ವರ್ಧಮಾನ ಸ್ವಾಮಿ ಕೆರೆಬಸದಿ, ಕೆರ್ವಾಶೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಳ[ಬದಲಾಯಿಸಿ]

ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮ ಕೆರ್ವಾಶೆಯಲ್ಲಿ ಶ್ರೀ ವರ್ಧಮಾನ ಸ್ವಾಮಿ ಬಸದಿಯಿದೆ.ಇದರ ಈಶಾನ್ಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದೆ. ಕಾರ್ಕಳದಿಂದ ಒಟ್ಟು ೨೨ ಕಿ.ಮೀ ದೂರದಲ್ಲಿದೆ. ಕಾರ್ಕಳದಿಂದ ಅಜೆಕಾರು ಶಿರ್ಲಾಲು ಮಾರ್ಗವಾಗಿ ಕೆರ್ವಾಶೆಗೆ ೩೨ ಕಿ.ಮೀ ದೂರವಾತ್ತದೆ. ಕಾರ್ಕಳದಿಂದ ತೆಳ್ಳಾರು, ಮುಂಡ್ಲಿ ಮಾರ್ಗವಾಗಿ ಕೆರ್ವಾಶೆಗೆ ೧೪ ಕಿಲೋಮೀಟರ್ ಆಗುತ್ತದೆ. ಕಾರ್ಕಳದಿಂದ ಬಜಗೋಳಿ ದಾಟಿ ಮುಂಡಾರು ಮಾರ್ಗವಾಗಿ ಕೆರ್ವಾಶೆ ಬರಬೇಕಾಗುತ್ತದೆ.

ಇತಿಹಾಸ[ಬದಲಾಯಿಸಿ]

ಈ ಬಸದಿಯೂ ಕಾರ್ಕಳ ಶ್ರೀಮಠಕ್ಕೆ ಸೇರಿದೆ. ಮೂಲ ಸ್ವಾಮಿಯ ಹಿಂಭಾಗದಲ್ಲಿರುವ ಶಾಸನದ ಪ್ರಕಾರ ಪ್ರಥ್ವಿರಾಜ ಎಂಬ ಅರಸ ಮಹಾವೀರ ಶಕ ೧೦೯೧ನೇ ಕಾಲಯುಕ್ತ ಸಂವಸ್ರರದ ಕಾರ್ತಿಕ ಮಾಸ ೧೦ ಸಲುವ ದಿನ ಮೂಲ ಸ್ವಾಮಿಯನ್ನು ಪ್ರತಿಷ್ಠಾಪಿಸಿದನು ಎಂದು ತಿಳಿದುಬರುತ್ತದೆ. ೨೦೦೩ನೇ ಇಸವಿ ಮೇ ತಿಂಗಳ ೧೩ನೇ ತಾರೀಕು ಜಿನ ಧರ್ಮವನ್ನು ನಂಬಿರುವ ಊರ-ಪರವೂರ ಎಲ್ಲಾ ಶ್ರಾವಕ ಬಂಧುಗಳಿಂದ ಈ ಇತಿಹಾಸ ಪ್ರಸಿದ್ಧ ಬಸದಿಯು ಜೀರ್ಣೋದ್ಧಾರಗೊಂಡಿದೆ. ಬಸದಿಯ ಜೀಣೋದ್ಧಾರವಾಗಿ ಧಾಮ ಸಂಪ್ರೋಕ್ಷಣೆ ೨೦೦೩ನೇ ಇಸವಿ ಮೇ ತಿಂಗಳಲ್ಲಿ ನಡೆದಿದೆ. [೧]

ಪ್ರಾಂಗಣ[ಬದಲಾಯಿಸಿ]

ಈ ಬಸದಿಯೂ ಹಂಚಿನ ಮಾಡುಗಳ ಹೊದಿಕೆಯನ್ನು ಹೊಂದಿದೆ. ಬಸದಿಗೆ ಮೇಗಿನ ನೆಲವಿದೆ. ಇಲ್ಲಿ ಶ್ರೀ ಚಂದ್ರನಾಥ ಸ್ವಾಮಿಯ ಬಿಂಬವಿದೆ. ಬಸದಿಯಲ್ಲಿ ಶ್ರೀ ಪದ್ಮಾವತಿ ದೇವಿಯ ಮೂರ್ತಿ, ಬ್ರಹ್ಮ ದೇವರ ಮೂರ್ತಿ, ಸರಸ್ವತಿ ದೇವಿಯ ಮೂರ್ತಿಯಿದೆ. ಬಸದಿಗೆ ಮಾನಸ್ತಂಭ ಇದೆ. ಶ್ರಾವಕರು ಕುಳಿತುಕೊಳ್ಳಲು ಎದುರಿನ ಗೋಪುರವನ್ನು ನಿರ್ಮಿಸಲಾಗಿದೆ. ಶಿಲೆಯಿಂದ ಮಾಡಿದ ದ್ವಾರಕ್ಕೆ ದ್ವಾರ ಪಾಲಕರ ವರ್ಣ ಚಿತ್ರಗಳಿವೆ. ಜಯಘಂಟೆ, ಜಾಗಟೆಗಳನ್ನು ತೂಗುಹಾಕಲಾಗಿದೆ. ತೀರ್ಥಂಕರ ಮಂಟಪ ಮುಂಭಾಗದಲ್ಲಿದ್ದು, ಇದರಲ್ಲಿ ಗಂಧಕುಟಿಯಿದೆ. ಈ ಬಸದಿಯಲ್ಲಿ ಕೆಲವು ಜಿನಬಿಂಬಗಳನ್ನು ಕಾಣಬಹುದು. ಶ್ರೀ ಪದ್ಮಾವತಿ ದೇವಿಯ ಮೂರ್ತಿಯನ್ನು ಇಲ್ಲಿ ಕಾಣಬಹುದು. ಪೀಠದಲ್ಲಿ ಅಸ್ಪಷ್ಟವಾದ ಪ್ರಾಚೀನ ಬರವಣಿಗೆಗಳು ಇಲ್ಲಿವೆ. ಶ್ರೀ ವರ್ಧಮಾನ ಸ್ವಾಮಿಯ ಬಿಂಬ ಶಿಲೆಯಿದ್ದು, ಅಂದಾಜು ಮೂರು ಅಡಿ ಎತ್ತರ. ಖಡ್ಗಾಸನ ಭಂಗಿಯಲ್ಲಿದೆ. ಕ್ಷೀರಾಭಿಷೇಕ ನಡೆಯುತ್ತದೆ.ಬಲಭಾಗದಲ್ಲಿ ಕ್ಷೇತ್ರಪಾಲನ ವಿಗ್ರಹ, ಎಡಭಾಗದಲ್ಲಿ ನಾಗರಕಟ್ಟೆಯನ್ನು ಹೊಂದಿದೆ. ಬಸದಿಯ ಸುತ್ತಲೂ ಮುರ ಕಲ್ಲಿನಿಂದ ಪ್ರಾಕರಗೋಡೆಯನ್ನು ನಿರ್ಮಿಸಿದ್ದಾರೆ. ಬಸದಿಗೆ ಸಂಬಂಧಿಸಿದ ಅನ್ನ ಛತ್ರವಿದೆ. ಈ ಬಸದಿಯಲ್ಲಿ ಹಲವು ಜಿನಬಿಂಬಗಳನ್ನು ಹೊಂದಿದೆ.

ಪೂಜಾ ವಿಧಾನ[ಬದಲಾಯಿಸಿ]

ಬಿಂಬಗಳಿಗೆ ಪೂಜೆ ನಡೆಯುತ್ತದೆ. ಶ್ರೀ ಪದ್ಮಾವತಿ ದೇವಿಯ ಮೂರ್ತಿಗೆ ಪ್ರತಿದಿನ ಹಾಗೂ ವಾರ್ಷಿಕೋತ್ಸವದಂದು ಪೂಜೆ ನಡೆಯುತ್ತದೆ. ಪೂಜೆ ಸಮಯದಲ್ಲಿ ಹೂವು ಹಾಕುವ ಕ್ರಮವಿದೆ. ಮಧ್ಯಾಹ್ನ ೧ಕ್ಕೆ ಮಹಾ ಪೂಜೆ ನಡೆಯುತ್ತದೆ. ದಿನಕ್ಕೆ ಎರಡು ಬಾರಿ ದೀಪಾರಾಧನೆ ಮಾಡಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (1 ed.). ಮಂಜೂಶ್ರೀ ಪ್ರಿಂಟರ್ಸ್. p. 60-61.