ವಸುಮತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬೆಂಗಳೂರಿನ, ವಸುಮತಿ ರಘುನಾಥ್ ರಿಗೆ, ಸಂಗೀತ, ಪ್ರಾಣವಾದರೆ, ತೋಟಗಾರಿಕೆ ಅವರ ಹೃದಯದ ಬಡಿತದಂತೆ. ಗಿಡ ಮರ ಬಳ್ಳಿಗಳನ್ನು ಅವರು ಮಕ್ಕಳಂತೆ ಅತಿ ಪ್ರೀತಿ ಹಾಗೂ ಆಸ್ತೆಯಿಂದ ಬೆಳಸುತ್ತಾರೆ. ಬಸವನಗುಡಿಯಲ್ಲಿ, ಪೋಲೀಸ್ ಸ್ಟೇಷನ್ ರಸ್ತೆಯಲ್ಲಿರುವ ತಮ್ಮ ವಿಶಾಲವಾದ ಮನೆಯ ಅಂಗಳದಲ್ಲಿ ವಸುಮತಿ ರಘುನಾಥ್, ಸೊಗಸಾದ ಕೈದೋಟವನ್ನು ನಿರ್ಮಿಸಿಕೊಂಡಿದ್ದಾರೆ.

ಆಸಕ್ತಿ[ಬದಲಾಯಿಸಿ]

  • ಬಾಲ್ಯದಲ್ಲಿ ಅಜ್ಜನಮನೆಯಲ್ಲಿ ಎಸ್ಟೇಟ್ ನಲ್ಲಿ ವಾಸವಾಗಿದ್ದಾಗಿನಿಂದ ಅವರ ಜೊತೆಯಲ್ಲೇ ಬಂದ ಹವ್ಯಾಸ. ಪಕ್ಷಿ, ಪ್ರಾಣಿ ಮತ್ತು ವನ ಸಸ್ಯಗಳ ನಂಟನ್ನು ಇರಿಸಿಕೊಂಡು ಅಜ್ಜಿಯವರು ಪ್ರೀತಿಯಿಂದ ಬೆಳಸುತ್ತಿದ್ದ ಗಿಡಗಳು,ತಮ್ಮ ಕಾಲೇಜ್ ನಲ್ಲಿ ಶಿಕ್ಷಣದ ವಿಶಯವಾಗಿ ಆರಿಸಿಕೊಂಡಿದ್ದೂ ಸಸ್ಯಶಾಸ್ತ್ರವನ್ನೇ. ಬಾಳ ಸಂಗಾತಿ ರಘುನಾಥರ ಕೈಹಿಡಿದಮೇಲೂ ಅವರ ಪ್ರೀತಿ ಆದರ,ಸಹಕಾರವೇ ಅವರನ್ನು ಮುಂದುವರೆಯಲು ಸಹಕರಿಸಿತು. ತೋಟಗಾರಿಕೆ ಅವರ ದಿನದ ಅತಿಹೆಚ್ಚು ಸಮಯವನ್ನು ಆಕ್ರಮಿಸುತ್ತದೆ.
  • ಸುಮಾರು ೭೦ ರದಶಕದಲ್ಲಿ ಆರಂಭಿಸಿದ ಹವ್ಯಾಸ ಕೈದೋಟ ನರ್ಮಾಣದ ಕೆಲಸ, ಮೊದಲು ಕ್ಯಾಕ್ಟಸ್ ನಿಂದು ಶುರುವಾಗಿ, ನಂತರ ಲಾಲ್ ಬಾಗ್ ನ ನರ್ಸರಿ, ಆತ್ಮೀಯರು, ನೆಂಟರಿಷ್ಟರು ಸ್ನೇಹಿತರು ಕೊಟ್ಟ ಗಿಡಗಳನ್ನು ಸಂಗ್ರಹಿಸಿ ತಮ್ಮ ದೊಡ್ಡ ಮನೆಯ ೧೪೦೦ ಚ.ಅಡಿ ಪರಿಸರದ ಕಾಂಪೌಂಡ್ ತುಂಬಾ ನೆಟ್ಟು ತಮ್ಮ ಸುಮಾರು ೩೦ ವರ್ಷಗಳ ಅನವರವಾದ ಗಿಡಮರ ಫಲಪುಷ್ಪಗಳನ್ನು ತಮ್ಮ ಮನೆಯ ಮುಂದಿನ ಹಿತ್ತಲಿನಲ್ಲಿ ಬೆಳಸಿ ಪೋಷಿಸುತ್ತಿದ್ದಾರೆ.

ದೇಶ ವಿದೇಶಗಳ ಸಸ್ಯರಾಶಿ[ಬದಲಾಯಿಸಿ]

ಭಾರತದ ಸಸ್ಯಸಂಪತ್ತಿನಜೊತೆಗೆ ವಿದೇಶಗಳಿಂದ, ನಮ್ಮ ನೆರೆಹೊರೆಯ ರಾಜ್ಯಗಳಿಂದ ಸಂಗ್ರಹಿಸಿದ ತಳಿಗಳು ಇಮ್ಮಡಿಸಿವೆ. ತಮಿಳುನಾಡಿನ ಗೆಳೆಯರಿಂದ ಸಂಪಿಗೆ ಬಳ್ಳಿ, ಮನೋರಂಜನಿ ಸಸ್ಯಸಂಪತ್ತು, ಅಮೆರಿಕಾದಿಂದ ಗಾರ್ಡೇನಿಯ ಪೊದೆ ಸಸ್ಯ,ಬೆಂಗಳೂರಿನಲ್ಲೇ ಖರೀದಿಸಿ ಬೆಳಸಿದ ವಿದೇಶಿ ನಮೂನೆಗಳು, ಅವರ ಸಸ್ಯೋದ್ಯಾನದ ತುಂಬಾ ಆವರಿಸಿವೆ.

ಸಸ್ಯೋದ್ಯಾನದ ವಿನ್ಯಾಸ[ಬದಲಾಯಿಸಿ]

ಅಕ್ಕ ಪಕ್ಕಗಳಲ್ಲಿ ಓಡಾಡಲು ಕಾಲುದಾರಿ, ಎಲ್ಲ ಗಿಡಬಳ್ಳಿಗಳಿಗೆ ಬಿಸಿಲಿನ ರಷ್ಮಿಯ ಸ್ನಾನಕ್ಕೆ ಅನುವಾಗುವಂತ ಜೋಡಣೆ,ಕಣಗಿಲೆ ಗಿಡಕ್ಕೆ ಅವರಷ್ಟೇ ಪ್ರಾಯವಾದರೆ, ಮಂಗೋಲಿಯಕ್ಕೆ ಅವರ ಮಕ್ಕಳಷ್ಟು ವಯಸ್ಸು, ತಮ್ಮ ತೋಟದ ಎಲ್ಲಾ ಗಿಡ, ತರು-ಲತೆಗಳ ಪೂರ್ಣ ವಿವರಗಳನ್ನು ಅವರು ಬಲ್ಲರು.

ವೈವಿಧ್ಯಮಯ ರಂಗು-ರಂಗಿನ ಹೂವಿನಗಿಡಗಳ-ಭಂಡಾರ[ಬದಲಾಯಿಸಿ]

ತಮ್ಮ ಕೈದೋಟದ ನಾಲ್ಕುನೂರು ಗಿಡಗಳಲ್ಲಿ ೫೦ ಕ್ಕೂ ಹೆಚ್ಚು ವಿಧದ ಗುಲಾಬಿ ತಳಿಗಳು ತೋಟದ ತುಂಬ ಹರಡಿಕೊಂಡು ರಂಜಿಸುತ್ತಿವೆ. ಅದೆಷ್ಟೋ ಬಗೆಯ ಆರ್ಕಿಡ್ ಗಳು, ಕ್ಯಾಕ್ಟಸ್ ಗಳು ಅಪರೂಪದ ತರು-ಲತೆಗಳು, ಮಲ್ಲಿಗೆ ಶಂಖಪುಷ್ಪ, ಕೆಂಡ ಸಂಪಿಗೆ, ನಂದಿಬಟ್ಟಲು, ಹೆನ್ನಾ, ಪಾರಿಜಾತ, ಸೌಗಂಧಿಕಾಪುಷ್ಪ, ಬ್ರಹ್ಮ ಕಮಲ,ಮುಂತಾದ ಪುಷ್ಪಗಳು ಬೆರಗುಗೊಳಿಸಿವೆ.

ಔಷಧೀಯ ಸಸ್ಯಗಳು[ಬದಲಾಯಿಸಿ]

ಅಮೃತಬಳ್ಳಿ, ದೊಡ್ಡಪತ್ರೆಯಂತಹ ಹಲವಾರು ಬಗೆಯ ಸಸ್ಯಗಳಿವೆ.

ಅಲಂಕಾರಿಕ ಪುಷ್ಪ ಗಿಡಗಳು[ಬದಲಾಯಿಸಿ]

  • 'ಮಾರಂತಾಸ್',
  • 'ಡಾರ್ಸಿನ',
  • 'ಫಿಲೊಡೆಂಡ್ರಾ', -ಸೇರಿದಂತೆ ನೂರಕ್ಕೂ ಮಿಗಿಲಾದ ಲಂಕಾರಿಕ ಗಿಡಗಳು,ಬಳ್ಳಿಗಳು, ಫ್ಯಾಷನ್ ಫ್ರೂಟ್, ಸಪೋಟ,ಸೀಬೆ,ಇತ್ಯಾದಿಗಳನ್ನು ಬೆಳೆಯುತ್ತಿದ್ದರು. ತರಕಾರಿಯನ್ನು ಮೊದಲು ಬೆಳೆಯುತ್ತಿದ್ದರು. ಕಳ್ಳರು ಹೆಚ್ಚಾಗಿ ರಾತ್ರಿಯಲ್ಲಿ ಬಂದು ಕಿರುಕುಳಕೊಡಲು ಆರಂಭಿಸಿದ್ದರಿಂದ ಅವರಿಗೆ ಅದೊಂದು ಸಮಸ್ಯೆಯಾಯಿತು. ಹಾಗಾಗಿ ತರಕಾರಿ ಬೆಳೆಯುವುದನ್ನು ಕೈಬಿಟ್ಟರು.

ಪ್ರಶಸ್ತಿಗಳು[ಬದಲಾಯಿಸಿ]

  • 'ಮೈಸೂರ್ ಹಾರ್ಟಿಕಲ್ಚರಲ್ ಸೊಸೈಟಿ'ಯವರು, ಸತತವಾಗಿ ಹದಿನೇಳು ಬಾರಿ ಪುರಸ್ಕಾರ, 'ರೋಲಿಂಗ್ ಶೀಲ್ಡ್' ನೀಡಿ ಗೌರವಿಸಿದ್ದಾರೆ.
  • ೨೦೦೮ ರಲ್ಲಿ 'ಪರ್ಯಾಯ ಪಾರಿತೋಷಕ ವಿಜೇತೆ',
  • ೨೦೧೧ ರಲ್ಲೂ 'ಅಲಂಕಾರಿಕ ತೋಟಗಾರಿಕಾ ವಿಭಾಗದ, ಪ್ರಥಮ ಪಾರಿತೋಷಕ ವಿಜೇತೆ'.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ವಸುಮತಿ&oldid=533556" ಇಂದ ಪಡೆಯಲ್ಪಟ್ಟಿದೆ