ಲ್ಯೂ ಜಿಯಾಒಬೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|right|250rx|'ಡಾ. ಲ್ಯೂ ಜಿಯಾಒಬೊ' ಸನ್, ೨೦೧೦ನೊಬೆಲ್ ಶಾಂತಿ ಪುರಸ್ಕಾರ,' ಚೀನಾದ ಸೆರೆಮನೆಯೊಂದರಲ್ಲಿ ಕೈದಿಯಾಗಿ ವಾಸದಲ್ಲಿರುವ, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ತಂದು ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹಾರಮಾಡುವ ದಿಶೆಯಲ್ಲಿ ಹೋರಾಡುತ್ತಿರುವ ೫೪ ವರ್ಷದ, 'ಡಾ. ಲ್ಯೂ ಜಿಯಾಒಬೊ' ರವರಿಗೆ ಸಂದಿದೆ.

ಜನನ ಹಾಗೂ ಬಾಲ್ಯ[ಬದಲಾಯಿಸಿ]

'ಲ್ಯೂ ಜಿಯಾಒಬೊ' ರವರು 'ಚಾಂಗ್ ಚುನ್,' ನ 'ಜಿಲಿನ್', ನಗರದಲ್ಲಿ, ೧೯೫೫ ರಲ್ಲಿ ಜನಿಸಿದರು. ಮನೆಯ ವಾತಾವರಣ ಬಹಳ ಪ್ರಶಸ್ತವಾಗಿಯೂ ಸಂಘರ್ಷಮಯವಾಗಿಯೂ ಇತ್ತು. ೧೯೬೩-೧೯೭೩ ರ ವರೆಗೆ, 'ಲ್ಯೂ ಜಿಯಾಒಬೊ' ರವರ ತಂದೆಯವರ ಜೊತೆ, ಮಂಗೋಲಿಯ ಪ್ರಾಂತ್ಯದ 'Horqin Right Front Banner of Inner Mongolia' ಹೋರಾಟದಲ್ಲಿ ಭಾಗವಹಿಸಿದ್ದರು. ಇದು ಅಲ್ಲಿನ ಗ್ರಾಮೀಣವಲಯದ ಸಮಸ್ಯೆಗಳನ್ನು ಕುರಿತ ಆಂದೋಳನವಾಗಿತ್ತು. ತಮ್ಮ ೧೯ ನೆಯ ವಯಸ್ಸಿನಲ್ಲಿ, ಜಿಲಿನ್ ಪ್ರಾಂತ್ಯದ ಹಳ್ಳಿಯಲ್ಲಿ ಕೆಲಸ ಆರಂಭಿಸಿದರು. ಮುಂದೆ ಅವರು ಕಟ್ಟಡ ನಿರ್ಮಾಣದ ಕಂಪೆನಿಯೊಂದರಲ್ಲಿ ನೌಕರಿಗೆ ಸೇರಿದರು. ಒಟ್ಟಿನಲ್ಲಿ ಹೋರಾಟ, ಅನ್ಯಾಯದ ವಿರುದ್ಧ 'ಬಂಡಾಯ' ಅವರ ರಕ್ತದಲ್ಲಿ ಸೇರಿಹೋಗಿತ್ತು.

ವಿದ್ಯಾಭ್ಯಾಸ[ಬದಲಾಯಿಸಿ]

'ಲ್ಯೂ ಜಿಯಾಒಬೊ,' ರವರು, ೧೯೭೬ ರಲ್ಲಿ 'ಬೀಜಿಂಗ್ ನ ನಾರ್ಮಲ್ (ಜಿಲಿನ್) ವಿಶ್ವವಿದ್ಯಾಲಯ' ಸೇರಿ, ೧೯೮೨ ರಲ್ಲಿ, ಬಿ.ಎ. (ಸಾಹಿತ್ಯದಲ್ಲಿ) ಪದವಿಗಳಿಸಿದರು. ಪದವಿಯ ಬಳಿಕ ಅಲ್ಲಿಯೇ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. ೧೯೮೮ ರಲ್ಲಿ 'ಲ್ಯೂ ಜಿಯಾಒಬೊ' ರವರು, 'ಪಿ.ಎಚ್.ಡಿ' ಯನ್ನು ಗಳಿಸಿದರು. ೧೯೮೦ ರಲ್ಲಿ ಬರೆದೋದಿದ ಅವರ 'ಪ್ರಬಂಧೋಪನ್ಯಾಸ' ,Critique on Choices - Dialogue with Le Zehou and Aesthetics and Human Freedom' ಅವರಿಗೆ ಹೆಚ್ಚು ಮಾನ-ಸನ್ಮಾನಗಳನ್ನು ಅವರ ಕಾಲೇಜಿನ ಪರಿಸರದಲ್ಲಿ ತಂದುಕೊಟ್ಟಿತು. ಅದರಲ್ಲಿ ನಮೂದಿಸಿದ ಲೇಖನದಲ್ಲಿ ಚೈನಾದೇಶದ ಪ್ರಖ್ಯಾತ ಚಿಂತಕ, 'ಲಿ ಝೆಒ' ರವರ ತತ್ವಗಳನ್ನು ಗಂಭೀರವಾಗಿ ಚರ್ಚೆಗೆ ತೆರೆದಿಟ್ಟಿತು. ೧೯೮೮-೮೯ ರವ ವರೆಗೆ ಒಂದು ವರ್ಷ 'ಲ್ಯೂ ಜಿಯಾಒಬೊ' ರವರು, ಚೈನಾದೇಶದ ಹೊರಗೂ ಹೋಗಿ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಿದ್ದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಕೊಲಂಬಿಯಾ ವಿಶ್ವವಿದ್ಯಾಲಯ, ಓಸ್ಲೊ ವಿಶ್ವವಿದ್ಯಾಲಯ, ಮತ್ತು ಯೂನಿವರ್ಸಿಟಿ ಆಫ್ ಹವಾಯ್ ಸೇರಿವೆ.

'ಲ್ಯೂ ಜಿಯಾಒಬೊ' ರವರ ಹೋರಾಟದ ಪರಿಚಯ[ಬದಲಾಯಿಸಿ]

'ಲ್ಯೂ ಜಿಯಾಒಬೊ'ರವರು, ಸಧ್ಯದಲ್ಲಿ ಕಾರಾಗೃಹದಲ್ಲಿ ಬಂದಿಯಾಗಿದ್ದಾರೆ. ಚೀನಾದೇಶ, ಕಮ್ಯುನಿಸ್ಟ್ ಸಂಕೋಲೆಯಿಂದ ಪಾರಾಗಿ, ಸ್ವಾತಂತ್ರ್ಯಗಳಿಸುವ ದಿಶೆಯಲ್ಲಿ ಮತ್ತು ಅಲ್ಲಿನ ನಾಗರಿಕರ ಮಾನವಹಕ್ಕುಗಳಿಗಾಗಿನ ಹೋರಾಟದ ಸಂಕೇತವಾಗಿದ್ದಾರೆ. ವಿಶ್ವದ ಅತಿದೊಡ್ಡ ದೇಶವಾದ ಚೈನಾ, ಆರ್ಥಿಕವಾಗಿಯೂ ರಾಜಕೀಯವಾಗಿಯೂ ಅತಿ ದೊಡ್ಡ ಶಕ್ತಿಯೆಂದು ಮಂಚೂಣಿಯಲ್ಲಿರುವ ರಾಷ್ಟ್ರ. ಇಂತಹ ಶಕ್ತಿ ಟೀಕಾದಾಳಿಗೆ ಗುರಿಯಾದ ಸಮಯದಲ್ಲಿ ಬಂಡಾಯವೆದ್ದ ಚೀನೀ ಸಮುದಾಯದ 'ಮೊದಲ ನೋಬೆಲ್ ಪ್ರಶಸ್ತಿ'ಯಾಗಿದೆ. ಇದಾದ ಬಳಿಕ ನಾಯಕತ್ವದಲ್ಲಿ ಸಕಾರಾತ್ಮಕ ಸುಧಾರಣೆಯ ಅಗತ್ಯವನ್ನು ಕುರಿತು ಚೈನಾ ಸರಕಾರದ ಒಳ ವಲಯಗಳಲ್ಲಿ ಒಳೊಳಗೇ ಚರ್ಚೆಗಳು ವಿಚಾರವಿನಿಮಯಗಳೂ ನಡೆಯಲು ಆರಂಭವಾಗಿವೆ. ಈ ತರಹದ ಬದಲಾವಣೆಯ ಸಮರ್ಥಕರಲ್ಲಿ ಹಲವಾರು ಮಂದಿ ಉಗ್ರರಿದ್ದಾರೆ ; ಹಾಗೂ ಅವರ ಕ್ರಾಂತಿಕಾರಿ ರೀತಿಯಲ್ಲಿ ಸಾಗಿದೆ. ಆದರೆ, ೫೪ ವರ್ಷ ಹರೆಯದ 'ಲ್ಯೂ ಜಿಯಾಒಬೊ' ರವರು, ಚೀನಾದಲ್ಲಿ ಸರಕಾರದ ಜೊತೆ ಹಿಂಸಾತ್ಮಕ ಸಂಘರ್ಷಕ್ಕಿಂತಾ ಶಾಂತಿಯುತ ಹಾಗೂ ಅರ್ಥಪೂರ್ಣ ರಾಜಕೀಯ ಪರಿಹಾರದ ಬದಲಾವಣೆಗಳ ಅಗತ್ಯದ ಪ್ರಬಲ ಪ್ರತಿಪಾದಕರಾಗಿದ್ದಾರೆ.

ಚಾರ್ಟರ್ ೦೮'[ಬದಲಾಯಿಸಿ]

ಚಾರ್ಟರ್ ೦೮, ಎಂಬ ವಿಧೇಯಕದಲ್ಲಿ ದಾಖಲಾಗಿರುವ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಭುತ್ವ ಕೊನೆಗೊಳ್ಳಲು ಹಾಗೂ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಕರೆಕೊಟ್ಟಿದ್ದಾರೆ. ಈ ಪ್ರತಿಯನ್ನು ಹೊರತರುವಲ್ಲಿ 'ಲ್ಯೂ ಜಿಯಾಒಬೊ' ರವರೂ ಪ್ರಮುಖರು. ವಿಶ್ವದ ಪ್ರಬಲ ಕಮ್ಮ್ಯುನಿಸ್ಟ್ ರಾಷ್ಟ್ರಗಳೆಲ್ಲಾ ಒಂದೊಂದಾಗಿ ಬದಲಾವಣೆಗೆ ಒತ್ತುಕೊಟ್ಟು ಪ್ರಯತ್ನಿಸುತ್ತಿರುವಾಗ ಚೀನಾ ಇನ್ನೂ ಹಳೆಯ ಜಾಡನ್ನು ಬದಲಾಯಿಸಲು ಇಚ್ಛಿಸುತ್ತಿಲ್ಲ. ದೀರ್ಘಕಾಲದಿಂದ ಬಾಕಿಯಿರುವ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕರೆಗೆ ಸಾವಿರಾರು ಚೈನಿಯರು ಸಹಿಹಾಕಿ ತಮ್ಮ ಸಮ್ಮತಿಯನ್ನು ಕೊಟ್ಟಿದ್ದಾರೆ. ಇದು ಚೀನಾದ ಕಮ್ಯುನಿಸ್ಟ್ ಪಕ್ಷದ ಸರ್ಕಾರಕ್ಕೆ ಒಂದು ಸವಾಲಾಗಿದೆ. ೨೦೦೮ ರಲ್ಲಿ ಡಿಸೆಂಬರ್ ನಲ್ಲಿ ದಾಖಲೆ ಬಿಡುಗಡೆ ಗೊಳ್ಳುವ ಮೊದಲೆ ಪೋಲೀಸರು ಅವರನ್ನು ಬಂಧಿಸಿ ೨೦೦೯ ರ ಡಿಸೆಂಬರ್, ೨೫ ರಂದು, (ಕ್ರಿಸ್ಮಸ್ ದಿನದಂದು) ೧೧ ವರ್ಷಗಳ ಕಾರಾಗೃಹ ವಾಸದ ಸಜೆಯನ್ನು ವಿಧಿಸಿತ್ತು.

'ಸನ್ ೨೦೧೦ ರ ಶಾಂತಿ ನೋಬೆಲ್ ಪ್ರಶಸ್ತಿ,' ಗೆ ಬಂದ ಅರ್ಜಿಗಳ ಮೊತ್ತ[ಬದಲಾಯಿಸಿ]

ಸನ್, ೨೦೧೦ ರ ನೋಬೆಲ್ ಪ್ರಶಸ್ತಿಗಾಗಿ ಬಂದ ೨೩೭ ದಾಖಲೆ ಉಮೇದುವಾರರಲ್ಲಿ ಡಾ. ಲಿಯೋಪರ ಹೆಚ್ಚು ಒಲವು ವ್ಯಕ್ತವಾಗಿದೆ. ಹೋರಾಟದ ದ್ಯೋತಕ, 'ಡಾ. ಲ್ಯೂ ಜಿಯಾಒಬೊ‘ ಅವರು ಚೀನಾದಲ್ಲಿನ ಮಾನವ ಹಕ್ಕು ಹೋರಾಟದ ದ್ಯೋತಕ’ ಎಂದು ನೊಬೆಲ್ ಸಮಿತಿಯ ಅಧ್ಯಕ್ಷರಾದ ನಾರ್ವೆಯ 'ಥೋರ್ಬ್‌ಜೋರ್ನ್ ಜಗ್‌ಲ್ಯಾಂಡ್' ಅಭಿಪ್ರಾಯಪಟ್ಟಿದ್ದಾರೆ. ’ಟಿನ್ನಮೆನ್ ಸ್ಕೇರ್’ ನಲ್ಲಿ ನಡೆದ ಆಂದೋಳನದಲ್ಲಿ ಪ್ರಜಾಪ್ರಭುತ್ವ ಸಮರ್ಥಕ ವಿಧ್ಯಾರ್ಥಿಗಳು ಮತ್ತು ಚೈನದ ಯುದ್ಧ ಸೈನಿಕರ ನಡುವೆ ೧೯೮೯ ರಲ್ಲಿ ಸಮರ್ಥಕರಲ್ಲಿ 'ಆರ್ಚ್ ಬಿಶಪ್ ಡೆಸ್ಮಂಡ್ ಟೂಟೊ' ಟಿಬೆಟ್ಟಿನ ಧಾರ್ಮಿಕ ಗುರು, 'ದಲೈ ಲಾಮಾ' ಮತ್ತಿತರು, ಧಾರ್ಮಿಕ ಶ್ರದ್ಧಾಳುಗಳು ಸೇರಿದ್ದಾರೆ. ಬಹುಸಂಖ್ಯಾತ, 'ಹ್ಯಾನ್ ಸಮುದಾಯದ ಪ್ರತಿನಿಧಿ,' 'ಲ್ಯೂ ಜಿಯಾಒಬೊ' ಆಗಿದ್ದಾರೆ. ಇದು, 'ಚೀನದ ಅಂತಾರಾಷ್ಟ್ರೀಯ ವರ್ಚಸ್ಸಿ'ನಮೇಲೆ ಪರಿಣಾಮಬೀರುತ್ತದೆ. 'ಅಮೆರಿಕದ ಅಧ್ಯಕ್ಷ, 'ಸನ್, ೨೦೦೯ ರ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತ', ಒಬಾಮ'ರವರೇ ಚೈನಾ ಸರಕಾರದ ಮೇಲೆ, ಡಾ.ಲಿಯೋರವರನ್ನು ಮುಕ್ತಗೊಳಿಸಲು ಹೆಚ್ಚು ಒತ್ತಡವನ್ನು ಸೂಚಿಸುತ್ತಿದ್ದಾರೆ. ಪ್ರಥಮಬಾರಿಗೆ ಚೈನದ ನಾಗರಿಕನಿಗೆ ನೋಬೆಲ್ ಶಾಂತಿ ಪ್ರಶಸ್ತಿ, ಕೊಡಲ್ಪಟ್ಟಿದೆ.

ಖಾಲಿ ಕುರ್ಚಿಗೆ ನೋಬೆಲ್ ಸನ್ಮಾನ[ಬದಲಾಯಿಸಿ]

೭೪ ವರ್ಷಗಳ ನೋಬೆಲ್ ಪ್ರಶಸ್ತಿ ವಿತರಣಾ ಇತಿಹಾಸದಲ್ಲಿ, ಸನ್. ೨೦೧೦ ರ, 'ನೋಬೆಲ್ ಶಾಂತಿ ಪುರಸ್ಕಾರ'ವನ್ನು ಪ್ರಪ್ರಥಮಬಾರಿಗೆ, ಒಂದು ಖಾಲಿ ಕುರ್ಚಿಯಮೇಲೆ ಇರಿಸಿ,'ಲ್ಯೂ ಜಿಯಾಒಬೊ' ರವರ ಹೆಸರನ್ನು ಘೋಷಿಸಲಾಯಿತು. ಚೈನಾ ಸರಕಾರ ಅವರಿಗೆ ಅನುಮತಿಕೊಡದ ಕಾರಣಕ್ಕಾಗಿ ಈ ಕ್ರಮವನ್ನು ಅನುಸರಿಸಬೇಕಾಯಿತು.

'ಜೆಕೋಸ್ಲೊವೇಕಿಯಾ ದೇಶ'ದಲ್ಲಿ ನಡೆದ ('ವೆಲ್ವೆಟ್ ಕ್ರಾಂತಿ'),ಪ್ರಸಿದ್ಧ 'ಚಾರ್ಟರ್-೭೭' ರ ಮಾದರಿಯ ಸಂಘರ್ಷ[ಬದಲಾಯಿಸಿ]

ತಮಗೆ ಸಂಪೂರ್ಣ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮಾನವ ಅಧಿಕಾರದ ಸುಧಾರಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಾಬಲ್ಯ ಕೊನೆಗಾಣಿಸುವ ಕರೆಯೊಂದಿಗೆ ಸನ್, ೨೦೦೮ ರಲ್ಲಿ ಲಿಯು ಅವರು ಚಾರ್ಟರ್-೦೮ ಹೆಸರಿನ ಸಹಿ ಸಂಗ್ರಹ ಆಂದೋಲನ ನಡೆಸಿದ್ದರು. ೧೯೮೯ ರಲ್ಲಿ ಜೆಕೋಸ್ಲೊವೇಕಿಯಾದಲ್ಲಿ ಮಾನವ ಹಕ್ಕುಗಳ ಕರೆಯೊಂದಿಗೆ ನಡೆದ "ವೆಲ್ವೆಟ್ ಕ್ರಾಂತಿ", ಆ ಮೂಲಕ ಕಮ್ಯುನಿಸ್ಟ್ ಆಡಳಿತವನ್ನು ಕಿತ್ತೊಗೆದ ಪ್ರಸಿದ್ಧ ಚಾರ್ಟರ್- ೭೭ ಆಂದೋಲನದ ಮಾದರಿಯಲ್ಲೇ ಸಾಗಿತ್ತು. ಮೂರು ದಶಕಗಳ ಹಿಂದೆ ಚಸಿನಾ ದೇಶದ ಕಮ್ಯುನಿಸ್ಟ್ ನಾಯಕತ್ವವು ಆರ್ಥಿಕ ಸುಧಾರಣೆಗಳನ್ನಷ್ಟೇ ಜಾರಿಗೊಳಿಸಿ ರಾಜಕೀಯ ಸುಧಾರಣೆಗಳಿಗೆ ವಿಮುಖವಾದ ಸಂದರ್ಭದಲ್ಲಿ, 'ಲ್ಯೂ ಜಿಯಾಒಬೊ' ನೇತೃತ್ವದ ಭಿನ್ನಮತೀಯ ಸಮುದಾಯ ಜಾಗೃತಗೊಂಡಿತ್ತು. ಇದೀಗ ಈ ಸಮುದಾಯಕ್ಕೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ.

ಆರ್ಥಿಕವಾಗಿ, ಕೈಗಾರಿಕಾಕ್ಷೇತ್ರದಲ್ಲಿ, 'ಚೈನಾ' ಮಂಚೂಣಿಯಲ್ಲಿದೆ[ಬದಲಾಯಿಸಿ]

ಚೀನವು ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಭಾವಿ ರಾಷ್ಟ್ರ. ಇಂಥ ಪ್ರಭಾವಿ ರಾಷ್ಟ್ರಗಳು ಪ್ರಶಸ್ತಿ ವಿಜೇತರ ಬಗ್ಗೆ ಟೀಕಿಸುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಮೂರು ದಶಕಗಳ ಹಿಂದೆ ಬಂಡಾಯ ಸಮೂಹವನ್ನು ಚೀನ ಸರಕಾರ ಹತ್ತಿಕ್ಕಿದ್ದರೂ ೫೪ ರ ಹರೆಯದ 'ಲ್ಯೂ ಜಿಯಾಒಬೊ' ರವರು ಶಾಂತಿಯುತವಾಗಿ, ಸರಕಾರದ ವಿರುದ್ಧ ಯಾವುದೇ ಸಂಘರ್ಷವಿಲ್ಲದೇ ಬೃಹತ್‌ ರಾಜಕೀಯ ಬದಲಾವಣೆಗಳನ್ನು ತರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಚೀನಾದಲ್ಲಿ ಅಹಿಂಸಾ ಮಾರ್ಗದಲ್ಲಿ ಮೂಲಭೂತ ಮಾನವ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿರುವ 'ಲ್ಯೂ ಜಿಯಾಒಬೊ'ರವರನ್ನು 'ನಾರ್ವಿಯನ್ ನೊಬಲ್ ಸಮಿತಿ'ಯು ಪ್ರಶಂಸಿಸಿದೆ. ಜಾಗತಿಕ ವೇದಿಕೆಯಲ್ಲಿ ಚೀನಾವು ಪ್ರಮುಖ ಪಾತ್ರವನ್ನು ಬಯಸುತ್ತಿರುವ ಹೊತ್ತಿನಲ್ಲೇ ಮಾನವ ಹಕ್ಕುಗಳ ವಿಚಾರವು ನೊಬೆಲ್ ಪ್ರಶಸ್ತಿಯೊಂದಿಗೆ ವಿಶ್ವದ ಜನರೆಲ್ಲರ ಗಮನವನ್ನು ಸೆಳೆದಿದೆ.

'ಹೋರಾಟ', 'ಜೈಲುವಾಸದ ಸಂಘರ್ಷಮಯ ಬದುಕು' 'ಲ್ಯೂ ಜಿಯಾಒಬೊ' ರವರ ಜೀವನದುದ್ದಕ್ಕೂ ಪಸರಿಸಿತ್ತು[ಬದಲಾಯಿಸಿ]

ಅದಕ್ಕೂ ಮೊದಲು ಹಲವಾರು ಪ್ರಗತಿಪರ ಹೋರಾಟಗಳಲ್ಲಿ ಕಾಣಿಸಿಕೊಂಡು 'ಚೀನಾ ಕಮ್ಯೂನಿಸ್ಟ್ ಸರ್ವಾಡಳಿತ ಸರಕಾರ'ದ ಕೆಂಗಣ್ಣಿಗೆ 'ಲ್ಯೂ ಜಿಯಾಒಬೊ' ಗುರಿಯಾಗಿದ್ದರು. ಹತ್ತಾರು ಬಾರಿ ಜೈಲು ಸೇರಿದ್ದರು. 'ಕಾರ್ಮಿಕರ ಪರ,' ಮತ್ತು 'ಮಾನವ ಹಕ್ಕುಗಳ ಪರ,' ಅವರ ಹೋರಾಟ ಜಗತ್ತಿನ ಗಮನ ಸೆಳೆದಿತ್ತು

೭ ಪ್ರಮುಖ ವಾಕ್ಯಗಳಲ್ಲಿ 'ಲ್ಯೂ ಜಿಯಾಒಬೊ' ತಮ್ಮ ಹೋರಾಟದ-ನಿಲವುಗಳನ್ನು ಸ್ಪಷ್ಟಪಡಿಸಿದ್ದಾರೆ[ಬದಲಾಯಿಸಿ]

ಪ್ರಜಾತಂತ್ರದ ಸ್ಥಾಪನೆ ಹಾಗೂ ಕಮ್ಯುನಿಸ್ಟ್ ಸರಕಾರದ ಅಥವಾ ಯಾವುದೇ ಏಕಪಕ್ಷೀಯ ಪಕ್ಷ ರಾಜ್ಯವಾಳುವ ಬಗ್ಗೆ ತಮ್ಮ ವಿರೋಧವನ್ನು ಅವರು ಅತ್ಯಂತ ಗಂಭೀರವಾಗಿ ಚಿಂತಿಸಿ, ಶೀರ್ಷಿಕೆಗಳಲ್ಲಿ ಒಡಮೂಡಿಸಿರುವ ೭ ಪ್ರಮುಖ ವಾಕ್ಯಗಳಲ್ಲಿ ತಮ್ಮ ನಿಲವುಗಳನ್ನು ಸ್ಪಷ್ಟಪಡಿಸಿದ್ದಾರೆ.