ಲೋಣೇರೆ
'Lonere'
[ಬದಲಾಯಿಸಿ]'ರಾಯ್ಘಡ್-ಕೋಟೆ,' ಗೆ ಅತಿ ಸಮೀಪ
[ಬದಲಾಯಿಸಿ]Lonere (लोणेरे) ಮಹಾರಾಷ್ಟ್ರ [ಭಾರತ] ರಾಜ್ಯದ ರಾಯಘಡ್ ಜಿಲ್ಲೆಯ ಒಂದು ಚಿಕ್ಕ ಗ್ರಾಮ. ಮರಾಠಸಾಮ್ರಾಜ್ಯದ ವೀರ ರಾಜ, 'ಛತ್ರಪತಿ ಶಿವಾಜಿ ಮಹಾರಾಜ್,' ರವರು ನಿರ್ಮಿಸಿದ, ಸುಪ್ರಸಿದ್ಧ 'ರಾಯ್ಘಡ್-ಕೋಟೆ,' ಯಿಂದ ಸುಮಾರು ೨೨ ಕಿ. ಮೀ ದೂರದಲ್ಲಿದೆ.
ಪ್ರಶಾಂತ, ಪ್ರಾಕೃತಿಕ ಸುಂದರ್ಯದ, ನೆಲೆವೀಡು-'ಲೋಣೇರೆ'
[ಬದಲಾಯಿಸಿ]ವಿದ್ಯಾವಿಹಾರವೆಂಬಂತಿರುವ ಮಹಾರಾಷ್ಟ್ರ ರಾಜ್ಯದ ಈ ಪ್ರಾಕೃತಿಕ ಸುಂದರ ನೆಲೆವೀಡಾದ ಕೊಂಕಣತೀರದ ಕಾಲೇಜ್-ಗ್ರಾಮದಲ್ಲಿ [ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಟೆಕ್ನೊಲಾಜಿಕಲ್ ವಿಶ್ವವಿದ್ಯಾಲಯ] 'Babasaheb Ambedkar Technological University, BATU' ೧೯೮೯ ರಲ್ಲಿ ಸ್ಥಾಪಿಸಲ್ಪಟ್ಟಿತು. [೧೯೮೯ ಮಹಾರಾಷ್ಟ್ರ ಸರ್ಕಾರದ ಕಾನೂನು ಧಾರ ೧೯೮೩ ರರ ಪ್ರಕಾರ] , ಈ ವಿಶ್ವವಿದ್ಯಾಲಯ, 'ಸ್ವಯಂ ಶಾಸಿತ ಅಧಿಕಾರ,' ದಲ್ಲಿದೆ. 'ಯೂನಿವರ್ಸಿಟಿ ಗ್ರಾಂಟ್ಸ್ ಕಮೀಶನ್' [ಭಾರತ] ಪರಿಧಿಯೊಳಗೆ ಬರುವ 'ಏಕೇಶ್ವರವಾದಿಯಾದ ವಿಶ್ವವಿದ್ಯಾಲಯ,' ವೆಂಬ ಹೆಸರನ್ನು ಪಡೆದಿರುವ ವಿದ್ಯಾಸಂಸ್ಥೆಯಾಗಿದೆ.
NH-17 (ಮುಂಬಯಿ ಗೋವಾ ರಾಷ್ಟ್ರೀಯ ಹೆದ್ದಾರಿ) ಯಲ್ಲಿದೆ
[ಬದಲಾಯಿಸಿ]ಊರು, NH-17 (ಮುಂಬಯಿ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ, ಸುಮಾರು ೨೫ ಕಿ. ಮೀ ಉತ್ತರ ಮಹಾಡ್ ನಗರ, ಹಾಗೂ ೧೦ ಕಿ. ಮೀ ಮಣ್ಗಾವ್ ತೆಹ್ಸೀನಿಂದ ಮುಂಬಯಿ ನ ದಾರಿಯಲ್ಲಿದೆ. ಲೋಣೇರಿ ದಾರಿಯಲ್ಲಿ ಸಿಗುತ್ತದೆ. NH-17 ಒಳದಾರಿಯಿಂದ ಹತ್ತಿರದ ಹಳ್ಳಿಗಳಾದ, 'ಗೋರೆಗಾಂ', 'ಮ್ಹಾಸ್ಲಾ', 'ಮಂದನ್ಘಡ್', 'ದಾಪೋಲಿ', ಮತ್ತು 'ಸಮುದ್ರದ ತೀರ' ದ ಪರ್ಯಟಕ ಜಾಗದ ಊರುಗಳಾದ, 'ಶ್ರೀವರ್ಧನ್', ಮತ್ತು 'ಹರಿಹರೇಶ್ವರ್'.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- 'Lonere Wikimapia Pointer,'
- [೧] Archived 2007-09-14 ವೇಬ್ಯಾಕ್ ಮೆಷಿನ್ ನಲ್ಲಿ.
- 'Coordinates: 18.16°N 73.32°E,'