ವಟು ವಿದ್ಯಾಲಯ

ವಿಕಿಪೀಡಿಯ ಇಂದ
Jump to navigation Jump to search

'ವಟು ವಿದ್ಯಾಲಯ'

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿಯ ದಂಡೆಯಮೇಲೆ ಲಿಂಗೈಕ್ಯ ಹಾನಗಲ್ಲ ಕುಮಾರಸ್ವಾಮಿಗಳಿಂದ ಸ್ಥಾಪನೆಯಾದ, 'ಶಿವಯೋಗ ಮಂದಿರ,' ತನ್ನ ಶತಮಾನೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿದೆ. ವೀರಶೈವ ಸ್ವಾಮಿಗಳಾಗಲು ಅರ್ಹತೆಯನ್ನು ಪಡೆಯಲು ಇಚ್ಛಿಸುವ ವಟುಗಳನ್ನು, ಇಲ್ಲಿ ತರಪೇತಿಗೊಳಿಸಿ ಮುಂದೆ ಮಠಗಳ ಹುದ್ದೆಯನ್ನು ನಿರ್ವಹಿಸಲು ತರಪೇತುಮಾಡಲಾಗುವುದು.

ವಿದ್ಯಾರ್ಜನೆಗೆ ಬರುವ ವಟುಗಳ ವಯೋಮಿತಿಯನ್ನು ಸ್ಪಷ್ಟೀಕರಿಸಿದ್ದಾರೆ[ಬದಲಾಯಿಸಿ]

ಸಾಮಾನ್ಯವಾಗಿ ಬರುವ ಜಂಗಮ ಕುಟುಂಬದ ಮಗುವಿಗೆ ೬ ವರ್ಷ ಇಲ್ಲವೆ ಅದಕ್ಕೂ ಕಡಿಮೆಯಿದ್ದರೆ ಪ್ರಶಸ್ತ್ಯ. (೬-೧೪ ದ ವಯೋಮಿತಿಯನ್ನೂ ಅಂಗೀಕರಿಸಲಾಗುವುದು). ಮುಂದೆ ಆ ಮಗು ತಂದೆ-ತಾಯಿಯಗಳೊಡನೆ ಭಾವನಾತ್ಮಕ ಸಂಬಂಧವನ್ನು ಕಡಿದುಕೊಳ್ಳಬೇಕಾದದ್ದರಿಂದ ಅದಕ್ಕೆ ತಯಾರಿ ಅತ್ಯವಶ್ಯಕ. ಸಾತ್ವಿಕ ಆಹಾರ ಸೇವನೆ, ಮನೋಚಾಂಚಲ್ಯದಿಂದ ವಿಚಲಿತರಾಗದಿರಲು ಜನಸಂಪರ್ಕದಿಂದ ದೂರವಿರಬೇಕು. ಮಠದ ಆವರಣವೇ ಸರ್ವಸ್ವ. ಇವೇ ಮುಂತಾದ ಸಾಮಾನ್ಯ ಅಘೋಷಿತನಿಯಮಗಳನ್ನು ಅತ್ಯಂತ ಶ್ರದ್ಧೆ, ನಿಷ್ಠೆಯಿಂದ ಪರಿಪಾಲಿಸತಕ್ಕವರಾಗಿರಬೇಕು. ಮನೋನಿಗ್ರಹಕ್ಕೆ ಪ್ರಥಮ ಆದ್ಯತೆ. ಆಚಾರ-ವಿಚಾರ, ಲಿಂಗಪೂಜೆ, ಆತ್ಮಬಲ ಸಂವರ್ಧನೆ, ವೀರಶೈವ ತತ್ವದರ್ಶನ, ವಚನ ಸಾಹಿತ್ಯ, ಸಂಸ್ಕೃತ, ಸಂಗೀತ, ಯೋಗಾಭ್ಯಾಸ, ಮುಂತಾದವುಗಳ ಪಕ್ವತೆಯನ್ನು ಸಾಧಿಸಿ, ಸಮಾಜ ಸೇವೆಗೆ ಸಿದ್ಧಗೊಳಿಸುವುದೇ ಪ್ರಮುಖ ಪ್ರಕ್ರಿಯೆಗಳಲ್ಲೊಂದು. ಇವುಗಳನ್ನು ವಟುವಿಗೆ ಬೇಕಾದ ಅರ್ಹತೆಗಳೆಂದರೂ ಅಡ್ಡಿಯಿಲ್ಲ.

ತಮ್ಮ ಮಕ್ಕಳು, ವೀರಶೈವ-ಮಠಾಧೀಶ್ವರ, ರಾಗಲೆಂಬ ಹಂಬಲವಿರುವವರಿಗೆ ಮಾತ್ರ ಇಲ್ಲಿ ಪ್ರಾಮುಖ್ಯತೆ ದೊರೆಯುತ್ತದೆ[ಬದಲಾಯಿಸಿ]

ತಮ್ಮ ಮಠಕ್ಕೊಬ್ಬ ಯೋಗ್ಯ ಮಠಾಧಿಪತಿ ಬೇಕೆಂಬ ತುಡಿತವಿರುವ ದಂಪತಿಗಳು, ಮಠದ ಸುಪರ್ದಿಗೆ ತಮ್ಮ ಬಾಲಕನನ್ನು ಕರೆತಂದು ಒಪ್ಪಿಸುತ್ತಾರೆ. ಬಾಲಕ ಮುಂದೆ ತರಪೇತಿಪಡೆದು, ಸಾಧಕನಾದ ಬಳಿಕ ಸಾಂಪ್ರದಾಯಕ ವಿಧಿ-ವಿಧಾನಗಳೊಂದಿಗೆ ಸ್ವಾಮಿತ್ವದ ಪಟ್ಟವನ್ನು ವಹಿಸಿಕೊಡಲಾಗುವುದು. ಬಾಲಕರ ವಯಸ್ಸು, ಅವರು ಸಿದ್ಧಿಸಿಕೊಳ್ಳುವ ಮನೋನಿಗ್ರಹ, ಸಾಮಥ್ಯವನ್ನು ಆಧರಿಸಿ,
ಪ್ರತಃಕಾಲ ೪-೩೦ ರಿಂದ ಆರಂಭವಾಗುವ ಮಠದ ದಿನಚರಿ, ಮುಕಾಯವಾವುವುದು ರಾತ್ರಿ, ೧೦ ಗಂಟೆಗೆ. ಮರಿದೇವರಾಗಿ ರೂಪುಗೊಳ್ಳುವಷ್ಟರಲ್ಲಿ ಬಾಲಯೋಗಿಗಳು ಸಂಪೂರ್ಣವಾಗಿ ಸ್ವಾಮಿತ್ವಕ್ಕೆ ಶರಣಾಗಿರುತ್ತಾರೆ. ಅಲ್ಲಿನ "ಶಿವಯೋಗ ಮಂದಿರ" ದ ಸ್ವಾಮೀಜಿ, " ಅಭಿನವ ಅನ್ನದಾನ ಮಹಾಸ್ವಾಮಿ," ಗಳ ಮಾತನ್ನು ಇಲ್ಲಿ ಉದ್ಧರಿಸಬಹುದು. " ಎಂ. ಎ, ಪಿ. ಎಚ್. ಡಿ ಆದವರು, ರಗಡ ಮಂದಿ ಸಿಗತಾರ, ಆದ್ರ, ಆಚಾರ-ವಿಚಾರ ಶುದ್ಧ ಇದ್ದವರು, ಮತ್ತ ಮನೋನಿಗ್ರಹ ಇದ್ದವರು, ಸಿಗೂದು ಕಷ್ಟ." ಈ ಮಾತು ಅಕ್ಷರಶಃ ದಿಟವೆನ್ನಬಹುದು.

-ಸಿದ್ಧ ಲಿಂಗಪ್ಪ ಬೀಳಗಿ, ಹುನಗುಂದ.