ವರ್ಗ:ವ್ಯಂಗ್ಯಚಿತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ವ್ಯಂಗ್ಯ ಚಿತ್ರ' ವೆಂದರೆ, ಅದು ಒಂದು ಚಿತ್ರಪ್ರಾಕಾರ. ಅದು ಒಬ್ಬ ಅಥವಾ ವ್ಯಕ್ತಿಸಮೂಹದ ಚಿತ್ರ ಅಥವಾ ಅವರ ಕಾರ್ಯವೈಖರಿ ಮತ್ತಿತರ ಸೂಕ್ಷ್ಮ ವಿಚಾರಗಳನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಿ ತನ್ನ ಅನಿಸಿಕೆಗಳನ್ನು ಹಾಸ್ಯರೂಪದಲ್ಲಿ ಯಾರಮನಸ್ಸಿಗೂ ನೋವಾಗದಂತೆ ಚಕ್ಕನೆ ಪ್ರತಿಕ್ರಯಿಸುವ ರೀತಿ. ಇದಕ್ಕೆ ಅನೇಕ ವಿಶೇಷಗಳಗಳು ಕ್ರಮೇಣ ಸೇರಿಕೊಳ್ಳುತ್ತಾ ಹೋಗುತ್ತವೆ. ವ್ಯಂಗ್ಯ ಚಿತ್ರಕಾರ, ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು. ದೈನಂದಿನ ವಾರ್ತೆಗಳ ಪರಿಚಯ, ವ್ಯಕ್ತಿಗಳ ಕಾರ್ಯ ಪರಿಚಯ, ಸನ್ನಿವೇಶದ ಗಂಭೀರತೆಯನ್ನು ಅರಿಯುವ ಶಕ್ತಿಗಳನ್ನು ಹೊಂದಿರಬೇಕು. ಮುಂಬೈನಗರದ 'ಅನಭಿಶಕ್ತ ಹಾಸ್ಯ-ಚಿತ್ರ ಚಕ್ರವರ್ತಿ,' ಯಾಗಿ 'ಶ್ರೀ ಬಾಲ್ ಠಾಕ್ರೆ,' ಯವರು ಹಲವಾರು ವರ್ಷಗಳು ಪತ್ರಿಕಾವಲಯದಲ್ಲಿ ಹೆಸರುಮಾಡಿದ್ದರು. ಆದರೆ, 'ಆರ್. ಕೆ. ಲಕ್ಶ್ಮಣ್,' ಬಂದಮೇಲೆ, ಅವರ ಹಾಸ್ಯಪ್ರಸಂಗಗಳು, ಅವನ್ನು ವಿವರಿಸುವ ಹೊಸ ಹಾಗೂ ಸಮರ್ಥರೀತಿಗಳು ಓದುಗರನ್ನು ಸೂಜಿಗಲ್ಲಿನಂತೆ ಸೆಳೆದವು. ಇದನ್ನು ಸೂಕ್ಶ್ಮವಾಗಿ ಗಮನಿಸಿದ ಠಾಕ್ರೆಯವರು ಹಿಂದೆಸರಿಯಬೇಕಾಯಿತು. ಆದರೆ, ಠಾಕ್ರೆಯವರು, ಒಬ್ಬ ಸಮರ್ಥ ಸಂಘಟಕ, ಹಾಗೂ ರಾಜಕಾರಣಿಯಾಗಿದ್ದರು. ಹಾಗಾಗಿ ಅವರು ತಮ್ಮದೇ ಆದ ಒಂದು ಮರಾಠಿ ದಿನಪತ್ರಿಕೆಯನ್ನು ಪ್ರಾರಂಭಿಸಿ, ('ಸಾಮ್ನಾ') ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಇತಿಹಾಸವನ್ನೆ ಸೃಷ್ಟಿಸಿದರು.

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ಉಪವರ್ಗ ಇದೆ.

"ವ್ಯಂಗ್ಯಚಿತ್ರ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.