ವರ್ಗ:ಪ್ರವಚನಕಾರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪಾವಗಡ ಪ್ರಕಾಶರಾಯರು' ಒಬ್ಬ ಅತ್ಯಂತ ಪಾಂಡಿತ್ಯಪೂರ್ಣ ಪ್ರವಚನಕಾರರು, ಪ್ರಕಾಂಡ ಪಂಡಿತರು. ಹಲವಾರು ವರ್ಷಗಳ ಆಳವಾದ ಅಭ್ಯಾಸದಿಂದ 'ವೇದ', 'ಉಪನಿಷತ್ತು', 'ರಾಮಾಯಣ, 'ಮಹಾಭಾರತ', 'ಭಾಗವತ' ಮುಂತಾದ ಕಾವ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಜೊತೆಗೆ ಕನ್ನಡ 'ಎಮ್. ಎ'.(ಸಾಹಿತ್ಯ) ಹಾಗೂ 'ಕಾನೂನಿನಲ್ಲೂ ಪದವೀಧರ'ರೂ ಸಹಿತ. ಮೇಲಾಗಿ ಅಗಾಧವಾದ ನೆನಪಿನ ಶಕ್ತಿಯನ್ನು ಪಡೆದಿದ್ದಾರೆ. ಇದುವರೆಗೆ ಅವರು ನೀಡಿದ ಪ್ರವಚನಗಳಲ್ಲಿ ಅವರೆಂದೂ ಪುಸ್ತಕಗಳ ಸಹಾಯಪಡೆದಿಲ್ಲ. ಎಲ್ಲೂ ತೊದಲದ, ನಿಖರವಾದ ಪದಗಳಿಗಾಗಿ ತಡಕಾಡದ, ಕನ್ನಡ ಭಾಷೆಯಲ್ಲಿ ಎಲ್ಲರಿಗೂ ಮನದಟ್ಟಾಗುವಂತೆ ಹೇಳುವ 'ಜಾಣ್ಮೆ' ಪಡೆದಿದ್ದಾರೆ. ಅವರ ಸರಕಿನಲ್ಲಿ ಶಬ್ದಸಂಪತ್ತು ತುಂಬಿ ಹರಿದಿದೆ.

'ಅತ್ಯಂತ ಸಮನ್ವಯ ಮನೋಭಾವದವರು'[ಬದಲಾಯಿಸಿ]

ಇಷ್ಟೆಲ್ಲಾ ಪುರಾತನ ತತ್ವಗಳನ್ನು ಸಮರ್ಥಿಸುವವರಾಗಿಯೂ ಅವರದೇ ದೃಷ್ಟಿಕೋನವನ್ನು ಹೊಂದಿದ್ದಾರೆ. ಹಳೆಯದೆಲ್ಲಾ ಅತಿ ಒಳ್ಳೆಯದೆಂದು ಕಣ್ಣುಮುಚ್ಚಿಕೊಂಡು ನಂಬುವವರಲ್ಲ. ಹಲವಾರು ಸನ್ನಿವೇಶಗಳನ್ನು ಸಂಗತಿಗಳನ್ನೂ ತರ್ಕಿಸಿ, ತಮ್ಮ ಅಭಿಪ್ರಾಯಗಳನ್ನು ಅತ್ಯಂತ ಸಮಂಜಸವಾಗಿ ಮಂಡನೆಮಾಡುವ ಕಲೆ ಅವರಿಗೆ ಕರಗತವಾಗಿದೆ. 'ಆದಿ ಶಂಕರಾಚಾರ್ಯ'ರ 'ಅದೈತ ಸಿದ್ಧಾಂತ'ವನ್ನು ಅವರು ಒಪ್ಪಿಕೊಂಡಿದ್ದಾರೆ. ಹಾಗೆಯೇ, 'ದೈತ', 'ವಿಶಿಷ್ಟಾದೈತ ಸಿದ್ಧಾಂತ'ಗಳನ್ನೂ ಚೆನ್ನಾಗಿ ಅರಿತು, ಅವುಗಳನ್ನು ಸಮನ್ವಯಿಸು ತಮ್ಮ ನಿರೂಪಣೆಗಳಲ್ಲಿ ಸೊಗಸಾಗಿ ವಿವರಿಸುತ್ತಾರೆ. 'ವೀರಶೈವ ಸಂಪ್ರದಾಯ'ದ ಹಲವಾರು ಸಂಗತಿಗಳು, ಮತ್ತು ಕವಿ, ಕಾವ್ಯ ವಿಚಾರಗಳನ್ನು ಅವರ ಬಾಯಿನಲ್ಲೇ ಕೇಳಿ ನಲಿಯಬೇಕು. 'ವರ ಕವಿ,ದ.ರಾ.ಬೇಂದ್ರೆ' ಯವರ ಕವಿತೆಗಳಲ್ಲಿ ಪ್ರಮುಖವಾದ 'ನಾಲ್ಕು ತಂತಿ'ಯ ಬಗ್ಗೆ ಮಾಡಿದ ಚಿಂತನೆ ಅತ್ಯಂತ ಮಾರ್ಗದರ್ಶಕವಾಗಿತ್ತು.

'ಸತ್ಯದರ್ಶನ'[ಬದಲಾಯಿಸಿ]

'ಶ್ರೀಯುತ, ಪ್ರಕಾಶರಾಯರು ಪ್ರಸ್ತುತ ಪಡಿಸುತ್ತಿರುವ, 'ಸತ್ಯ ದರ್ಶನ ಕಾರ್ಯಕ್ರಮ', ಸುಮಾರು ೧೦ ವರ್ಷಕ್ಕೂ ಹೆಚ್ಚು ಸಮಯದಿಂದ 'ದೂರದರ್ಶನ ಚಂದನ'ದಲ್ಲಿ ಬಿತ್ತರಗೊಳ್ಳುತ್ತಿತ್ತು. ಈಗ ಅದು ಸಂಪನ್ನಗೊಂಡಿದೆ.

"ಪ್ರವಚನಕಾರರು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.