ವಿಷಯಕ್ಕೆ ಹೋಗು

ವಡವಾಟಿ ಶಾರದಾ ಭರತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಮತಿ ವಡವಾಟಿ ಶಾರದಾ ಭರತ್ *
[[File:
|frameless|center=yes|alt=]]
ವಡವಾಟಿ ಶಾರದಾ ಭರತ್
ಜನನ30-07-1979
ರಾಯಚೂರು
ವೃತ್ತಿಕಲಾವಿದರು
ರಾಷ್ಟ್ರೀಯತೆಭಾರತೀಯ

ಶ್ರೀಮತಿ ವಡವಾಟಿ ಶಾರದಾ ಭರತ್ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ರಾಜ್ಯದ ಖ್ಯಾತ ವಚನ ಗಾಯಕರು.

ಪರಿಚಯ

[ಬದಲಾಯಿಸಿ]

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾಯಕರಾದ ಶ್ರೀಮತಿ ವಡವಾಟಿ ಶಾರದಾ ಭರತ್, ವಿಶ್ವವಿಖ್ಯಾತ ಕ್ಲಾರಿಯೋನೆಟ್ ವಾದಕರಾದ ಡಾ||ಪಂ.ನರಸಿಂಹಲು ವಡವಾಟಿಯವರ ಮಗಳು. ವಡವಾಟಿ ಶಾರದಾ ಭರತ್ ವಿಶೇಷವಾಗಿ ರಾಜ್ಯದ ಖ್ಯಾತ ವಚನ ಗಾಯಕರು. ಜೈಪೂರ್ ಹಾಗೂ ಗ್ವಾಲಿಯರ್ ಘರಾನೆಯವರು. ಗ್ವಾಲಿಯರ್ ಘರಾನೆಯನ್ನು ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳು ಹಾಗೂ ಜೈಪುರ್ ಘರಾನೆಯನ್ನು ಶ್ರೀ ಪಂ.ಮಲ್ಲಿಕಾರ್ಜುನ ಮನ್ಸೂರ್, ಶ್ರೀ ಪಂ.ಸಿದ್ದರಾಮ ಜಂಬಲದಿನ್ನಿ, ಡಾ.ವಡವಾಟಿಯವರ ಪರಂಪರೆಗೆ ಸೇರಿದವರು.

ಸಂಗೀತ ಅಭ್ಯಾಸ

[ಬದಲಾಯಿಸಿ]

ತಂದೆ ಅಂತರರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕರಾದ ಸಂಗೀತ ಕಲಾನಿಧಿ, ಸೂರ್ಮಣಿ, ಡಾ||ಪಂ.ನರಸಿಂಹಲು ವಡವಾಟಿಯವರಿಂದ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯದ ಸಂಗೀತ ವಿಭಾಗ ಡೀನ್ ಆಗಿರುವ ಡಾ.ಭಾರತೀ ವೈಶಂಪಾಯನರಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಗೀತ ಅಭ್ಯಾಸವನ್ನು ಮಾಡಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಸೌತ್ಸೆಂಟ್ರಲ್ಜೋನ್ ಕಲ್ಚರಲ್ ಸೆಂಟರ್ ಏರ್ಪಡಿಸಿದ್ದ ೧೩ನೇ ಯುವ ಸಂಗೀತ ನೃತ್ಯ ಮಹೋತ್ಸವದಲ್ಲಿ ವಡವಾಟಿ ಶಾರದಾ ಭರತ್ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಮೊದಲಿಗರಾಗಿ ನಿಂತವರು. ವಡವಾಟಿ ಶಾರದಾ ಭರತ್ ಸೀನಿಯರ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದಾರೆ.

ಕಛೇರಿಗಳು – ಕಾರ್ಯಕ್ರಮಗಳು

[ಬದಲಾಯಿಸಿ]

ವಡವಾಟಿ ಶಾರದಾ ಭರತ್ ತಮ್ಮ ಸಂಗೀತ ಕಛೇರಿಗಳನ್ನು ದಾವಣಗೆರೆ, ಮೈಸೂರು, ತುಮಕೂರು, ಬಸವಕಲ್ಯಾಣ, ಅಥಣಿ, ಗುಲ್ಬರ್ಗಾ, ರಾಯಚೂರು, ಶಿವಮೊಗ್ಗ, ನಂಜನಗೂಡು, ಹಂಪಿ ಮುಂತಾದೆಡೆ ರಾಜ್ಯದಲ್ಲಷ್ಟೇ ಅಲ್ಲದೆ; ಕರ್ನೂಲ್, ಹೈದರಾಬಾದ್ ಹೀಗೆ ರಾಜ್ಯದ ಹೊರ ಭಾಗಗಳಲ್ಲೂ; ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲೂ ತಮ್ಮ ರಾಗಸುಧೆಯನ್ನು ಹರಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲೂ ಕಾರ್ಯಕ್ರಮವನ್ನು ನೀಡಿದ್ದಾರೆ. ದೇವರನಾಮದಲ್ಲಿ ಆಕಾಶವಾಣಿ ಹಾಗೂ ದೂರದರ್ಶನದ `ಬಿ ಹೈ’ಗ್ರೇಡ್ ಕಲಾವಿದರು. ಶಾಸ್ತ್ರೀಯ ಸಂಗೀತದ ಜೊತೆಗೆ ಪಂ.ಸಿದ್ದರಾಮ ಜಂಬಲದಿನ್ನಿಯವರ ಪರಂಪರೆಯಲ್ಲಿ ಹಾಡುವ ರಾಜ್ಯದ ವಚನ ಸಂಗೀತದ ಖ್ಯಾತ ಗಾಯಕರಾಗಿರುವ, ವಡವಾಟಿ ಶಾರದಾ ಭರತ್ವಚನ ಸಂಗೀತಗಾಯನದಲ್ಲಿ ಆಕಾಶವಾಣಿ ಮತ್ತು ದೂರದರ್ಶನದ ’ಎ ಗ್ರೇಡ್’ ಕಲಾವಿದ ರಾಗಿದ್ದಾರೆ.

ಸಾಧನೆಗಳು

[ಬದಲಾಯಿಸಿ]
  • ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಬಸವೇಶ್ವರರ ವಚನಗಳ ಮಾನ್ಸೂನ್ [], ಶ್ರೀ ಬಸವೇಶ್ವರ ವಚನಾಮೃತ[], ’ಸಂಗನ ಬಸವ’ಇತ್ಯಾದಿ ಧ್ವನಿಸುರುಳಿಗಳು ಈಗಾಗಲೇ ಜನಪ್ರಿಯಗೊಂಡಿವೆ. ಖ್ಯಾತ ಶಾಸ್ತ್ರೀಯ ಸಂಗೀತಗಾರರ ಪರಿಚಯದ `ಸ್ವರ-ಸಾಧಕರು’ ಪುಸ್ತಕದಲ್ಲಿ ಶ್ರೀಮತಿ ವಡವಾಟಿ ಶಾರದಾ ಭರತ್ ಅವರ ಬಗ್ಗೆಯೂ ಒಂದು ಲೇಖನ ಪ್ರಕಟವಾಗಿದೆ. ದೂರದರ್ಶನದಲ್ಲಿ ಪ್ರಸಾರವಾದ ವಚನಾಮೃತ ಕಾರ್ಯಕ್ರಮದಲ್ಲಿ ಹಾಡಿರುವ ವಚನಗಳು ವೀಕ್ಷಕರನ್ನು ವಿಶೇಷವಾಗಿ ಗಮನ ಸೆಳೆದಿವೆ. ಈ ವಚನಗಳು ವಚನ ಸೌರಭ ಧ್ವನಿಸುರಳಿಯಲ್ಲಿ ಮುದ್ರಣಗೊಂಡಿವೆ. ಆಕಾಶವಾಣಿ, ದೂರದರ್ಶನಗಳಷ್ಟೇ ಅಲ್ಲದೆ ಅನೇಕ ಖಾಸಗಿ ವಾಹಿನಿಗಳು ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ. ಅನೇಕ ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
  • ಪ್ರತಿವರ್ಷ ಆಕಾಶವಾಣಿ ಕೇಂದ್ರವು ನಡೆಸುವ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ೨೦೧೬ರ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಶಾಸ್ತ್ರೀಯ ಸಂಗೀತ ಗಾಯನದ ಜೊತೆ ಪ್ರಥಮವಾಗಿ ವಚನಗಾಯನವನ್ನು ಸೇರಿಸಿದೆ. ಗುಲ್ಬರ್ಗದಲ್ಲಿ ೨೦೧೬ರ ಸೆಪ್ಟಂಬರ್ ೨೪ರಂದು ಪ್ರಥಮ ಬಾರಿಗೆ ಆಯೋಜಿಸಿದ್ದ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ವಡವಾಟಿ ಶಾರದಾ ಭರತ್ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ೨೦೧೬ರ ನವೆಂಬರ್ ೨೯ರಂದು ರಾತ್ರಿ ೧೦ಗಂಟೆಗೆ ದೇಶದ ಎಲ್ಲಾ ಬಾನುಲಿ ಕೇಂದ್ರಗಳಿಂದ ಪ್ರಸಾರವಾಯಿತು. ಹಾಗಾಗಿ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ವಚನ ಗಾಯನದಲ್ಲಿ, ಹಾಡಿದ ಭಾರತದ ಪ್ರಥಮ ಗಾಯಕರೆನಿಸಿಕೊಂಡಿದ್ದಾರೆ.
  • ಸಾಂಸ್ಕೃತಿಕ ಕಲಾ ಕೇಂದ್ರವನ್ನು ತೆರೆದು ಸಂಗೀತಾಸಕ್ತರಿಗೆ ಸಂಗೀತಧಾರೆ ಎರೆಯುವುದರ ಮೂಲಕ ಕಲಾದೇವಿಯನ್ನು ಆರಾಧಿಸುತ್ತಿದ್ದಾರೆ. `ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರ’ದ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಪುಟಾಣಿ ಹಾಗೂ ಯುವ ಪ್ರತಿಭೆಗಳಿಗೆ ಈ ಕಲಾ ಕೇಂದ್ರದ ಮೂಲಕ ವೇದಿಕೆ ಒದಗಿಸುತ್ತಿದ್ದಾರೆ. ಏಕಲವ್ಯರಂತೆ, ರಾಜ್ಯದ ಮೂಲೆಯ ಹಿಂದುಳಿದ ಜಿಲ್ಲೆಯಾದ ರಾಯಚೂರಿನಿಂದ ಬಂದು, ಜಾಗತಿಕ ಮಟ್ಟದಲ್ಲಿ, ವಿಶ್ವಕ್ಲಾರಿಯೋನೆಟ್ ಸಂಗೀತ ಸಮ್ಮೇಳದ ಭಾರತದ ಅಧ್ಯಕ್ಷರಾಗಿ, ಪ್ರಪಂಚದ ಭೂಪಟದಲ್ಲಿ, ದೇಶದ ಕಡೆ ತಿರುಗಿ ನೋಡುವಂತೆ ಮಾಡಿದ, ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ, ಡಾ.ಪಂ.ನರಸಿಂಹಲು ವಡವಾಟಿಯವರ ಕಲಾಜೀವನವನ್ನೇ, ಎಲ್ಲಾ ಕಲಾವಿದರಿಗೂ ಅರ್ಪಿಸುತ್ತಾ, ಎಲ್ಲಾ ಕಲಾವಿದರನ್ನೂ ಸ್ಮರಿಸುವ ಸಲುವಾಗಿ ಅವರ ಜನುಮ ದಿನವಾದ ಜನವರಿ ೨೧ "ಕಲಾವಿದರ ದಿನ"ವನ್ನಾಗಿ [](Artist DAY in India[]) ಆಚರಿಸುತ್ತಿರುವ ಹಿನ್ನಲೆಯಲ್ಲಿ, ಎಲ್ಲ ಕಲಾವಿದರನ್ನು ಸ್ಮರಿಸುತ್ತಾ, ಅದ್ದೂರಿಯಿಂದ ಭಾರತ್ ಸಾಂಸ್ಕೃತಿಕ ಕಲಾಕೇಂದ್ರ ಆಚರಿಸುತ್ತಿದೆ.
  • ವಡವಾಟಿ ಶಾರದಾ ಭರತ್ರಾಗ ಸಂಯೋಜಕಿಯೂ ಹೌದು. ಅನೇಕ ಗೀತೆಗಳಿಗೆ ರಾಗಸಂಯೋಜನೆ ಮಾಡಿದ್ದಾರೆ. ವಿಶೇಷವಾಗಿ ವಚನಗಳಿಗೆ ರಾಗಸಂಯೋಜಿಸುತ್ತಾರೆ. ಅದರಲ್ಲಿ ಪಂ.ಸಿದ್ಧರಾಮ ಜಂಬಲದಿನ್ನಿಯವರ ಛಾಪನ್ನು ಕಾಣಬಹುದು. ಹಾಗಾಗಿ, ಅವರು ರಾಗಸಂಯೋಜಿಸಿರುವ ವಚನಗಳನ್ನು ಕೇಳುವುದೇ ಒಂದು ಸೊಬಗು. ಅದು ಕೇಳುಗರಿಗೆ ವಿಶೇಷವಾದ ವಚನದ ಅನುಭಾವದೊಂದಿಗೆ ಅನುಭವವನ್ನು ನೀಡುತ್ತದೆ. ಅಷ್ಟು ಸುಲಭವಾಗಿ ಹಾಡಲಾಗದ ಪಂ.ಸಿದ್ಧರಾಮ ಜಂಬಲದಿನ್ನಿಯವರ ಕ್ಲಿಷ್ಟ ಸಂಯೋಜನೆಯಂತೆ ಇವರ ಸಂಯೋಜನೆಯೂ ಭಿನ್ನವಾಗಿರುತ್ತದೆ.

೨೦೧೨ ರಿಂದ೨೦೧೫ ನೇ ಸಾಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್ ಬಿ.ಕಾಂ. ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿರುವ `ಕಲಾವಿದರ ಬದುಕು’ ಸಾಮಾನ್ಯ ಕನ್ನಡಪಠ್ಯ ಪುಸ್ತಕದಲ್ಲಿ ಕ್ಲಾರಿಯೋನೆಟ್ ವಾದ್ಯ ಸಾಧಕ 'ಪಂಡಿತ್ ನರಸಿಂಹಲು ವಡವಾಟಿ’ ಪಠ್ಯದಲ್ಲಿ ಶಾರದೆಯ ಹೆಸರನ್ನೂ ಪ್ರಸ್ತಾಪಿಸಲಾಗಿದೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ವಚನಗಾಯನ, ಸುಗಮ ಸಂಗೀತದಲ್ಲಿ ಭಾವಗೀತೆಗಳು, ದಾಸರಪದಗಳು, ಭಜನೆ, ದೇಶಭಕ್ತಿ ಗೀತೆಗಳು, ನಾಡಗೀತೆಗಳು ಇತ್ಯಾದಿ ಪ್ರಕಾರಗಳಲ್ಲಿ ಶ್ರೀಮತಿ ವಡವಾಟಿ ಶಾರದಾ ಭರತ್ ತಮ್ಮ ಸಂಗೀತ ಕಛೇರಿಗಳ ಮೂಲಕ ಜನರನ್ನು ಮಂತ್ರ ಮುಗ್ಧರನ್ನಾಗಿಸುತ್ತಿರುವುದಲ್ಲದೆ, ಸಂಗೀತದ ಒಲವನ್ನು ಮೂಡಿಸುತ್ತಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು (ಕರ್ನಾಟಕ ಸರ್ಕಾರ)

[ಬದಲಾಯಿಸಿ]
  • ಕರ್ನಾಟಕ ಸರ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರನ್ನಾಗಿ ವಡವಾಟಿ ಶಾರದಾ ಭರತ್ ಅವರನ್ನು ನೇಮಿಸಿದೆ.
  • ೨೦೧೪ರ ಫೆಬ್ರವರಿಯಿಂದ ೨೬.೨.೨೦೧೭ರವರೆಗೆ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
  • ರಾಮನಗರ ಜಿಲ್ಲೆಯಿಂದ ಪ್ರಥಮವಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಇವರು ೨೧ ಫ಼ೆಬ್ರವರಿ ೨೦೧೫ರಲ್ಲಿ ಪ್ರಥಮ ರಾಮನಗರ ಜಿಲ್ಲಾ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ, ೨೦೧೫ರಲ್ಲಿ ಮಾಗಡಿಯಲ್ಲಿ ಪ್ರಥಮ ನಮ್ಮ ಸಾಧಕರು ಕಾರ್ಯಕ್ರಮ, ೧೬ ಮಾರ್ಚ್ ೨೦೧೬ರಂದು ಕನಕಪುರದಲ್ಲಿ ಪ್ರಥಮ ರಾಮನಗರ ಜಿಲ್ಲಾ ಯುವ ಸಂಗೀತ ನೃತ್ಯೋತ್ಸವ, ೨೦೧೬ರ ನವೆಂಬರ್ ೧೯ರಂದು ಸರ್ಕಾರದ ವತಿಯಿಂದ ಪ್ರಪ್ತಥಮವಾಗಿ ದಕ್ಷಿಣ ಭಾರತದ ಪ್ರಖ್ಯಾತ ಸಾಮ್ರಾಜ್ಯವಾದ ಗಂಗರನ್ನು ನೆನಪಿಸುವ ಗಂಗೋತ್ಸವ ಹಾಗೂ ರೇಷ್ಮೆ ನಾಡ ಜಿಲ್ಲಾ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ, ೨೦೧೭ರ ಫೆಬ್ರವರಿ ತಿಂಗಳಲ್ಲಿ ಕನಕಪುರದಲ್ಲಿ ದ್ವಿತೀಯ ನಮ್ಮ ಸಾಧಕರು ಕಾರ್ಯಕ್ರಮ ಏರ್ಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪ್ರಶಸ್ತಿಗಳು

[ಬದಲಾಯಿಸಿ]
  • ವಿವೇಕಾನಂದ ಶಾಂತಿ ಪ್ರಶಸ್ತಿ-೨೬.೮.೨೦೧೬
  • ಪರಮೇಶ್ವರ ಪುಲಕೇಶಿ ಪ್ರಶಸ್ತಿ -01.11.2017
  • ಪಿ. ಕಾಳಿಂಗರಾವ್ ಸ್ಮರಣಾರ್ಥ ಪ್ರಶಸ್ತಿ-17.03.2017
  • ಆದರ್ಶ ದಂಪತಿಗಳು (ಸಾಂಸ್ಕೃತಿಕ) ಪ್ರಶಸ್ತಿ-12.04.2018

ಚಿತ್ರ ಸಂಪುಟ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


ನೋಡಿ: `ಸ್ವರಸಾಧಕರು' ಕಲಾವಿದರ ಪರಿಚಯಾತ್ಮಕ ಲೇಖನಗಳ ಸಂಗ್ರಹ, ಪ್ರಕಟಣೆ : ಸುಂದರ ಪ್ರಕಾಶನ, ಬೆಂಗಳೂರು.

ಬಾಹ್ಯ ಕೊಂಡಿಗಳು

[ಬದಲಾಯಿಸಿ]