ಲ್ಯಾನ್ಸ್‌ಡೌನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲ್ಯಾನ್ಸ್‌ಡೌನ್
ಸೇಂಟ್ ಮೇರೀಸ್ ಚರ್ಚ್
ಭುಲ್ಲಾತಾಲ್ ಸರೋವರ
ಹಿಮಪಾತದ ನಂತರ ಟಿಪ್ ಎನ್ ಟಾಪ್

ಲ್ಯಾನ್ಸ್‌ಡೌನ್ ಭಾರತದ ಉತ್ತರಾಖಂಡ ರಾಜ್ಯದ ಪೌರಿ ಗರ್ವಾಲ್ ಜಿಲ್ಲೆಯ ಒಂದು ದಂಡು ಪಟ್ಟಣವಾಗಿದೆ.

ಲ್ಯಾನ್ಸ್‌ಡೌನ್ ಗಿರಿಧಾಮವಾಗಿ ಜನಪ್ರಿಯವಾಗಿದೆ.

ಇತಿಹಾಸ[ಬದಲಾಯಿಸಿ]

ಮೂಲತಃ ಇದು ಕಾಲೂಡಾಂಡಾ ಎಂದು ಪರಿಚಿತವಾಗಿತ್ತು. ಲ್ಯಾನ್ಸ್‌ಡೌನ್‍ನ್ನು ಆಗಿನ ವೈಸರಾಯ್ ಲಾರ್ಡ್ ಲ್ಯಾನ್ಸ್‌ಡೌನ್ ೧೮೮೭ರಲ್ಲಿ ಸ್ಥಾಪಿಸಿದನು. ಲ್ಯಾನ್ಸ್‌ಡೌನ್ ಭಾರತದ ಅತ್ಯಂತ ಶಾಂತವಾದ ಗಿರಿಧಾಮಗಳಲ್ಲಿ ಒಂದಾಗಿದೆ ಮತ್ತು ಬ್ರಿಟೀಷರು ಭಾರತಕ್ಕೆ ಬಂದಾಗಿನಿಂದ ಜನಪ್ರಿಯವಾಗಿದೆ. ಲ್ಯಾನ್ಸ್‌ಡೌನ್ ಇತರ ಗಿರಿಧಾಮಗಳಿಗಿಂತ ಭಿನ್ನವಾಗಿದೆ ಏಕೆಂದರೆ ಇದು ವಾಹನಗಳು ಸಂಚರಿಸಬಹುದಾದ ರಸ್ತೆಗಳೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ ಆದರೆ ತನ್ನದೇ ಆದ ರೀತಿಯಲ್ಲಿ ದೂರದಲ್ಲಿದೆ. ಇದು ದಪ್ಪ ಓಕ್ ಮತ್ತು ನೀಲಿ ಪೈನ್ ಕಾಡುಗಳಿಂದ ಆವೃತವಾಗಿದೆ.

ಸ್ಥಳೀಯ ಆಕರ್ಷಣೆಗಳು[ಬದಲಾಯಿಸಿ]

ಗರ್ವಾಲ್ ರೈಫಲ್ಸ್ ಕೇಂದ್ರದ ಪರೇಡ್ ಮೈದಾನದಲ್ಲಿರುವ ಯುದ್ಧ ಸ್ಮಾರಕವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದಾಗ್ಯೂ, ಸೇನಾ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ನಗರದ ಸುತ್ತಮುತ್ತಲಿನ ಆಕರ್ಷಣೀಯ ಸ್ಥಳಗಳಲ್ಲಿ ಟಿಪ್ ಎನ್ ಟಾಪ್ ವ್ಯೂ ಪಾಯಿಂಟ್, ಕಾಳೇಶ್ವರ ಮಹಾದೇವ ದೇವಸ್ಥಾನ ಸೇರಿವೆ. ಇದು ಲ್ಯಾನ್ಸ್‌ಡೌನ್‌ನಲ್ಲಿ ಹೆಚ್ಚು ಭೇಟಿ ನೀಡಲ್ಪಡುವ ದೇವಸ್ಥಾನವಾಗಿದೆ ಮತ್ತು ಶ್ರಾವಣದಲ್ಲಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಸಂತೋಷಿ ಮಾತಾ ದೇವಸ್ಥಾನ, ರೆಜಿಮೆಂಟಲ್ ಮ್ಯೂಸಿಯಂ, ಭುಲ್ಲಾತಾಲ್ ಸರೋವರ, ಸೇಂಟ್ ಮೇರೀಸ್ ಚರ್ಚ್ ಮತ್ತು ಲವರ್ಸ್ ಲೇನ್ ಇತರ ಆಕರ್ಷಣೆಗಳು. ನಗರದಿಂದ ವಿಹಾರಕ್ಕೆ ತಾರಕೇಶ್ವರ ಮಹಾದೇವ ದೇವಸ್ಥಾನ, ಭೈರವ ಗರ್ಹಿ ದೇವಸ್ಥಾನ, ಭೀಮ್ ಪಕೋರಾಕ್ಕೆ ಹೋಗಬಹುದು. ಶರತ್ಕಾಲದ ಅವಧಿಯಲ್ಲಿ ಈ ಗಿರಿಧಾಮದಲ್ಲಿ ವಾರ್ಷಿಕ 'ಶರದೋತ್ಸವ' (ಶರತ್ಕಾಲದ ಹಬ್ಬ) ವನ್ನು ಸಹ ಆಯೋಜಿಸಲಾಗುತ್ತದೆ.

ಲ್ಯಾನ್ಸ್‌ಡೌನ್ ತನ್ನ ಶಿಕ್ಷಣದ ಗುಣಮಟ್ಟಕ್ಕೂ ಪ್ರಸಿದ್ಧವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

 

ಹೊರಗಿನ ಕೊಂಡಿಗಳು[ಬದಲಾಯಿಸಿ]