ್ಷೌರದ ಅಂಗಡಿ ಬಾಡಿಗೆಯಲ್ಲಿ ನಡೆಯುತಿತ್ತು. ೧೯೮೯ ರಲ್ಲಿ ಅವರು ತಮ್ಮ ಕುಟುಂಬವನ್ನು ನಿಭಾಯಿಸಲು ತಮ್ಮ ತಂದೆಯ ಕ್ಷೌರದ ಅಂಗಡಿಯನ್ನು ತಾವೇ ನಡೆಸಲು ನಿರ್ಧರಿಸಿದರು. ಅವರ ಮಾವನವರಿಂದ "ಇನ್ನರ್ ಸ್ಪೇಸ್" ಎಂಬ ಕ್ಷೌರದ ಅಂಗಡಿಯಲ್ಲಿ ಕೆಲಸವನ್ನು ಪ್ರಾರಂಭಿಸಿದ್ದರು. ಯಾವುದೇ ಒಂದು ಲಾಭದ ಆಪೇಕ್ಷೆಯಿಲ್ಲದೆ ತಮ್ಮ ಗುರಿಯ ಕಡೆಗೆ ನಡೆದರು. ತಮ್ಮ ತಾಯಿಯ ಪ್ರೇರಣೆಯಿಂದ ಎಲೆಕ್ಟ್ರಾನಿಕ್ ಡಿಪ್ಲೊಮಾ ಪದವಿಯನ್ನು ಮುಗಿಸಿದರು.

ವ್ಯವಹಾರದ ಪ್ರಗತಿ[ಬದಲಾಯಿಸಿ]

ಇವರು ಬೆಳಗಿನ ಜಾವದಲ್ಲಿ ಅಂಗಡಿಯನ್ನು ತೆರೆದು ಹತ್ತು ಗಂಟೆಯವರೆಗೂ ಕೆಲಸ ಮಾಡಿ ನಂತರ ಕಾಲೇಜಿಗೆ ಹೋಗುತ್ತಿದ್ದರು. ಸಂಜೆಯ ವೇಳೆ ಕಾಲೇಜಿನಿಂದ ಹಿಂತಿರುಗಿ ಅಂಗಡಿಯನ್ನು ಮಧ್ಯರಾತ್ರಿಯವರೆಗೂ ನಡೆಸುತ್ತಿದ್ದರು. ದಿನಕ್ಕೆ ಹದಿನಾರು ಗಂಟೆಗಳ ಕಾಲ ಕೆಲಸದಲ್ಲಿ ತೊಡಗಿದ್ದರು. ಕಾಯಕವೇ ಕೈಲಾಸವೆಂದು ನಂಬಿದ ರಮೇಶವರು ಕೂದಲು ಕತ್ತರಿಸುವ ಹಾಗು ವಿನ್ಯಾಸದಲ್ಲಿ ಪರಿಣಿತರಾಗಿದ್ದರು. ಅವರು ಸೈನಿಕರಿಗೆ, ರಾಜಕಾರಣಿಗಳಿಗೆ, ಪೊಲೀಸರಿಗೆ ಹಾಗು ಸಿನೆಮಾ ನಟ ನಟಿಯರಿಗೆ ಕೂದಲು ವಿನ್ಯಾಸವನ್ನು ಮಾಡುತ್ತಿದ್ದರು.

ಮೊದಲ ಕಾರು[ಬದಲಾಯಿಸಿ]

ರಮೇಶ್ ರವರಿಗೆ ಹೊಸ ಕಾರನ್ನು ಖರಿದಿಸುವ ಕನಸು ಮತ್ತು ಆಸೆ ಇತ್ತು. ಅವರ ಕೆಲಸ ಹಾಗು ಆಸೆಯಂತೆ ಮಾರುತಿ ಓಮ್ನಿ ಕಾರನ್ನು ತಮ್ಮ ಉಳಿತಾಯದ ಹಣದಿಂದ ೧೯೩೩ ರಲ್ಲಿ ಕರಿದಿಸಿದರು.[೫][೬] ಕಾರಿನ ಸಾಲವನ್ನು ತೀರಿಸಲು ತಾತನವರು ಅವರ ಮನೆಯನ್ನು ಅಡವಿಟ್ಟರು. ಅವರ ತಾಯಿ ಇಂಟೆಲ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಇದ್ದ ನಂದಿನಿ ಎಂಬ ಮಹಿಳೆಯ ಸಲಹೆಯಂತೆ, ಅವರ ಮಾರುತಿ ವ್ಯಾನ್ ಅನ್ನು ಬಾಡಿಗೆಗೆ ನೀಡಿದರು.ಆ ಕಾರನ್ನು ಬಾಡಿಗೆಗೆ ಪಡೆದ ಮೊದಲ ಕಂಪನಿ ಇಂಟೆಲ್ ಕಾರ್ಪೊರೇಷನ್. ರಮೇಶ್ ಬಾಬು ಬಾಡಿಗೆಗೆ ಆರಂಭಿಸಿದರು. ಹೀಗಾಗಿಯೇ ಅವರು ಕಾರು ಬಾಡಿಗೆ ವ್ಯಾಪಾರಕ್ಕೆ ಬಂದರು. ೨೦೦೪ ರ ಹೊತ್ತಿಗೆ, ಅವರು ಫ್ಲೀಟ್‌ಗೆ ಹೆಚ್ಚಿನ ಕಾರುಗಳನ್ನು ಸೇರಿಸಲು ಪ್ರಾರಂಭಿಸಿದರು ಮತ್ತು ಆರು ಕಾರುಗಳು ಒಂದೇ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದವು. ಅವರು ನಿಧಾನವಾಗಿ ಆದರೆ ಸ್ಥಿರವಾಗಿ ಗಣನೀಯ ಗ್ರಾಹಕರ ನೆಲೆಯನ್ನು ಒಟ್ಟುಗೂಡಿಸಿದಂತೆ, ಕ್ರಮೇಣ, ಕಾರು ಬಾಡಿಗೆ ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮದಿಂದ ಗ್ರಾಹಕರನ್ನು ಸೆಳೆಯಿತು. ೧೯೯೪ ಮತ್ತು ೨೦೦೪ ರ ನಡುವೆ, ಕರ್ನಾಟಕ ರಾಜ್ಯ ಹಣಕಾಸು ನಿಗಮದ ಸಹಾಯದಿಂದ, ರಮೇಶ್ ಬಾಬು ಇನ್ನೂ ಏಳು ಕಾರುಗಳನ್ನು ಖರೀದಿಸಿದರು ಮತ್ತು ಅವರ ಕಾರು ಬಾಡಿಗೆ ವ್ಯಾಪಾರವನ್ನು ಈಗ ರಮೇಶ್ ಟೂರ್ಸ್ ಮತ್ತು ಟ್ರಾವೆಲ್ಸ್ ಎಂದು ಕರೆಯಲಾಗುತ್ತದೆ.

ರಮೇಶ್ ರವರು ಮರ್ಸಿಡಿಸ್ ಇಂಡಿಯಾ ರವರಿಂದ ಒಂದು ಪ್ರಸ್ತಾವನೆ ದೊರಕಿತು ಅದೇನೆಂದರೆ ಅವರ ಒಂದು ಮಾದರಿಯ ಕಾರನ್ನು ಖರೀದಿಸಲು ಅವಕಾಶ ನೀಡಿದರು. ಈ ಪ್ರಸ್ತಾವನೆಯನ್ನು ಅವರು ಅವಕಾಶವನ್ನಾಗಿ ನೋಡಿ ಅವರ ಬಳಿ ಇದ್ಧ ಎಲ್ಲಾ ಉಳಿತಾಯದ ಹಣವನ್ನು ಒಟ್ಟುಗೂಡಿಸಿ ಬಾಕಿ ಹಣಕ್ಕಾಗಿ ಕರ್ನಾಟಕ ರಾಜ್ಯ ಹಣಕಾಸು ನಿಗಮ ಬ್ಯಾಂಕ್ ನಲ್ಲಿ ಸಾಲ ಪಡೆದರು.

೨೦೦೪ ನಲ್ಲಿ ಅವರು ಐಷಾರಾಮಿ ಕಾರನ್ನು ಖರೀದಿಸುವ ಯೋಚನೆ ಮಾಡಿದರು, ೩೮ ಲಕ್ಷಕ್ಕೆ ಮರ್ಸಿಡಿಸ್ ಇ ಕ್ಲಾಸ್ ಕಾರನ್ನು ಖರೀದಿಸಿದರು.

ಕ್ಷೌರದ ಅಂಗಡಿಯ ಸಂಪಾದನೆ[ಬದಲಾಯಿಸಿ]

ರಮೇಶ್‌ರವರು ಕೂದಲು ಕತ್ತರಿಸುವುದನ್ನು ಹಾಗೂ ವಿನ್ಯಾಸ ಮಾಡುವುದನ್ನು ಕಲಿಯಲು ಸಿಂಗಾಪುರಕ್ಕೆ ಹೋಗಿದ್ದರು. ಟೋನಿ ಆಂಡ್ ಗೈ ರವರಿಂದ ತರಬೇತಿ ಪಡೆದರು. ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆನ್ಸ್ ಕಾರುಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಇವರೇ ಮೊದಲಿಗರು.

೨೦೧೧ ರಲ್ಲಿ ರಮೇಶ್ ಅವರು ಇನ್ನೊಂದು ಐಷಾರಾಮಿ ಕಾರಾದ ರೋಲ್ಸ್ ರಾಯ್ಸ್ ಕಾರ್ ಅನ್ನು ಖರೀದಿಸಿದರು. ರೋಲ್ಸ್ ರಾಯ್ಸ್‌ನಂತಹ ದುಬಾರಿ ಕಾರನ್ನು ಕೊಳ್ಳಲು ಅವರ ಪತ್ನಿಯ ಆಭರಣಗಳನ್ನು ಅಡವಿಟ್ಟರು. ಸಾಲ ಮಾಡಿ ಕಾರು ಖರೀದಿಸಿದ ಪರಿಣಾಮದಿಂದ ಅವರು ದಿವಾಳಿಯಾದರು. ಹಿತೈಷಿ ಹೇಳಿಕೆಯ ಮೇರೆಗೆ ಅವರು ಎಲ್ಲಾ ದುಬಾರಿ ಕಾರುಗಳನ್ನು ಮಾರಲು ಸಲಹೆ ನೀಡಿದರು. ಒಂದೂವರೆ ವರ್ಷದ ನಂತರ ಅವರು ಮತ್ತೆ ಯಶಸ್ಸಿನ ಮೆಟ್ಟಿಲೇರಿದರು.

ಇಂದು, ರಮೇಶ್ ಬಾಬು ಆಮದು ಮಾಡಿದ ವಾಹನಗಳು-ಮರ್ಸಿಡಿಸ್ ಸಿ, ಇ ಮತ್ತು ಎಸ್ ಕ್ಲಾಸ್, ಕಾಂಟೆಸ್ಸಾ, ಹೆಚ್ಚು ಬೆಲೆಬಾಳುವ ರೋಲ್ಸ್ ರಾಯ್ಸ್ ಸಿಲ್ವರ್ ಘೋಸ್ಟ್, ಆಡಿ, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಬಿಎಂಡಬ್ಲ್ಯು ಸೇರಿದಂತೆ ೪೦೦+ ಮಿನಿ ಬಸ್‌ಗಳು, ವ್ಯಾನ್‌ಗಳು ಮತ್ತು ವಿಂಟೇಜ್ ಕಾರುಗಳ ಸಮೂಹವನ್ನು ಹೊಂದಿದ್ದಾರೆ. ೫, ೬ ಮತ್ತು ೭ ಸರಣಿಗಳು.[೭]

ಅವರು ಆಮದು ಮಾಡಿಕೊಂಡ ಟೊಯೋಟಾ ಮಿನಿ ಬಸ್ಸುಗಳು ಮತ್ತು ಮರ್ಸಿಡಿಸ್ ವ್ಯಾನ್‌ಗಳ ಸಮೂಹವನ್ನು ಹೊಂದಿದ್ದಾರೆ. ರಮೇಶ್ ಬಾಬು ಅವರು ₹೧೬ ಲಕ್ಷ ಮೌಲ್ಯದ ಸುಜುಕಿ ಇನ್ಟ್ರುಡರ್ ಎಂಬ ಅತ್ಯಾಧುನಿಕ ಬೈಕ್ ಹೊಂದಿದ್ದಾರೆ.

ಇತ್ತೀಚೆಗೆ ಅವರು ತಮ್ಮ ಕಂಪನಿಯ ಗ್ಯಾರೇಜ್‌ನಲ್ಲಿ ನಿಂತಿರುವ ಮರ್ಸಿಡಿಸ್-ಮೇಬ್ಯಾಕ್ ಎಸ್ ೬೦೦ ಅನ್ನು ಬೆಂಗಳೂರಿನಲ್ಲಿ ಖರೀದಿಸಿದ ಮೂರನೇ ವ್ಯಕ್ತಿಯಾಗಿದ್ದಾರೆ. ಅವರು ಈಗಲೂ ತಮ್ಮ ಮಾರುತಿ ಓಮ್ನಿ ಇಟ್ಟುಕೊಂಡಿದ್ದಾರೆ. ಆದರೆ ಅವರು ಅದನ್ನು ಬಾಡಿಗೆಗೆ ನೀಡುವುದಿಲ್ಲ.

"ಬಿಲಿಯನೇರ್ ಬಾರ್ಬರ್"[ಬದಲಾಯಿಸಿ]

ಅವರ ಪ್ರಯತ್ನಗಳಿಗೆ ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ದೊರೆತಿವೆ. ವಾರಾಂತ್ಯದ ಬೆಳಿಗ್ಗೆ, ರಮೇಶ್ ಬಾಬು ಅವರ ಬಾರ್ಬರ್ ಶಾಪ್‌ನಲ್ಲಿ ₹೧೫೦ ಕ್ಕೆ ಕ್ಷೌರ ಮಾಡುವುದನ್ನು ನೀವು ಇನ್ನೂ ಕಾಣಬಹುದು.

ತಮ್ಮ ಪುರುಷ ಗ್ರಾಹಕರಿಗೆ ಕೇವಲ ₹೬೫ಕ್ಕೆ ಕೂದಲು ಕತ್ತರಿಸುತ್ತಾರೆ.ರಮೇಶ್‌ ಅವರು ತಮ್ಮ ಮಗ ಮತ್ತು ಹೆಣ್ಣು ಮಕ್ಕಳಿಗೆ ಹೇರ್ ಸ್ಟೈಲಿಂಗ್ ಕೌಶಲವನ್ನೂ ಹೇಳಿಕೊಡುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]