ವಿಷಯಕ್ಕೆ ಹೋಗು

ವಸಂತಸಾ ನಾಕೋಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಸಂತಸಾ ನಾಕೋಡ ಇವರು ೧೯೨೫ ಜನೆವರಿ ೪ರಂದು ಗದಗಬೆಟಗೇರಿಯಲ್ಲಿ ಜನಿಸಿದರು. ಚಿಕ್ಕಂದಿನಲ್ಲಿಯೇ ನಾಟಕ ಆಡುವ ಗೀಳು ಇವರಿಗೆ. ೧೯೪೪ರಲ್ಲಿ ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ವಾಯರಲೆಸ್ ಆಪರೇಟರ ಎಂದು ವಾಯುದಳದಲ್ಲಿ ಭರ್ತಿಯಾದರು. ಆದರೆ ಸೋದರ ರಘುನಾಥಸಾ ಅವರ ನಿಧನದಿಂದಾಗಿ ಊರಿಗೆ ಮರಳಿದರು. ೧೯೪೭ ಅಗಸ್ಟ ೮ರಂದು “ಶ್ರೀ ವಸಂತ ನಾಟ್ಯಕಲಾ ಸಂಘ, ಗದಗ” ಸ್ಥಾಪಿಸಿ, ಮೂವತ್ತೇಳು ವರ್ಷಗಳವರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನ ನೀಡಿದರು.

kalaa kesari Vasanth rao nakod during shooting Hoovu Hannu movie at madikeri

ನಾಟಕಗಳಲ್ಲದೇ ನಾಕೋಡರು ಅನೇಕ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅವುಗಳಲ್ಲಿ

 1. ಹೂವು ಹಣ್ಣು
 2. ಕಿತ್ತೂರು ಚೆನ್ನಮ್ಮ
 3. ಭಾರತರತ್ನ
 4. ಸಿಂಧೂರ ಲಕ್ಷ್ಮಣ
 5. ಮೈಲಾರಲಿಂಗ
 6. ಅಲ್ಲಾ ನೀನೆ ಈಶ್ವರ ನೀನೆ
 7. ಲಕ್ಷ್ಮೀಕಟಾಕ್ಷ
 8. ಕಲ್ಯಾಣೋತ್ಸವ
 9. ಮನ ಮಿಡಿಯಿತು
 10. ಸಂಗ್ಯಾ ಬಾಳ್ಯಾ
 11. ಒಂದಾನೊಂದು ಕಾಲದಲ್ಲಿ
 12. ದಶಾವತಾರ
 13. ಬಿರುಗಾಳಿ
 14. ಕಾಡಿನ ಹಕ್ಕಿ
ಮೊದಲಾದ ಕನ್ನಡ ಚಿತ್ರಗಳನ್ನೂ,ಅಬಲಾ, ಈಶ್ವರ ಅಲ್ಲಾ ತೇರೆ ನಾಮ ಎನ್ನುವ ಹಿಂದಿ ಚಿತ್ರಗಳನ್ನೂ ಹೆಸರಿಸಬಹುದು.

ದೂರದರ್ಶನದ ಧಾರಾವಾಹಿಗಳಾದ ಸಬೀನಾ, ಕೆರೆಗೆ ಹಾರ, ಹತ್ಯಾ, ಸೀಸೆ ತಂದ ಪೇಚು,ಸಂಸಾರ ಸಂಗೀತ, ಮತ್ತು ಪರದೇಶಿ ಇವರು ಅಭಿನಯಿಸಿದ ಕಿರುತೆರೆಯ ಧಾರಾವಾಹಿಗಳು.

ವಸಂತಸಾ ನಾಕೋಡ ಅವರಿಗೆ ಅನೇಕ ಬಿರುದುಗಳು ಲಭಿಸಿವೆ. ನಟಚಕ್ರೇಶ್ವರ, ಅಭಿನಯ ಚತುರ, ಕಲಾಕೇಸರಿ, ನಟರತ್ನ ಅಲ್ಲದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ರಾಜ್ಯೋತ್ಸವ ಪ್ರಶಸ್ತಿ, ೧೯೯೨ರಲ್ಲಿ ಕರ್ನಾಟಕ ಸರಕಾರದ ನಾಟಕ ಅಕಾಡೆಮಿ ಪ್ರಶಸ್ತಿ ಹಾಗು ಕಂದಗಲ್ ಹನುಮಂತರಾವ ಪ್ರಶಸ್ತಿ ಸಹ ಇವರಿಗೆ ದೊರೆತಿವೆ.

ನಾಕೋಡರ ಪತ್ನಿ ಸರಸ್ವತಿಬಾಯಿ. ಈ ದಂಪತಿಗಳಿಗೆ ನಾಲ್ಕು ಗಂಡು ಹಾಗು ನಾಲ್ಕು ಹೆಣ್ಣು ಮಕ್ಕಳು.

ವಸಂತಸಾ ನಾಕೋಡರು ೧೯೯೭ ಎಪ್ರಿಲ್ ೨೯ರಂದು ನಿಧನರಾದರು.

ವಸಂತಸಾ ನಾಕೋಡ ಅಭಿನಯಿಸಿರುವ ಚಿತ್ರಗಳು[ಬದಲಾಯಿಸಿ]