ವಾಟರ್ ಚೆಸ್ನಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಟರ್ ಚೆಸ್ನಟ್ (ಎಲಿಯೋಕ್ಯಾರಿಸ್ ಡಲ್ಸಿಸ್) ಏಷ್ಯಾ (ಚೀನಾ, ಜಪಾನ್, ಭಾರತ, ಫಿಲಿಪೀನ್ಸ್, ಇತ್ಯಾದಿ), ಆಸ್ಟ್ರೇಲಿಯಾ, ಉಷ್ಣವಲಯ ಆಫ್ರಿಕಾ, ಮತ್ತು ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದ ವಿವಿಧ ದ್ವೀಪಗಳಿಗೆ ಸ್ಥಳೀಯವಾದ ಹುಲ್ಲಿನಂಥ ಒಂದು ಜಂಬು. ಅದನ್ನು ಅನೇಕ ದೇಶಗಳಲ್ಲಿ ಅದರ ತಿನ್ನಲರ್ಹ ಗಡ್ಡೆಗಳಿಗಾಗಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ವಾಟರ್ ಚೆಸ್ನಟ್ ವಾಸ್ತವವಾಗಿ ಕಾಯಿಯೇ ಅಲ್ಲ, ಬದಲಾಗಿ ಜವುಗು ಭೂಮಿಯಲ್ಲಿ, ನೀರಿನೊಳಗಿನ ಮಣ್ಣಿನಲ್ಲಿ ಬೆಳೆಯುವ ಒಂದು ಜಲೀಯ ತರಕಾರಿ.